ಆಧಾರ್ ಕಾರ್ಡ್(Adhar card) ಅಪ್ಡೇಟ್ ಆಗದಿದ್ದರೆ ಆಸ್ತಿ ನೊಂದಣಿಗೆ ತೊಂದರೆ.
ಆಸ್ತಿ ನೋಂದಣಿಗೆ(property registration)ಪ್ಲಾನ್ ಮಾಡುತ್ತಿದ್ದೀರಾ? ಹಾಗಿದ್ದರೆ ಕೂಡಲೇ ನಿಮ್ಮ ಆಧಾರ್ ಕಾರ್ಡ್ ಅಪ್‌ಡೇಟ್ ಆಗಿದೆಯಾ ಎಂಬುದನ್ನು ಪರೀಕ್ಷಿಸಿಕೊಳ್ಳಿ. ಇಲ್ಲವಾದರೆ ಲಕ್ಷಾಂತರ ರೂ. ಮುದ್ರಾಂಕ ಶುಲ್ಕ ಪಾವತಿಸಿದರೂ ಆಸ್ತಿ ನೋಂದಣಿ ಮಾಡಿಸುವುದು ಅಸಾಧ್ಯ. ಬಂದ ದಾರಿಗೆ ಸುಂಕವಿಲ್ಲದಂತೆ ಮನೆಯ ಹಾದಿ ಹಿಡಿಯಬೇಕಾಗುತ್ತದೆ. ಈಗಾಗಲೇ ಆಧಾರ್ ಕಾರ್ಡ್ ಮಾಡಿಸಿ 10 ವರ್ಷ ಆಗಿದ್ದರೆ ಅಪ್ಡೇಟ್ ಮಾಡಿಸಲೇಬೇಕು. ಜಮೀನು ಮಾಲೀಕತ್ವದ ಸುರಕ್ಷತೆ, ವಂಚನೆ ತಡೆಯಲು ಸರ್ಕಾರ ಆಸ್ತಿ ನೋಂದಣಿಗೆ ಆಧಾರ್ ಕಡ್ಡಾಯಗೊಳಿಸಿದೆ. ವ್ಯಾಪ್ತಿಯೊಳಗೆ ರಿಜಿಸ್ಟೇಷನ್ ಎನಿವೇರ್ ವ್ಯವಸ್ಥೆ ಜಾರಿಗೆ ತಂದಿದೆ. ಆದರೆ…