ದನ, ಕರು, ಕುರಿ, ಕೋಳಿಗಳಿಗೆ ಬರುವ ರೋಗಿಗಳು ಮತ್ತು ಹತೋಟಿ ಕ್ರಮಗಳು.

ಕಾಲು ಬಾಯಿ ಜ್ವರ (ಕಾಲು ಬಾಯಿ ರೋಗ)

ಈ ರೋಗವು ಕಾಲು ಬಾಯಿ ಬೇನೆ ಎಂಬ ಅತಿ ಸೂಕ್ಷಾಣುವಿನಿಂದ ಆಕಳು, ಎಮ್ಮೆ, ಹಂದಿ ಕುರಿ, ಮತ್ತು ಆಡಿನಲ್ಲಿ ಬರುತ್ತದೆ. ವರ್ಷದಲ್ಲಿ ಯಾವಾಗ ಬೇಕಾದರೂ ಈ ರೋಗ ಬರಬಹುದು. ಆದರೆ ಸಾಮಾನ್ಯವಾಗಿ ಜನವರಿಯಿಂದ ಮಾರ್ಚ್‌ನಲ್ಲಿ ಬರುತ್ತದೆ. ಅತಿ ಸೂಕ್ಷ್ಮಾಣುವಿರುವ ನೀರು ಮತ್ತು ಆಹಾರವನ್ನು ಸೇವಿಸುವುದರಿಂದ ಮತ್ತು ಉಸಿರಾಟದ ಮೂಲಕ ಬರುತ್ತದೆ. ಒಮ್ಮೆ ಬಂದರೆ ಶೇ. ೧೦೦ ರಷ್ಟು ದನಗಳಿಗೆ ಕಾಳ್ಳಿಚ್ಚಿನಂತೆ ಹರಡುತ್ತದೆ. ಮಿಶ್ರತಳಿ ಆಕಳುಗಳಿಗೆ ಈ ರೋಗದಿಂದ ಹೆಚ್ಚು ನಷ್ಟವಾಗುತ್ತದೆ.

ರೋಗದ ಲಕ್ಷಣಗಳು –
ವಿಪರೀತ ಜ್ವರ (೧೦೪೦-೧೦೭೦ಫೆ.) ಇರುವುದು ಆಹಾರ ತಿನ್ನಲು, ನೀರು ಕುಡಿಯಲು ಆಗುವುದಿಲ್ಲ. ಬಾಯಿಯಲ್ಲಿ ಮತ್ತು ನಾಲಿಗೆಯಲ್ಲಿ ಮೊದಲು ಗುಳ್ಳೆಗಳು ಕಾಣಿಸಿಕೊಂಡು ನಂತರ ಅವು ಒಡೆದು ಹುಣ್ಣುಗಳಾಗುತ್ತವೆ. ಬಾಯಿಯಿಂದ ಒಂದೇ ಸಮನೆ ಜೊಲ್ಲು ಸುರಿಯುತ್ತದೆ. ಕಾಲಿನಲ್ಲಿ ಗೊರಸುಗಳ ಮಧ್ಯೆ ಹುಣ್ಣುಗಳಾಗಿ ನಂತರ ನೊಣ ಕುಳಿತು ಹುಳಗಳು ಸೇರಿಕೊಂಡು ಕೀವು ಬರಬಹುದು. ಇದರಿಂದ ಕಾಲಿಗೆ ನೋವಾಗಿ ಅವು ಕುಂಟಿಕೊಂಡು ನಡೆಯುತ್ತವೆ. ಇಲ್ಲವೆ ಮಲಗಿಕೊಂಡಿರುತ್ತವೆ. ಮೊಲೆ ಮತ್ತು ಮೊಲೆಯ ತೊಟ್ಟಿನಲ್ಲಿ ಹುಣ್ಣುಗಳಾಗಿ ಕೆಚ್ಚಲು ಬಾವು ಬರುತ್ತದೆ. ಇವೆಲ್ಲಾ ಕಾರಣಗಳಿಂದಾಗಿ ಹಾಲಿನ ಪ್ರಮಾಣವು ಬಹಳ ಕಡಿಮೆಯಾಗುತ್ತದೆ. ರೋಗದಿಂದ ೧ ಅಥವಾ ೨ ವಾರ ನರಳಿ ನಂತರ ದನಗಳು ಗುಣಮುಖವಾಗುತ್ತವೆ. ಆದರೆ ಮುಂದೆ ಇವು ಈ ರೋಗದ ದುಷ್ಪರಿಣಾಮದಿಂದ ನರಳುತ್ತವೆ, ಅಂದರೆ ಹೆಚ್ಚಿನ ಉಸಿರಾಟ (ಬುಸುಗುಟ್ಟುವುದು, ತೇಕುವುದು)ದಿಂದ ಸರಿಯಾಗಿ ಮೇವು ತಿನ್ನದೆ ಇರುವುದು ಮತ್ತು ಹಾಲಿನ ಪ್ರಮಾಣವು ಸಾಕಷ್ಟು ಕಡಿಮೆಯಾಗುತ್ತದೆ. ಗೊರಸುಗಳು ಕಿತ್ತುಕೊಂಡು ಬರಬಹುದು. ಕೂದಲು ಬಿರುಸಾಗಿ ಒರಟಾಗಿರುತ್ತವೆ. ಆಕಳುಗಳು ಸರಿಯಾಗಿ ಬೆದೆಗೆ ಬರುವುದಿಲ್ಲ ಬಂದರೂ ಗರ್ಭ ಕಟ್ಟುವುದಿಲ್ಲ. ಈ ರೀತಿಯಿಂದ ಈ ರೋಗದಿಂದ ರೈತನಿಗೆ ತುಂಬಲಾರದ ಆರ್ಥಿಕ ಹಾನಿಯಾಗುವುದು.

ಹತೋಟಿ ಕ್ರಮಗಳು –

* ಈ ರೋಗವನ್ನು ತಡೆಗಟ್ಟಲು ಎಫ್.ಎಮ್.ಡಿ. ಚುಚ್ಚು ಮದ್ದನ್ನು ವರ್ಷಕ್ಕೆ ಎರಡು ಬಾರಿ ಒಮ್ಮೆ ಡಿಸೆಂಬರ್‌ನಲ್ಲಿ ಮತ್ತೊಮ್ಮೆ ಜೂನ್‌ನಲ್ಲಿ ಹಾಕಿಸಬೇಕು.
* ರೋಗದಿಂದ ನರಳುವ ದನಗಳನ್ನು ಬೇರ್ಪಡಿಸಿ ಪಶುವೈದ್ಯರಿಂದ ಔಷಧೋಪಚಾರ ಮಾಡಿಸಬೇಕು.
* ದನಗಳನ್ನು ಮತ್ತು ದನಗಳ ಕೊಟ್ಟಿಗೆಯನ್ನು ಸ್ವಚ್ಛತೆಯಿಂದ ಇಟ್ಟುಕೊಳ್ಳಬೇಕು.
* ರೋಗ ಪೀಡಿತ ಪ್ರದೇಶದಲ್ಲಿ ದನಗಳ ಮಾರಾಟ ನಿಷೇಧಿಸಬೇಕು.

೩. ಹುಚ್ಚು ನಾಯಿ ರೋಗ (ರೇಬಿಸ್ )
ಎಲ್ಲಾ ಪ್ರಾಣಿಗಳಲ್ಲಿ ಮತ್ತು ಮನುಷ್ಯರಲ್ಲಿ ರೇಬಿಸ್ ಎನ್ನುವ ಅತಿ ಸೂಕ್ಷ್ಮಾಣುವಿನಿಂದ ಬರುತ್ತದೆ. ನರಮಂಡಲವನ್ನು ನಾಶಮಾಡುವುದರಿಂದ, ಲಕ್ಷಣ ತೋರಿದ ನಂತರ ಚಿಕಿತ್ಸೆ ಅಸಾಧ್ಯವೆನ್ನಬಹುದು. ಈ ರೋಗವು ಕಾಡು ಪ್ರಾಣಿಗಳಾದ ನರಿ, ತೋಳಗಳು ಮತ್ತು ಬಾವಲಿಗಳು ಕಡಿಯುವುದರಿಂದ ನಾಯಿಗಳಿಗೆ ಬರುತ್ತದೆ. ನಂತರ ಈ ಹುಚ್ಚು ನಾಯಿಗಳು ಬೇರೆ ಎಲ್ಲಾ ಪ್ರಾಣಿಗಳಿಗೆ ಮತ್ತು ಮನುಷ್ಯರಿಗೆ ಕಡಿಯುವುದರಿಂದ ಹರಡುತ್ತದೆ. ಈ ಅತಿ ಸೂಕ್ಷ್ಮಾಣುಗಳು ಜೊಲ್ಲಿನಲ್ಲಿ ಇರುತ್ತವೆ. ಜೊಲ್ಲಿನ ಸೋಂಕಿನಿಂದ ಇದು ಹರಡುತ್ತದೆ.

ರೋಗದ ಮುಖ್ಯ ಲಕ್ಷಣಗಳು –

ಹುಚ್ಚು ನಾಯಿಯು ಕಡಿದ ಎರಡು ವಾರಗಳಿಂದ ಹಿಡಿದು ಕೆಲವು ತಿಂಗಳುಗಳಲ್ಲಿ ಈ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಕೆಲವು ಸಲ ಒಂದು ವರ್ಷದ ಮೇಲೆಯೂ ಲಕ್ಷಣಗಳು ಕಂಡು ಬಂದ ವರದಿಗಳಿವೆ. ಬಾಯಿಯಲ್ಲಿ ಒಂದೇ ಸಮನೆ ಜೊಲ್ಲು ಸುರಿಯುತ್ತಿರುತ್ತದೆ. ಆಕಳುಗಳು ಒಂದೇ ಸಮನೆ ಒದರುತ್ತವೆ. ಬೇರೆ ಪ್ರಾಣಿಗಳಿಗೆ ಹಾಯುತ್ತವೆ. ನಾಯಿಗಳು ಬೇರೆ ಪ್ರಾಣಿಗಳನ್ನು ಮತ್ತು ಮನುಷ್ಯರನ್ನು ವಿನಾಕಾರಣ ಅಟ್ಟಿಸಿಕೊಂಡು ಹೋಗುತ್ತವೆ ಮತ್ತು ಕಡಿಯುತ್ತವೆ. ದಾರಿಯಲ್ಲಿ ಏನು ಸಿಕ್ಕುತ್ತದೆಯೋ ಅದನ್ನು ತಿನ್ನುತ್ತವೆ. ದುರಗಣ್ಣು ಬಿಟ್ಟುಕೊಂಡು ನೋಡುತ್ತಿರುತ್ತವೆ. ಕಟ್ಟಿ ಹಾಕಿದ್ದರೆ ಅದನ್ನು ಕಿತ್ತುಕೊಂಡು ಬರುತ್ತವೆ. ನೀರನ್ನು ಕಂಡರೆ ಭಯ ಬೀಳಬಹುದು. ಇದಾದ ೨-೩ ದಿವಸದ ನಂತರ ಒಂದೇ ಸಮನೆ ಕುಳಿತುಕೊಂಡಿರುತ್ತವೆ. ಸಪ್ಪಗೆ ಇರುತ್ತವೆ. ಆಹಾರವನ್ನು ತಿನ್ನುವುದಿಲ್ಲ. ನೀರನ್ನು ಕುಡಿಯುವುದಿಲ್ಲ. ಏಳಿಸುವುದಕ್ಕೆ ಪ್ರಯತ್ನ ಮಾಡಿದರೆ ಏಳುವುದಿಲ್ಲ. ಇದಾದ ೪-೫ ದಿವಸಗಳ ನಂತರ ಅಂದರೆ ರೋಗದ ಲಕ್ಷಣಗಳು ಕಂಡ ೧೦ ದಿವಸಗಳ ಒಳಗೆ ಸಾಯುತ್ತವೆ. ಸಣ್ಣವಯಸ್ಸಿನ ನಾಯಿ ಮರಿಗಳು ತೀವ್ರ ಲಕ್ಷಣ ತೋರಿಸದೇ ಸೌಮ್ಯರೂಪದ ರೋಗದಿಂದ ಸಾಯಬಹುದು.

ಹತೋಟಿ ಕ್ರಮಗಳು –
* ಈ ರೋಗವು ನಾಯಿಗಳಿಂದ ಇತರ ಪ್ರಾಣಿಗಳಿಗೆ ಮತ್ತು ಮನುಷ್ಯರಿಗೆ ಬರುವುದರಿಂದ ಈ ರೋಗವು ಬರದಂತೆ ತಡೆಗಟ್ಟಲು ಎಲ್ಲಾ ನಾಯಿಗಳಿಗೂ ಚುಚ್ಚು ಮದ್ದನ್ನು ಪ್ರತಿವರ್ಷ ಖಡಾಖಂಡಿತವಾಗಿ ಹಾಕಿಸಬೇಕು. ಇದಕ್ಕೆ ಬೇಕಾಗುವ ಆ್ಯಂಟಿ ರೇಬಿಸ ಚುಚ್ಚು ಮದ್ದುಗಳು ಸಿಕ್ಕುತ್ತವೆ.

೨. ಬೀದಿ ನಾಯಿಗಳ ಸಂಖ್ಯೆಯನ್ನು ನಿಯಂತ್ರಿಸಬೇಕು. ಏಕೆಂದರೆ ಈ ನಾಯಿಗಳಿಂದ ಹುಚ್ಚು ನಾಯಿ ರೋಗವು ಬೇರೆ ಪ್ರಾಣಿಗಳಿಗೆ ಹರಡುತ್ತವೆ.

೩. ಹುಚ್ಚು ನಾಯಿ ರೋಗದಿಂದ ನರಳುವ ಪ್ರಾಣಿಗಳನ್ನು ಮುಟ್ಟಬಾರದು. ಅದನ್ನು ಪಶುವೈದ್ಯರಿಂದ ಪರೀಕ್ಷಿಸಿ ನಂತರ ೧೦ ದಿವಸ ಕಟ್ಟಿ ಹಾಕಿ ಅದನ್ನು ನೋಡಿಕೊಳ್ಳಬೇಕು.

೪. ಹುಚ್ಚು ನಾಯಿಯು ಕಡಿದ ಪ್ರಾಣಿಗಳನ್ನು ಕೂಡಲೇ ಪಶುವೈದ್ಯರಿಗೆ ತೋರಿಸಿ ಔಷಧೋಪಚಾರ ಮಾಡಿಸಬೇಕು.

೫. ಹುಚ್ಚು ನಾಯಿ ರೋಗದಿಂದ ನರಳುತ್ತಿರುವ ಪ್ರಾಣಿಗಳನ್ನು ಮುಟ್ಟಿದವರು ಕೂಡ ರೇಬಿಸ್ ರೋಗವು ಬರದಂತೆ ಚುಚ್ಚುಮದ್ದನ್ನು ಹಾಕಿಸಿಕೊಳ್ಳಬೇಕು. ಏಕೆಂದರೆ ಕಣ್ಣಿನ ಒಳರೆಪ್ಪೆ ದೇಹದ ಗಾಯಗಳಿಗೆ ಜೊಲ್ಲು ಸೋಂಕಿದರೂ ಕ್ರಿಮಿ ಒಳಸೇರಬಹುದು.

ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ನೀಡಬೇಕಾದ ಲಸಿಕೆಗಳ ವಿವರ

ಜಾನುವಾರುಗಳಲ್ಲಿ ಲಸಿಕೆಯನ್ನು ಉಪಯೋಗಿಸುವಾಗ ವಹಿಸಬೇಕಾದ ಕ್ರಮಗಳು –
* ಪ್ರತಿಯೊಂದು ಪ್ರಾಣಿಗೂ ಕ್ರಿಮಿರಹಿತವಾದ ಸೂಜಿಯನ್ನು ಉಪಯೋಗಿಸಬೇಕು.
* ಕಂಪನಿಯವರು ನಿಗದಿಪಡಿಸಿದ ಪ್ರಮಾಣದಲ್ಲಿ ಮತ್ತು ಪ್ರಕಾರ ಲಸಿಕೆಯನ್ನು ನೀಡಬೇಕು.
* ಲಸಿಕೆಯನ್ನು ನಿಗದಿಪಡಿಸಿದ ಉಷ್ಣತೆಯಲ್ಲಿಯೇ (ಅಂದರೆ ೨-೮೦ ಸೆ.) ಇಡಬೇಕು.
* ಹಿಂಡಿನಲ್ಲಿರುವ ಪ್ರತಿಯೊಂದು ಆರೋಗ್ಯದಿಂದ ಇರುವ ದನಕ್ಕೆ ಲಸಿಕೆ ಕೊಡಬೇಕು.
* ರೋಗ ಬಂದಾಗ ಲಸಿಕೆ ಹಾಕಿಸುವ ಬದಲು ಮುಂಜಾಗ್ರತೆಯಾಗಿ ಲಸಿಕೆ ಹಾಕಿಸಬೇಕು.
* ರೋಗೋದ್ರೇಕ ಸಂದರ್ಭದಲ್ಲಿ, ಲಸಿಕೆ ಹಾಕಿಸಿದಲ್ಲಿ, ಪರಿಪಾಕಾವಧಿಯಲ್ಲಿರುವಾಗ ಜಾನುವಾರುಗಳಲ್ಲಿ ರೋಗ ಉಲ್ಬಣವಾಗುವ ಸಾಧ್ಯತೆ ಇರುವುದು.
* ಲಸಿಕೆಯನ್ನು ಆದಷ್ಟು ಬೆಳಗಿನ ಜಾವದಲ್ಲಿಯೇ ಹಾಕಿಸಬೇಕು. ಅಂದರೆ ಸೂರ್ಯನ ಕಿರಣಗಳು ನೇರವಾಗಿ ಲಸಿಕೆಯ ಮೇಲೆ ಬೀಳದಂತೆ ಎಚ್ಚರ ವಹಿಸಬೇಕು.
ಸೋಂಕು ರೋಗಗಳು

ಸೋಂಕು ರೋಗಗಳು ಬಗೆ ಬಗೆಯ ಸೂಕ್ಷ್ಮಾಣು ಸೂಕ್ಷಾಣಯಿ (ವೈರಸ್) ಮತ್ತು ಶಿಲೀಂಧ್ರಗಳಿಂದ ಬರುತ್ತವೆ. ಈ ರೋಗಗಳಲ್ಲಿ ಕೆಲವು ಅತಿ ಸಾಂಕ್ರಾಮಿಕವೂ ಕೂಡ. ಈ ರೋಗಗಳು ಆಹಾರ, ನೀರು, ಗಾಳಿ ಮೂಲಕ ಕೋಳಿಯಿಂದ ಕೋಳಿಗೆ ಮತ್ತು ಒಂದು ಕೋಳಿ ಮನೆಯಿಂದ ಮತ್ತೊಂದು ಮನೆಗೆ ಹರಡಿ ಹೆಚ್ಚಿನ ಸಂಖ್ಯೆಯಲ್ಲಿ ಕೋಳಿಗಳ ಸಾವಿಗೆ ಕಾರಣವಾಗುತ್ತವೆ. ಆದ್ದರಿಂದ “ಚಿಕಿತ್ಸೆಗಿಂತ ಮುಂಜಾಗ್ರತೆಯೇ ಮೇಲು”.

ಪರಾವಲಂಬಿ ರೋಗಗಳು –
ಕೋಳಿಗಳನ್ನು ಕಾಡುವ ಪರಾವಲಂಬಿ ಜೀವಿಗಳಲ್ಲಿ ಒಳ ಪರಾವಲಂಬಿ ಜೀವಿಗಳು ಮತ್ತು ಹೊರ ಪರಾವಲಂಬಿ ಜೀವಿಗಳು ಎಂದು ಎರಡು ವಿಧ. ಈ ಎರಡು ಬಗೆಯ ಜೀವಿಗಳೂ ಕೋಳಿಗಳ ಮೈಯಿಂದ ರಕ್ತ ಮತ್ತು ಪೌಷ್ಟಿಕಾಂಶಗಳನ್ನು ಹೀರುತ್ತಾ, ಅನೇಕ ರೀತಿಯಲ್ಲಿ ಹಾನಿಯನ್ನುಂಟು ಮಾಡುತ್ತವೆ.
ಒಳ ಪರಾವಲಂಬಿ ಜೀವಿಗಳು –
ಶರೀರದೊಳಗಿನ ಹುಳುಗಳೇ ಒಳ ಪರಾವಲಂಬಿ ಜೀವಿಗಳು.
ಹೊರ ಪರಾವಲಂಬಿ ಜೀವಿಗಳು –
ಹೇನು, ಕೂರೆ, ಉಣ್ಣೆ, ನೊಣ, ಸೊಳ್ಳೆ, ಜಿಗಟ, ನುಸಿ ಇವು ಕೋಳಿಗಳ ಮೈ ಮೇಲಿನ ಹೊರ ಪರಾವಲಂಬಿ ಜೀವಿಗಳು.

ರೋಗ ಪೀಡಿತ ಕೋಳಿಗಳನ್ನು ಪರೀಕ್ಷಾ ಕೇಂದ್ರಗಳಿಗೆ ಕಳಿಸುವ ವಿಧಾನ –
* ರೋಗ ಲಕ್ಷಣಗಳು ಕಂಡ ಕೂಡಲೇ ಅಂತಹ ಕೋಳಿಗಳನ್ನು ಜೀವ ಸಹಿತ ಕಳಿಸಬೇಕು. ಇದಕ್ಕಾಗಿ ನಾಲ್ಕು ರೋಗಪೀಡಿತ ಸಣ್ಣ ಮರಿಗಳು ಅಥವಾ ಎರಡು ದೊಡ್ಡ ಕೋಳಿಗಳನ್ನು ಪರೀಕ್ಷಾ ಕೇಂದ್ರಗಳಿಗೆ ಕಳಿಸಬೇಕಾಗುತ್ತದೆ.
* ಸತ್ತ ಕೋಳಿಗಳನ್ನು ದಪ್ಪ ಹಾಳೆಗಳಿಂದ ಚೆನ್ನಾಗಿ ಸುತ್ತಿ ಪೆಟ್ಟಿಗೆಯಲ್ಲಿರಿಸಿ ಕಳಿಸಬೇಕು. ಜೊತೆಗೆ ಕೆಳಗಿನ ವಿವರಣೆಗಳನ್ನು ಬರೆದು ಕಳಿಸಬೇಕು.
* ಗುಂಪಿನ ಕೋಳಿಗಳ ಸಂಖ್ಯೆ ಆ. ರೋಗ ಪೀಡಿತ ಕೋಳಿಗಳ ಸಂಖ್ಯೆ
* ಅವುಗಳ ವಯಸ್ಸುಈ ರೋಗ ಎಷ್ಟು ದಿನದಿಂದ ಗಮನಕ್ಕೆ ಬಂದಿದೆ
* ಪ್ರಮುಖ ರೋಗ ಲಕ್ಷಣಗಳು ಊ. ಸತ್ತ ಕೋಳಿಗಳ ಸಂಖ್ಯೆ. ಈ ಮೇಲಿನ ಅಂಶಗಳಿಂದ ರೋಗ ಪತ್ತೆ ಮಾಡಿ ಚಿಕಿತ್ಸೆ ಮಾಡಲು ನೆರವಾಗುತ್ತದೆ.

Spread positive news

Leave a Reply

Your email address will not be published. Required fields are marked *