18ನೇ ಕಂತಿನ ಹಣ ಚೆಕ್ ಮಾಡುವ ಡೈರೆಕ್ಟ್ ಲಿಂಕ್.

ರೈತ ಬಾಂಧವರಿಗೆ ವಿಶೇಷ ಸೂಚನೆ ಪಿ.ಎಂ.ಕಿಸಾನ್ ಯೋಜನೆಯ ಮುಂದಿನ ಕಂತುಗಳು ನಿಮಗೆ ಜಮೆ ಆಗಬೇಕಾದರೆ *e-KYC* ಮಾಡಿಸಿಕೊಳ್ಳುವುದು ಖಡ್ಡಾಯ. ಅದೇ ರೀತಿ ಈಗಾಗಲೇ ಹಣ ಯಾರಿಗೆ ಬಂದಿಲ್ಲ ಅವರು ಸಹ ಒಮ್ಮೆ ರೈತ ಸಂಪರ್ಕ ಕೇಂದ್ರ ಭೇಟಿ ನೀಡಿ ನಿಮ್ಮ ಪಿಎಂ ಕಿಸಾನ್ ಆರ್ ಬಗ್ಗೆ ಮಾಹಿತಿ ತಿಳಿದು ಬೇಕಾಗುವ ದಾಖಲೆಗಳನ್ನು ತೆಗೆದುಕೊಂಡು ಹೋಗಿ ಈ ಯೋಜನೆಯ ಲಾಭ ಪಡೆಯಿರಿ.

18 ನೇ ಕಂತಿನ ಅರ್ಹ ರೈತರ ಪಟ್ಟಿ ಮೊಬೈಲ್ ನಲ್ಲಿ ನೋಡುವುದು ಹೇಗೆ??
ಈಗಾಗಲೇ ಪಿ ಎಮ್ ಕಿಸಾನ್ ಪೋರ್ಟಲ್ ನಲ್ಲಿ ರೈತರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ನಿಮ್ಮ ಮೊಬೈಲ್ ನಲ್ಲಿ ಹೇಗೆ ಚೆಕ್ ಮಾಡಿಕೊಳ್ಳುವುದು ಎಂಬುದನ್ನು ನೋಡಿ 👇🏻
1) ಮೊದಲಿಗೆ 18 ನೇ ಕಂತಿನ beneficiary list ರೈತರ ಪಟ್ಟಿ ತಿಳಿಯಲು ಈ ಕೆಳಗಿನ ಮೇಲೆ ಕ್ಲಿಕ್ ಮಾಡಿಕೊಳ್ಳಿ ಆ ಬಟನ್ ಮೇಲೆ ಕ್ಲಿಕ್ ಮಾಡಬೇಕು
https://pmkisan.gov.in/Rpt_BeneficiaryStatus_pub.aspx

2) ನಂತರ ಮುಂದೆ ಕಾಣುವ ಮುಖಪುಟದಲ್ಲಿ ನಿಮ್ಮ ರಾಜ್ಯ ಜಿಲ್ಲೆ ತಾಲೂಕು ಗ್ರಾಮ ಹೆಸರನ್ನು ಆಯ್ಕೆ ಮಾಡಿಕೊಂಡು ಗೆಟ್ ರಿಪೋರ್ಟ್(Get report) ಬಟನ್ ಮೇಲೆ ಕ್ಲಿಕ್ ಮಾಡಿಕೊಳ್ಳಬೇಕು. ನಂತರ ನಿಮ್ಮ ಹಳ್ಳಿಯಲ್ಲಿ ಈ ಕಂತಿನ ಹಣ ಯಾವ ಅರ್ಹ ರೈತರಿಗೆ ಬರುತ್ತದೆ ಎಂಬ ಪಟ್ಟಿಯನ್ನು ಅಲ್ಲಿ ನೋಡಬಹುದು.. ಒಂದು ವೇಳೆ ಆ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದಿದ್ದರೆ ಹಾಗೆ ಪಿಎಂಕಿಸಾನ್ ಹಣ ಬರುವುದಿಲ್ಲ..

ಪಿಎಂ ಕಿಸಾನ್ ಯೋಜನೆಯಲ್ಲಿ ಒಂದು ವರ್ಷದಲ್ಲಿ 6,000 ರೂ ಹಣವನ್ನು ರೈತರಿಗೆ ನೀಡಲಾಗುತ್ತಿದೆ. ಅಂದರೆ, ತಲಾ 2,000 ರೂಗಳಂತೆ ಮೂರು ಕಂತುಗಳಲ್ಲಿ ಈ ಹಣವನ್ನು ನೀಡಲಾಗುತ್ತಿದೆ. ಈಗ ಒಂದು ಕಂತು ಹೆಚ್ಚು ಮಾಡಬಹುದು. 2,000 ರೂಗಳ ನಾಲ್ಕು ಕಂತುಗಳನ್ನು ರೈತರ ಖಾತೆಗಳಿಗೆ ಹಾಕಬಹುದು. ಒಟ್ಟು ಒಂದು ವರ್ಷದಲ್ಲಿ 8,000 ರೂ ಹಣವು ರೈತರಿಗೆ ಸಿಗಲಿದೆ…

ಎಂಟು ಕೋಟಿಗೂ ಹೆಚ್ಚು ರೈತರ ಖಾತೆಗಳಿಗೆ 2,000 ರೂ ಹಣ ವರ್ಗಾವಣೆ ಆಗಿದೆ. ಬಹುತೇಕ ಮಂದಿಯ ಖಾತೆಗೆ ಹಣ ಬಂದಿದೆ. ಸರ್ಕಾರ 15ನೇ ಕಂತಿಗೆ ಒಟ್ಟು 18,000 ಕೋಟಿ ರೂ ಹಣ ವೆಚ್ಚ ಮಾಡಿದೆ. ಇಲ್ಲಿಯವರೆಗೆ ಎಲ್ಲಾ 15 ಕಂತುಗಳಿಂದ ಒಟ್ಟು ಹಣ 2.75 ಲಕ್ಷ ಕೋಟಿ ರೂ ಆಗಿದೆ.

ಈ ಕೆವೈಸಿ ಎರಡು ವಿಧಾನಗಳಲ್ಲಿ ಮಾಡಬಹುದು. ಆಧಾರ್ ಕಾರ್ಡ್ ಲಿಂಕ್ ಇರದಿದ್ದರೆ ನಿಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರ ನಿಮ್ಮ ಬೆರಳಿನ ಗುರುತಿನ ಮುಖಾಂತರ ಹಾಗೂ ಇನ್ನೊಂದು ನಿಮ್ಮ ಮೋಬೈಲ್ ಮೂಲಕ ಮಾಡಬಹುದು.

ಇನ್ನೋಂದು ರೀತಿ ಕೆವೈಸಿ ವಿಧಾನ –
ನೀವು ಆಧಾರ್ ಕಾರ್ಡ್ ಲಿಂಕ್ ಇರದಿದ್ದರೆ ಅಥವಾ ಮೊಬೈಲ್ ಫೋನ್ ಇರದಿದ್ದರೆ ಹತ್ತಿರದ ಸಾಮಾನ್ಯ ಸೇವಾ ಕೇಂದ್ರ ಭೇಟಿ ನೀಡಿ ನಿಮ್ಮ ಬೆರಳಿನ ಗುರುತಿನ ಮುಖಾಂತರ ಅವರು ನಿಮ್ಮ ಕೆವೈಸಿ ಮಾಡುತ್ತಾರೆ. ರೈತರು ಬೇಗನೆ ಈ ಕೆವೈಸಿ ಮಾಡಿಕೊಂಡು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪಿಎಂ ಕಿಸಾನ್ ಯೋಜನೆ 6000 ರೂಪಾಯಿ ಪಡೆದುಕೊಳ್ಳಬೇಕು.
👉ಹಣ ಚೆಕ್ ಮಾಡುವ ಡೈರೆಕ್ಟ್ ಲಿಂಕ್ 👇
https://play.google.com/store/apps/details?id=com.dbtkarnataka

ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿದ ತಕ್ಷಣ ಡಿಬಿಟಿ(DBT Karnataka application)ಕರ್ನಾಟಕ ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಹಾಗೂ ಇನ್ಸ್ಟಾಲ್(Install) ಮಾಡಿಕೊಳ್ಳಿ.
ನಂತರ ಅಲ್ಲಿ ನಿಮ್ಮ ಆಧಾರ್ ಸಂಖ್ಯೆ ಹಾಕಿ get otp ಮೇಲೆ ಒತ್ತಬೇಕು.
ನಂತರ ನಿಮ್ಮ ಮೊಬೈಲ್ ಗೆ ಬರುವ ಓಟಿಪಿಯನ್ನು(OTP) ಹಾಕಿ ವೆರಿಫೈ (Verify OTP )ಓಟಿಪಿ ಮೇಲೆ ಒತ್ತಬೇಕು.
ನಂತರ ನಿಮಗೆ ಬೇಕಾಗಿರುವ ನಾಲ್ಕು ಅಂಕಿಯmPIN create ಮಾಡಿಕೊಂಡು, ನಂತರ confirm mPIN ಹಾಕಿ,Submit ಬಟನ್ ಮೇಲೆ ಒತ್ತಿರಿ..

ನಂತರ ಅಲ್ಲಿ ಕಾಣಿಸುವ Payment status ಮೇಲೆ ಕ್ಲಿಕ್ ಮಾಡಿ. ತದನಂತರ ನಿಮಗೆ ಇಲ್ಲಿಯವರೆಗೂ ಸರ್ಕಾರದಿಂದ ಬಂದಿರುವ ಸಹಾಯಧನದ ಮಾಹಿತಿಯು ದೊರೆಯುತ್ತದೆ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಅಡಿಯಲ್ಲಿ ಜಮೆ ಆಗಿರುವ ಹಣದ ಸ್ಟೇಟಸ್ ಅನ್ನು ಈ ಕೆಳಕಂಡಂತೆ ನೀವು ನಿಮಗೆ ಎಷ್ಟು ಹಣ ಜಮೆಯಾಗಿದೆ ಎಂಬುದನ್ನು ನೋಡಬಹುದು..

ಅದೇ ರೀತಿಯಾಗಿ ರೈತಶಕ್ತಿ ಯೋಜನೆಯ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಡೀಸೆಲ್ ಸಬ್ಸಿಡಿ ಯೋಜನೆಯ ಅಡಿ ಎಷ್ಟು ಹಣ ಜಮೆಯಾಗಿದೆ ಎಂಬ ಸ್ಟೇಟಸ್ ಅನ್ನು ನೋಡಬಹುದು. ಮುಂದಿನ ಹಂತದಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ನಿಮಗೆ ಎಷ್ಟು ಹಣ ಜಮೆಯಾಗಿದೆ ಎಂಬ ಸ್ಟೇಟಸ್ ಅನ್ನು ಅಲ್ಲಿ ನೋಡಬಹುದು. ನಾವು ಈ ಮೇಲೆ ಕಾಣಿಸಿದ ಎಲ್ಲ ಮಾಹಿತಿಯು ಸರಿಯಾಗಿದ್ದು ಸರ್ಕಾರದ ಅಡಿ ಬರುವ ಎಲ್ಲಾ ಯೋಜನೆಗಳ ಹಣ ನಿಮ್ಮ ಖಾತೆಗೆ ಬಂದಿರುವುದನ್ನು ಸರಳವಾಗಿ ನೀವು ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳಬಹುದು.

Spread positive news

Leave a Reply

Your email address will not be published. Required fields are marked *