ಧಾರವಾಡ ಕೃಷಿ ಮೇಳ ದಿನಾಂಕ ನಿಗದಿ.

ಪ್ರಿಯ ಓದುಗರೇ ಇವತ್ತು ಕೃಷಿಗೆ ಉತ್ತೇಜನ ನೀಡುವ ಒಂದು ಹೊಸ ವಿಷಯದ ಬಗ್ಗೆ ಚರ್ಚಿಸೋಣ. ಬನ್ನಿ ಧಾರವಾಡ ಕೃಷಿ ವಿಶ್ವವಿದ್ಯಾಲಯ ವತಿಯಿಂದ ಹಮ್ಮಿಕೊಂಡಿದ್ದ ಕೃಷಿ ಮೇಳ ಬಗ್ಗೆ ತಿಳಿಯೋಣ. 2024-25ನೇ ಸಾಲಿನ ಕೃಷಿ ಮೇಳವನ್ನು ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಸೆಪ್ಟೆಂಬರ್ 21-24ರವರೆಗೆ ಆಯೋಜಿಸಲಾಗಿದೆ. ಶಿರ್ಷಿಕೆ ಹವಾಮಾನ ವೈಪರೀತ್ಯ ನಿರ್ವಹಣೆ ಕೃಷಿ ತಾಂತ್ರಿಕತೆ (Climate Change Management Agricultural Technology)ಎಂಬ ಮುನ್ನುಡಿಯಲ್ಲಿ ಈ ವರ್ಷ ಕೃಷಿ ಮೇಳ ಆಯೋಜಿಸಲಾಗಿದೆ.

ಧಾರವಾಡ ಪ್ರಾದೇಶಿಕ ನಿರ್ದೇಶಕ ಶ್ರೀ. ವಸಂತ ಸಾಲಿಯಾನ್ ಸಿರಿ ಮಿಲ್ಲೆಟ್ ಸ್ಟಾಲ್ ಉದ್ಘಾಟಿಸಿದರು.ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಪಿ.ಎನ್.ಪಾಟೀಲ್, ಐಐಎಂಆರ್‌ನ ನಿವೃತ್ತ ನಿರ್ದೇಶಕ ಡಾ.ವಿಲಾಸ್ ಕುಮಾರ್ ಟೋನಾಪಿ ಮತ್ತು ಎಸ್‌ಕೆಡಿಆರ್‌ಡಿಪಿ ಕೃಷಿ ಇಲಾಖೆಯ ಪ್ರಾದೇಶಿಕ ನಿರ್ದೇಶಕ ಶ್ರೀ. ಮನೋಜ್ ಮಿನೇಜಸ್ ಮಳಿಗೆಗಳಿಗೆ ಭೇಟಿ ನೀಡಿ ಎಲ್ಲರನ್ನೂ ಶ್ಲಾಘಿಸಿದರು.

ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯುವ 2024ರ ಕೃಷಿ ಮೇಳದಲ್ಲಿ ರೈತರು, ರೈತ ಮಹಿಳೆಯರು, ಗ್ರಾಮೀಣ ಯುವಕರು ಹಾಗೂ ವಿಸ್ತರಣಾ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಲಾಗಿದೆ.

ಈ ಬಾರಿಯ ಕೃಷಿಮೇಳದಲ್ಲಿ ಅಂದಾಜು 15 ಲಕ್ಷಕ್ಕಿಂತಲೂ ಹೆಚ್ಚು ರೈತರು, ರೈತ ಮಹಿಳೆಯರು, ವಿಸ್ತರಣಾ ಹಾಗೂ ಸ್ವಯಂ ಸೇವಾ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆಯಿದೆ. ಕೃಷಿಮೇಳದಲ್ಲಿ ಆದಾಯ ದ್ವಿಗುಣಗೊಳಿಸುವ ಎಂಬ ಕಾರ್ಯಕ್ರಮದ ವಿಶೇಷ ಸಾಧನೆಗೈದ ರೈತರೊಂದಿಗೆ ಚರ್ಚೆಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಹಿಂಗಾರು ಬೆಳೆಗಳ ತಾಂತ್ರಿಕತೆಗಳು, ಕಿಸಾನ್ ಡ್ರೋನ್ ಬಳಕೆ, ಬರ ನಿರ್ವಹಣಾ ತಾಂತ್ರಿಕತೆಗಳು, ಒಣ ಬೇಸಾಯ, ಜಲಾನಯನ ಅಭಿವೃದ್ಧಿ, ಮಣ್ಣು ಆರೋಗ್ಯ, ಜಲಸಾಕ್ಷರತೆ, ಜಲ ಸಂರಕ್ಷಣೆ ತಾಂತ್ರಿಕತೆಗಳು, ಕೃಷಿ ಹಾಗೂ ತೋಟಗಾರಿಕೆ ಹುಟ್ಟುವಳಿಗಳ ರಫ್ತು ಅವಕಾಶಗಳನ್ನು ಬಿಂಬಿಸುವ ಪ್ರದರ್ಶನಗಳು ಹಾಗೂ ಅನೇಕ ವಿಶಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
send
ಕೃಷಿ ಮೇಳದಲ್ಲಿ ಫಲ-ಪುಷ್ಪ ಮತ್ತು ತರಕಾರಿ ಬೆಳೆಗಳ ಪ್ರದರ್ಶನ, ವಿಸ್ಮಯಕಾರಿ ಕೀಟ ಪ್ರಪಂಚ, ಕೃಷಿ ಅರಣ್ಯ ಪದ್ಧತಿಗಳು, ಪರಿಸರ ಸಂರಕ್ಷಣೆ, ಕೃಷಿ ಯಂತ್ರೋಪಕರಣಗಳು, ಯಶಸ್ವಿ ರೈತರೊಂದಿಗೆ ಸಂವಾದ, ಕೃಷಿ ಸಮಾಲೋಚನೆ, ವಿವಿಧ ಜಾನುವಾರುಗಳ ಪ್ರದರ್ಶನ, ಹುಟ್ಟುವಳಿಗಳ ಮೌಲ್ಯವರ್ಧನೆಗಾಗಿ ಅನುಷ್ಟಾನಗೊಂಡಿರುವ ವಿವಿಧ ಪ್ರಾತ್ಯಕ್ಷಿಕೆಗಳ ವೀಕ್ಷಣೆ ಮತ್ತು ಪ್ರದರ್ಶನ, ವಸ್ತ್ರವಿನ್ಯಾಸ, ವಿವಿಧ ಸಂಘ-ಸಂಸ್ಥೆಗಳಿಂದ ಉತ್ಪನ್ನಗಳ ಮಾರಾಟ ಮಾಹಿತಿ ಇತ್ಯಾದಿ ಸಿಗಲಿವೆ.

Spread positive news

Leave a Reply

Your email address will not be published. Required fields are marked *