ಕಬ್ಬಿನಲ್ಲಿ ಬಳಸುವ ಕಳೆನಾಶಕಗಳ ಪಟ್ಟಿ.

ಜಗತ್ತಿನ ಕಬ್ಬು ಬೆಳೆಯುವ ಎಲ್ಲಾ ದೇಶಗಳಲ್ಲಿ ಕುಳೆ ಕಬ್ಬು ಬೆಳೆಯುವುದು ಸಾಮಾನ್ಯವಾಗಿದೆ. ಆದರೆ ಕುಳೆ ಬೆಳೆಯ ಸಂಖ್ಯೆ ಪ್ರಮಾಣ ಮತ್ತು ಇಳುವರಿ ಬೇರೆ ಬೇರೆ ದೇಶಗಳಲ್ಲಿ ವಿಭಿನ್ನವಾಗಿರುತ್ತದೆ. ಹವಾಯಿ ಮತ್ತು ಜಾವಾ ದೇಶಗಳಲ್ಲಿ ಕೆಲವು ಭಾಗಗಳಲ್ಲಿ ಕುಳೆ ಕಬ್ಬು ಬೆಳೆಯುವುದಿಲ್ಲ. ಆದರೆ ಐದು ಕುಳೆ ಬೆಳೆಯನ್ನು ಮಾರಿಷಸ್ ಮತ್ತು ಎಂಟು ಕುಳೆ ಬೆಳೆಯನ್ನು ಥೈವಾನ್ ದೇಶಗಳಲ್ಲಿ ಬೆಳೆಯುತ್ತಾರೆ. ಭಾರತದಲ್ಲಿ ಸಾಮಾನ್ಯವಾಗಿ 1-2 ಕುಳೆ ಬೆಳೆ ಬೆಳೆಯುತ್ತಾರೆ. ಕುಳೆ ಬೆಳೆಯು ನಮ್ಮ ದೇಶದ ಕಬ್ಬು ಬೆಳೆಯುವ ಪ್ರದೇಶದಲ್ಲಿ ಪ್ರತಿಶತಃ 50 ರಷ್ಟು ಪ್ರದೇಶವನ್ನು ವ್ಯಾಪಿಸಿದೆ. ಆದರೆ ಒಟ್ಟು ಕಬ್ಬಿನ ಉತ್ಪಾದನೆ ಈ ಬೆಳೆಯ ಕಬ್ಬಿನ ಉತ್ಪಾದನೆ ಕೇವಲ ಶೇ. 30-35 ರಷ್ಟು.

ಕುಳೆ ಬೆಳೆಯುವ ಪ್ರದೇಶದಲ್ಲಿ ಹೆಚ್ಚು ಸಂಖ್ಯೆ ಕುಳೆ ಬೆಳೆದಂತೆಲ್ಲಾ ಇಳುವರಿ ಕಡಿಮೆಯಾಗುವುದು ಸಾಮಾನ್ಯವಾಗಿದೆ. ಸರಿಯಾಗಿ ಕುಳೆ ಬೆಳೆ ನಿರ್ವಹಣೆ ಮಾಡಿದರೆ ನಾಟಿ ಕಬ್ಬಿನಷ್ಟು ಅಥವಾ ಅದಕ್ಕಿಂತಲೂ ಹೆಚ್ಚು ಇಳುವರಿ ಪಡೆಯಲು ಸಾಧ್ಯ. ರೈತರು ಕುಳೆ ಬೆಳೆಯನ್ನು ಪುಕ್ಕಟೆ ಬೆಳೆ ಅಥವಾ ಕಾಣಿಕೆ ಬೆಳೆ ಎಂದು ತಿಳಿದುಕೊಂಡು ಕುಳೆ ವ್ಯವಸಾಯದಲ್ಲಿ ಅಷ್ಟೊಂದು ಕಾಳಜಿ ವಹಿಸುವುದಿಲ್ಲ. ನಮ್ಮ ದೇಶದಲ್ಲಿ ಇಳುವರಿಯಲ್ಲಿ ನಾಟಿ ಕಬ್ಬಿಗೂ ಮತ್ತು ಕುಳೆ ಕಬ್ಬಿಗೂ ಪ್ರತಿಶತ 20 ರಷ್ಟು ಅಂತರವಿದೆ. ಸಮಶೀತೋಷ್ಣ ವಲಯದ ರಾಜ್ಯಗಳಲ್ಲಿ ಇದರ ಅಂತರ ಪ್ರತಿಶತ 40 ರಷ್ಟು ಇದೆ. ಪ್ರತಿಶತ 50 ರಷ್ಟು ಪ್ರದೇಶವನ್ನು ಕುಳೆ ಬೆಳೆ ಆವರಿಸಿದ್ದರೂ ಕೇವಲ ಪ್ರತಿಶತ 30 ರಷ್ಟು ಕಬ್ಬು ಉತ್ಪಾದನೆಯನ್ನು ಕುಳೆ ಬೆಳೆಯಿಂದ ಪಡೆಯುತ್ತೇವೆ. ಕುಳೆ ಬೆಳೆಯ ಕಡಿಮೆ ಇಳುವರಿಯಿಂದ ನಮ್ಮ ದೇಶದ ಸರಾಸರಿ ಕಬ್ಬು ಉತ್ಪಾದನೆ ಕಡಿಮೆಯಾಗಲು ಮುಖ್ಯ ಕಾರಣವಾಗಿದೆ.

ಕಬ್ಬಿನಲ್ಲಿ ಬಳಸುವ ಕಳೆನಾಶಕಗಳ ಪಟ್ಟಿ –
ಕಬ್ಬಿನ ಸಸಿ ನಾಟಿ ಮಾಡಿದ 2 ದಿನಗಳ ಒಳಗೆ ಪ್ರತಿ ಎಕರೆಗೆ
ಮೆಟ್ರಿಬುಜಿನ್ 70% WP 100 ಗ್ರಾಂ + 2-4-ಡಿ 1 ಲೀ + ಅಟ್ರಾಜಿನ್ 500 ಗ್ರಾಂ 2೦0 ಲೀ ನೀರಿಗೆ ಈ 3 ಕಳೆನಾಶಕಗಳನ್ನು ಮಿಶ್ರಣ ಸ್ಪ್ರೇ ಮಾಡಿದರೆ ಕಳೆಯ ಬೀಜಗಳನ್ನು ಸರ್ವನಾಶ ಮಾಡಬಹುದಾಗಿದೆ.

ಸೂಚನೆ :- ಕಬ್ಬಿನಲ್ಲಿ ಬೇರೆ ಯಾವುದೇ ತರಹದ ಬೆಳೆಯ ಬೀಜಗಳನ್ನು ನಾಟಿ ಮಾಡಿದ್ದರೆ ಈ ಕಳೆನಾಶಕವನ್ನು ಸಿಂಪಡನೆ ಮಾಡಲು ನಡೆಯುವುದಿಲ್ಲ”
* ಕಬ್ಬು ಬೆಳೆದ 45 – 50 ದಿನಗಳ ನಂತರ ಮೆಟ್ರಿಬುಜಿನ್ 70% WP 100 ಗ್ರಾಂ + 2-4-ಡಿ 1 ಲೀ ಪ್ರತಿ ಎಕರೆಗೆ ಸಿಂಪರಣೆ ಮಾಡುವುದರಿಂದ ಸಂಪೂರ್ಣ ಕಳೆನಾಶಕ ಮಾಡಬಹುದು.
ಸೂಚನೆ – ರೈತರು ಕಸದ ಬೆಳವಣಿಗೆ ನೋಡಿ ಸಿಂಪರಣೆ ಮಾಡಬೇಕು. ಕಸ ಬೀಜ ಆಗುವ ಸಮಯದಲ್ಲಿ ಕಳೆನಾಶಕ ಬಳಸಿದರೆ ಉಪಯೋಗವಿಲ್ಲ.


ಏಕರೆಗೆ ನಾಟಿ ಮಾಡಿದ ಮೇಲೆ 10 ದಿನಕ್ಕೆ ಮಳೆ ನೀರಾಗಿ ತೆಳುವಾಗಿ ನೀರು. ಕೊಡಬೇಕು ಹವಾಗುಣಕ್ಕೆ ಅನುಗುಣವಾಗಿ ಭೂಮಿಯ ಗುಣಮಟ್ಟಕ್ಕೆ ಅನುಸರಿಸಿ ಈ ಕ ತಿಳಿಸಿದಂತೆ ನೀರು ಕೊಡುವರು. ಮೊಳಕೆ ಒಡೆಯುವಾಗ (8-15 ದಿನಗಳವರೆಗೆ) 7 ದಿನಕ್ಕೊಮ್ಮೆ . ಮರಿ ಒಡೆಯುವಾಗ (-100 ದಿನಗಳವರೆಗೆ) ಏನಕ್ಕೊಳ್ಳು ಬೆಳವಣಿಗೆ ಹಂತದಲ್ಲಿ (101 – 270 ದಿನಗಳವರೆಗೆ) 7 ದಿನಕ್ಕೊಮ್ಮೆ ಮಾಗುವಾಗ (271 – 365 ದಿನಗಳವ) 15 ದಿನಕ್ಕೊಮ್ಮೆ ಸಂಗ್ರಹ ಕಡಿಮೆಯಿದ್ದಲ್ಲಿ ಸಾಲು ಬಿಟ್ಟು ಸಾಲು ಕೊಡಬೇಕು.


ರವದಿ ನಿರ್ವಹಣೆ
:
ಒಂದು ಹೆಕ್ಟರಿಗೆ 10-12 ಟನ್ ಒಣ ರವದಿ ಸಿಗುವುದು ಇದನ್ನು ಸುಡದೆ ಕುಳೆ ಬೆಳೆಯಲ್ಲಿ ವ್ಯವಸ್ಥಿತವಾಗಿ ಹಾಕಿದಲ್ಲಿ ಮಣ್ಣಿನ ಸಾವಯವದ ಹಾಗೂ ಪೋಷಕಾಂಶಗಳ ಮಟ್ಟ ಹೆಚ್ಚುತ್ತದೆ. ರವದಿಯಲ್ಲಿ ಶೇ. 0.35 ಸಾರಜನಕ, ಶೇ. 0.13 ರಂಜಕ ಮತ್ತು ಶೇ 0.65 ಪೋಟ್ಯಾಶ್ ಇರುವುದು. ಅದಲ್ಲದೆ ಕ್ಯಾಲ್ಸಿಯಂ ಶೇ. 1.0 ಮಾಗ್ನಿಷಿಯಂ ಶೇ. 0.6 ಸಲ್ಪರ ಶೇ. 0.48 ಅಂದರೆ 160 ಕೆಜಿ ಸಾರಜನಕ 110 ಕೆಜಿ ರಂಜಕ 50 ಕೆಜಿ ಪೋಟ್ಯಾಷ 100 ಕೆಜಿ ಕ್ಯಾಲಿಸಿಯಂ 60 ಕೆಜಿ ಮಾಗ್ನಿಷಿಯಂ ಮತ್ತು 48 ಕೆಜಿ ಸಲ್ಪರ ಕೊಟ್ಟಂತ್ತಾಗುತ್ತದೆ. ಕುಳೆ ಕಬ್ಬಿನಲ್ಲಿ ರವದಿಯನ್ನು ಎರಡು ಸಾಲುಗಳ ಮದ್ಯ ಹಾಕಬೇಕು. ಇಲ್ಲವಾದರೆ ಒಂದು ಸಾಲು ಬಿಟ್ಟು ಒಂದು ಸಾಲಿಗೆ ಹಾಕಬೇಕು. ಇದಕ್ಕೆ 50 ಕೆಜಿ ಯುರಿಯಾ ಮತ್ತು 50 ಕೆಜಿ ಸುಪರ ಪಾಸ್ಪೆಟ್ ಗೊಬ್ಬರವನ್ನು ರವದಿಯ ಮೇಲೆ ಹಾಕಬೇಕು.
ನಂತರ 5-6 ಕೆಜಿ ರವದಿ ಕೊಳಿಸುವ ಸೂಕ್ಷ್ಮಾಣು ಜೀವಿ (ಟ್ರೈಕೊಡರ್ಮಾ ವಿರಡೆ ಅಸ್ಪರಜಿಲಸ್, ಪ್ಲುರೋಟಸ್ ಮತ್ತು ಫೆನಿಕೀಟ ಶೀಲಿಂಧ್ರಗಳು) ಸಗಣಿ ಕಲಿಸಿದ ನೀರಿನಲ್ಲಿ ಮಿಶ್ರಣ ಮಾಡಿ ರವದಿಯ ಮೇಲೆ ಸಿಂಪರಿಸಿ ಬೇಕು (2 ಕೆಜಿ ಟನ್ ರವದಿಯ ಮೇಲೆ). ಇದರಿಂದ ರವದಿ ಬೆಗನೆ ಕಳಿಯುವುದು ಸಾಲು ಬಿಟ್ಟು ಸಾಲಿನಲ್ಲಿ ರವದಿ ಹೊದಿಸುವದರಿಂದ ಮಣ್ಣಿನಲ್ಲಿ ತೇವಾಂಶ ಕಾಪಾಡುವುದರ ಜೊತೆಗೆ ಕಳೆಗಳ ನಿಯಂತ್ರಣವನ್ನು ಮಾಡಬಹುದು. ಮತ್ತು ಖುಲ್ಲಾ ಇರುವ ಸಾಲುಗಳಲ್ಲಿ ಬೋದು ಏರಿಸಿ ನೀರು ಹಾಯಿಸುವದು ಸೂಕ್ತ ನೀರಿನ ಕೊರತೆ ಇರುವ ಸಂದರ್ಭದಲ್ಲಿ ರವದಿ ಹೊದಿಕೆ ಮಾಡುವುದರಿಂದ ತೇವಾಂಶ ಆವಿಯಾಗಿ ಹೋಗುವುದನ್ನು ತಡೆಗಟ್ಟಿ ಕಬ್ಬಿಗೆ ನೀರು ಕೊಡುವ ಸಂಖ್ಯೆಯನ್ನು ಕಡಿಮೆ ಮಾಡಿ ನೀರಿನ ಉಳಿತಾಯವನ್ನು ಮಾಡಲಾಗುತ್ತದೆ. ಪ್ರಯೋಗಗಳ ಪ್ರಕಾರ ರವದಿ ಹೊದಿಕೆ ಮಾಡುವುದರಿಂದ 8-10 ದಿವಸಗಳಿಗೊಮ್ಮೆ ನೀರು ಕೊಡುವ ಬದಲು 15-20 ದಿವಸಗಳಿಗೊಮ್ಮೆ ನೀರು ಕೊಟ್ಟರೆ ಸಾಕು.

ಕಬ್ಬಿನ ಬಿಳಿ ಉಣ್ಣೆ ಜೇನು ಅದರ ಸಮಗ್ರ ನಿರ್ವಹಣೆ. ಬೆಳಗಾವಿ ಜಿಲ್ಲೆಯಲ್ಲಿ 2002 ರಲ್ಲಿ ತಿಂಗಳಲ್ಲಿ ಮೊಟ್ಟ ಮೊದಲ ಕಾಣಿಸಿಕೊಂಡಿದ್ದು , ಈಗ ದಕ್ಷಿಣ ಪ್ರಸ್ತಭೂಮಿಯ ಎಲ್ಲಾ ಕಬ್ಬು ಬೆಳೆಯುವ ಪ್ರದೇಶಗಳಲ್ಲಿ ವ್ಯಾಪಿಸಿಕೊಂಡಿದೆ. ಈ ಕೀಟದ ವೈಜ್ಞಾನಿಕ ಹೆಸರು ಸಿರಾಟೊವಾಕ್ಯುಲ್ಯಾನಿ ಎಂಬುದಾಗಿದೆ. ಈ ಕೀಟವು ಈ ಜರಾಯುಜತ್ವದಿಂದ ಸಂತಾನೊತ್ಪತ್ತಿ ಮಾಡುವುದು ಒಂದು ಮುಖ್ಯವಾದ ಲಕ್ಷಣವಾಗಿದೆ. ಮರಿಗಳು ಹಸಿರುಯುಕ್ತ ಹಳದಿ ಬಣ್ಣದಾಗಿದ್ದು , ಬಹು ಚುರುಕಾಗಿರುತ್ತದೆ. ಪ್ರೌಢಾವಸ್ಥೆಯನ್ನು ಹೊಂದಿದ ಹೊರಬಂದ ಮೂರು ದಿನಗಳ ಪ್ರಾಯದ ಹೆಣ್ಣು ಕೀಟ ಪ್ರತಿದಿನವೊಂದಕ್ಕೆ 15-35 ಮರಿಗಳಿಗೆ ಜನ್ಮ ನೀಡುತ್ತದೆ. ಬಾಲ್ಯಾವಸ್ಥೆಯ 20 ನಿಂದ 37 ದಿನಗಳವರೆಗೆ ಇರುತ್ತದೆ ದಿನಗಳವರೆಗೆ ಇರುತ್ತದೆ. ಒಂದು ಕೀಟವು 32 ರಿಂದ 50 ದಿನಗಳವರೆಗೆ ಬದುಕಬಲ್ಲದು ಮೋಡ ಕವಿದ ವಾತಾವರಣ, ತಂಪಾದ ಹವೆ ಮತ್ತು ಹೆಚ್ಚಿನ ಆರ್ದತೆ ಇರುವ ವಾತಾವರಣವು ಈ ಕೀಟದ ವೃದ್ಧಿಗೆ ಮತ್ತು ಪಸರಿಸಲು ಸಹಾಯವಾಗುತ್ತದೆ. ಕೀಟದ ಎಲೆಗಳ ಅಂಚುಗಳಲ್ಲಿ ಹಳದಿ ಮೇಳಾಗದಲ್ಲಿ ಕಪ್ಪು ಬೂಸ್ಟ್ ಬೆಳೆದು ಎಳೆಗಳ ಕೆಳಭಾಗದಲ್ಲಿದ್ದು ರಸಹಿಸುವರು. ಇಂತಹ ಎಲೆಗಳ ಪ್ರದೇಶವು ವರ್ಣಕ್ಕೆ ತಿರುಗಿದ ನಂತರ ಕೆಳಗಿನ ಎಳೆಯ ದ್ಯುತಿಸಂಶ್ಲೇಷಕಿಯೆಗೆ ತೊಂದರೆಯಾಗುವುದು. ಕಬ್ಬಿನ ಇಳುವರಿಯು ಶೇ 22 ರಿಂದ 25 ರಷ್ಟು ಹಾಗೂ ಸಕ್ಕರೆಯ ಇಳುವರಿಯು ಶೇ. 24.71 ರಷ್ಟು ಕಡಿಮೆಯಾಗುತ್ತದೆ.

Spread positive news

Leave a Reply

Your email address will not be published. Required fields are marked *