ರೈತರೇ ನಿಮಗೊಂದು ಸಂತಸದ ಸುದ್ದಿ ನೀಡುತ್ತಿದ್ದೇವೆ. ಪ್ರಸ್ತುತ, ದೇಶದ ಅನೇಕ ರಾಜ್ಯಗಳಲ್ಲಿ ಜನರು ಬೇಸಿಗೆಯ ಬಿಸಿಯನ್ನು ಎದುರಿಸುತ್ತಿದ್ದಾರೆ. ತಾಪಮಾನ ನಿರಂತರವಾಗಿ ಹೆಚ್ಚುತ್ತಿದೆ. ಹಲವು ರಾಜ್ಯಗಳಲ್ಲಿಯೂ ತಾಪಮಾನ 40 ದಾಟಿದೆ. ಮುಂದಿನ ದಿನಗಳಲ್ಲಿ ಭಾರತ ದೇಶದ ಕೆಲ ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿರುವುದು ಸಮಾಧಾನ ತಂದಿದೆ. ಏಪ್ರಿಲ್ 19 ಮತ್ತು 21 ರಂದು ಕರ್ನಾಟಕದ ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು ಮತ್ತು ಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ರಾಜ್ಯದಲ್ಲಿ ಬಿರುಬಿಸಿಲಿಗೆ ಜನ ಹೈರಾಣಾಗಿದ್ದಾರೆ. ಮಳೆಗಾಗಿ ವರುಣ ದೇವನನ್ನ ಪ್ರಾರ್ಥಿಸುತ್ತಿದ್ದಾರೆ, ರಾಜ್ಯದ ಕೆಲವೆಡೆ ಅಲ್ಪಸ್ವಲ್ಪ ಮಳೆಯ ಸಿಂಚನ ಮೂಡಿದ್ದು, ಚಿಕ್ಕೋಡಿ ತಾಲೂಕಿನಾದ್ಯಂತ ಇಂದು ಸುಮಾರು ಅರ್ಧ ಗಂಟೆಗಳ ಕಾಲ ಭರ್ಜರಿ ಮಳೆ ಸುರಿದಿದ್ದು, ಬೇಸಿಗೆಯಲ್ಲೂ ಆಲಿಕಲ್ಲು ಸಹಿತ ಮಳೆಯಾಗಿದೆ.
ಅದೇ ರೀತಿ ಮುಂದಿನ 2 ದಿನಗಳಲ್ಲಿ ನೋಡಿದರೆ ಬೆಂಗಳೂರು, ಮಳೆಯಿಲ್ಲದ ಸುದೀರ್ಘ ಬೇಸಿಗೆ ಋತುವನ್ನು ಮುರಿಯುವ ನಿರೀಕ್ಷೆಯಿದೆ. ಕಳೆದ 148 ದಿನಗಳಿಂದ ಬೆಂಗಳೂರಿನಲ್ಲಿ ಮಳೆಯಾಗಿಲ್ಲ. ಮುಂದಿನ 48 ಗಂಟೆಗಳಲ್ಲಿ ನಗರದಲ್ಲಿ ಲಘು ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ. ಹವಾಮಾನವು ಈ ವರ್ಷ ಜೂನ್ ನಿಂದ ಸೆಪ್ಟೆಂಬರ್ ವರೆಗೆ “ಸಾಮಾನ್ಯ” ಮಾನ್ಸೂನ್ (moderate mansoon) ಅನ್ನು ಮುನ್ಸೂಚಿಸಿದೆ. ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶಗಳು ಸಾಕಷ್ಟು ಮಳೆಯನ್ನು ಪಡೆದರೆ, ಬಿಹಾರ ಮತ್ತು ಪಶ್ಚಿಮ ಬಂಗಾಳವು ಜುಲೈ ಮತ್ತು ಆಗಸ್ಟ್ನ ಗರಿಷ್ಠ ಮಾನ್ಸೂನ್ ತಿಂಗಳುಗಳಲ್ಲಿ ಕೊರತೆಯನ್ನು ಎದುರಿಸಬಹುದು. ಕರ್ನಾಟಕದಲ್ಲಿ ಪೂರ್ವ ಮುಂಗಾರು ಮಳೆ ಸಕ್ರಿಯವಾಗಿದೆ. ಬಿಸಿಲಿಗೆ ತತ್ತರಿಸಿದ್ದ ಜನರಿಗೆ ಆಗಾಗ ಕೃಪೆ ತೋರುತ್ತಿರುವ ಮಳೆರಾಯ ತಂಪೆರೆಯುತ್ತಿದ್ದಾರೆ. ಇದೀಗ ರಾಜ್ಯದ ಕೆಲವು ಜಿಲ್ಲೆಗಳಿಗೆ ಬಿರುಗಾಳಿ ಸಹಿತ ಭಾರೀ ಮಳೆ (7cm ಗೂ ಅಧಿಕ) ಬರುವ ಕಾರಣಕ್ಕೆ ಹವಾಮಾನ ಇಲಾಖೆ ಹಳದಿ ಎಚ್ಚರಿಕೆ ಘೋಷಣೆ ಮಾಡಿದೆ.
ಯುವ ರೈತರಿಗೆ 20ಲಕ್ಷ ಸಾಲ ಸೌಲಭ್ಯ! ಅರ್ಜಿ ಪ್ರಕ್ರಿಯೆ ಹೇಗಿದೆ ನೋಡಿ!
ಯಾವ ಯಾವ ಜಿಲ್ಲೆಯಲ್ಲಿ ಮಳೆ ಸಾಧ್ಯತೆ?
ಮುಖ್ಯವಾಗಿ ದಕ್ಷಿಣ ಒಳನಾಡು ಹಾಗು ಉತ್ತರ ಒಳನಾಡು ಹಿಡಿದು ಮುಖ್ಯವಾಗಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಏಪ್ರಿಲ್ 19 ರಿಂದ 21 ರವರೆಗೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಗುರುವಾರ ಬಿಡುಗಡೆ ಮಾಡಿದೆ. ಜೂನ್ ಸಮೀಪಿಸುತ್ತಿದ್ದಂತೆ ಪರಿಹಾರದ ನಿರೀಕ್ಷೆಯು ಬೆಳೆಯುತ್ತದೆ, ಬೆಂಗಳೂರಿಗೆ ಹೆಚ್ಚು ಅಗತ್ಯವಿರುವ ಮಾನ್ಸೂನ್ ಅನ್ನು ತರುತ್ತದೆ, ಕಳೆದ ವರ್ಷದ ಕಳಪೆ ಮಾನ್ಸೂನ್ನಿಂದ ಕೆರೆಗಳು ಒಣಗಿ ಉಳಿದಿವೆ. ಆದಾಗ್ಯೂ, ದೀರ್ಘಕಾಲದ ಎಲ್ ನಿನೊ ಮುಂಬರುವ ಹವಾಮಾನ ಪರಿಸ್ಥಿತಿಗಳ ಬಗ್ಗೆ ಅನಿಶ್ಚಿತತೆಯನ್ನು ಹೆಚ್ಚಿಸುತ್ತದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮುಂಗಾರು ಮತ್ತು ಹಿಂಗಾರು ಬೆಳೆ ಸಂಪೂರ್ಣ ಫಲವತ್ತತೆ ಹೆಚ್ಚಿಸುತ್ತದೆ ಎಂದು ಮೂಲಗಳು ತಿಳಿಸಿವೆ.
Agril Drone: ಕೃಷಿ ಡ್ರೋನ್ ರಾಜ್ಯದ ಮಹಿಳೆಯರು ಅರ್ಜಿ ಸಲ್ಲಿಸಬಹುದು!
ಅದರಂತೆ ಸರ್ಕಾರವು ಕೂಡ ರೈತರಿಗೆ ಹಾನಿಯಾಗದಂತೆ ಹಾಗೂ ರೈತರ ಕಷ್ಟಗಳಿಗೆ ಪರಿಹಾರ ನೀಡಲು ಸರ್ಕಾರವು ರೈತರಿಗೆ ಬೆಳೆವಿಮೆ ಹಾಗೂ ಬೆಳೆ ಪರಿಹಾರ ನೀಡಲು ಸರ್ಕಾರ ನಿರ್ಧರಿಸಿದೆ. ಹಾಗಾಗಿ ರೈತರು ತಮ್ಮ ಬೆಳೆಹಾನಿ ಹಾಗೂ ಬೆಳೆವಿಮೆ ಪರಿಹಾರ ನೀಡಲು ಸರ್ಕಾರ ಪ್ರವಾಹದ ಆಧಾರದ ಮೇಲೆ ನೀಡುತ್ತದೆ. ಅದೇ ರೀತಿ ಈಗ ರೈತರು ಸಹ ತಮ್ಮ ಸುತ್ತ ಆಗುವ ಮಳೆ, ಗಾಳಿ, ಹವಾಮಾನ ಬದಲಾವಣೆ ಇವೆಲ್ಲವುಗಳನ್ನು ತಮ್ಮ ಮೊಬೈಲ್ ಮೂಲಕ ತಿಳಿದುಕೊಳ್ಳಲು ಒಂದು ಮೌಸಮ್ ಎಂಬ ಆ್ಯಪ್ ಬಂದಿದೆ. ಕೂಡಲೇ ರೈತರು ಇದನ್ನು ಬಳಸಿಕೊಂಡು ಕೃಷಿಯಲ್ಲಿ ಹವಾಮಾನದ ಬಗ್ಗೆ ಮಾಹಿತಿ ಪಡೆಯಬೇಕು. ಇಂದು ಕರ್ನಾಟಕದಲ್ಲಿ ಕೆಲವೊಂದು ಭಾಗಗಳಲ್ಲಿ ಅಂದರೆ ಈ ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಏಕೆಂದರೆ ಈಗಾಗಲೇ ಮಳೆ ಬಹಳ ದಿನಗಳಿಂದ ಬಂದಿಲ್ಲ ಹಾಗೂ ಆಕಸ್ಮಿಕ ಮಳೆಗಳು ಹೆಚ್ಚಾಗಬಹುದು ಹಾಗೂ ಹಾನಿಗಳನ್ನು ಸಹ ಉಂಟು ಮಾಡಬಹುದು ಏಕೆಂದರೆ ಈಗಾಗಲೇ ಬಿಸಿಲಿನ ತಾಪಮಾನ ಹೆಚ್ಚುತ್ತಿದೆ ಹೀಗಾಗಿ ಯಾವುದೇ ರೀತಿ ಮಳೆಗಳಾದರೂ ವಿಶೇಷವಾಗಿರುತ್ತವೆ ಅಂದರೆ ಹಾನಿ ಆಗಿರಬಹುದು ಹಾಗೂ ರೈತರಿಗೆ ಅನುಕೂಲಕರವಾಗಿರಬಹುದು.
Cyclone effect: ಚಂಡಮಾರುತ ಎಫೇಕ್ಟ! ರಾಜ್ಯದ ಈ ಜಿಲ್ಲೆಗಳಲ್ಲಿ ಇನ್ನೂ ಮೂರು ದಿನ ಭಾರಿ ಮಳೆ
ಮಂಡ್ಯ ನಗರದ ಮಳವಳ್ಳಿ ತಾಲೂಕಿನ ಕೆಲವೆಡೆ 20 ನಿಮಿಷ ಮಳೆ ಸುರಿದಿದೆ. ಬಿಸಿಲಿಗೆ ಬೇಸತ್ತಿದ್ದ ಜನರಿಗೆ ಮಳೆರಾಯ ತಂಪೆರೆದಿದ್ದಾನೆ. ವರ್ಷದ ಮೊದಲ ಮಳೆಯಿಂದ ಸಕ್ಕರೆ ನಾಡು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಇನ್ನು ಬಳ್ಳಾರಿ ಜಿಲ್ಲೆಯ ಹಲವೆಡೆ ಭಾರೀ ಮಳೆಯಾಗಿದೆ. ಜಿಲ್ಲೆಯ ಸಂಡೂರು, ತೋರಣಗಲ್ಲು ಸೇರಿದಂತೆ ವಿವಿಧೆಡೆ ಮಳೆಯಾಗಿದೆ. ತೋರಣಗಲ್ಲಿನಲ್ಲಿ ಗುಡುಗು ಸಮೇತ ಮಳೆಯಾಗಿದೆ. ಭಾರತೀಯ ಹವಾಮಾನ ಇಲಾಖೆ ಚಂಡಮಾರುತದ ಮುನ್ಸೂಚನೆ ನೀಡಿದ್ದು, ಆಗ್ನೇಯ ರಾಜಸ್ಥಾನದ ಮೇಲೆ ಚಂಡಮಾರುತದ ಪರಿಚಲನೆ ಇದೆ ಎಂದು ಹೇಳಿದೆ. ಇದರ ಪ್ರಭಾವದಿಂದ ಇಂದು ಮತ್ತು ನಾಳೆ (ಏ.15, 16 ಏಪ್ರಿಲ್) ಕರ್ನಾಟಕ, ಗುಜರಾತ್, ಮಧ್ಯಪ್ರದೇಶ, ಛತ್ತೀಸ್ಗಢ, ವಿದರ್ಭ, ಮರಾಠವಾಡ, ಮಧ್ಯ ಮಹಾರಾಷ್ಟ್ರದಲ್ಲಿ ಗುಡುಗು, ಮಿಂಚು ಮತ್ತು ಬಲವಾದ ಗಾಳಿ ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
BPL ಕಾರ್ಡಿದ್ದರೆ ಈ ಆಫರ್ ಮಿಸ್ ಮಾಡಿಕೊಳ್ಳಬೇಡಿ! ಇಂದೇ ಕೊನೆಯ ದಿನ
Scholarship 2024:ರೈತ ವಿದ್ಯಾನಿಧಿ 2024ರ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೇಗೆ?