ಹನಿ ನೀರಾವರಿ ಅಳವಡಿಕೆಗೆ ಸಬ್ಸಿಡಿ ಕೂಡಲೇ ಅರ್ಜಿ ಸಲ್ಲಿಸಿ.

ಹನಿ ನೀರಾವರಿ ಸೌಲಭ್ಯಕ್ಕೆ ಸರ್ಕಾರದಿಂದ ಎಷ್ಟು ರೂಪಾಯಿ ಸಹಾಯಧನ ಪಡೆಯಬಹುದು? ಬನ್ನಿ ಇದರ ಸಂಪೂರ್ಣ ಮಾಹಿತಿ ತಿಳಿಯೋಣ.

ಪ್ರೀಯ ರೈತರೇ ಸರ್ಕಾರವು ಕೃಷಿ ಹಾಗೂ ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದು ರೈತರ ಹಿತದೃಷ್ಟಿಯಿಂದ ಹಾಗೂ ರೈತರಿಗೆ ಕೃಷಿಯಲ್ಲಿ ಏನು ತೊಂದರೆ ಆಗದಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅದೇ ರೀತಿ ಈಗ ಪ್ರಧಾನ ಮಂತ್ರಿ ಕೃಷಿ ಸಿಂಚೈ ಯೋಜನೆ (PMKSY) ಯ “ಪರ್ ಡ್ರಾಪ್ ಮೋರ್ ಕ್ರಾಪ್” ಘಟಕದ ಅಡಿಯಲ್ಲಿ ಹನಿ ನೀರಾವರಿ ಪದ್ಧತಿ ಸೌಲಭ್ಯಕ್ಕೆ ಸಹಾಯಧನ ನೀಡಲು ಸರ್ಕಾರ ಮುಂದಾಗಿದೆ.

ಯಾವ ಪದ್ದತಿಗೆ ಎಷ್ಟು ಸಹಾಯಧನ ನೀಡಲು ಸರ್ಕಾರ ನಿರ್ಧರಿಸಿದೆ?

• ಹನಿ ನೀರಾವರಿಗಾಗಿ: ಸಣ್ಣ ಮತ್ತು ಅತಿ ಸಣ್ಣ ರೈತರು 55% ವರೆಗೆ ಮತ್ತು ಇತರ ರೈತರು 45% ವರೆಗೆ ಆರ್ಥಿಕ ನೆರವು ಪಡೆಯಬಹುದು. ಹನಿ ನೀರಾವರಿ ವ್ಯವಸ್ಥೆಯ ಸೂಚಕ ವೆಚ್ಚವು ರೂ. 21643 ರಿಂದ ರೂ. 1,12,237/ ಹೆಕ್ಟೇರ್ ಹನಿ ಲ್ಯಾಟರಲ್ ಪೈಪ್‌ಗಳ ಅಂತರ ಮತ್ತು ಭೂಮಿಯ ಗಾತ್ರವನ್ನು ಅವಲಂಬಿಸಿರುತ್ತದೆ. ಗರಿಷ್ಠ ಅನುಮತಿಸುವ ಸಹಾಯವನ್ನು <5 ಹೆಕ್ಟೇರ್/ ಫಲಾನುಭವಿಗಳಿಗೆ ನಿರ್ಬಂಧಿಸಲಾಗುತ್ತದೆ. >

• ತುಂತುರು ನೀರಾವರಿಗಾಗಿ (ಪೋರ್ಟಬಲ್, ಮಿನಿ, ಮೈಕ್ರೋ, ಅರೆ, ಶಾಶ್ವತ, ದೊಡ್ಡ ಪರಿಮಾಣ) ಸಣ್ಣ ಮತ್ತು ಅತಿ ಸಣ್ಣ ರೈತರು 55% ವರೆಗೆ ಮತ್ತು ಇತರ ರೈತರು 45% ವರೆಗೆ ಆರ್ಥಿಕ ನೆರವು ಪಡೆಯಬಹುದು.

ಸ್ಪ್ರಿಂಕ್ಲರ್ ನೀರಾವರಿ ವ್ಯವಸ್ಥೆಯ ಸೂಚಕ ವೆಚ್ಚವು ರೂ. 19,542 ರಿಂದ ರೂ. 94,028/ ಹೆಕ್ಟೇರ್ ಸ್ಪ್ರಿಂಕ್ಲರ್ ಪೈಪ್‌ಗಳ ಅಂತರ, ಸ್ಪ್ರಿಂಕ್ಲರ್ ಸಿಸ್ಟಮ್‌ನ ಪ್ರಕಾರ ಮತ್ತು ಭೂಮಿಯ ಗಾತ್ರವನ್ನು ಅವಲಂಬಿಸಿರುತ್ತದೆ. ಗರಿಷ್ಠ ಅನುಮತಿಸುವ ಸಹಾಯವನ್ನು 5 ಹೆಕ್ಟೇರ್/ ಫಲಾನುಭವಿಗಳಿಗೆ ನಿರ್ಬಂಧಿಸಲಾಗುತ್ತದೆ. ಹೆಚ್ಚಿನ ವಿವರಗಳಿಗಾಗಿ, PMKSY ವೆಬ್‌ಸೈಟ್ ಪರಿಶೀಲಿಸಿ.

ಈ ಸೌಲಭ್ಯವನ್ನು ಪಡೆಯುವುದು ಹೇಗೆ?

ಮುಖ್ಯವಾಗಿ ಹೇಳಬೇಕೆಂದರೆ ಈ ಯೋಜನೆಯು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಅದೇ ರೀತಿ ಈ ಯೋಜನೆಯನ್ನು ಪಡೆಯಲು ಆನ್ಲೈನ್ ಅರ್ಜಿ ಸಲ್ಲಿಸಿ, ಹೆಚ್ಚಿನ ವಿವರಗಳಿಗಾಗಿ, PMKSY ವೆಬ್‌ಸೈಟ್ ಪರಿಶೀಲಿಸಿ. https:// pmksy.gov.in/ ಇದಕ್ಕೆ ಭೇಟಿ ನೀಡಿ ಇದರ ಸದುಪಯೋಗ ಪಡೆದುಕೊಳ್ಳಬೇಕು. ಹಾಗೂ ರೈತರು ಇದರ ಜೊತೆಗೆ ನೀರಾವರಿ ಸೌಲಭ್ಯ ಪಡೆದು ಕೃಷಿಯಲ್ಲಿ ಹೆಚ್ಚಿನ ಆದಾಯ ಪಡೆಯಲು ಸಹಾಯವಾಗುತ್ತದೆ.

 

Spread positive news

Leave a Reply

Your email address will not be published. Required fields are marked *