ಇವತ್ತು ನಾವು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಒಂದು ಹೊಸ ಮುಖ್ಯವಾದ ಮಾಹಿತಿ ಬಗ್ಗೆ ಚರ್ಚಿಸೋಣ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ 15ನೇ ಕಂತಿನ ಮೊತ್ತವನ್ನು ಪ್ರಧಾನಮಂತ್ರಿಯವರು ಬಿಡುಗಡೆ ಮಾಡಿದ್ದು, ನಮ್ಮ ಕರ್ನಾಟಕ ರಾಜ್ಯದ ಒಟ್ಟು 50.36 ಲಕ್ಷ ರೈತರು ನೇರ ನಗದು ಪಾವತಿ ಮೂಲಕ ಪಡೆದುಕೊಳ್ಳಲಿದ್ದಾರೆ.
ಮುಖ್ಯವಾಗಿ ಹೇಳಬೇಕೆಂದರೆ ಪಿಎಂ ಕಿಸಾನ್ ಯೋಜನೆ ಹಣವು ಈಗಾಗಲೇ ಬಿಡುಗಡೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಅದೇ ರೀತಿ ಕೆಲವು ರೈತರಿಗೆ ಇನ್ನೂ ಪಿಎಂ ಕಿಸಾನ್ ಯೋಜನೆ ತಮ್ಮ ಅಪ್ಲಿಕೇಶನ್ ನಂಬರ್ ಗೊತ್ತು ಇಲ್ಲದೆ ಇರುವುದು ಮುಖ್ಯ ಸಂಗತಿ ಆಗಿದೆ. ಹಾಗಾದರೆ ಬನ್ನಿ ಪಿಎಂ ಕಿಸಾನ್ ಯೋಜನೆ ಅಪ್ಲಿಕೇಶನ್ ನಂಬರ್ ತಿಳಿಯುವುದು ಹೇಗೆ ಎಂದು ನೋಡೋಣ.
ಕೆಲವು ರೈತರಿಗೆ 15ನೇ ಕಂತು ಬರದೇ ಇರಲು ಮುಖ್ಯ ಕಾರಣ ಏನು?
ರೈತರು ತಮ್ಮ KYC ಅನ್ನು PM ಕಿಸಾನ್ ಯೋಜನೆಗಾಗಿ ನವೀಕರಿಸಿದರೆ ಲಾಭ ಪಡೆಯಬಹುದು. ಒಂದು ವೇಳೆ ಯಾರು ತಮ್ಮ KYC ಮಾಡಿಸಿದೆ ಇದ್ದಲ್ಲಿ ಅವರಿಗೆ ಈ ಹಣ ಬರುವುದಿಲ್ಲ. OTP-ಆಧಾರಿತ ತಂತ್ರವನ್ನು ಬಳಸಿಕೊಂಡು MKISAN ಪೋರ್ಟಲ್ನಲ್ಲಿ ಫಲಾನುಭವಿಗಳು eKYC ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. ಆದರೆ ಇ-ಕೆವೈಸಿ ಮಾಡಲು ಈಗ ಕೇಂದ್ರ ಸರ್ಕಾರ ಮತ್ತೊಂದು ಸರಳ ದಾರಿಮಾಡಿ ಕೊಟ್ಟಿದೆ. ಏನೆಂದರೆ ರೈತರು ಇನ್ನೂ ಮುಂದೆ ಇ-ಕೆವೈಸಿ ಅನ್ನು ತಮ್ಮ ಫೇಸ್(ಮುಖ) ತೋರಿಸುವುದರ ಮೂಲಕ ಮಾಡಬಹುದು. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯ ಫಲಾನುಭವಿಗಳು ಇ-ಕೆವೈಸಿ ಮಾಡುವುದು ಕಡ್ಡಾಯವಾಗಿದೆ. ಈಗ ಫೇಸ್ ಸ್ಕ್ಯಾನ್ ಮೂಲಕವೂ ಕೆವೈಸಿ ಅಪ್ಡೇಟ್ ಮಾಡುವ ವ್ಯವಸ್ಥೆ ಮಾಡಲಾಗಿದೆ.
ಹಣ ಬಂದಿದೆ ಎಂದು ಚೆಕ್ ಮಾಡಬೇಕೇ?
ಫಲಾನುಭವಿಗಳು ಅಥವಾ ರೈತರು ಕೇವಲ ತಮ್ಮ ಮೊಬೈಲ್ ನಂಬರ್ ಅನ್ನು ಉಪಯೋಗಿಸಿಕೊಂಡು ಪಿಎಂ ಕಿಸಾನ್ ಹಣ ಅವರ ಖಾತೆಗೆ ಜಮಾ ಆಗಿದ್ಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಬಹುದು.
ಈಗ ನಾವು ಕೇವಲ ಮೊಬೈಲ್ ನಂಬರನ್ನು ಬಳಸಿಕೊಂಡು ರೈತರ ಖಾತೆಗೆ ಪಿಎಂ ಕಿಸಾನ್ ಹಣ ಜಮಾ ಆಗಿದೆಯೋ ಇಲ್ಲವ ಎಂಬುದನ್ನು ಚೆಕ್ ಮಾಡುವುದು ಹೇಗೆ ಎಂಬುದರ ಸಂಪೂರ್ಣ ವಿವರವವನ್ನು ತಿಳಿದುಕೊಳ್ಳೋಣ.
* ಮೊದಲಿಗೆ ಫಲಾನುಭವಿಗಳು ಪಿಎಂ ಕಿಸಾನ್👇 https://www.pmkisan.gov.in/ ಸಮ್ಮಾನ್ ನಿಧಿ ಎಂಬ ವೆಬ್ಸೈಟ್ ತೆರೆಯಬೇಕಾಗುತ್ತದೆ.
* ಆ ಮುಖಪುಟದಲ್ಲಿ ನೀವು ಕೆಳಗಡೆ ಬಂದಾಗ ನಿಮಗೆ ಅಲ್ಲಿ ಬೆನಿಫಿಶಿಯರಿ ಸ್ಟೇಟಸ್ (beneficiary status) ಎಂಬ ಆಯ್ಕೆ ಕಾಣುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ ಮುಂದುವರೆಯಬೇಕು.
* ನಿಮಗಿಲ್ಲಿ ಚೆಕ್ ಮಾಡಲು ಎರಡು ಆಯ್ಕೆಗಳನ್ನು ನೀಡಲಾಗುತ್ತದೆ.
• ಮೊಬೈಲ್ ನಂಬರ್
• ರಿಜಿಸ್ಟ್ರೇಷನ್ ನಂಬರ
ಇವೆರಡವುಗಳಿಂದ ನೀವು ನಿಮ್ಮ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬಹುದು.
* ಅದರಲ್ಲಿ ನೀವು “ಮೊಬೈಲ್ ನಂಬರ್” ಇಂದ ಎಂಬ ಆಯ್ಕೆಯನ್ನು ಆಯ್ಕೆ ಮಾಡಿಕೊಂಡು ನಂತರ ಅಲ್ಲಿ ಕೇಳಲಾಗುವ ಕ್ಯಾಪ್ಚ ನಮೂದಿಸಿ “ವಿವರವನ್ನು ಪಡೆಯಿರಿ” (get details) ಎಂಬ ಆಯ್ಕೆಯನ್ನು ಆಯ್ಕೆ ಮಾಡಿ.