29 ಲಕ್ಷ ರೈತರಿಗೆ ಬರ ಪರಿಹಾರ? ಯಾವ ಜಿಲ್ಲೆಗೆ ಎಷ್ಟು ಹಣ ಬಂದಿದೆ ಎಂದು ತಿಳಿಯೋಣ ಬನ್ನಿ.
ಸರ್ಕಾರದಿಂದ ಬರ ಪರಿಹಾರ ಹಣ ಮತ್ತಷ್ಟು ಬಿಡುಗಡೆ. ಅದೇ ರೀತಿ ಸರ್ಕಾರವು ಕೂಡ ರೈತರಿಗೆ ಬರ ಪರಿಹಾರ ಸದ್ಯಕ್ಕೆ ಬಿಡುಗಡೆ ಮಾಡಿದ್ದು ಬಹಳ ಉಪಯುಕ್ತ ಆಗಿದೆ. ಬರ ಪರಿಸ್ಥಿತಿಯಲ್ಲಿ ರೈತರಿಗೆ, ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ರಾಜ್ಯದ 29,28,910 ರೈತರ ಖಾತೆಗೆ ತಲಾ 2 ಸಾವಿರ ರೂ.ಗಳ ಪರಿಹಾರ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಬಿಜೆಪಿ ಪ್ರತಿಭಟನೆ ಹಿನ್ನೆಲೆಯಲ್ಲಿ ಅಂಕಿಅಂಶಗಳನ್ನು ಬಿಡುಗಡೆ ಮಾಡಿರುವ ಅವರು, ಕೇಂದ್ರದಿಂದ ಇದುವರೆಗೂ ನಯಾ ಪೈಸೆ ಬಿಡುಗಡೆಯಾಗದಿದ್ದರೂ ರಾಜ್ಯ ಸರ್ಕಾರದಿಂದಲೇ 554.52 ಕೋಟಿ ರೂ.ಗಳನ್ನು ರೈತರಿಗೆ ನೀಡಲಾಗಿದೆ. ಉಳಿದ ರೈತರಿಗೂ ನೀಡಲಾಗುತ್ತದೆ ಎಂದು ಹೇಳಿದ್ದಾರೆ. ಫೂಟ್ಸ್ ಮತ್ತು ಪರಿಹಾರ ತಂತ್ರಾಂಶವನ್ನು ಬಳಕೆ ಮಾಡಿಕೊಂಡು ಹಣ ಬಿಡುಗಡೆಯಾಗುತ್ತಿದೆ. ಯಾವುದೇ ಗೊಂದಲಕ್ಕೆ ಅವಕಾಶ ಇಲ್ಲದಂತೆ ರೈತರಿಗೆ ತಲುಪುತ್ತಿದೆ ಎಂದು ತಿಳಿಸಿದ್ದಾರೆ. ಪ್ರತಿ ಖಾತೆಗೆ 2 ಸಾವಿರ ರೂ.
ಯಾವ ಜಿಲ್ಲೆಗೆ ಎಷ್ಟು ಹಣ?
ಬಾಗಲಕೋಟೆ ಜಿಲ್ಲೆಯಲ್ಲಿ 1,54,719, ಬೆಂಗಳೂರು ನಗರ 11,098,ಚಾಮರಾಜನಗರ 41,458, ಚಿಕ್ಕಮಗಳೂರು 43,154, ಚಿತ್ರದುರ್ಗ 1,14,156, ದಕ್ಷಿಣ ಕನ್ನಡ 1,306, ದಾವಣಗೆರೆ 71,643, ಧಾರವಾಡ 90,874, ರಾಮನಗರ 48,867, ಯಾದಗಿರಿ 88,467, ವಿಜಯನಗರ 95,231 ರೈತರಿಗೆ ಪರಿಹಾರ ನೀಡಲಾಗಿದೆ ಎಂದು ವಿವರಿಸಿದ್ದಾರೆ.
ರಾಜ್ಯದ ಎಷ್ಟು ತಾಲೂಕು ಗಳನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸಿದ್ದೀರಿ? ಪರಿಹಾರ ಬಿಡುಗಡೆ ಮಾಡಿದ್ದೀರಿ ಎಂಬ ಪ್ರಶ್ನೆಗೆ ರವಿಕುಮಾರ್ ಸಚಿವರು ಪ್ರತಿಕ್ರಿಯಿಸಿದರು. ರಾಜ್ಯದಲ್ಲಿ ಒಟ್ಟು 4 ಸಾವಿರ ಕೋಟಿ ರೂ. ಪರಿಹಾರ ಕೊಡುವುದಕ್ಕೆ ಚಿಂತಿಸುತ್ತಿದ್ದೇವೆ. ಬರ ನಿರ್ವಹಣೆಗೆ ಕೇಂದ್ರ ಸರ್ಕಾರಕ್ಕೆ 18,200 ಕೋಟಿ ರೂ. ನೀಡುವಂತೆ ಮನವಿ ಮಾಡಿದ್ದೇವೆ. ಕೇಂದ್ರಕ್ಕೆ ಎನ್ಡಿಆರ್ಎಫ್ ಅಡಿ ಆರ್ಥಿಕ ನೆರವು ನೀಡುವಂತೆ ಕೇಂದ್ರಕ್ಕೆ ಕೋರಿದ್ದೇವೆ. ಹಣ ಬಿಡುಗಡೆಯಾದರೆ ಅನುಕೂಲವಾಗುತ್ತದೆ ಎಂದರು.
ಪ್ರತಿಯೊಬ್ಬ ರೈತರು ಕಡ್ಡಾಯವಾಗಿ ಎಫ್.ಐ.ಡಿ ಮಾಡಿಸಿಕೊಳ್ಳಬೇಕು, ಹಳ್ಳಿವಾರು ರೈತರ ಎಫ್.ಐ.ಡಿ ಈಗಾಗಲೇ ಆಗಿದೇ ಇದ್ದವರ ಲಿಸ್ಟ್ ಆಯಾ ರೈತ ಸಂಪರ್ಕ ಕೇಂದ್ರ ಹಾಗೂ ಗ್ರಾಮ ಪಂಚಾಯಿತಿ ನೋಟಿಸ್ ಬೋರ್ಡ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಅದೇ ರೀತಿ ನೀವು ಸಹ ನಿಮಗೆ ಎಫ್ ಐಡಿ ಆಗದೆ ಇರುವವರ ಲಿಸ್ಟ್ ಸಿಕ್ಕಿದ್ದರೆ ನಿಮ್ಮ ಹೆಸರು ಚೆಕ್ ಮಾಡಿ ಪರಿಶೀಲನೆ ನಡೆಸಿ. ಒಂದು ವೇಳೆ ನಿಮಗೆ ಸಂಬಂದಿಸಿದ ಎಲ್ಲಾ ಸರ್ವೇ ನಂಬರ್ಗಳು ಜೋಡಣೆಯಾಗಿದೆಯೋ ಅಥವಾ ಇಲ್ಲವೋ ಎಂದು ಕೂಡಲೇ ಪರಿಶೀಲಿಸಿಕೊಳ್ಳಿ, ಜಂಟಿ ಖಾತೆದಾರರಾಗಿದ್ದಲ್ಲಿ ಪ್ರತಿಯೊಬ್ಬ ಖಾತೆದಾರರು ಪ್ರತ್ಯೇಕವಾಗಿ ಎಫ್.ಐ.ಡಿ ಮಾಡಿಸಿಕೊಳ್ಳಬೇಕು.