ಮತ್ತೆ 10.೫ ಕೋಟಿ ಬರ ಪರಿಹಾರ ಹಣ ಬಿಡುಗಡೆ ಕೂಡಲೇ ಯಾವ ಜಿಲ್ಲೆಗೆ ಎಂದು ನೋಡಿ.

ರೈತರಿಗೆ ಗುಡ್ ನ್ಯೂಸ್! ಸರ್ಕಾರದಿಂದ ಬರ ಪರಿಹಾರ ಹಣ ಮತ್ತಷ್ಟು ಬಿಡುಗಡೆ. ಅದೇ ರೀತಿ ಸರ್ಕಾರವು ಕೂಡ ರೈತರಿಗೆ ಬರ ಪರಿಹಾರ ಸದ್ಯಕ್ಕೆ ಬಿಡುಗಡೆ ಮಾಡಿದ್ದು ಬಹಳ ಉಪಯುಕ್ತ ಆಗಿದೆ. ಬರಗಾಲ ಕಾಡುತ್ತಿದ್ದು ಪರಿಸ್ಥಿತಿ ನಿರ್ವಹಣೆಗೆ ನಮ್ಮ ಸರ್ಕಾರ ಜಿಲ್ಲೆಗೆ ₹ 10.50 ಕೋಟಿ ಬಿಡುಗಡೆ ಮಾಡಿದೆ. ಜನರ ಸಂಕಷ್ಟಗಳಿಗೆ ನಮ್ಮ ಸರ್ಕಾರ ಸ್ಪಂದಿಸಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಹೇಳಿದರು. ಬೆಳೆ ನಷ್ಟ ಪರಿಹಾರ ಪಾವತಿಗೆ ತಯಾರಿ ರೈತರಿಗೆ ಬೆಳೆ ನಷ್ಟ ಪರಿಹಾರ ಮುಂಗಡ ಪಾವತಿ ಮಾಡಲು ಕಂದಾಯ ಇಲಾಖೆ ಸಜ್ಜಾಗುತ್ತಿದೆ. ಬೆಂಗಳೂರಲ್ಲಿ ಶನಿವಾರ ಇಲಾಖೆ ಹಿರಿಯ ಅಧಿಕಾರಿಗಳ ಸಭೆ ನಡೆಸಿರುವ ಕಂದಾಯ ಸಚಿವರು ಮುಂಗಡ ಪಾವತಿಗೆ ಆಗಬೇಕಾದ ತಯಾರಿ ಬಗ್ಗೆ ಚರ್ಚಿಸಿ ಸೂಚನೆಗಳನ್ನು ನೀಡಿದರು. ಕೇಂದ್ರ ಸರ್ಕಾರ ರೈತರಿಗೆ ಪರಿಹಾರ ಕೊಡಲು ಪ್ರಾಥಮಿಕ ಸಭೆ ನಡೆಸದ ಹಿನ್ನೆಲೆಯಲ್ಲಿ ರಾಜ್ಯದಿಂದ ಮೊದಲ ಕಂತು ಜಮೆ ಆಗಿದೆ.

‘ಬರ ಪರಿಸ್ಥಿತಿಯಲ್ಲಿ ರೈತರಿಗೆ, ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅನ್ನಭಾಗ್ಯ ಯೋಜನೆಯಡಿ ಪ್ರತಿ ವ್ಯಕ್ತಿಗೆ 5 ಕೆ.ಜಿ ಅಕ್ಕಿ ಹಾಗೂ 5 ಕೆ.ಜಿ. ಅಕ್ಕಿಗೆ ಬದಲಾಗಿ ನಗದು 4,36,510 ಫಲಾನುಭವಿಗಳಿಗೆ ₹137.50 ಕೋಟಿ ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗಿದೆ ಎಂದರು. ಗೃಹಜ್ಯೋತಿ ಯೋಜನೆಯಡಿ 4,64,303 ಗ್ರಾಹಕರು ಹೆಸರು ನೋಂದಾಯಿಸಿಕೊಂಡಿದ್ದು, 8.90 ಕೋಟಿ ಯೂನಿಟ್ಸ್ ವಿದ್ಯುಚ್ಛಕ್ತಿಯನ್ನು ಗ್ರಾಹಕರಿಗೆ ಉಚಿತವಾಗಿ ಒದಗಿಸಿ ₹76.22 ಕೋಟಿ ಪಾವತಿಸಲಾಗಿದೆ, ಗೃಹಲಕ್ಷ್ಮಿ ಯೋಜನೆಯಡಿ 4,35,820 ಮಹಿಳೆಯರಿಗೆ ತಲಾ ₹2 ಸಾವಿರದಂತೆ ₹89.17 ಕೋಟಿ ಪಾವತಿಸಲಾಗಿದೆ’ ಎಂದರು.

ಜಮೀನಿನ ಮಾಹಿತಿ ಅಪೇಟ್ ಮಾಡಲು ರೈತರಿಗೆ ಅವಕಾಶ ನೀಡಲಾಗಿತ್ತು. ಇದೀಗ ಮೊದಲ ಕಂತು ಜಮಾ ಮಾಡಲು ತಯಾರಿ ಮಾಡಿಕೊಳ್ಳುವಂತೆ ಕಂದಾಯ ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ರಾಜ್ಯ ಸರ್ಕಾರ ಮೊದಲ ಕಂತಿನ ರೂಪದಲ್ಲಿ ಡಿಬಿಟಿ ಮೂಲಕ ಗರಿಷ್ಠ 2 ಸಾವಿರ ರೂ.ವರೆಗೆ ನೀಡಲಾಗುತ್ತದೆ. ಕೇಂದ್ರ ಪರಿಹಾರ ಬಿಡುಗಡೆ ಮಾಡಿದ ಬಳಿಕ ಮೊದಲ ಕಂತಿನ ಪಾವತಿ ಕಳೆದು ಬಾಕಿ ಜಮಾ ಮಾಡಲಾಗುತ್ತದೆ. ಮಳೆಯಾಶ್ರಿತ ಪ್ರದೇಶದ ಪ್ರತಿ ಹೆಕ್ಟೇರ್‌ಗೆ 8,500 ರೂ. ನೀರಾವರಿಯಾದರೆ 17 ಸಾವಿರ ರೂ., ಬಹುವಾರ್ಷಿಕ ಬೆಳೆಯಾದರೆ 22,500 ರೂ. ನಿಗದಿ ಮಾಡಲಾಗಿದೆ. ಇದರಲ್ಲಿ ಗರಿಷ್ಠ ಎರಡು ಸಾವಿರ ರೂ. ಐದು ಎಕರೆಗೆ ಮಾತ್ರ ಪರಿಹಾರ ನೀಡಲಾಗುತ್ತದೆ.

ಬರಗಾಲ ಬಾಧಿತ ಪ್ರದೇಶದ ರೈತರಿಗೆ ಮೊದಲ ಕಂತಿನಲ್ಲಿ ತಲಾ ಎರಡು ಸಾವಿರ ರೂ. ಪರಿಹಾರ ವಿತರಣೆಗೆ ತಾಂತ್ರಿಕ ವಿಘ್ನ ಎದುರಾಗಿದ್ದು, ರಾಜ್ಯ ಸರ್ಕಾರ ಸಂದಿಗ್ಧಕ್ಕೆ ಸಿಲುಕಿದೆ. ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಹರಿಹಾಯುತ್ತಿವೆ, ಪರಿಹಾರಕ್ಕೆ ರೈತ ಸಂಘಟನೆಗಳು ಒತ್ತಡ ಹೇರಿದ್ದು, ಹಲವೆಡೆ ನೋಂದ ರೈತರು ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಕೇಂದ್ರ ಸರ್ಕಾರದ ನೆರವಿಗೆ ಕಾಯದೆ ರಾಜ್ಯದ ಬೊಕ್ಕಸದಿಂದಲೇ ಸಂತ್ರಸ್ತರಿಗೆ ನೆರವಾಗುತ್ತೇವೆ ಎಂಬ ಸಿಎಂ ಸಿದ್ದರಾಮಯ್ಯ ಘೋಷಣೆ ಕಣ್ಮರೆಸುವ ತಂತ್ರವೆಂದು ಪ್ರತಿಪಕ್ಷಗಳು ಶಂಕಿಸಿದ್ದವು. ತ್ವರಿತವಾಗಿ ಪರಿಹಾರ ವಿತರಿಸುವ ಮೂಲಕ ಪ್ರತಿಪಕ್ಷಗಳಿಗೆ ಪ್ರತ್ಯುತ್ತರಿಸಬೇಕೆಂಬ ಸರ್ಕಾರದ ಉತ್ಸಾಹಕ್ಕೆ ತಾಂತ್ರಿಕ ಅಡಚಣೆ ತಣ್ಣೀರೆರಚಿದೆ.

Spread positive news

Leave a Reply

Your email address will not be published. Required fields are marked *