ಪ್ರೀಯ ರೈತರೇ ನಿಮಗೊಂದು ಸಂತಸದ ಸುದ್ದಿ ನೀಡುತ್ತಿದ್ದೇವೆ. ರೈತರಿಗೆ ರೈತ ಸಂಪರ್ಕ ಕೇಂದ್ರ ತಿಕೋಟಾ ವತಿಯಿಂದ ಕೆಲವು ಕೃಷಿ ಉಪಕರಣಗಳನ್ನು ಸಬ್ಸಿಡಿ ರೂಪದಲ್ಲಿ ರೈತರಿಗೆ ನೀಡಲು ಈಗ ರೈತ ಸಂಪರ್ಕ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ರೈತರಿಗೆ ಅರ್ಜಿ ಆಹ್ವಾನ ಕರೆದಿದ್ದಾರೆ. ಇದರಲ್ಲಿ ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದ್ದು, ವಿಜಯಪುರ ಜಿಲ್ಲೆಯ ತಿಕೋಟಾ ರೈತ ಸಂಪರ್ಕ ಕೇಂದ್ರ ವತಿಯಿಂದ ಯಾವ ಯಾವ ಕೃಷಿ ಉಪಕರಣಗಳಿಗೆ ಎಷ್ಟು ಸಬ್ಸಿಡಿ ರೂಪದಲ್ಲಿ ವಿತರಣೆ ಮಾಡುವುದು. ಹಾಗೂ ರೈತರು ಎಷ್ಟು ಇದರ ಲಾಭ ಪಡೆಯಬಹುದು. ಹಾಗೂ ರೈತರಿಗೆ ಇದರ ಸದುಪಯೋಗ ಹೇಗೆ ಪಡೆಯಬೇಕು? ಅರ್ಜಿ ಎಲ್ಲಿ ಸಲ್ಲಿಸಬೇಕು ಎಂದು ಕೂಡಲೇ ಇದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.
ರೈತ ಸಂಪರ್ಕ ಕೇಂದ್ರ ತಿಕೋಟಾ ವತಿಯಿಂದ ಯಾವ ಯಾವ ಕೃಷಿ ಉಪಕರಣಗಳಿಗೆ ಅರ್ಜಿ ಕರೆಯಲಾಗಿದೆ?
*ಸೈಕಲ್ ವಿಡರ್
*ಎಡಕುಂಟಿ ಲಭ್ಯವಿದೆ.
ಯಾವ ಯಾವ ದಾಖಲೆಗಳೂ ಬೇಕು?
*ಆಧಾರ್ ಪ್ರತಿ
*ಉತಾರ ಪ್ರತಿ
*ರೈತರ ವಂತಿಕೆಯನ್ನು ನೀಡಿ ರೈತರು ಈ ಉಪಕರಣಗಳನ್ನು ಪಡೆಯಬಹುದು. ಮೊದಲು ಬಂದ ರೈತರಿಗೆ ಮೊದಲ ಆಧ್ಯತೆ ನೀಡಲಾಗುವುದು. ಹಾಗೂ ರೈತರು ಕೂಡಲೇ ರೈತ ಸಂಪರ್ಕ ಕೇಂದ್ರ ತಿಕೋಟಾ ಭೇಟಿ ನೀಡಿ ಈ ಯೋಜನೆಯ ಲಾಭ ಪಡೆಯಬಹುದು. ಮುಖ್ಯವಾಗಿ ಹೇಳಬೇಕೆಂದರೆ ರಾಜ್ಯದ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ನೀಡುವುದಿಲ್ಲ. ಸದ್ಯದ ಸ್ಥಿತಿಯಲ್ಲಿ ರೈತ ಸಂಪರ್ಕ ಕೇಂದ್ರ ತಿಕೋಟಾ ವತಿಯಿಂದ ಮಾತ್ರ ಈ ಉಪಕರಣವನ್ನು ರೈತರಿಗೆ ಸಬ್ಸಿಡಿ ರೂಪದಲ್ಲಿ ವಿತರಣೆ ಮಾಡುವುದು ಎಂದು ಹೇಳಿದ್ದಾರೆ.
ಅದೇ ರೀತಿ ಈಗ ಸರ್ಕಾರದ ನಿಯಮದ ಪ್ರಕಾರ ರೈತರಿಗೆ ಫ್ರುಟ್ ಐಡಿ ಕಡ್ಡಾಯವಾಗಿ ಬೇಕಾಗಿದೆ. ಮುಖ್ಯವಾಗಿ ಫ್ರುಟ್ ಐಡಿ ಇದ್ದರೆ ರೈತರು ತಮ್ಮ ಜಮೀನಿನ ಸಂಪೂರ್ಣ ಮಾಹಿತಿ ಹಾಗೂ ರೈತರು ಎಷ್ಟು ಸರ್ಕಾರದ ಯೋಜನೆ ಹಾಗೂ ಸರ್ಕಾರದ ಕಡೆಯಿಂದ ಯಾವ ಯಾವ ಬೀಜ, ಗೊಬ್ಬರ, ಹೊಸ ಹೊಸ ಯೋಜನೆಗಳನ್ನು ಅಳವಡಿಸಿಕೊಳ್ಳುತ್ತಾರೆ ಎಂಬುದನ್ನು ಸುಲಭವಾಗಿ ನೋಡಬಹುದು. ಅದೇ ರೀತಿ ಫ್ರುಟ್ ಐಡಿಯಿಂದ ರೈತರ ಮಕ್ಕಳಿಗೆ ಶಿಕ್ಷಣಕ್ಕೆ ಆರ್ಥಿಕ ಸಹಾಯ ಮಾಡುವ ನಿಟ್ಟಿನಲ್ಲಿ ಸರ್ಕಾರವು ಸ್ಕಾಲರ್ಶಿಪ್ ಅನ್ನು ಅಂದರೆ ರೈತ ವಿದ್ಯಾನಿಧಿ ಹಣವನ್ನು ರೈತರ ಮಕ್ಕಳಿಗೆ ಅವರ ಫ್ರುಟ್ ಐಡಿ ಮೂಲಕ ಹಾಕುತ್ತಾರೆ.
ಫ್ರುಟ್ಸ ಐಡಿ/FID ಪಡೆಯಲು ಬೇಕಾಗುವ ದಾಖಲೆಗಳು –
• ಅರ್ಜಿ ಫಾರ್ಮ್
• ಆಧಾರ್ ಕಾರ್ಡ್
• ಉತಾರ (ಪಹಣಿ)
• ಇತ್ತೀಚೆಗೆ ತೆಗೆದುಕೊಂಡ ಭಾವಚಿತ್ರ
• ಬ್ಯಾಂಕ್ ಪಾಸ್ ಬುಕ್
ಅದೇ ರೀತಿ ರೈತರು ತಮ್ಮ ಜಮೀನಿಗೆ ಸಬ್ಸಿಡಿ ಹಣ ಪಡೆಯಲು ಹಾಗೂ ಹೊಸ ಹೊಸ ಯಂತ್ರೋಪಕರಣಗಳ ಸಬ್ಸಿಡಿ ಪಡೆಯಲು ಕೆಲವು ರೈತರ ಹತ್ತಿರ ದಾಖಲೆಗಳ ಅವಶ್ಯಕತೆ ಇದೆ. ರೈತರು ತಮ್ಮ ಜಮೀನಿನ ದಾಖಲೆಗಳು ಹೊಂದಿದ್ದರೆ ಮಾತ್ರ ಸಬ್ಸಿಡಿ ಪಡೆಯಲು ಸಾಧ್ಯ ಆಗುತ್ತದೆ. ಅದೇ ರೀತಿ ರೈತರಿಗೆ ಎಲ್ಲ ದಾಖಲೆಗಳ ಅವಶ್ಯಕತೆ ತುಂಬಾ ಇದೆ. ರೈತರು ನಾವು ಕೆಳಗೆ ತಿಳಿಸಿದ ದಾಖಲೆಗಳನ್ನು ಇಟ್ಟುಕೊಳ್ಳಬೇಕು.
ಮುಖ್ಯವಾಗಿ ಯಾವುದೇ ಸಬ್ಸಿಡಿ ಪಡೆಯಲು ಬೇಕಾಗುವ ದಾಖಲೆಗಳು –
• ಅರ್ಜಿ ಫಾರ್ಮ್
• ಆಧಾರ್ ಕಾರ್ಡ್
• 20 ರೂಪಾಯಿ ಬಾಂಡ್
• ಉತಾರ (ಪಹಣಿ)
• ಇತ್ತೀಚೆಗೆ ತೆಗೆದುಕೊಂಡ ಭಾವಚಿತ್ರ
• ಬ್ಯಾಂಕ್ ಪಾಸ್ ಬುಕ್
• ಎಸಿ ಎಸ್ಟಿ ಸದಸ್ಯರು ಜಾತಿ ಪ್ರಮಾಣ
ಪತ್ರ ಕಡ್ಡಾಯವಾಗಿ ಹೊಂದಿರಬೇಕು.