ಆಧುನಿಕ ಕೃಷಿಯಲ್ಲಿ ಸದ್ದು ಮಾಡುತ್ತಿದೆ ಎರೆಜಲ! ಇಷ್ಟೊಂದು ಲಾಭಾನಾ?
ಎರೆಹುಳು ರೈತರ ಮಿತ್ರ ಎಂದೇ ಪ್ರಸಿದ್ಧಿ. ಎರೆಜಲವು ಎರೆಹುಳುಗಳಿಂದ ತಯಾರಾಗುವ ಬಹುಮುಖ್ಯ ಉತ್ಪನ್ನವಾಗಿದೆ. ಎರೆಹುಳುಗಳ ದೇಹದಿಂದ ತಯಾರಾಗುವ ಎರೆಜಲವು ಅಗತ್ಯ ಪೋಷಕಾಂಶಗಳು, ಜೀವಸತ್ವಗಳು, ಖನಿಜಗಳು, ಹಾರ್ಮೋನುಗಳು, ಕಿಣ್ವಗಳು, ಸೂಕ್ಷ್ಮಜೀವಿ ಪ್ರತಿರೋದಕ ಅಂಶಗಳು, ಬೆಳೆವಣಿಗೆ ನಿಯಂತ್ರಕ ಅಂಶಗಳು (ಆಕ್ಸಿನ್ ಹಾಗೂ ಸೈಟೊಕೈನಿನ್) ಮತ್ತು ಉಪಯುಕ್ತ ಸೂಕ್ಷ್ಮಜೀವಿಗಳನ್ನು ಒಳಗೊಂಡಿದ್ದು ಮಣ್ಣಿನ ಫಲವತ್ತತೆ ಹೆಚ್ಚಿಸಲು ಹಾಗೂ ಬೆಳೆಗಳಲ್ಲಿ ರೋಗ ಮತ್ತು ಕೀಟಗಳ ಬಾಧೆಯನ್ನು ಹತೋಟಿಯಲ್ಲಿಡಲು ಸಹಕಾರಿಯಾಗಿದೆ. ಎರೆಹುಳುಗಳ ದೇಹದ ಮೇಲಿನ ರಂಧ್ರಗಳಿಂದ ಬರುವ ಕೊಲೋಮಿಕ್ ದ್ರವವು ಶಿಲೀಂಧ್ರನಾಶಕ, ಅಣುಜೀವಿನಾಶಕ ಮತ್ತು ಕೀಟನಾಶಕ…