ಕಬ್ಬಿನಲ್ಲಿ ಸಸಿ ಸುಳಿ ಕೊರಕದ ನಿಯಂತ್ರಣ ಹೇಗೆ?
ಭಾರತದ ಉತ್ತರ ಪ್ರದೇಶ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಪ್ರಮುಖವಾಗಿ ಈ ಬೆಳೆಯನ್ನು ಬೆಳೆಯಲಾಗುತ್ತದೆ. ಉತ್ತರ ಪ್ರದೇಶ ಅತಿ ಹೆಚ್ಚು ಕ್ಷೇತ್ರವನ್ನು ಹೊಂದಿದ್ದು, ಪ್ರತಿ ಹೆಕ್ಟೇರ ಇಳುವರಿಯು ಕಡಿಮೆ ಇರುತ್ತದೆ. ಉತ್ತರ ಪ್ರದೇಶಕ್ಕೆ ಹೊಲಿಸಿದರೆ ಇಳುವರಿ ಮತ್ತು ಸರಾಸರಿ ಸಕ್ಕರೆ ಅಂಶದಲ್ಲಿ ಮಹಾರಾಷ್ಟ್ರ ಮತ್ತು ಕರ್ನಾಟಕ ಮಂಚೂಣಿಯಲ್ಲಿವೆ. ಕಬ್ಬು ಬೆಳೆಯುವ ಎಲ್ಲಾ ರಾಜ್ಯಗಳಲ್ಲಿ ಕುಳೆ ಬೆಳೆಯುವುದು ಸಾಮಾನ್ಯವಾಗಿದೆ. ಆದರೆ, ಕುಳೆ ಬೆಳೆಯ ಸಂಖ್ಯೆ ಪ್ರಮಾಣ ಮತ್ತು ಇಳುವರಿಯಲ್ಲಿ ವಿಭಿನ್ನವಾಗಿರುತ್ತದೆ. ಕೆಲವೊಂದು ರಾಜ್ಯಗಳಲ್ಲಿ ನಾಟಿ ಕಬ್ಬು…