2024-25 ಸಾಲಿನ ದೂರ ಶಿಕ್ಷಣ ಕೋರ್ಸ್ಗಳ ಅರ್ಜಿ ಆಹ್ವಾನ. ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನ ವಿಸ್ತರಣಾ ನಿರ್ದೇಶನಾಲಯವು 2024-25 ಸಾಲಿನ ದೂರ ಶಿಕ್ಷಣ ಕೋರ್ಸ್ಗಳಿಗೆ ಅರ್ಜಿ ಆಹ್ವಾನಿಸಿದೆ. ಕೋರ್ಸುಗಳು ಕನ್ನಡ ಮಾಧ್ಯಮದಲ್ಲಿರುತ್ತವೆ.
ಮೊದಲು ಸರ್ಕಾರವು ಕೃಷಿ ವಿಶ್ವವಿದ್ಯಾಲಯದಲ್ಲಿ 2 ವರ್ಷದ ಡಿಪ್ಲೊಮಾ ಕೃಷಿ ಕೋರ್ಸ್ ಆರಂಭ ಮಾಡಿ ಹಲವು ವರ್ಷಗಳಿಂದ ನಡೆಸಿಕೊಂಡು ಬಂದಿದೆ. ಆದರೆ ಸರ್ಕಾರವು ಧಿಡೀರನೇ ಎರಡು ವರ್ಷದ ಡಿಪ್ಲೊಮಾ ಕೃಷಿ ಕೋರ್ಸ್ ಸ್ಥಗಿತಗೊಳಿಸಿ ಆದೇಶ ಹೊರಡಿಸಿತ್ತು. ಕಡಿಮೆ ಖರ್ಚಿನಲ್ಲಿ ಕೃಷಿ, ಅರಣ್ಯ ಹಾಗೂ ರೇಷ್ಮೆ ಡಿಪ್ಲೊಮಾ ಪೂರ್ಣಗೊಳಿಸಿ ಸ್ವಯಂ ಉದ್ಯೋಗ ಅಥವಾ ಖಾಸಗಿ ಕ್ಷೇತ್ರದಲ್ಲಿ ಬದುಕು ಕಟ್ಟಿಕೊಳ್ಳಲು ನೆರವಾಗುತ್ತಿದ್ದ ‘ಡಿಪ್ಲೊಮಾ ಕೋರ್ಸ್’ಗಳನ್ನು ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳು ಸ್ಥಗಿತಗೊಳಿಸಲು ಮುಂದಾಗಿವೆ.
ಈ ಹಿಂದೆ ಕೋರ್ಸ್ ಆರಂಭಕ್ಕೆ ಹೊರಡಿಸಿದ್ದ ಅಧಿಸೂಚನೆಯನ್ನು ಸರ್ಕಾರದ ಸೂಚನೆಯಂತೆ ವಿಶ್ವವಿದ್ಯಾಲಯಗಳು ವಾಪಸ್ ಪಡೆದುಕೊಳ್ಳುತ್ತಿವೆ. ಇದರಿಂದ ಕೃಷಿ ಕ್ಷೇತ್ರದ ಆಸಕ್ತ ಅಭ್ಯರ್ಥಿಗಳು ನಿರಾಸೆಗೆ ಒಳಗಾಗಿದ್ದಾರೆ. ಇದೇ ಶೈಕ್ಷಣಿಕ ಸಾಲಿನಿಂದಲೇ ಎರಡು ವರ್ಷದ ಡಿಪ್ಲೊಮಾ ಕಲಿಯಲು ಅವಕಾಶ ಸಿಗುವುದಿಲ್ಲ. ಆದರೆ ಅದರ ಬದಲು ಈಗ ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದಲ್ಲಿ ಒಂದು ವರ್ಷದ ಕೃಷಿ ಕೋರ್ಸ್ ಪಡೆಯಲು ಸರ್ಕಾರವು ಮುಂದಾಗಿದೆ. ಮೇಲೆ ತಿಳಿಸಿದ ಮಾಹಿತಿ ಪ್ರಕಾರ ನೀವು ಇನ್ನೂ ಮುಂದೆ ಒಂದು ವರ್ಷದ ಕೃಷಿ ಕೋರ್ಸ್ ಪಡೆಯಬಹುದು.
ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನ ವಿಸ್ತರಣಾ ನಿರ್ದೇಶನಾಲಯವು 2024-25 ಸಾಲಿನ ದೂರ ಶಿಕ್ಷಣ ಕೋರ್ಸ್ಗಳಿಗೆ ಅರ್ಜಿ ಆಹ್ವಾನಿಸಿದೆ. ಕೋರ್ಸುಗಳು ಕನ್ನಡ ಮಾಧ್ಯಮದಲ್ಲಿರುತ್ತವೆ. ಅರ್ಜಿ ಶುಲ್ಕ ರೂ.100/- ಅರ್ಜಿಯನ್ನು ಜಿಕೆವಿಕೆ ದೂರ ಶಿಕ್ಷಣ ಘಟಕ, ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು, ಕೃಷಿ ವಿಜ್ಞಾನ ಕೇಂದ್ರಗಳಿಂದ ಅಥವಾ www.uasbangalore.edu.in ಜಾಲತಾಣದಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು. ನಿಗದಿತ ಅರ್ಜಿ ಶುಲ್ಕ ಮತ್ತು ಕೋರ್ಸ್ ಶುಲ್ಕದೊಂದಿಗೆ ಭರ್ತಿ ಮಾಡಿದ ಅರ್ಜಿಗಳನ್ನು 19.04.2024 ರೊಳಗೆ ಸಂಯೋಜಕರು ಮತ್ತು ಮುಖ್ಯಸ್ಥರು, ದೂರ ಶಿಕ್ಷಣ ಘಟಕ, ರೈತ ತರಬೇತಿ ಸಂಸ್ಥೆ, ಜಿಕೆವಿಕೆ, ಬೆಂಗಳೂರು-560065 ಇವರಿಗೆ ಸಲ್ಲಿಸುವುದು.
ಕೃಷಿ ವಿಜ್ಞಾನ ಕೇಂದ್ರ, ಚಿಂತಾಮಣಿ, ಚಿಕ್ಕಬಳ್ಳಾಪುರ ಜಿಲ್ಲೆ ಇವರಿಂದ ಅರ್ಜಿಯನ್ನು ಪಡೆಯಲು ಈ ಕೆಳಗಿನವರನ್ನು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದು. ಡಾ. ತನ್ನೀರ್ ಅಹ್ಮದ್ 9538221427, 9483537174, 9449866930
‘ಕೃಷಿ ಸಹಾಯಕರ ನೇಮಕದ ಉದ್ದೇಶದಿಂದ ವಿವಿಧ ವಿಷಯಗಳ ಡಿಪ್ಲೊಮಾ ಕೋರ್ಸ್ಗಳನ್ನು 10 ವರ್ಷಗಳ ಹಿಂದೆ ಆರಂಭಿಸಲಾಗಿತ್ತು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಸ್ಸೆಸ್ಸೆಲ್ಸಿ ಪಡೆದ ತಲಾ 50 ವಿದ್ಯಾರ್ಥಿಗಳಿಗೆ ಪ್ರತಿವರ್ಷ ಪ್ರವೇಶ ನೀಡಲಾಗುತ್ತಿತ್ತು. ಡಿಪ್ಲೊಮಾ ಕಲಿತವರಿಗೆ ಬಿಎಸ್ಸಿ (ಕೃಷಿ) ಪದವಿಗೆ ಸೇರಲು ಮೀಸಲಾತಿ ಇತ್ತು. ಆದರೆ, ಈ ವಿದ್ಯಾರ್ಹತೆಗೆ ಸರ್ಕಾರಿ ನೌಕರಿ ಲಭಿಸುತ್ತಿರಲಿಲ್ಲ. ಕೋರ್ಸ್ ಮುಗಿಸಿದವರು ಕೃಷಿ ಪರಿಕರ ಮಾರಾಟ ಮಳಿಗೆ, ಬಿತ್ತನೆ ಬೀಜ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರು. ಖಾಸಗಿ ಕ್ಷೇತ್ರದಲ್ಲಿ ಉದ್ಯೋಗದ ಅವಕಾಶಗಳು ಹೆಚ್ಚಿದ್ದವು’ ಎಂದು ಪ್ರಾಧ್ಯಾಪಕರೊಬ್ಬರು ತಿಳಿಸಿದರು.
‘ಹೊಸ ಶಿಕ್ಷಣ ನೀತಿ ಜಾರಿಯಾದರೆ ಬೇರೆ ಕೋರ್ಸ್ಗಳಲ್ಲಿಯೂ ಇದೇ ಡಿಪ್ಲೊಮಾ ವಿಷಯವನ್ನೂ ಕಲಿಯಬಹುದಾಗಿದೆ. ಆ ಕಾರಣಕ್ಕೆ ಈ ಕೋರ್ಸ್ಗಳನ್ನು ಸ್ಥಗಿತಗೊಳಿಸುವಂತೆ ಸೂಚಿಸಿರಬಹುದು’ ಎಂದು ಪ್ರಾಧ್ಯಾಪಕರೊಬ್ಬರು ತಿಳಿಸಿದರು. ಅದೇ ರೀತಿ ಈಗ ಆಹಾರ ಸಂಸ್ಕರಣೆಯಲ್ಲಿ ಡಿಪ್ಲೊಮಾ ತರಗತಿಗಳು ಸಹ ಕೆಲವು ವಿಶ್ವವಿದ್ಯಾನಿಲಯಗಳಲ್ಲಿ ಆರಂಭ ಆಗಿದೆ.
• ಅರ್ಹತೆ: ಕೃಷಿಯಲ್ಲಿ ಈ ಡಿಪ್ಲೊಮಾ ಕೋರ್ಸ್ಗೆ ಅರ್ಹತೆ ಪಡೆಯಲು, ವಿದ್ಯಾರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ವಿಜ್ಞಾನ ವಿಭಾಗದಲ್ಲಿ 10 ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು. ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರದೊಂದಿಗೆ 10+2 ಉತ್ತಮ ಆಯ್ಕೆಯಾಗಿದೆ.
• ಕೋರ್ಸ್ ಅವಧಿ: ಕೋರ್ಸ್ನ ಸಂಪೂರ್ಣ ಅವಧಿ 2 ವರ್ಷಗಳು
• ಪ್ರವೇಶ ಪರೀಕ್ಷೆ: ಯಾವುದೇ ನಿರ್ದಿಷ್ಟ ಪ್ರವೇಶ ಪರೀಕ್ಷೆಯ ಅಗತ್ಯವಿಲ್ಲ ಏಕೆಂದರೆ ಪ್ರವೇಶವು ಮೆರಿಟ್ ಆಧಾರದ ಮೇಲೆ (10 ನೇ ತರಗತಿಯಲ್ಲಿ ಗಳಿಸಿದ ಅಂಕಗಳು).