ಈಗಾಗಲೇ ಕೃಷಿ ಹೊಂಡಗಳು, ಇತರೆ ಕಾಮಗಾರಿಯನ್ನು ಅನುಷ್ಠಾನ ಮಾಡಿಕೊಳ್ಳಲು ಅರ್ಜಿ ಆಹ್ವಾನ ಕರೆದಿದ್ದು ಹಲವಾರು ರೈತರು ಅರ್ಜಿ ಸಲ್ಲಿಸಿದ್ದಾರೆ. ಹಲವಾರು ಜಿಲ್ಲೆಗಳಲ್ಲಿ ರೈತರಿಂದ ಅರ್ಜಿ ಕರೆದಿದ್ದು ಕೃಷಿಭಾಗ್ಯ ಯೋಜನೆಯು ಮರು ಜಾರಿಗೊಂಡಿದ್ದು ಗೋಕಾಕ ಮತ್ತು ಮೂಡಲಗಿ ತಾಲೂಕಿನ ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ರೈತ ಬಾಂಧವರು ತಮ್ಮ ಹೋಬಳಿ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರಗಳಲ್ಲಿ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಲು ಕೋರಲಾಗಿದೆ. ಈಗಾಗಲೇ 2014-15 ರಿಂದ 2019-20 ರವರೆಗೆ ಕೃಷಿ ಭಾಗ್ಯ ಯೋಜನೆಯಲ್ಲಿ ಸವಲತ್ತು ಪಡೆದಿರುವ ರೈತರು ಈಗ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ.
ಕೃಷಿ ಭಾಗ್ಯ ಯೊಜನೆ. ಶ್ರೀ ಸಿದ್ದರಾಮಯ್ಯ ಸನ್ಮಾನ್ಯ ಮುಖ್ಯಮಂತ್ರಿಗಳು 2023-24 ನೇ ಸಾಲಿನಲ್ಲಿ ರಾಜ್ಯದ 24 ಜಿಲ್ಲೆಗಳ 106 ತಾಲ್ಲೂಕುಗಳಲ್ಲಿ ಪ್ಯಾಕೇಜ್ ಮಾದರಿಯಲ್ಲಿ ಕೃಷಿ ಭಾಗ್ಯ ಯೋಜನೆಯ ಅನುಷ್ಠಾನ. ಸನ್ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಕೃಷಿ ಇಲಾಖಾ ಸವಲತ್ತುಗಳ ವಿತರಣಾ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಮಾನ್ಯ ಶ್ರೀ ಎನ್.ಚಲುವರಾಯಸ್ವಾಮಿ, ಕೃಷಿ ಸಚಿವರು ಭಾಗವಹಿಸಿರುವ ಸಂದರ್ಭ. ಕೃಷಿ ಭಾಗ್ಯ ಪ್ಯಾಕೇಜ್‌ನಲ್ಲಿ ಈ ಕೆಳಕಂಡ ಘಟಕಗಳು ಒಳಗೊಂಡಿದ್ದು, ಯೋಜನೆಯ ಸಮಗ್ರ ಸದುಪಯೋಗ ಪಡೆಯಲು ರೈತ ಬಾಂಧವರಲ್ಲಿ ವಿನಂತಿ ಕ್ಷೇತ್ರ ಬದು ನಿರ್ಮಾಣ ರೈತರ ಜಮೀನಿನಲ್ಲಿ ಬಿದ್ದ ಮಳೆ ನೀರನ್ನು ಪೋಲಾಗದಂತೆ ಅದೇ ಜಮೀನಿನಲ್ಲಿ ಇಂಗಿಸಲು ಹಾಗೂ ಕೃಷಿ ಹೊಂಡದಲ್ಲಿ ಸಂಗ್ರಹಿಸಲು ಕ್ಷೇತ್ರ ಬದು ನಿರ್ಮಾಣ. ಕೃಷಿ ಹೊಂಡ ಎಲ್ಲಾ ರೀತಿಯ ಮಣ್ಣುಗಳಲ್ಲಿ ಮಳೆ ನೀರು ಸಂಗ್ರಹಣೆಗಾಗಿ ವಿವಿಧ ಅಳತೆಯ (10x10x3 ಮೀ, 12x12x3 ಮೀ 15x15x3 ಮೀ, 18x18x3 ше, 21x21x3 ಮೀ) ಕೃಷಿ ಹೊಂಡಗಳ ನಿರ್ಮಾಣ.
ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿ (Gl Wire Fencing)
ಕೃಷಿ ಹೊಂಡದಲ್ಲಿ ಆಕಸ್ಮಿಕ ಅವಘಡಗಳು/ ಪ್ರಾಣ ಹಾನಿ ಸಂಭವಿಸದಂತೆ ತಡೆಯಲು ಕಡ್ಡಾಯವಾಗಿ ತಂತಿ ಬೇಲಿ ನಿರ್ಮಾಣ.
ಕೃಷಿ ಹೊಂಡದಿಂದ ನೀರು ಎತ್ತಲು ಪಂಪ್ ಸೆಟ್
ಕೃಷಿ ಹೊಂಡದಲ್ಲಿ ಸಂಗ್ರಹಣೆಯಾದ ನೀರನ್ನು ಬೆಳೆಗಳಿಗೆ ಬಳಸಿಕೊಳ್ಳಲು ಡೀಸೆಲ್ /ಪೆಟ್ರೋಲ್/ ಸೋಲಾರ್ ಪಂಪ್ ಸೆಟ್ ಖರೀದಿಸಲು ಅವಕಾಶ.
ನೀರನ್ನು ಬೆಳೆಗೆ ಹಾಯಿಸಲು ಸೂಕ್ಷ್ಮ(ತುಂತುರು/ಹನಿ ನೀರಾವರಿ –
ಕೃಷಿ ಹೊಂಡಗಳಲ್ಲಿ ಸಂಗ್ರಹವಾದ ಮಳೆ ನೀರನ್ನು ಬೆಳೆಗಳಿಗೆ ಸಂದಿಗ್ಧ ಹಂತಗಳಲ್ಲಿ ರಕ್ಷಣಾತ್ಮಕ ನೀರಾವರಿಗಾಗಿ ಬಳಸಿಕೊಳ್ಳಲು ಸೂಕ್ಷ್ಮ ನೀರಾವರಿ ಘಟಕ ಅನುಷ್ಠಾನ.
ರೈತರು ಸಲ್ಲಿಸಬೇಕಾದ ದಾಖಲೆಗಳು –
ರೈತರ ಅರ್ಜಿ, ರೈತರ ಭಾವಚಿತ್ರ, FID (FID ಇಲ್ಲವಾದಲ್ಲಿ ಅಧಾರ್ ಪ್ರತಿ, ಪಹಣಿ ಪ್ರತಿ, ಜಾತಿ ಪ್ರಮಾಣ ಪತ್ರ ಹಾಗೂ ಬ್ಯಾಂಕ್ ಪಾಸ್ ಬುಕ್ ಪ್ರತಿ) ತಾಲ್ಲೂಕುವಾರು ನಿಗದಿ ಪಡಿಸಲಾಗಿರುವ ವಾರ್ಷಿಕ ಗುರಿಯನ್ವಯ ರಾಯಚೂರು ಸಾಮಾನ್ಯ 53 ವಿಶೇಷ ಘಟಕ ಯೋಜನೆ 12 ಗಿರಿಜನ ಉಪ ಯೋಜನೆ 5 ಒಟ್ಟು 70, ದೇವದುರ್ಗ ಸಾಮಾನ್ಯ 53 ವಿಶೇಷ ಘಟಕ ಯೋಜನೆ 12 ಗಿರಿಜನ ಉಪ ಯೋಜನೆ 5 ಒಟ್ಟು 70, ಮಾನ್ವಿ ಸಾಮಾನ್ಯ 53 ವಿಶೇಷ ಘಟಕ ಯೋಜನೆ 12 ಗಿರಿಜನ ಉಪ ಯೋಜನೆ 5 ಒಟ್ಟು 70, ಲಿಂಗಸಗೂರು ಸಾಮಾನ್ಯ 53 ವಿಶೇಷ ಘಟಕ ಯೋಜನೆ 12 ಗಿರಿಜನ ಉಪ ಯೋಜನೆ 5 ಒಟ್ಟು 70, ಸಿಂಧನುರು ಸಾಮಾನ್ಯ 53 ವಿಶೇಷ ಘಟಕ ಯೋಜನೆ 12 ಗಿರಿಜನ ಉಪ ಯೋಜನೆ 5 ಒಟ್ಟು 70, ಒಟ್ಟು 350, ಭೌತಿಕ ಗುರಿಗಳನ್ನು ನೀಡಲಾಗಿದ್ದು ಡಿ.31ರ ರೊಳಗಾಗಿ ಅರ್ಜಿಗಳನ್ನು ಸಲ್ಲಿಸಲು ಕೋರಲಾಗಿರುತ್ತದೆ. ಅದರಂತೆ, ಅರ್ಜಿಗಳನ್ನು ಹತ್ತಿರದ ರೈತ ಸಂಪರ್ಕ ಕೇಂದ್ರ/ಸಹಾಯಕ ಕೃಷಿ ನಿರ್ದೇಶಕರ ಕಛೇರಿಗಳಲ್ಲಿ ಪಡೆಯುವುದು.