ಪ್ರಿಯ ರೈತರೇ ಸರ್ಕಾರವು ರೈತರಿಗೆ ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹಾಗೂ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಆದ್ಯತೆ ನೀಡಲು ಸರ್ಕಾರವು ಕೃಷಿಗೆ ನೀರು ನಿರ್ವಹಣೆ ಮಾಡಲು ಸರ್ಕಾರವು ಪೈಪುಗಳನ್ನು ವಿತರಿಸಲು ಮುಂದಾಗಿದೆ. ಕೂಡಲೇ ರೈತರಿಗೆ ಮತ್ತೊಂದು ಸಂತಸದ ವಿಷಯ ಹೇಳುತ್ತೇನೆ. ಇವತ್ತು ನಾವು ರೈತರಿಗೆ ಕೃಷಿ ಚಟುವಟಿಕೆಗಳಿಗೆ ಅಗತ್ಯ ಪೂರೈಸುವ ಮೂಲಕ ಹಾಗೂ ಕೃಷಿಯಲ್ಲಿ ನೀರು ನಿರ್ವಹಣೆ ಮಾಡಲು ಸುಲಭವಾಗಿ ನುರು ಅತಿ ಮಿತ ಬಳಕೆಯ ದೃಷ್ಟಿಯಿಂದ ರೈತರಿಗೆ ಡ್ರಿಪ್ ಹಾಗೂ ಸ್ಪಿಂಕ್ಲರ್ ವಿತರಣೆಗೆ ಸರ್ಕಾರದಿಂದ ಅರ್ಜಿ ಆಹ್ವಾನ ಕರೆದಿದ್ದಾರೆ. ರೈತ ಸಂಪರ್ಕ ಹನಿ ನೀರಾವರಿ/ ತುಂತುರು ನೀರಾವರಿ ಕೃಷಿ ಉಪಕರಣಗಳನ್ನು ಪಡೆಯಲು ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು, ಕೂಡಲೇ ಅರ್ಜಿ ಸಲ್ಲಿಸಿ ಕೂಡಲೇ ಈ ಯೋಜನೆಯ ಲಾಭ ಪಡೆಯಲು ಇದೊಂದು ಮಹತ್ವದ ಉದ್ದೇಶ ಆಗಿದೆ.
ಬೇಕಾಗುವ ಅಗತ್ಯ ದಾಖಲಾತಿಗಳು
1) ಅರ್ಜಿ ನಮೂನೆ
2) ಭಾವಚಿತ್ರ 2
3) ಉತಾರ & ಖಾತೆ ಉತಾರ
4) ಆಧಾರ ಕಾರ್ಡ
5) ಬ್ಯಾಂಕ ಪಾಸಬುಕ್ಕ
6) 20 ರೂ ಬಾಂಡ 1 ಪಾರ್ಟಿ- ರೈತರ ಹೆಸರು
2 ಪಾರ್ಟಿ- ಸಹಾಯಕ ಕೃಷಿ ನಿರ್ದೇಶಕರು ಕಚೇರಿ ಗೋಕಾಕ/ಮೂಡಲಗಿ
7) 20 ರೂ ಬಾಂಡ ಜಂಟಿ ಖಾತೆ ಹೊಂದಿದವರ ರೈತರಗೆ ಮಾತ್ರ
1ಪಾರ್ಟಿ- ರೈತರ ಹೆಸರು
2 ಪಾರ್ಟಿ- ಸಹಾಯಕ ಕೃಷಿ ನಿರ್ದೇಶಕರು.
8) ನೀರು& ಬೆಳೆ ಪ್ರಮಾಣ ಪಾತ್ರ
9) ಪಂಚಾಯತಿ ಠರಾವ್
10) ಜಾತಿ ಪ್ರಮಾಣ ಪಾತ್ರ- ಪರಿಶಿಷ್ಟ ಜಾತಿ & ಪಂಗಡ ರೈತರಿಗೆ ಮಾತ್ರ
11) ಆರ್ ಸಿ ಬುಕ ( ಟ್ರಾಕರ್ ಚಾಲಿತ ಉಪಕರಣಗಳಿಗೆ ಮಾತ್ರ)
12) ನಿರಕ್ಷೇಪಣಾ ಪ್ರಮಾಣ ಪತ್ರ ( NOC) – ತೋಟಗಾರಿಕೆ ಇಲಾಖೆಯಿಂದ.
ಕರ್ನಾಟಕ ಸರ್ಕಾರವು ಕೃಷಿ ಇಲಾಖೆಯ ಅಡಿಯಲ್ಲಿ 2023-24ನೇ ಸಾಲಿನ ಸೂಕ್ಷ್ಮ ನೀರಾವರಿ ಯೋಜನೆಯಡಿ ತುಂತುರು ನೀರಾವರಿ (ಸ್ಪಿಂಕ್ಲರ್) ಘಟಕವನ್ನು ಅಳವಡಿಸಿಕೊಳ್ಳಲು 90% ರಷ್ಟು ಸಹಾಯಧನದ ಅಡಿ ನೀರಾವರಿ ಘಟಕ ವಿತರಣೆಗಾಗಿ ರೈತ-ರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ರೈತರಿಗೆ ಕೃಷಿ ಹೆಚ್ಚಿನ ಆದಾಯ ಪಡೆಯಲು ಹಲವಾರು ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಮುಂದಾಗಿರುವ ಸರ್ಕಾರಗಳು ಈಗ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅಡಿಯಲ್ಲಿ ರೈತರಿಗೆ ಸಬ್ಸಿಡಿ ರೂಪದಲ್ಲಿ ಪೈಪ್ ವಿತರಣೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. ರೈತರು ಅರ್ಜಿ ಸಲ್ಲಿಸಿ ಇದರಲ್ಲಿ ಒಟ್ಟು 30 ಪೈಪ್ ಗಳು ಬರುತ್ತಿದ್ದು, ಇವುಗಳು 20ಫೀಟ್ ಅಥವಾ 6 ಮೀ ಉದ್ದವಾಗಿರುತ್ತವೆ. ಹಾಗೂ ಇದರೊಂದಿಗೆ 5 ಬ್ರಾಸ್ ನಾಸೆಲ್ ಗಳು ಬರುತ್ತವೆ.
ಎಲ್ಲಿ ಅರ್ಜಿ ಸಲ್ಲಿಸಬೇಕು? ಯಾವ ರೈತ ಸಂಪರ್ಕ ಕೇಂದ್ರಗಳಲ್ಲಿ ಯೋಜನೆ ಪ್ರಾರಂಭ ಆಗಿದೆ?
ರೈತ ಸಂಪರ್ಕ ಕೇಂದ್ರ ಅರಭಾವಿ ಇವರ ಸಹಯೋಗದಲ್ಲಿ ಈ ಯೋಜನೆಗೆ ಅರ್ಜಿ ಸಲ್ಲಿಸಲು ಆರಂಭವಾಗಿದೆ. ಹಾಗೂ ರೈತರು ಸಹ ಕೂಡಲೇ ಇದರ ಸದುಪಯೋಗ ಪಡೆದುಕೊಳ್ಳಬೇಕು. ಕೂಡಲೇ ನೀವು ಸಹ ನಿಮ್ಮ ಹತ್ತಿರ ರೈತ ಸಂಪರ್ಕ ಕೇಂದ್ರಗಳಲ್ಲಿ ಭೇಟಿ ನೀಡಿ ಅರ್ಜಿ ಸಲ್ಲಿಸಿ ಗುಣಮಟ್ಟದ ನೀರು ನಿರ್ವಹಣೆಗೆ ಒಂದು ಹೊಸ ಹೆಜ್ಜೆ ಇಡಲು ಸರ್ಕಾರವು ನೆರವು ನೀಡುತ್ತದೆ.