Bele hani : 116 ಕೋಟಿ ಬೆಳೆಹಾನಿ ಪರಿಹಾರ ಬಿಡುಗಡೆ ಮಾಡಿದೆ ಸರ್ಕಾರ

Bele hani : ಪ್ರೀಯ ರೈತರೇ ಸರ್ಕಾರವು ರೈತರಿಗೆ ಮತ್ತೊಂದು ಗುಡ್ ನ್ಯೂಸ್ ನೀಡುತ್ತಿದೆ. ಏನೆಂದರೆ ಬೆಳಗಾವಿ ಜಿಲ್ಲೆಯಲ್ಲಿ ಮಳೆಗೆ ಹಾನಿಗೀಡಾದ ಕೃಷಿ ಬೆಳೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಒಟ್ಟು 116 ಕೋಟಿ ರೂ. ನೆರೆ ಪರಿಹಾರ ಬಿಡುಗಡೆಯಾಗಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು. ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಒಟ್ಟು 59,817 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿತ್ತು.

ಎಷ್ಟು ಕೋಟಿ ಹಣ ಬಿಡುಗಡೆ ಆಗಿದೆ?

43,767 ಹೆ. ಮಳೆಯಾಧಾರಿತ ಮತ್ತು 16,049 ಹೆ. ನೀರಾವರಿ ಜಮೀನಿತ್ತು. 87,916 ರೈತರ ಖಾತೆಗಳಿಗೆ 116 ಕೋಟಿ ರೂ. ಬಿಡುಗಡೆಯಾಗಿದೆ. ಇದರಲ್ಲಿ ರಾಜ್ಯ ಸರ್ಕಾರದ ಪರಿಹಾರ 51.24 ಕೋಟಿ ರೂ. ಸಹ ಸೇರಿದೆ ಎಂದರು. ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಹುರಳಿಕುಪ್ಪಿ- ಕುರುಬರ ಮಲ್ಲೂರ ಮಾರ್ಗದ ಜಮೀನಿನಲ್ಲಿ ಮೆಕ್ಕೆಜೋಳದ ರಾಶಿಗಳು ಬೆಂಕಿಗಾಹುತಿಯಾದ ಪ್ರಕರಣದ ಬಗ್ಗೆ ತಾಲ್ಲೂಕು ಜಂಟಿ ಸಮಿತಿ ಪರಿಶೀಲನಾ ವರದಿ ಸಿದ್ಧಪಡಿಸಿದೆ. 19 ಸಂತ್ರಸ್ತ ರೈತರಿಗೆ ಸೇರಿದ್ದ ₹ 1.20 ಕೋಟಿ ಮೊತ್ತದ 6,000 ಕ್ವಿಂಟಲ್ (600 ಟನ್‌) ಮೆಕ್ಕೆಜೋಳ ಸುಟ್ಟಿರುವ ಬಗ್ಗೆ ವರದಿಯಲ್ಲಿ ಉಲ್ಲೇಖಿಸಿದೆ.

ಜಮೀನಿನಲ್ಲಿ ಹಲವು ರೈತರು ಸಾಲಾಗಿ ಮೆಕ್ಕೆಜೋಳದ ರಾಶಿ ಮಾಡಿದ್ದರು. ಡಿ. 20ರಂದು ರೈತರೊಬ್ಬರು, ಯಂತ್ರದ ಮೂಲಕ ಮೆಕ್ಕೆಜೋಳವನ್ನು ತೆನೆಯಿಂದ ಬೇರ್ಪಡಿಸುತ್ತಿದ್ದರು. ಇದೇ ಸಂದರ್ಭದಲ್ಲಿ ಯಂತ್ರದಿಂದ ಹಾರಿದ ಬೆಂಕಿ ಕಿಡಿಯಿಂದ ಮೆಕ್ಕೆಜೋಳಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿರಬಹುದೆಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಪೊಲೀಸ್ ಇಲಾಖೆಯಿಂದಾಗಲಿ ಅಥವಾ ಅಗ್ನಿಶಾಮಕ ದಳದಿಂದಾಗಲೇ ಕಾರಣ ಹೊರಬಿದ್ದಿಲ್ಲ.

ಮಳೆಯ ಮುನ್ಸೂಚನೆ –

ರಾಜ್ಯದಲ್ಲಿ ಚಳಿಯ ಪ್ರಮಾಣ ಜಾಸ್ತಿ ಇದೆ. ಆದರೆ ಮತ್ತೆ ಮಳೆಯಾಗುವ ಮುನ್ಸೂಚನೆಯನ್ನ ಭಾರತೀಯ ಹವಾಮಾನ ಇಲಾಖೆ ನೀಡಿದೆ. ಜನವರಿ 8ರವರೆಗೆ ರಾಜ್ಯದಲ್ಲಿ ಒಣಹವೆ ಮುಂದುವರಿಯಲಿದೆ. ಆದರೆ ಜ.9ರಂದು ಚಾಮರಾಜನಗರ, ಹಾಸನ, ಕೊಡಗು, ಮಂಡ್ಯ, ಮೈಸೂರು ಮತ್ತು ರಾಮನಗರ ಜಿಲ್ಲೆಗಳಲ್ಲಿ ಲಘು ಮಳೆಯಾಗುವ ಸಾಧ್ಯತೆ ಇದೆ. ಹಾಗೆ, ಜನವರಿ 10ರಂದು ಚಾಮರಾಜನಗರ, ಹಾಸನ, ಕೊಡಗು, ಮಂಡ್ಯ, ಮೈಸೂರು ಮತ್ತು ರಾಮನಗರ ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಲಘು ಮಳೆಯಾಗುವ ಸಾಧ್ಯತೆಯೂ ಇದೆ ಎಂದು IMD ತಿಳಿಸಿದೆ. ಮುಂದಿನ 5 ದಿನಗಳಲ್ಲಿ ಉತ್ತರ ಒಳನಾಡಿನಲ್ಲಿ ಕನಿಷ್ಠ ತಾಪಮಾನ ಇಳಿಕೆ ಆಗುತ್ತದೆ. ಅದು ಬಿಟ್ಟರೆ ದೊಡ್ಡ ಬದಲಾವಣೆ ಇಲ್ಲ.

Spread positive news

Leave a Reply

Your email address will not be published. Required fields are marked *