ಬೆಳೆವಿಮೆ : ರೈತರೇ ನಮಸ್ತೆ. ಇಂದು ನಾವು ಒಂದು ಮುಖ್ಯವಾದ ವಿಷಯದ ಬಗ್ಗೆ ಚರ್ಚಿಸೋಣ. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ವಿಮೆ ಮಾಡಿಸಿದ ರೈತರಲ್ಲಿ ಕೆಲವು ರೈತರಿಗೆ ಜಮೆಯಾಗುತ್ತದೆ. ಇನ್ನೂ ಕೆಲವು ರೈತರಿಗೇಕೆ ಜಮೆಯಾಗುವುದಿಲ್ಲ? ನಿಮಗೆ ಗೊತ್ತೇ?
ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ರೈತರು ತಮ್ಮ ಬೆಳೆಗಳಿಗೆ ವಿಮೆ ಮಾಡಿಸುತ್ತಾರೆ. ಆದರೆ ವಿಮೆ ಮಾಡಿಸಿದ ಮಾತ್ರಕ್ಕೆ ವಿಮೆ ಹಣ ಜಮೆಯಾಗುವುದಿಲ್ಲ. ಬೆಳೆ ವಿಮೆ ಮಾಡಿಸಿದ ನಂತರ ರೈತರ ಬೆಳೆ ಪ್ರಾಕೃತಿಕ ವಿಕೋಪದಿಂದ ಬೆಳೆ ಹಾಳಾಗಿರಬೇಕು ಆಗ ರೈತರೇನು ಮಾಡಬೇಕು? ಯಾರಿಗೆ ಸಂಪರ್ಕಿಸಬೇಕು? ಬೆಳೆ ವಿಮೆ ಹೇಗೆ ನಿರ್ಧರಿಸುತ್ತಾರೆ ಎಂಬುದರ ಸಂಪೂರ್ಣ ಮಾಹಿತಿ ನೀಡುತ್ತೇನೆ.
ವರುಣನ ಆರ್ಭಟ ಜೋರಾಗಿದೆ. ಎಲ್ಲಾ ಬೆಳೆಗಳು ನೀರು ಪಾಲಾಗಿ ನಿಂತಿದೆ. ಇಂತಹ ಸ್ಥಿತಿಯಲ್ಲಿ ರೈತರ ಪರವಾಗಿ ನಿಲ್ಲುವುದು ಎಲ್ಲಾ ನಾಗರಿಕರ ಕರ್ತವ್ಯವಾಗಿದೆ. ಹಾಗೂ ಸರ್ಕಾರವು ಇದರ ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗಿದೆ. ಬೆಳೆವಿಮೆ ಹಣ ಬಿಡುಗಡೆಯ ಮಾಹಿತಿಯು ಜಿಲ್ಲೆ ಮತ್ತು ಬೆಳೆ ಹಾನಿಯ ಅವಲಂಬಿತವಾಗಿರುತ್ತದೆ. ಉದಾಹರಣೆಗೆ, ಧಾರವಾಡ ಜಿಲ್ಲೆಯಲ್ಲಿ ಕುಂದಗೋಳ ಮತ್ತು ಹುಬ್ಬಳ್ಳಿ ತಾಲೂಕಿನ ರೈತರಿಗೆ ಫಸಲ್ ಬೀಮಾ ಯೋಜನೆಯಡಿ 31.75 ಕೋಟಿ ರೂ. ಬೆಳೆವಿಮೆ ಹಣ ಬಿಡುಗಡೆಯಾಗಿದೆ.
ಬೆಳೆ ವಿಮೆ ಯಾವ ರೈತರಿಗೆ ಜಮೆಯಾಗುತ್ತದೆ?
ಬೆಳೆ ವಿಮೆ ಮಾಡಿಸಿದ ನಂತರ ಯಾವ ರೈತರು ಬೆಳೆ ಹಾಳಾದಾಗ ವಿಮಾ ಕಂಪನಿಗೆ ದೂರು ನೀಡುತ್ತಾರೋ ಆ ರೈತರಿಗೆ ವಿಮೆ ಹಣ ಜಮೆಯಾಗುತ್ತದೆ. ದೂರು ನೀಡಿದ ನಂತರ ವಿಮಾ ಕಂಪನಿಯ ಸಿಬ್ಬಂದಿಗಳು ರೈತರ ಜಮೀನಿಗೆ ಬಂದು ನಷ್ಟದ ಪ್ರಮಾಣವನ್ನು ಪರಿಶೀಲಿಸಿ ಮೇಲಧಿಕಾರಿಗಳಿಗೆ ವಿಮೆ ಹಣ ಪಾವತಿಸಲು ವರದಿ ಕಳಿಸುತ್ತಾರೆ. ಆ ಆಧಾರದ ಮೇಲೆ ರೈತರಿಗೆ ವಿಮೆ ಹಣ ಪಾವತಿಸಲಾಗುವುದು.
ಬೆಳೆ ವಿಮೆ ಕಟ್ಟಿದ ರೈತರು ಬೆಳೆ ಸಂಪೂರ್ಣ ಹಾಳಾದರೂ 72 ಗಂಟೆಯೊಳಗೆ ವಿಮಾ ಕಂಪನಿಗೆ ತಿಳಿಸದೆ ಹೋದರೆ ರೈತರಿಗೆ ನಯಾ ಪೈಸೆ ಜಮೆಯಾಗುವುದಿಲ್ಲ. ಕೆಲವು ಸಲ ಹಳೆ ವಿಮಾ ಆಧಾರದ ಮೇಲೆ ನೂರಕ್ಕೆ ಒಬ್ಬ ರೈತರಿಗೆ ವಿಮೆ ಹಣ ಜಮೆಯಾಗಬಹುದು. ಆದರೆ ವಿಮೆಹಣ ಕಟ್ಟಿದ ನಂತರ ವಿಮಾ ಕಂಪನಿಗೆ ರೈತರು ದೂರು ನೀಡಿದರೆ ಹೋದರೆ ವಿಮೆ ಹಣ ಜಮೆಯಾಗುವುದಿಲ್ಲ.
ಬೆಳೆವಿಮೆ ಹೇಗೆ ಬರುತ್ತದೆ?
ವಿಮಾ ಸಂಸ್ಥೆಯಿಂದ ನೇಮಿಸಲ್ಪಟ್ಟ ನಷ್ಟ ನಿರ್ಧಾರಕರು ಮತ್ತು ಸ್ಥಳೀಯ ತಾಲ್ಲೂಕು/ಹೋಬಳಿ ಮಟ್ಟದ ಕಂದಾಯ, ಕೃಷಿ ಮತ್ತು ತೋಟಗಾರಿಕಾ ಇಲಾಖಾ ಅಧಿಕಾರಿಗಳು ಜಂಟಿಯಾಗಿ, ಹಾನಿಗೊಳಗಾದ ರೈತರ ಸಮ್ಮುಖದಲ್ಲಿ ಬೆಳೆ ನಷ್ಟವನ್ನು ನಿರ್ಧರಿಸತಕ್ಕದ್ದು. ಸದರಿ ಬೆಳೆ ನಷ್ಟದ ವರದಿಯನ್ನು ಜಿಲ್ಲೆಗಳ ಇಲಾಖಾ ಮುಖ್ಯಸ್ಥರು ಅನುಷ್ಠಾನ ವಿಮಾ ಸಂಸ್ಥೆಗಳಿಗೆ ನೇರವಾಗಿ ಸಲ್ಲಿಸಲು ಕ್ರಮ ಕೈಗೊಳ್ಳತಕ್ಕದ್ದು.
2025 ರ ಮುಂಗಾರು ಹಂಗಾಮಿನಲ್ಲಿ ಕಟಾವಿನ ನಂತರ ಬೆಳೆಯನ್ನು ಜಮೀನಿನಲ್ಲೇ ಒಣಗಲು ಬಿಟ್ಟಂತಹ ಸಂದರ್ಭದಲ್ಲಿ (Post Harvest Losses) ಕಟಾವು ಕೈಗೊಳ್ಳುವ ಎರಡು ವಾರಗಳೊಳಗಾಗಿ (ಹದಿನಾಲ್ಕು ದಿನಗಳು) ಚಂಡಮಾರುತ, ಚಂಡಮಾರುತ ಸಹಿತ ಮಳೆ ಮತ್ತು ಅಕಾಲಿಕ ಮಳೆಯಿಂದಾಗಿ ಬೆಳೆ ನಾಶವಾದರೆ ವೈಯಕ್ತಿಕವಾಗಿ (case to case basis) ವಿಮಾ ಸಂಸ್ಥೆಯು ನಮ್ಮ ನಿರ್ಧಾರ ಮಾಡಿ ಬೆಳೆ ನಷ್ಟ ಪರಿಹಾರವನ್ನು ಇತ್ಯರ್ಥಪಡಿಸಲು ರಾಜ್ಯದ ಎಲ್ಲಾ ಜಿಲ್ಲೆಗಳನ್ನು ಒಳಪಡಿಸಲಾಗಿದೆ.
ಆನ್ಲೈನ್ ಅಲ್ಲಿ ಬೆಳೆವಿಮೆ ಹಣ ಹೇಗೆ ನೋಡಬೇಕು?
* ಮೊದಲಿಗೆ ಗೂಗಲ್ ನಲ್ಲಿ ::http://SAMRAKSHANE-KARNATAKA :: Crop Insurance Application – NIC-Bangalore https://share.google/LfUHgNGeDo6U81QTh
ಈ ಲಿಂಕ್ ಅನ್ನು ಕ್ಲಿಕ್ ಮಾಡಬೇಕು.
• ನಂತರ ಅಲ್ಲಿ ನಿಮಗೆ ವರ್ಷ ಮತ್ತು ಹಂಗಾಮು ತೋರಿಸುತ್ತದೆ. ಅಲ್ಲಿ ಮುಂದೆ ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ.
• ನಂತರ ಚೆಕ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ.
• ಅಲ್ಲಿ ನಿಮ್ಮ ಬೆಳೆವಿಮೆ ಮಾಹಿತಿ ಹಾಕಿದ ಕೂಡಲೇ ನಿಮ್ಮ ಬೆಳೆವಿಮೆ ಹಣದ ಬಗ್ಗೆ ಮಾಹಿತಿ ಸಿಗುತ್ತದೆ.
ನಿಮಗೆ ಏನಾದರೂ ಬೆಳೆವಿಮೆ ಹಣದ ಬಗ್ಗೆ, ಬೆಳೆವಿಮೆ ಅರ್ಜಿ ಬಗ್ಗೆ ಸಂದೇಹ ಇದ್ದಲ್ಲಿ ಕೂಡಲೇ ಕಂಪ್ಲೆಟ ನೊಂದಣಿ ಮಾಡ ಬೇಕಾದ ಟೋಲ್ ಫ್ರೀ ನಂಬರ 18004256678. ಈ ನಂಬರ್ ಕಾಲ್ ಮಾಡಿ ಮಾತನಾಡಿ. ಹಾಗೂ ನಿಮ್ಮ ಬೆಳೆವಿಮೆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ.