ನಿಮ್ಮ ಹೊಲದ ಸ್ಕೆಚ್ ಇಲ್ಲಿ ಸಿಗುತ್ತದೆ ನೋಡಿ!

ಹೊಲದ ಸ್ಕೆಚ್ : ಭೂಮಿಯ ಪ್ರಮಾಣವನ್ನು ತಿಳಿದುಕೊಳ್ಳುವುದು ಭೂಮಿಯ ಸರಿಯಾದ ಬಳಕೆ, ಸ್ವಾಮ್ಯ ಹಕ್ಕಿನ ಸ್ಪಷ್ಟತೆ ಹಾಗೂ ಗಡಿ ವಿವಾದಗಳನ್ನು ತಪ್ಪಿಸಲು ಮುಖ್ಯ. ಇದು ಕೃಷಿ ಯೋಜನೆ, ಕಟ್ಟಡ ನಿರ್ಮಾಣ, ಭೂಮಿ ಖರೀದಿ–ಮಾರಾಟ ಹಾಗೂ ಸರ್ಕಾರಿ ದಾಖಲೆಗಳಿಗೆ ಸಹಾಯಕವಾಗಿದೆ. ಎಲ್ಲಾ ರೈತರು ಹಾಗೂ ಜಮೀನುದಾರರಿಗೆ ತಿಳಿಸಲಾಗುವುದು ಏನೆಂದರೆ, ಇವರು ತಮ್ಮ ಭೂಮಿಯನ್ನು ಸ್ವತಃ ಅಳೆಯಬಹುದು ಜೊತೆಗೆ ಅವರ ಹೊಲವು ಯಾವ ಯಾವ ಹಿಸ್ಸೆ ಸಂಖ್ಯೆಗಳ ಮೂಲಕ ಸುತ್ತುವರಿದಿದೆ ಎಂಬುದನ್ನು ಕೂಡ ಪರಿಶೀಲಿಸಬಹುದು.

ಭೂಮಿಯ ರೇಖಾಚಿತ್ರವನ್ನು ಹೇಗೆ ಅಳೆಯುವುದು ಎಂದು ನೋಡೋಣ :-

1) ನಿಮ್ಮ ಮೊಬೈಲ್‌ನಲ್ಲಿ Chrome ಅಪ್ಲಿಕೇಶನ್ ತೆರೆಯಿರಿ.
2) landrecords.karnataka.gov.in ವೆಬ್‌ಸೈಟ್‌ಗೆ ಭೇಟಿ ನೀಡಿ. ಈ ವೆಬ್‌ಸೈಟ್ ಕರ್ನಾಟಕ ಕಂದಾಯ ಇಲಾಖೆಯ ಒಡೆತನದಲ್ಲಿದೆ.
3) view RTC and MR ಮೇಲೆ ಕ್ಲಿಕ್ ಮಾಡಿ. ಹೊಸ ಟ್ಯಾಬ್ ತೆರೆಯುತ್ತದೆ.
4) ಈಗ survey sketch ಮೇಲೆ ಕ್ಲಿಕ್ ಮಾಡಿ. ಅಲ್ಲಿ ನಿಮ್ಮ ಗ್ರಾಮದ ಹೆಸರನ್ನು ನಮೂದಿಸಬೇಕಾದ ಮತ್ತೊಂದು ಟ್ಯಾಬ್ ತೆರೆಯುತ್ತದೆ. ನಂತರ ನೀವು ನಿಮ್ಮ ಗ್ರಾಮದ ಹೆಸರು, ಹೋಬಳಿ, ತಾಲೂಕು ಮತ್ತು ಜಿಲ್ಲೆಯನ್ನು ನೋಡಬಹುದು , ಅದರ ಮೇಲೆ ಕ್ಲಿಕ್ ಮಾಡಿ.
5) ನಿಮ್ಮ ಜಮೀನಿನ ಸರ್ವೆ ಸಂಖ್ಯೆಯನ್ನು ನಮೂದಿಸಲು ಮತ್ತೊಂದು ಟ್ಯಾಬ್ ಸಿಗುತ್ತದೆ, ಸರ್ನೋಕ್(surnoc) ಸಂಖ್ಯೆಯನ್ನು ಸ್ಟಾರ್ ಆಗಿ ಆಯ್ಕೆ ಮಾಡಿ ಮತ್ತು ನಿಮ್ಮ ಸರ್ವೆ ಸಂಖ್ಯೆಯ ಅಡಿಯಲ್ಲಿ ನಿಮ್ಮ ಜಮೀನಿನ ಹಿಸ್ಸಾ ಸಂಖ್ಯೆಯನ್ನು ಆಯ್ಕೆ ಮಾಡಿ. ನಂತರ search ಬಟನ್ ಕ್ಲಿಕ್ ಮಾಡಿ.
6) ನಿಮ್ಮ ಭೂಮಿಯ ಸರಿಯಾದ ರೇಖಾಚಿತ್ರವನ್ನು ಅಂದಾಜು ಅಳತೆಗಳೊಂದಿಗೆ ನೀವು ನೋಡುತ್ತೀರಿ. ಅದಲ್ದೆ view sketch on map ಕ್ಲಿಕ್ ಮಾಡುವ ಮೂಲಕ ನಿಮ್ಮ ಭೂಮಿಯ ಉಪಗ್ರಹ ನೋಟವನ್ನು(satellite view) ಸಹ ನೀವು ನೋಡಬಹುದು.

ಗಮನಿಸಬೇಕಾದ ಅಂಶಗಳು :-

  • ಮೊದಲನೆಯದಾಗಿ, ರೇಖಾಚಿತ್ರದಲ್ಲಿ ಇರುವ ಅಳತೆಗಳು ಸ್ಕೆಲ್ ಮಾಪನ ಅನುಗುಣವಾಗಿ ಇರುವುದಿಲ್ಲ.
  • ಎರಡನೆಯದು, ಇದು ವೀಕ್ಷಣೆಯ ಉದ್ದೇಶಕ್ಕಾಗಿ ಮಾತ್ರ ಹೊರತು ಕಾನೂನು ಉದ್ದೇಶಕ್ಕಾಗಿ ಈ ಒಂದು ನಕ್ಷೆ ನೀವು ಬಳಸುವಂತಿಲ್ಲ.

ಮೇಲಿನ ಸೂಚನೆಗಳು ಹಾಗೂ ಟಿಪ್ಪಣಿಗಳನ್ನು ಗಮನದಲ್ಲಿಟ್ಟುಕೊಂಡು, ರೈತರು ಮತ್ತು ಭೂಮಿಯ ಮಾಲೀಕರು ತಮ್ಮ ಜಮೀನುಗಳ ಸ್ಪಷ್ಟತೆ ಹಾಗೂ ಉತ್ತಮ ಅರಿವಿಗಾಗಿ ಭೂನಕ್ಷೆಯನ್ನು ಪರಿಶೀಲಿಸಬಹುದು.

ಭೂಮಿ ಖರೀದಿ ಜೀವನದಲ್ಲಿ ಬಹುಮುಖ್ಯ ಹೂಡಿಕೆಯಾಗಿರುತ್ತದೆ. ಆದರೆ ಖರೀದಿಸುವ ಮೊದಲು ಆ ಭೂಮಿಗೆ ಸಂಬಂಧಿಸಿದ ಎಲ್ಲಾ ಕಾನೂನು ದಾಖಲೆಗಳನ್ನು ಪರಿಶೀಲಿಸುವುದು ಅತ್ಯಂತ ಅಗತ್ಯ. ಸರಿಯಾದ ದಾಖಲೆಗಳನ್ನು ಪರಿಶೀಲಿಸಿದರೆ ಆ ಭೂಮಿಯ ಹಕ್ಕು ಸ್ಪಷ್ಟವಾಗಿರುವುದು, ಯಾವುದೇ ವಿವಾದವಿಲ್ಲದಿರುವುದು ಮತ್ತು ಭವಿಷ್ಯದಲ್ಲಿ ಕಾನೂನು ಸಮಸ್ಯೆಗಳು ಎದುರಾಗದಂತೆ ತಡೆಯಬಹುದು. ಭೂಮಿಯ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸುವುದು ಖರೀದಿದಾರನ ಶಾಂತಿ ಮತ್ತು ಶ್ರಮದಿಂದ ಗಳಿಸಿದ ಹಣವನ್ನು ವಂಚನೆಗಳಿಂದ ರಕ್ಷಿಸುವಲ್ಲಿ ಸಹಾಯ ಮಾಡುತ್ತದೆ. ಭೂಮಿ ಖರೀದಿಸುವ ಮೊದಲು ಆ ಭೂಮಿಯು ನಿಜವಾಗಿಯೂ ಹಕ್ಕುಸ್ವಾಮ್ಯಕ್ಕೆ ಹೊಂದಿರುವುದೇ ಮತ್ತು ಯಾವುದೇ ವಿವಾದಗಳಿಲ್ಲದಿರುವುದೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಕೆಲವು ಮುಖ್ಯ ದಾಖಲೆಗಳನ್ನು ಪರಿಶೀಲಿಸುವುದು ಅತ್ಯಂತ ಅಗತ್ಯ.

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಗಮನಕ್ಕೆ:

ಗ್ರಾಮ ಪಂಚಾಯಿತಿಯ ಚುನಾವಣೆಗಾಗಿ ನೀವು ಮಾಡುವ ಪ್ರಚಾರ ಹಾಗೂ ಪ್ರತಿನಿತ್ಯದ ಕೆಲಸಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಳ್ಳುವುದರಿಂದ ಜನಾಕರ್ಷಣೆ ಆಗುತ್ತದೆ. ಹಾಗೂ ನಿಮ್ಮ ಕಾರ್ಯ ವೈಖರಿ ಜನರಿಗೆ ತಿಳಿದು ಜನ ನಿಮ್ಮನ್ನು ಬೆಂಬಲಿಸಲು ಮುಂದಾಗುತ್ತಾರೆ. ಆದ್ದರಿಂದ ನಿಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬೇಕಾದ ಪೋಸ್ಟರ್ಗಳು ಹಾಗೂ ವಿಡಿಯೋಗಳನ್ನು ನಾವು ಅತ್ಯುತ್ತಮ ಕಡಿಮೆ ದರದಲ್ಲಿ ಮಾಡಿಕೊಡುತ್ತೇವೆ ನಿಮಗೆ ಹಬ್ಬಗಳಿಗೆ ವಿಶೇಷ ಸಂದರ್ಭಗಳಲ್ಲಿ ಅಥವಾ ಹುಟ್ಟುಹಬ್ಬಗಳಲ್ಲಿ ಶುಭಕೋರುವ ಪೋಸ್ಟರ್ಗಳು ಬೇಕಿದ್ದರೆ ಈ ಕೆಳಗೆ ನೀಡಿರುವ ನಂಬರನ್ನು ಸಂಪರ್ಕಿಸಿ. 9845499218

Spread positive news

Leave a Reply

Your email address will not be published. Required fields are marked *