ಪಹಣಿ ತಿದ್ದುಪಡಿ : RTC (ಆರ್.ಟಿ.ಸಿ) ಸಾಮಾನ್ಯವಾಗಿ ಕರ್ನಾಟಕದಲ್ಲಿ ಪಹಣಿ ಎಂದು ಕರೆಯುತ್ತಾರೆ . ಇದು ಭೂಮಿಯ ಮಾಲೀಕತ್ವ, ಕೃಷಿ ಹಾಗೂ ಬೆಳೆಯ ವಿವರಗಳನ್ನು ತೋರಿಸುವ ಪ್ರಮುಖ ದಾಖಲೆ. ಕೆಲವೊಮ್ಮೆ ಆರ್ಟಿಸಿಯಲ್ಲಿ ಮಾಲೀಕರ ಹೆಸರಿನಲ್ಲಿ, ಸರ್ವೆ ಸಂಖ್ಯೆ, ಭೂಮಿಯ ವಿಸ್ತೀರ್ಣ, ಭೂಮಿಯ ಪ್ರಕಾರ ಅಥವಾ ಬೆಳೆಯ ವಿವರಗಳಲ್ಲಿ ತಪ್ಪುಗಳು ಸಂಭವಿಸಬಹುದು. ಇಂತಹ ತಪ್ಪುಗಳು ಕಾನೂನು ಸಮಸ್ಯೆ, ಜಮೀನು ಸಂಬಂಧಿ ಕಲಹಗಳು ಅಥವಾ ಮಾರಾಟ, ವರ್ಗಾವಣೆ ಹಾಗೂ ಸಾಲ ಪಡೆಯುವ ಸಂದರ್ಭದಲ್ಲಿ ಅಡಚಣೆ ಉಂಟುಮಾಡಬಹುದು.
ಆರ್.ಟಿ.ಸಿಯಲ್ಲಿನ ತಪ್ಪುಗಳನ್ನು ಸರಿಪಡಿಸಲು, ಭೂಮಿಯ ಮಾಲೀಕರು ಸರಿಯಾದ ದಾಖಲೆಗಳಾದ ಮಾರಾಟದ ಪತ್ರ, ಮ್ಯೂಟೇಷನ್ ದಾಖಲೆಗಳು ಅಥವಾ ನ್ಯಾಯಾಲಯದ ಆದೇಶಗಳೊಂದಿಗೆ ತಹಶೀಲ್ದಾರರಿಗೆ ಅಥವಾ ರಾಜಸ್ವ ಇಲಾಖೆಗೆ ಅರ್ಜಿ ಸಲ್ಲಿಸಬೇಕು. ಪರಿಶೀಲನೆಯ ನಂತರ, ಆರ್ಟಿಸಿಯ ತಿದ್ದುಪಡಿ ಭೂಮಿ ಪೋರ್ಟಲ್ ಅಥವಾ ಸ್ಥಳೀಯ ರಾಜಸ್ವ ಕಚೇರಿ ಮೂಲಕ ಮಾಡಲಾಗುತ್ತದೆ. ಕೆಲವೊಮ್ಮೆ ನೀವು ಯಾವುದೇ ರೈತ ಅಥವಾ ಭೂಮಾಲೀಕರ ಪಹಣಿಯಲ್ಲಿ ಹೆಸರು ಅಥವಾ ಸ್ಥಳ ಅಥವಾ ಇತರ ವಿವರಗಳನ್ನು ಇಂಗ್ಲಿಷ್ನಲ್ಲಿ ತಪ್ಪಾಗಿ ಬರೆಯಲಾಗಿದೆ ಅಥವಾ ಕನ್ನಡದಲ್ಲಿ ತಪ್ಪಾಗಿ ಬರೆಯಲಾಗಿದೆ ಎಂದು ಗಮನಿಸಿರಬಹುದು. ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಈ ಕಾಗುಣಿತ ತಪ್ಪುಗಳನ್ನು ತೊಡೆದುಹಾಕಲು ಯಾವ ದಾಖಲೆಗಳನ್ನು ಹೇಗೆ ಮತ್ತು ಎಲ್ಲಿ ಸಲ್ಲಿಸಬೇಕು? ಎಂದು ತಿಳಿಯೋಣ.
ಬೇಕಾಗುವ ದಾಖಲೆಗಳು :-
1) ಪಹಣಿ
2) ಆಧಾರ ಕಾರ್ಡ್
3) 20 ರುಪಾಯಿ ಸ್ಟಾಂಪ್ ಪೆಪರ್(ಸ್ವಯಂ ಹೇಳಿಕೆ)- ಇದರಲ್ಲಿ ನೀವು declaration ನೀಡಬೇಕು ಅಂದರೆ ನಿಮ್ಮ ಹೆಸರಿನ ತಿದ್ದುಪಡಿಗೆ ಕಾರಣ ಮತ್ತು ವಿವರಗಳನ್ನು ನೀವು ಸ್ವಯಂ ಘೋಷಣೆ ಮತ್ತು ಸಹಿಯ ಮೂಲಕ ತಹಶೀಲ್ದಾರರಿಗೆ ನೀಡಬೇಕು.
4) ಅರ್ಜಿ ಸಲ್ಲಿಸಬೇಕು- ಅರ್ಜಿಯಲ್ಲಿ ದಾಖಲೆಯಲ್ಲಿರುವ ಹೆಸರನ್ನು ತಿದ್ದುಪಡಿ ಮಾಡಲು ಕಾರಣ ಮತ್ತು ಅದನ್ನು ಯಾವ ಉದ್ದೇಶಕ್ಕಾಗಿ ಮತ್ತು ಯಾವ ಸೌಲಭ್ಯಗಳಿಗಾಗಿ ಬರೆಯಲಾಗುತ್ತಿದೆ ಎಂಬುದನ್ನು ಸೇರಿಸಬೇಕು.
5) ಕೇಳಿದರೆ ಹೆಚ್ಚಿನ ದಾಖಲೆಗಳನ್ನು ಸಲ್ಲಿಸಬೇಕು.
ಅರ್ಜಿ ಸಲ್ಲಿಕೆ :-
> ಅರ್ಜಿಯನ್ನು ಮೇಲೆ ತಿಳಿಸಿದ ಎಲ್ಲಾ ದಾಖಲೆಗಳೊಂದಿಗೆ ತಹಶೀಲ್ದಾರ್ ಕಚೇರಿಯ inward centre(ಅವಕ ಶಾಖೆ) ಅಲ್ಲಿ ಸಲ್ಲಿಸಬೇಕು.
> ಅರ್ಜಿ ಮತ್ತು ದಾಖಲೆಗಳನ್ನು ಸಲ್ಲಿಸಿದ ನಂತರ ನೀವು ಅವಕ ಶಾಖೆಯಿಂದ ರಶೀದಿಯನ್ನು ಸಹ ತೆಗೆದುಕೊಳ್ಳಬೇಕು.
> ನಂತರ, ನಿಮ್ಮ ಅರ್ಜಿ ಮತ್ತು ದಾಖಲೆಗಳನ್ನು ಭೂಮಿ ಪೋರ್ಟಲ್ ಮೂಲಕ ನಮೂದಿಸಲಾಗುತ್ತದೆ ಮತ್ತು ಮುಂದಿನ 15 ದಿನಗಳಲ್ಲಿ, ನಿಮ್ಮ ಹೆಸರು ಮತ್ತು RTC ಅಥವಾ ಪಹಾನಿ ವಿವರಗಳನ್ನು ನಿಮ್ಮ ಆಧಾರ್ ಕಾರ್ಡ್ ಪ್ರಕಾರ ಮಾರ್ಪಡಿಸಲಾಗುತ್ತದೆ.
ಪಹಣಿಯಲ್ಲಿ ಹೆಸರು ತಿದ್ದುಪಡಿ ಕುರಿತು ಕೆಲವೊಂದು ನಿಮ್ಮ ಗಮನದಲ್ಲಿ ಇರಬೇಕಾದ ಅಂಶಗಳು :-
> ಪಣಿಯಲ್ಲಿರುವ ಹೆಸರು ತಿದ್ದುಪಡಿ ಅಂದರೆ ಕೇವಲ ಕಾಗುಣಿತ ತಪ್ಪುಗಳು ಅಥವಾ ಟೈಪಿಂಗ್ ಮಿಸ್ಟೇಕ್ ಪದಗಳು ಮತ್ತು ಒತ್ತಕ್ಷರಗಳು ಅದರಂತೆ ಸಾಮಾನ್ಯ ಪದಗಳನ್ನು ಮಾತ್ರ ತಿದ್ದುಪಡಿ ಮಾಡಲು ಅವಕಾಶ ಇದೆ. ಅದನ್ನು ಹೊರತುಪಡಿಸಿ ಹೆಸರು ಬದಲಾವಣೆ ಮಾಡುವುದಾಗಲಿ ಅಥವಾ ಹೆಸರು ಸೇರ್ಪಡೆ ಮಾಡಲು ಸಾಧ್ಯವಿಲ್ಲ. ಆದರೆ ಕಂದಾಯ ನ್ಯಾಯಾಲಯ ಅಥವಾ ಹೊರಗಿನ ನ್ಯಾಯಾಲಯ ಆದೇಶ ಇದ್ದರೆ ನೀವು ಅದನ್ನು ವಿಚಾರಿಸಬಹುದು.
> ಸಂಪೂರ್ಣ ಹೆಸರು ಬದಲಾವಣೆ ಅಥವಾ ಇತರ ಪ್ರಮುಖ ತಿದ್ದುಪಡಿ ಮಾಡಿಕೊಳ್ಳುವುದಾದರೆ ನೊಂದಣಿ ಮೂಲಕ ಮಾಡಬಹುದು.
ಹೆಚ್ಚಿನ ಮಾಹಿತಿಗಾಗಿ ನೀವು ತಹಶೀಲ್ದಾರ್ ಕಛೇರಿ ಅಥವಾ ಉಪನೊಂದಣಿ ಕಛೇರಿಗೆ ಹೋಗಿ ಭೇಟಿಕೊಟ್ಟು ಮಾಹಿತಿ ತಿಳಿದುಕೊಳ್ಳಿ.
ಕೊನೆಯದಾಗಿ ಹೆಳುವುದಾದರೆ ರೈತರು ಮತ್ತು ಭೂಮಿಯ ಮಾಲೀಕರು ತಮ್ಮ ಆರ್ಟಿಸಿಯನ್ನು ನಿಯಮಿತವಾಗಿ ಪರಿಶೀಲಿಸಿ, ತಪ್ಪುಗಳನ್ನು ಬೇಗನೆ ಸರಿಪಡಿಸಿಕೊಳ್ಳುವುದು ಭವಿಷ್ಯದ ಸಮಸ್ಯೆಗಳನ್ನು ತಪ್ಪಿಸಲು ಅಗತ್ಯ.
- ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಗಮನಕ್ಕೆ:
ಗ್ರಾಮ ಪಂಚಾಯಿತಿಯ ಚುನಾವಣೆಯಲ್ಲಿ ನೀವು ಮಾಡುವ ಪ್ರಚಾರ ಹಾಗೂ ಪ್ರತಿನಿತ್ಯದ ಕೆಲಸಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಳ್ಳುವುದರಿಂದ ಜನಾಕರ್ಷಣೆ ಆಗುತ್ತದೆ. ಹಾಗೂ ನಿಮ್ಮ ಕಾರ್ಯ ವೈಖರಿ ಜನರಿಗೆ ತಿಳಿದು ಜನ ನಿಮ್ಮನ್ನು ಬೆಂಬಲಿಸಲು ಮುಂದಾಗುತ್ತಾರೆ. ಆದ್ದರಿಂದ ನಿಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬೇಕಾದ ಪೋಸ್ಟರ್ಗಳು ಹಾಗೂ ವಿಡಿಯೋಗಳನ್ನು ನಾವು ಅತ್ಯುತ್ತಮ ಕಡಿಮೆ ದರದಲ್ಲಿ ಮಾಡಿಕೊಡುತ್ತೇವೆ ನಿಮಗೆ ಹಬ್ಬಗಳಿಗೆ ವಿಶೇಷ ಸಂದರ್ಭಗಳಲ್ಲಿ ಅಥವಾ ಹುಟ್ಟುಹಬ್ಬಗಳಲ್ಲಿ ಶುಭಕೋರುವ ಪೋಸ್ಟರ್ಗಳು ಬೇಕಿದ್ದರೆ ಈ ಕೆಳಗೆ ನೀಡಿರುವ ನಂಬರನ್ನು ಸಂಪರ್ಕಿಸಿ. 9845499218