ಉಚಿತ ಹೋಲಿಗೆ ಯಂತ್ರ
ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮವು ಹಿಂದುಳಿದ ವರ್ಗಗಳ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರಗಳನ್ನು ವಿತರಿಸಲು ಅರ್ಜಿ ಆಹ್ವಾನಿಸಿದೆ. ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಯಾಗಲು ನೆರವಾಗುವ ಈ ಯೋಜನೆಗೆ ಅರ್ಜಿ ಸಲ್ಲಿಸಲು ಜೂನ್ 30 ಕೊನೆಯ ದಿನಾಂಕವಾಗಿದ್ದು, ಈ ಸಂಬಂಧ ಸರ್ಕಾರ ಅಧಿಸೂಚನೆ ಹೋರಡಿಸಿದೆ. ಗ್ರಾಮೀಣ ಪ್ರದೇಶದ ವಾರ್ಷಿಕ ಆದಾಯ 98,000 ರೂ. ಮತ್ತು ಪಟ್ಟಣ ಪ್ರದೇಶದ ವಾರ್ಷಿಕ ಆದಾಯ 1,20,000 ರೂ. ಒಳಗಿರಬೇಕು. 18 ರಿಂದ 55 ವರ್ಷ ವಯಸ್ಸಿನ ಮಹಿಳೆಯರು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು.
ಏನಿದು ಯೋಜನೆ? ಅರ್ಜಿ ಸಲ್ಲಿಸುವುದು ಹೇಗೆ? ಎಂಬುದನ್ನು ತಿಳಿಯೋಣ ಬನ್ನಿ.
ಹಿಂದುಳಿದ ವರ್ಗಗಳ ಕಲ್ಯಾಣ ಕಾರ್ಯಕ್ರಮದಡಿ ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮ ಮಹಿಳೆಯರಿಗೆ ಸಿಹಿ ಸುದ್ದಿ ನೀಡಿದ್ದು, ನಿಗಮದ ವತಿಯಿಂದ ಅರ್ಹ ಅಭ್ಯರ್ಥಿಗಳಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ ಮಾಡಲು ಫಲಾನುಭವಿಗಳನ್ನು ಆಯ್ಕೆ ಮಾಡಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಗಳ ಸಲ್ಲಿಕೆಗೆ ಜೂ. 30, 2025 ಕೊನೆಯ ದಿನವಾಗಿದೆ. ಈ ಸಂಬಂಧ ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ.
ಏನಿದು ಉಚಿತ ಹೊಲಿಗೆಯಂತ್ರ ವಿತರಣೆ ಯೋಜನೆ?
ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಉಚಿತವಾಗಿ ಹೊಲಿಗೆಯಂತ್ರಗಳನ್ನು ವಿತರಿಸುವ ಮೂಲಕ ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಯನ್ನಾಗಿಸುವ ಉದ್ದೇಶದಿಂದ ಸರ್ಕಾರ ಈ ಯೋಜನೆಯ್ನು ಜಾರಿಗೊಳಿಸಿದೆ. ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಬಡ ಕುಟುಂಬದ ಜನರಿಗೆ ಹೊಲಿಗೆ ಯಂತ್ರಗಳನ್ನು ವಿತರಿಸುವ ಸ್ವಾವಲಂಬಿ ಯೋಜನೆಯನ್ನು ಪ್ರಸಕ್ತ ಸಾಲಿನಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.
ಅರ್ಜಿ ಸಲ್ಲಿಸುವಾಗ ಗಮನದಲ್ಲಿಡಬೇಕಾದ ಅಂಶಗಳು:
* ಅರ್ಜಿದಾರರು ಆಧಾರ್ ಜೋಡಣೆಯಾದ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು.
* ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಬ್ಯಾಂಕ್ ಪಾಸ್‌ಬುಕ್ ಮುಂತಾದ ದಾಖಲೆಗಳು ಸರಿಯಾಗಿರಬೇಕು.
* ಹೆಚ್ಚಿನ ಮಾಹಿತಿಗಾಗಿ, ಸಂಬಂಧಪಟ್ಟ ರಾಜ್ಯದ ಅಥವಾ ಡಿ. ದೇವರಾಜ ಅರಸು ಅಭಿವೃದ್ಧಿ ನಿಗಮದ ಅಧಿಕೃತ ವೆಬ್‌ಸೈಟ್‌ಗಳನ್ನು ಪರಿಶೀಲಿಸಿ.
ಪ್ರಮುಖ ಲಕ್ಷಣಗಳು
ಮಹಿಳೆಯರ ಸ್ವಾವಲಂಬನೆಯನ್ನು ಉತ್ತೇಜಿಸಲು ಸರ್ಕಾರವು ಒಂದು ಯೋಜನೆಯನ್ನು ಮುಂದಿಟ್ಟಿದೆ. ಆದಾಯ ಗಳಿಕೆ ಅಥವಾ ವಿಸ್ತರಣೆಗೆ ಸಹಾಯ ಮಾಡಲು ಅವರು ಯಾವುದೇ ವೆಚ್ಚವಿಲ್ಲದ ಹೊಲಿಗೆ ಯಂತ್ರಗಳನ್ನು ಒದಗಿಸುತ್ತಾರೆ.
ಯೋಜನೆಯ ಪ್ರಮುಖ ಲಕ್ಷಣಗಳು :
ಉಚಿತ ಹೊಲಿಗೆ ಯಂತ್ರಗಳು: ಪ್ರತಿ ರಾಜ್ಯದಲ್ಲಿ 50,000 ಕ್ಕೂ ಹೆಚ್ಚು ಮಹಿಳೆಯರಿಗೆ ಹೊಲಿಗೆ ಯಂತ್ರಗಳು ಉಚಿತವಾಗಿ ಸಿಗಲಿವೆ.
* ಸ್ವ-ಉದ್ಯೋಗ ನೆರವು: ಮಹಿಳೆಯರು ಟೈಲರಿಂಗ್ ಮತ್ತು ಇತರ ಮನೆಕೆಲಸದ ಮೂಲಕ ಹಣ ಗಳಿಸಲು ಸಹಾಯ ಮಾಡುತ್ತದೆ.
* ಸರ್ಕಾರಿ ಪ್ರಾಯೋಜಿತ: ಈ ಕಾರ್ಯಕ್ರಮವು ಸಂಪೂರ್ಣವಾಗಿ ಫೆಡರಲ್ ಸರ್ಕಾರದಿಂದ ಪ್ರಾಯೋಜಿಸಲ್ಪಟ್ಟಿದೆ.
* ವಿಶೇಷ ಆದ್ಯತಾ ಗುಂಪುಗಳು: ವಿಧವೆಯರು, ಅಂಗವಿಕಲ ಮಹಿಳೆಯರು ಅಥವಾ ಕೆಳಮಟ್ಟದ ಸಾಮಾಜಿಕ-ಆರ್ಥಿಕ ಗುಂಪಿನವರು.
* ಆನ್‌ಲೈನ್ ನೋಂದಣಿ: ಮಹಿಳೆಯರು ತಮ್ಮ ಮನೆಯ ಮಿತಿಯಿಂದ ಯಾವುದೇ ಸಮಯದಲ್ಲಿ ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬಹುದು.
ಗ್ರಾಮ ಒನ್ ಕೇಂದ್ರಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ?
ಗ್ರಾಮ ಒನ್, ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಎಲ್ಲಾ ಇಲಾಖೆಗಳ ನಾಗರಿಕ ಸೇವೆಗಳನ್ನು ಗ್ರಾಮೀಣ ನಾಗರಿಕರಿಗೆ ಅವರ ಗ್ರಾಮಗಳಲ್ಲಿಯೇ ತಲುಪಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯನ್ನು ನಾಗರಿಕ ಕೇಂದ್ರಿತ ಸೇವೆಗಳಾದ ಸರ್ಕಾರದಿಂದ ನಾಗರಿಕರಿಗೆ ನೀಡಲಾಗುವ ಸೇವೆಗಳು, ಬ್ಯಾಂಕಿಂಗ್ ಸೇವೆಗಳು, ಆರ್‌ಟಿಐ ಪ್ರಶ್ನೆಗಳು ಹಾಗೂ ಇನ್ನಿತರೇ ಸೇವೆಗಳನ್ನು ಗ್ರಾಮ ಮಟ್ಟದಲ್ಲಿ ಎಲ್ಲಾ ನಾಗರಿಕರಿಗೆ ತಲುಪಿಸುವ ಏಕ-ಬಿಂದು ಸಹಾಯ ಕೇಂದ್ರವಾಗಿರುವಂತೆ ಯೋಜಿಸಲಾಗಿದೆ. ಈ ಕೇಂದ್ರಗಳು ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP) ಮಾದರಿಯಡಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಗ್ರಾಮ ಒನ್ ಕೇಂದ್ರಗಳನ್ನು ತೆರೆಯಲು ಆಸಕ್ತಿ ಉಳ್ಳ ಪದವೀಧರರು ಸ್ಥಳೀಯ ಆಡಳಿದ ಮೂಲಕ ಗ್ರಾಮ ಒನ್ ಕೇಂದ್ರಗಳ ಏಜೆನ್ಸಿಯನ್ನು ಪಡೆದುಕೊಳ್ಳಬಹುದಾಗಿದೆ. ಇದಕ್ಕೆ ಸರ್ಕಾರ ನಿಗದಿಪಡಿಸಿರುವ ನಿರ್ದಿಷ್ಟ ಮಾನಡಂಗಳನ್ನು ಪಾಲಿಸಬೇಕು.
ಲಭ್ಯವಿರುವ ಸೇವೆಗಳ ಪಟ್ಟಿಯನ್ನು ಪರಿಶೀಲಿಸುವುದು ಹೇಗೆ?
* ಅಧಿಕೃತ ವೆಬ್‌ಸೈಟ್ https://gramaone.karnataka.gov.in/ ಗೆ ಭೇಟಿ ನೀಡಿ.
* ಮುಖಪುಟದಿಂದ ಸೇವೆಗಳ ಪಟ್ಟಿ ಆಯ್ಕೆಯನ್ನು ಆರಿಸಿ.
* ಇಲಾಖೆವಾರು ಸೇವೆಗಳನ್ನು ಪರದೆಯ ಮೇಲೆ ತೋರಿಸಲಾಗುತ್ತದೆ.
* ನೀವು ಇನ್ನಷ್ಟು ತಿಳಿದುಕೊಳ್ಳಲು ಬಯಸುವ ಇಲಾಖೆಯ ಮೇಲೆ ಕ್ಲಿಕ್ ಮಾಡಿ ಮತ್ತು ನೀಡಲಾಗುವ ಸೇವೆಗಳ ಸಂಪೂರ್ಣ ವಿವರಗಳನ್ನು ನೋಡಿ.
ಇನ್ನಷ್ಟು ಮಾಹಿತಿಗಳನ್ನು ಓದಿ
ಅಣಬೆ ಉತ್ಪಾದನಾ ತಂತ್ರಜ್ಞಾನ ತರಬೇತಿಗೆ ಇಂದೇ ಅರ್ಜಿ ಸಲ್ಲಿಸಿ
Aadhar card : ನಿಮ್ಮ ಆಧಾರ್ ಕಾರ್ಡ್ ಸ್ಕ್ಯಾಮ್ ಆಗಿದೆಯಾ? ಚೆಕ್ ಮಾಡಿ!