ರಾಜ್ಯದೆಲ್ಲೆಡೆ ಹರಡಿದ ಹಕ್ಕಿಜ್ವರ ಇಲ್ಲಿದೆ ಮುಂಜಾಗ್ರತಾ ಕ್ರಮಗಳು.

ಪ್ರೀಯ ರೈತರೇ ಇವತ್ತು ನಾವು ರಾಜ್ಯದಲ್ಲಿ ಸುದ್ದಿಯಾಗಿರುವ ಹಕ್ಕಿ ಜ್ವರ ಬಗ್ಗೆ ಮಾಹಿತಿ ತಿಳಿಯೋಣ.ಹಕ್ಕಿ ಜ್ವರ’ದಿಂದಲೇ ಕಪ್ಪಗಲ್ಲು ಕೋಳಿ ಫಾರಂನಲ್ಲಿ ಈ ಪ್ರಮಾಣದ ಕೋಳಿಗಳು ಮೃತಪಟ್ಟಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕರ್ನಾಟಕದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡ ಬೆನ್ನಲ್ಲೆ ಜನರಲ್ಲಿ ಆತಂಕ ಎದುರಾಗಿದೆ. ಕೋಳಿ ಮಾಂಸ, ಮೊಟ್ಟೆ ತಿಂದ್ರೆ ಸೋಂಕು ಬರುತ್ತಾ ಎಂಬ ಪ್ರಶ್ನೆ ಕಾಡುತ್ತಿದೆ. ಕೆಲವರು ಭಯದಲ್ಲಿ ಕೋಳಿ ಮಾಂಸ, ಮೊಟ್ಟೆಯಿಂದ ದೂರ ಉಳಿದಿದ್ದಾರೆ. ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಹಕ್ಕಿ ಜ್ವರ ವರದಿಯಾಗಿದೆ. ಈ ಬೆನ್ನಲ್ಲೆ ಕೋಳಿ ಮಾಂಸ ಹಾಗೂ ಕೋಳಿ ಮೊಟ್ಟೆ ತಿನ್ನಬೇಕೋ ಬೇಡವೋ ಎಂಬ ಆತಂಕ ಸಾರ್ವಜನಿಕರಲ್ಲಿ ಎದುರಾಗಿದೆ. ಭಯದಿಂದ ಕೆಲವರು ಮಾಂಸ, ಮೊಟ್ಟೆ ಸೇವನೆಯಿಂದ ದೂರ ಉಳಿದಿದ್ದಾರೆ.

ಸಾರ್ವಜನಿಕರು ಮಾಂಸ ಮತ್ತು ಮೊಟ್ಟೆಗಳನ್ನು 70 ಡಿಗ್ರಿ ಅಧಿಕ ಉಷ್ಣಾಂಶದಲ್ಲಿ ಕನಿಷ್ಠ 30 ನಿಮಿಷ ಬೇಯಿಸಿದಾಗ ವೈರಾಣು ನಾಶಗೊಳ್ಳುತ್ತದೆ. ಸಾರ್ವಜನಿಕರು ಮಾಂಸ ಮತ್ತು ಮೊಟ್ಟೆಗಳನ್ನು ಚೆನ್ನಾಗಿ ಬೇಯಿಸಿದ ನಂತರ ಸೇವಿಸಬೇಕು ಎಂದರು. ಬಳ್ಳಾರಿ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಫೆ.23 ರಂದು ಕುರೇಕುಪ್ಪ ಕುಕ್ಕುಟ ಸಂವರ್ಧನಾ ಕೇಂದ್ರದಲ್ಲಿ ಮಾಡಿದ ಅಸಿಲ್‌ ಮತ್ತು ಕಾವೇರಿ ತಳಿ ಕೋಳಿಗಳಿಗೆ ಕೋಳಿ ಶೀತ ಜ್ವರ ರೋಗದ ಲಕ್ಷಣ ಕಂಡುಬಂದು ಕೆಲವು ಕೋಳಿಗಳು ಮರಣ ಹೊಂದಿದ್ದವು. ಹೆಚ್ಚಿನ ಪರೀಕ್ಷೆಗಾಗಿ ಬೆಂಗಳೂರಿನ ಐಎಎಚ್‌ ಮತ್ತು ವಿಬಿಗೆ ಮರಣ ಹೊಂದಿದ ಕೋಳಿಗಳ ಮಾದರಿ ಕಳುಹಿಸಲಾಗಿತ್ತು. ಫೆ.25 ರಂದು ಭೋಪಾಲ್‌ನ ಐಸಿಆರ್‌ನ- ರಾಷ್ಟ್ರೀಯ ಹೈ ಸೆಕ್ಯುರಿಟಿ ಪ್ರಾಣಿ ರೋಗಗಳ ಪ್ರಯೋಗಾಲಯ ಸಂಸ್ಥೆಯಿಂದ ರೋಗ ದೃಢೀಕರಣವಾಗಿರುವ ವರದಿ ಬಂದ ನಂತರ ಕೋಳಿ ಶೀತ ಜ್ವರ ರೋಗದ ಬಗ್ಗೆ ಘೋಷಿಸಲಾಯಿತು.

ಎಚ್‌5 ಎನ್‌1 (ಹಕ್ಕಿಜ್ವರ) ವೈರಸ್‌ ಪತ್ತೆಯಾದ ಬೀದರ ಜಿಲ್ಲೆಯ ಹುಮನಾಬಾದ ತಾಲೂಕಿನ ಮೊಳಕೇರಾ ಸಮೀಪದ ಕೋಳಿಫಾರ್ಮ್ ನಲ್ಲಿ ಬುಧವಾರ ಸಂಜೆವರೆಗೆ ಅಂದಾಜು 80 ಸಾವಿರ ಕೋಳಿ ನಾಶಪಡಿಸಲಾಗಿದೆ. ಕೋಳಿ ನಾಶಪಡಿಸುತ್ತಿರುವವರು ಕಾರ್ಯಾಚರಣೆ ಮುಗಿದ ಅನಂತರ 10 ದಿನಗಳ ಕಾಲ ಮನೆಗಳಿಗೆ ತೆರಳುವಂತಿಲ್ಲ ಎಂದು ಸೂಚನೆ ನೀಡಲಾಗಿದೆ. ಹಕ್ಕಿಜ್ವರ ಹರಡದಂತೆ ಎಲ್ಲ ರೀತಿಯ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ನಾಗರಿಕರು ಹಕ್ಕಿ ಜ್ವರದ ಬಗ್ಗೆ ಯಾವುದೇ ರೀತಿಯ ಭಯ ಪಡೆಬೇಕಾದ ಅಗತ್ಯ ಇಲ್ಲ ಎಂದು ಪಶುಸಂಗೋಪನಾ ಇಲಾಖೆ ತಿಳಿಸಿದೆ.

ಬೆಂಗಳೂರಿಗೆ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಸರಬರಾಜಾಗುತ್ತಿರುವ ಕೋಳಿ ಹಾಗೂ ಮೊಟ್ಟೆಗಳನ್ನು ಪರೀಕ್ಷಿಸಲಾಗುತ್ತಿದೆ. ಬೆಂಗಳೂರಿನಲ್ಲಿ ಇದುವರೆಗೆ ಹಕ್ಕಿಜ್ವರದ ಪ್ರಕರಣಗಳು ಪತ್ತೆಯಾಗಿಲ್ಲ. ಸೋಂಕು ತಗುಲಿದ ಕೋಳಿಗಳನ್ನು ಪರೀಕ್ಷೆಗಾಗಿ ಪ್ರಯೋಗಾಲಕ್ಕೆ ಕಳುಹಿಸಲು ಮತ್ತು ಸ್ವಚ್ಛತೆ ಕಾಪಾಡಿಕೊಳ್ಳಲು ಪಶುಸಂಗೋಪನಾ ಇಲಾಖೆ ತಿಳಿಸಿದೆ.

ಹಕ್ಕಿ ಜ್ವರ ಬರುವುದನ್ನು ತಡೆಯುವುದು ಹೇಗೆ?
* ಹಕ್ಕಿಜ್ವರ ಮೊದಲಿಗೆ ವೈರ‌ಸ್ ಇಂದ ಹರಡುತ್ತದೆ.
* ಹಕ್ಕಿಜ್ವರ ಸೋಂಕು ತಗುಲಿದ ಕೋಳಿ ಹಾಗೂ ಪಕ್ಷಿಗಳಿಂದ ಹರಡುತ್ತದೆ.
* ಕೋಳಿ ಶೆಡ್ ಸುತ್ತಲೂ 2 ದಿನಕ್ಕೊಮ್ಮೆ ಆದರೂ ಸ್ವಚ್ಛತೆಯಿಂದ ಕಾಪಾಡಿ.
* ಶೆಡ್ ಸುತ್ತಲೂ ಕಸ ಕಡ್ಡಿ ಇರದಂತೆ ನೋಡಿಕೊಳ್ಳಿ.
* ಈ ಜ್ವರದ ವೈರಾಣುಗಳು ಗಾಳಿಯಲ್ಲಿ ಹರಡುವುದರಿ೦ದ ಮನೆ ಹಾಗೂ ಕೋಳಿ ಫಾರಂಗಳಲ್ಲಿ ಕೋಳಿ ಸಾಕುವವರು ಮೂಗಿಗೆ ಮಾಸ್ಕ್ ಧರಿಸಬೇಕು.
* ಫಾರಂನಿಂದ ಹೊರಬಂದ ನಂತರ ಸ್ನಾನ ಮಾಡುವುದು ಕಡ್ಡಾಯ
* ಹಕ್ಕಿಜ್ವರ ಬಂದ ಕೋಳಿ ಹಾಗೂ ಮೊಟ್ಟೆಯನ್ನು ಚೆನ್ನಾಗಿ ಬೇಯಿಸಿ ತಿಂದರೆ ರೋಗ ಹರಡುವ ಭೀತಿ ಇಲ್ಲ.
* ಆದರೆ, ಹಸಿಯಾಗಿ ಅಥವಾ ಅರೆಬೆಂದ ಮಾಂಸ ಸೇವಿಸಿದರೆ ರೋಗ ತಗಲುತ್ತದೆ ಎಂಬುದು ಎಚ್ಚರಿಕೆಯಲ್ಲಿರಲಿ.

Spread positive news

Leave a Reply

Your email address will not be published. Required fields are marked *