ಗೂಡ್ಸ್ ಟ್ಯಾಕ್ಸಿ ವಾಹನ ಪಡೆಯಲು ಅರ್ಜಿ ಕರೆದಿದ್ದಾರೆ.

ಪ್ರೀಯ ರೈತರೇ ಇವತ್ತು ಒಂದು ಮುಖ್ಯವಾದ ವಿಷಯದ ಬಗ್ಗೆ ಚರ್ಚಿಸೋಣ. ಸ್ವಾವಲಂಬಿ ಸಾರಥಿ ಯೋಜನೆಯಡಿ ನಾಲ್ಕು ಚಕ್ರಗಳ ವಾಹನವನ್ನು (ಟ್ಯಾಕ್ಸಿ, ಟಾಟಾ ಎಸಿ, ಗೂಡ್ಸ್ ವಾಹನ ಇತ್ಯಾದಿ ನಾಲ್ಕು ಚಕ್ರಗಳ ವಾಹನ) ಖರೀದಿಸಲು ಬ್ಯಾಂಕ್ ಮಂಜೂರು ಮಾಡಿದ ಸಾಲದ ಶೇ. 50ರಷ್ಟು ಅಥವಾ ಗರಿಷ್ಠ ರೂ. 3.00 ಲಕ್ಷಗಳ ವರೆಗೆ ಇವುಗಳಲ್ಲಿ ಯಾವುದು ಕಡಿಮೆಯೋ ಅಷ್ಟು ಸಹಾಯಧನವನ್ನು ನಿಗಮದಿಂದ ಮಂಜೂರು ಮಾಡುವುದು. ಸರಕು ವಾಹನ / ಟ್ಯಾಕ್ಸಿ (ಹಳದಿ ಬೋರ್ಡ್) ಖರೀದಿಸುವ ಉದ್ದೇಶಕ್ಕೆ. ಸಾಲದ ಮೊತ್ತದ ಶೇ.75ರಷ್ಟು ಸಹಾಯಧನ ಅಥವಾ ಗರಿಷ್ಠ 4 ಲಕ್ಷ.

ಯೋಜನೆಯಲ್ಲಿ ಪ್ರಯೋಜನ ಪಡೆಯಲು ಇರಬೇಕಾದ ಅರ್ಹತೆಗಳು:
ಈ ಯೋಜನೆಯಲ್ಲಿ ಆರ್ಥಿಕ ಸಹಾಯ ಪಡೆಯಲು ಅಭ್ಯರ್ಥಿಯು ಸರ್ಕಾರದ ಆದೇಶ ಸಂಖ್ಯೆ: ಸಕಇ 225 ಬಿಸಿಎ 2000, ದಿನಾಂಕ:30.03.2002ರಲ್ಲಿ ಗುರುತಿಸಿದ ಪ್ರವರ್ಗ-1, 2ಎ, 3ಎ ಮತ್ತು 3ಬಿಗೆ ಸೇರಿದವರಾಗಿರಬೇಕು. (ವಿಶ್ವಕರ್ಮ ಮತ್ತು ಇದರ ಉಪ ಸಮುದಾಯಗಳು, ಉಪ್ಪಾರ ಮತ್ತು ಇದರ ಉಪ ಸಮುದಾಯಗಳು, ಅಂಬಿಗ ಮತ್ತು ಇದರ ಉಪ ಸಮುದಾಯಗಳು ಸವಿತಾ ಮತ್ತು ಅದರ ಉಪ ಸಮುದಾಯಗಳು, ಮಡಿವಾಳ ಮತ್ತು ಅದರ ಉಪ ಸಮುದಾಯಗಳು, ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗಗಳು ಒಕ್ಕಲಿಗ ಮತ್ತು ಅದರ ಉಪ ಸಮುದಾಯಗಳು, ಲಿಂಗಾಯತ ಮತ್ತು ಅದರ ಉಪ ಸಮುದಾಯಗಳು, ಮರಾಠ ಮತ್ತು ಅದರ ಉಪ ಸಮುದಾಯಗಳು ಮತ್ತು ಮತೀಯ ಅಲ್ಪಸಂಖ್ಯಾತರನ್ನು ಹೊರತುಪಡಿಸಿ)
* ಈ ಯೋಜನೆಯಲ್ಲಿ ಆರ್ಥಿಕ ಸಹಾಯ ಪಡೆಯಲು ಇಚ್ಚಿಸುವ ಅರ್ಜಿದಾರರು ಲಘು ವಾಹನ ಚಾಲನ ಪರವಾನಗಿಯನ್ನು ಹೊಂದಿರಬೇಕು.
* ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ ರೂ.98,000/-ಗಳು ಪಟ್ಟಣ ಪ್ರದೇಶದವರಿಗೆ ರೂ.1,20,000/-ಗಳನ್ನು ಮೀರಿರಬಾರದು.
* ಕರ್ನಾಟಕ ರಾಜ್ಯ ಖಾಯಂ ನಿವಾಸಿಯಾಗಿರಬೇಕು.
ಅರ್ಜಿದಾರರ ವಯಸ್ಸು ಕನಿಷ್ಠ 18 ರಿಂದ 55 ವರ್ಷಗಳ ಮಿತಿಯೊಳಗಿರಬೇಕು.
* ಈ ಹಿಂದೆ/ಈಗಾಗಲೇ ನಿಗಮದ ಯೋಜನೆಗಳಲ್ಲಿ ಸೌಲಭ್ಯ ಪಡೆದಿರಬಾರದು.
* ಈ ಯೋಜನೆಯಲ್ಲಿ ಸವಲತ್ತು ಪಡೆಯ ಬಯಸುವ ಅರ್ಜಿದಾರರು ವಾಸಿಸುತ್ತಿರುವ ವ್ಯಾಪ್ತಿಗೆ ಬರುವ ಬ್ಯಾಂಕ್ ಶಾಖೆಯ ಖಾತೆಯನ್ನು ಕಡ್ಡಾಯವಾಗಿ ಹೊಂದಿರಬೇಕು.
* ಒಂದು ಕುಟುಂಬದ ಒಬ್ಬ ಸದಸ್ಯರಿಗೆ ಮಾತ್ರ ಸೌಲಭ್ಯ ಒದಗಿಸಲಾಗುವುದು.
* ಕಡ್ಡಾಯವಾಗಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಆಧಾರ್ ಸಂಯೋಜನೆಯಾಗಿರುವ ಖಾತೆ ಹೊಂದಿರಬೇಕು.

ಘಟಕ ವೆಚ್ಚ / ಸಾಲದ ಮೊತ್ತ –
ಸ್ವಾವಲಂಬಿ ಸಾರಥಿ ಯೋಜನೆಯಡಿ ನಾಲ್ಕು ಚಕ್ರಗಳ ವಾಹನವನ್ನು (ಟ್ಯಾಕ್ಸಿ, ಟಾಟಾ ಎಸಿ, ಗೂಡ್ಸ್ ವಾಹನ ಇತ್ಯಾದಿ ನಾಲ್ಕು ಚಕ್ರಗಳ ವಾಹನ) ಖರೀದಿಸಲು ಬ್ಯಾಂಕ್ ಮಂಜೂರು ಮಾಡಿದ ಸಾಲದ ಶೇ.50ರಷ್ಟು ಅಥವಾ ಗರಿಷ್ಠ ರೂ.3.00 ಲಕ್ಷಗಳ ವರೆಗೆ ಇವುಗಳಲ್ಲಿ ಯಾವುದು ಕಡಿಮೆಯೋ ಅಷ್ಟು ಸಹಾಯಧನವನ್ನು ನಿಗಮದಿಂದ ಮಂಜೂರು ಮಾಡುವುದು. ಉಳಿದ ಮೊತ್ತವನ್ನು ಬ್ಯಾಂಕ್ / ಹಣಕಾಸು ಸಂಸ್ಥೆಗಳಿಂದ ಸಾಲದ ರೂಪದಲ್ಲಿ ಪಡೆಯುವುದು ಈ ಸಾಲಕ್ಕೆ ಬ್ಯಾಂಕ್ / ಹಣಕಾಸು ಸಂಸ್ಥೆಗಳು ನಿಗದಿಪಡಿಸುವ ಬಡ್ಡಿಯನ್ನು ಪಾವತಿಸಬೇಕು.

ಕೊನೆಯ ದಿನಾಂಕ –
ಅರ್ಜಿ ಸಲ್ಲಿಸಲು ಅಕ್ಟೋಬರ್ 10 ಕೊನೆಯ ದಿನಾಂಕ ನಿಗದಿ ಮಾಡಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ಸಲ್ಲಿಸುವುದು ಹೇಗೆ? ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಹಾಗೂ ಎಲ್ಲ ಯೋಜನೆಗಳ ಮಾಹಿತಿ ಪಡೆಯಲು ಈ ಕೆಳಗೆ ಕೊಟ್ಟಿರುವ ಲಿಂಕ್ ಕ್ಲಿಕ್ ಮಾಡಿ
https://dbcdc.karnataka.gov.in

Spread positive news

Leave a Reply

Your email address will not be published. Required fields are marked *