ಪಿಎಂ ಕಿಸಾನ್ ಯೋಜನೆಯು ಈಗಾಗಲೇ 16 ಕಂತನ್ನು ಫಲಾನುಭವಿಗಳಿಗೆ ನೀಡಿದೆ. ಇನ್ನು ಕೆಲವೇ ದಿನಗಳಲ್ಲಿ 17ನೇ ಕಂತನ್ನು ಕೇಂದ್ರ ಸರ್ಕಾರವು ರೈತರ ಖಾತೆಗೆ ಜಮಾ ಮಾಡಲಿದೆ. ಕೇಂದ್ರ ಸರ್ಕಾರ ಈ 17ನೇ ಕಂತನ್ನು ಯಾವಾಗ ಜಮಾ ಮಾಡುತ್ತದೆ. ಯಾವ ರೈತರಿಗೆ ಜಮಾ ಮಾಡುತ್ತದೆ ಎಂಬುದನ್ನು ಸಂಕ್ಷಿಪ್ತವಾಗಿ ಈ ವಿವರಣೆಯಲ್ಲಿ ನೀಡಿದ್ದೇವೆ ಲೇಖನವನ್ನು ಕೊನೆಯವರೆಗೂ ಓದಿ.
ದೇಶದ ಪ್ರಧಾನ ಮಂತ್ರಿಗಳು ಪಿಎಂ ಕಿಸಾನ್ ಯೋಜನೆಯ 16ನೇ ಕಂತನ್ನು ಕಳೆದ ಫೆಬ್ರುವರಿಯಲ್ಲಿ ಜಮಾ ಮಾಡಿದ್ದರು. ಇದಾಗಿ ಕೆಲವೇ ತಿಂಗಳಿನಲ್ಲಿ ರೈತರು ಮುಂದಿನ ಕಂತು ಜಮೆಯ ವಿವರಣೆಗಾಗಿ ಕಾಯುತ್ತಿದ್ದಾರೆ. ಪಿಎಂ ಕಿಸಾನ್ 17ನೇ ಕಂತಿನ ಬಿಡುಗಡೆಯಾಗುವ ದಿನಾಂಕ ಹಾಗೂ ಸಮಯ ಪರಿಕಲ್ಪನೆಯನ್ನು ಕೆಳಗೆ ನೀಡಿದ್ದೇವೆ.
ಇದೇ ತಿಂಗಳಲ್ಲಿ ಪಿಎಂ ಕಿಸಾನ್ 17ನೇ ಕಂತು ಜಮೆ ಸಾದ್ಯತೆ!
ಕೇಂದ್ರ ಸರ್ಕಾರ ಹಾಗೂ ರೈತಪರ ಯೋಜನೆಯ ಮೂಲಗಳ ಪ್ರಕಾರ ಪಿಎಂ ಕಿಸಾನ್ ಯೋಜನೆಯ 17ನೇ ಕಂತು ಇದೇ ತಿಂಗಳಿನಲ್ಲಿ ಜಮೆಯಾಗಲಿದೆ. ಅಥವಾ ಮುಂಬರುವ ಮೇಯಲ್ಲಿ ಖಂಡಿತ ಜಮಾ ಆಗಲಿದೆ. ಎಂದು ಮೂಲಗಳ ಪ್ರಕಾರ ತಿಳಿದು ಬಂದಿದೆ. ಆದರೆ ಕೆಲ ಮೂಲಗಳ ಪ್ರಕಾರ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದರಿಂದ ಸಂಪೂರ್ಣ ಚುನಾವಣಾ ಮುಕ್ತಾಯದ ನಂತರವೇ 17ನೇ ಕಂತು ಜಮಾ ಆಗಲಿದೆ ಎಂದು ಸ್ಪಷ್ಟವಾಗಿದೆ. ಈ ಎರಡು ಅಂಶಗಳಲ್ಲಿ 17ನೇ ಕಂತು ಜಮಾ ಆಗಲಿದೆ. ಆದರೆ ರೈತರು ತಾವು ಸರಿಯಾಗಿ ತಮ್ಮ ಪಿಎಂ ಕಿಸಾನ್ ಖಾತೆಯನ್ನು ಚೆಕ್ ಮಾಡಿಕೊಳ್ಳಬೇಕು. ಯಾವುದಾದರೂ ತೊಂದರೆ ಅಥವಾ ತಾಂತ್ರಿಕ ದೋಷಗಳಿದ್ದರೆ ಈಗಲೇ ಸರಿಪಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ಜಮೆ ಆಗುವ ದಿನದಂದು ನಿಮಗೆ ತೊಂದರೆ ಕಾಣಿಸಿಕೊಂಡರೆ ನೀವು ಪ್ರಸ್ತುತ 17ನೇ ಕಂತಿನ ಹಣವನ್ನು ಮಿಸ್ ಮಾಡಿಕೊಳ್ಳುತ್ತೀರಿ. ಅದಕ್ಕಾಗಿ ನಿಮ್ಮ ಚೆಕ್ ಲಿಸ್ಟ್ ಸರಿಯಾಗಿದೆಯೋ ಇಲ್ಲವೋ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.
ಯುವ ರೈತರಿಗೆ 20ಲಕ್ಷ ಸಾಲ ಸೌಲಭ್ಯ! ಅರ್ಜಿ ಪ್ರಕ್ರಿಯೆ ಹೇಗಿದೆ ನೋಡಿ!
ಪಿಎಂ ಕಿಸಾನ್ ಯೋಜನೆ ಎಷ್ಟು ರೈತರಿಗೆ ಸಂದಾಯವಾಗುತ್ತದೆ?
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆಯಡಿ ಇದುವರೆಗೂ ದೇಶಾದ್ಯಂತ 9 ಕೋಟಿಗಿಂತ ಹೆಚ್ಚು ರೈತರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಅವರಿಗೆ 16ನೇ ಕಂತಿನಲ್ಲಿ 21 ಸಾವಿರ ಕೋಟಿ ರು ಹಣವನ್ನು ಪ್ರಧಾನಿಯವರು ಬಿಡುಗಡೆ ಮಾಡಿದ್ದರು ವಾರ್ಷಿಕ 6,೦೦೦ ಹಣವನ್ನು ಇದುವರೆಗೂ 16 ಕಂತುಗಳನ್ನು ರೈತರಿಗೆ ಜಮಾ ಮಾಡಿದ್ದಾರೆ. ಏಪ್ರಿಲ್ ಜುಲೈ ಆಗಸ್ಟ್ ನವೆಂಬರ್ ಡಿಸೆಂಬರ್ ಮಾರ್ಚ್ ತಿಂಗಳಂತೆ ಮೂರು ಕಂತು ಕಂತುಗಳಾಗಿ ಈ ಹಣವು ರೈತರ ಖಾತೆಗೆ ನೇರವಾಗಿ ಜಮಾ ಆಗುತ್ತದೆ. ಇದೀಗ ಎಲ್ಲ ರೈತರು ತಮ್ಮ ಪಿ ಎಂ ಕಿಸಾನ್ 17ನೇ ಕಂತಿನ ಎದುರು ನೋಡುತ್ತಿದ್ದಾರೆ.
ಇನ್ನೂ 3 ದಿನಗಳಲ್ಲಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ : IMD ವರದಿ
ರೈತರು ತಮ್ಮ ಪಿಎಂ ಕಿಸಾನ್ ಖಾತೆಯು ಸರಿಯಾಗಿದೆ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಬೇಕು ಅದರಲ್ಲಿ ಮೊದಲು ಈ ಕೆವೈಸಿ ಅತ್ಯಂತ ಕಡ್ಡಾಯವಾಗಿದೆ. ಫಲಾನುಭವಿಗಳು ಈ ಕೆವೈಸಿ ಮಾಡಿಸಿಕೊಳ್ಳುವುದು ಕಡ್ಡಾಯ. ನೀವು ಪಿಎಂ ಕಿಸಾನ್ ಯೋಜನೆಗೆ ಮೊದಲೇ ನೋಂದಾಯಿಸಿರಬೇಕು. ಫಲಾನುಭವಿ ರೈತರು ತಮ್ಮ ಈಕೆ ವೈ ಸಿ ಮಾಡಿಸಿಕೊಂಡು ಅಥವಾ ಬಯೋಮೆಟ್ರಿಕ್ ಆಧಾರ್ ತಿದ್ದುಪಡಿ ಮಾಡಿಕೊಳ್ಳಬೇಕು. ಇದು ಆಗಿರದ ರೈತರಿಗೆ ಪಿಎಂ ಕಿಸಾನ್ 16ನೇ ಕಂತು ಬರುವುದಿಲ್ಲ. ರೈತರು ತಮ್ಮ ಆಧಾರ್ ಈಕೆ ವೈ ಸಿ ಮಾಡಿಸಿಕೊಳ್ಳಲು ಗ್ರಾಮವನ್ ಅಥವಾ ತಮ್ಮ ಹತ್ತಿರದ ಕೃಷಿ ಇಲಾಖೆಗೆ ಭೇಟಿ ನೀಡಬಹುದು.
Agril Drone: ಕೃಷಿ ಡ್ರೋನ್ ರಾಜ್ಯದ ಮಹಿಳೆಯರು ಅರ್ಜಿ ಸಲ್ಲಿಸಬಹುದು!
ನಿಮ್ಮ ಪಿಎಂ ಕಿಸಾನ್ ಸಮ್ಮಾನ್ ನಿಧಿ ಖಾತೆಯ ಸ್ಥಿತಿ ಪರಿಶೀಲಿಸಲು ಈ ಕೆಳಗಿನ ವಿಧಾನ ಅನುಸರಿಸಿ
· ಪಿಎಂ-ಕಿಸಾನ್ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ: https://pmkisan.gov.in/
·ಮುಖಪುಟದಲ್ಲಿ ‘ಫಾರ್ಮರ್ ಕಾರ್ನರ್’ ಆಯ್ಕೆ ಮಾಡಿ.
·ಅದರ ನಂತರ ‘ಫಲಾನುಭವಿ ಸ್ಥಿತಿ’ ಮೇಲೆ ಕ್ಲಿಕ್ ಮಾಡಿ
ಡ್ರಾಪ್-ಡೌನ್ ಮೆನುನಿಂದ ನೀವು ರಾಜ್ಯ, ಜಿಲ್ಲೆ, ಉಪ ಜಿಲ್ಲೆ, ಬ್ಲಾಕ್ ಅಥವಾ ಗ್ರಾಮವನ್ನು ಆಯ್ಕೆ ಮಾಡಬಹುದು.
·ನಿಮ್ಮ ಸ್ಥಿತಿಯನ್ನು ತಿಳಿಯಲು ‘ವರದಿ ಪಡೆಯಿರಿ’ ಮೇಲೆ ಕ್ಲಿಕ್ ಮಾಡಿ.
Cyclone effect: ಚಂಡಮಾರುತ ಎಫೇಕ್ಟ! ರಾಜ್ಯದ ಈ ಜಿಲ್ಲೆಗಳಲ್ಲಿ ಇನ್ನೂ ಮೂರು ದಿನ ಭಾರಿ ಮಳೆ