ರಾಜ್ಯದಲ್ಲಿ ಇನ್ನು 10 ನಿಮಿಷದಲ್ಲಿ ಪೇಪರ್ ಲೆಸ್ `ರಿಜಿಸ್ಟ್ರೇಷನ್’!
ಆಸ್ತಿ ಖರೀದಿದಾರರಿಗೆ ಗುಡ್ ನ್ಯೂಸ್ : ರಾಜ್ಯದಲ್ಲಿ ಇನ್ನು 10 ನಿಮಿಷದಲ್ಲಿ ಪೇಪರ್ ಲೆಸ್ `ರಿಜಿಸ್ಟ್ರೇಷನ್’! ಸ್ವಂತ ಮನೆ, ನಿವೇಶನ ಅಥವಾ ಜಮೀನು ಖರೀದಿಸುವುದು ಪ್ರತಿಯೊಬ್ಬರ ಜೀವಿತಾವಧಿಯ ಅತಿದೊಡ್ಡ ಕನಸುಗಳಲ್ಲಿ ಒಂದು. ಆದರೆ, ಆಸ್ತಿ ಖರೀದಿಗಿಂತಲೂ ಜನರನ್ನು ಹೆಚ್ಚು ಹೈರಾಣಾಗಿಸುತ್ತಿದ್ದುದು ಆಸ್ತಿ ನೋಂದಣಿ (Property Registration) ಪ್ರಕ್ರಿಯೆ. ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ (Sub-Registrar Office) ದಿನಗಟ್ಟಲೆ ಸರದಿಯಲ್ಲಿ ನಿಲ್ಲುವುದು, ಕಂತೆ-ಕಂತೆ ಕಾಗದ ಪತ್ರಗಳನ್ನು ಹಿಡಿದು ಅಲೆಯುವುದು ಮತ್ತು ಮಧ್ಯವರ್ತಿಗಳ ಹಾವಳಿ ಜನಸಾಮಾನ್ಯರಿಗೆ ತಲೆನೋವಾಗಿತ್ತು. ಆದರೆ, ಈಗ ಕರ್ನಾಟಕ…

