ಕೃಷಿ ಹೊಂಡ ಯೋಜನೆ ಮತ್ತೆ ಆರಂಭ. ಅರ್ಜಿ ಸಲ್ಲಿಸಲು ಕೊನೆಯ ಅವಕಾಶ.

ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರ 1000 ದಿನ ಪೂರೈಸುತ್ತಿರುವ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರಿಗೆ ಸಂಬಂಧಿಸಿದ ಸ್ಥಗಿತಗೊಂಡಿದ್ದ ‘ಕೃಷಿಭಾಗ್ಯ ಯೋಜನೆ’ಗೆ ಮರು ಚಾಲನೆ ನೀಡುವುದಾಗಿ ಘೋಷಿಸಿದ್ದಾರೆ. ಇದು ಸೇರಿದಂತೆ ಸರ್ಕಾರದ ಸಾಧನೆಗಳ ಕುರಿತು ಮಹತ್ವದ ಭರವಸೆ ಹಾಗೂ ಸಾಧನೆಗಳನ್ನು ವಿವರಿಸಿದ್ದಾರೆ.

ಕರ್ನಾಟಕ ಸರ್ಕಾರವು ಮಳೆಯಾಶ್ರಿತ ಒಣಭೂಮಿ ರೈತರಿಗಾಗಿ ಜಾರಿಗೊಳಿಸಿರುವ ಪ್ರಮುಖ ಯೋಜನೆ ‘ಕೃಷಿ ಭಾಗ್ಯ’. ಈ ಯೋಜನೆಯು ಕೃಷಿ ಹೊಂಡ ನಿರ್ಮಾಣ, ಪಾಲಿಥೀನ್ ಹೊದಿಕೆ, ಮತ್ತು ಸೂಕ್ಷ್ಮ ನೀರಾವರಿ ಘಟಕಗಳ ಅಳವಡಿಕೆಗೆ ಸಹಾಯಧನ ನೀಡುತ್ತದೆ. ಸಾಮಾನ್ಯ ವರ್ಗಕ್ಕೆ ಶೇ. 80 ಮತ್ತು SC/ST ವರ್ಗಕ್ಕೆ ಶೇ. 90 ರಷ್ಟು ಸಹಾಯಧನ ಲಭ್ಯವಿದ್ದು, ರೈತರ ಆದಾಯ ಹೆಚ್ಚಿಸಲು ಮತ್ತು ನೀರಿನ ಸಮರ್ಥ ಬಳಕೆಗೆ ಇದು ಸಹಕಾರಿಯಾಗಿದೆ.

ಮಳೆಯಾತ್ರಿತ ಕೃಷಿಯಲ್ಲಿ ತೊಡಗಿರುವ ರಾಜ್ಯದ ಲಕ್ಷಾಂತರ ಕುಟುಂಬಗಳಿಗೆ ನಮ್ಮ ಈ ಯೋಜನೆ ಅನಿಶ್ಚಿತತೆಯ ಆತಂಕವನ್ನು ರಾಜ್ಯ ಸರ್ಕಾರ ದೂರ ಮಾಡಿದೆ. ನಮ್ಮ ಸರ್ಕಾರದ ಈ ಅವಧಿಯಲ್ಲಿ ರಾಜ್ಯದಲ್ಲಿ ಹೊಸದಾಗಿ ಒಟ್ಟು 59,181 ಎಕರೆಗೆ ಪ್ರದೇಶಕ್ಕೆ ನೀರಾವರಿ ಸಾಮರ್ಥ್ಯ ಸೃಜನೆ ಮಾಡಲಾಗಿದೆ. ಏತ ನೀರಾವರಿ, ಕೆರೆ, ಕಾಲುವೆಗಳ ಆಧುನೀಕರಣ, ಬ್ರಿಡ್ಜ್ ಕಂ ಬ್ಯಾರೇಜ್‌ ನಿರ್ಮಾಣ ಸೇರಿದಂತೆ ರೂ.9,331 ಕೋಟಿ ವೆಚ್ಚದ 77 ಹೊಸ ಕಾಮಗಾರಿಗಳು ಅನುಷ್ಠಾನಗೊಳ್ಳುತ್ತಿವೆ. ಇದರಿಂದ ನೀರಿಲ್ಲದೆ ಬರಡಾಗಿದ್ದ ಭೂಮಿಗೂ ಇಂದು ಜೀವಜಲ ಹರಿಯುತ್ತಿದೆ ಎಂದು ಅವರು ಸರ್ಕಾರದ ಸಾಧನೆ ವಿವರಿಸಿದರು.

ಕೃಷಿ ಭಾಗ್ಯ ಯೋಜನೆಯ ಮುಖ್ಯಾಂಶಗಳು:

ಉದ್ದೇಶ: ಮಳೆ ನೀರನ್ನು ಸಂಗ್ರಹಿಸಿ, ಬೇಸಿಗೆಯಲ್ಲಿ ರಕ್ಷಣಾತ್ಮಕ ನೀರಾವರಿ (Protective Irrigation) ಒದಗಿಸುವುದು, ಇದರಿಂದ ಮಳೆ ಆಶ್ರಿತ ಬೆಳೆಗಳಿಗೆ ತೊಂದರೆಯಾಗದಂತೆ ತಡೆಯುವುದು.
ಪ್ರಮುಖ ಘಟಕಗಳು ಮತ್ತು ಸಹಾಯಧನ:

  • ಕೃಷಿ ಹೊಂಡ ನಿರ್ಮಾಣ: ಮಳೆ ನೀರು ಸಂಗ್ರಹಣೆಗೆ ಹೊಂಡ ನಿರ್ಮಾಣ.
  • ಪಾಲಿಥೀನ್ ಹೊದಿಕೆ (Plastic Lining): ಹೊಂಡದಲ್ಲಿ ನೀರು ಇಂಗಿ ಹೋಗದಂತೆ ತಡೆಯಲು.
  • ಪಂಪ್‌ಸೆಟ್: ಡೀಸೆಲ್/ಸೋಲಾರ್ ಪಂಪ್‌ಸೆಟ್ ಅಳವಡಿಕೆ.
  • ತುಂತುರು/ಹನಿ ನೀರಾವರಿ: ನೀರನ್ನು ಸಮರ್ಥವಾಗಿ ಬೆಳೆಗೆ ಹಾಯಿಸಲು.
  • ತಂತಿ ಬೇಲಿ: ಕೃಷಿ ಹೊಂಡದ ಸುತ್ತ ಸುರಕ್ಷತೆಗಾಗಿ.

ಈ ಯೋಜನೆಯ ಅರ್ಹತೆ:

  • ಕರ್ನಾಟಕದ ರೈತರಾಗಿರಬೇಕು.
  • ರೈತರ ಗುರುತಿನ ಸಂಖ್ಯೆ (FID) ಕಡ್ಡಾಯ.
  • ಕನಿಷ್ಠ 1 ಎಕರೆ ಮತ್ತು ಅದಕ್ಕಿಂತ ಹೆಚ್ಚಿನ ಭೂಮಿ ಹೊಂದಿರಬೇಕು.
  • ಕಳೆದ 3 ವರ್ಷಗಳಲ್ಲಿ ಪಂಪ್‌ಸೆಟ್/ಹನಿ ನೀರಾವರಿ ಸಬ್ಸಿಡಿ ಪಡೆದಿರಬಾರದು (ಹೊಸಬರಿಗೆ ಅವಕಾಶ).

ಅರ್ಜಿ ಸಲ್ಲಿಸುವ ವಿಧಾನ: ಆಸಕ್ತ ರೈತರು ರೈತ ಮಿತ್ರ (Raitamitra) ವೆಬ್‌ಸೈಟ್ ಅಥವಾ ಸಮೀಪದ ಕೃಷಿ ಇಲಾಖೆ ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದು.

Spread positive news

Leave a Reply

Your email address will not be published. Required fields are marked *