ಅ ಖರಾಬು ಮತ್ತು ಬ ಖರಾಬು ಜಮೀನು ಎಂದರೇನು ಇಲ್ಲಿ ನೋಡಿ

ಅ ಖರಾಬು ಮತ್ತು ಬ ಖರಾಬು: ಜಮೀನಿಗೆ ಸಂಬಂಧಿಸಿದಂತೆ ಪ್ರತಿಯೊಂದು ಮಾಹಿತಿ ರೈತರಿಗೆ ಗೊತ್ತಿರಬೇಕು. ಯಾವುದೇ ರೈತನಾಗಲಿ. ಅವರ ಜಮೀನು ಸುತ್ತಮುತ್ತ ಅಥವಾ ಪಕ್ಷದಲ್ಲಿ ಅ ಖರಾಬು ಜಮೀನು ಎಂದುರೇನು ಈ ಜಮೀನಿನಲ್ಲಿ ಉಳುಮೆ ಮಾಡಿ ಸಕ್ರಮಗೊಳಿಸುವುದು ಹೇಗೆ ಎಂಬುದರ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

ಜಮೀನಿನಲ್ಲಿ ಸಹ ಅ ಖರಾಬು ಮತ್ತು ಬ ಖರಾಬು ಜಮೀನು ಇದ್ದೆ ಇರುತ್ತದೆ. ಅ ಖರಾಬು ಜಮೀನು ಯಾವುದೆಂಬುದರ ಕುರಿತು ಇಲ್ಲಿ ಸಂಪೂರ್ಣ ಮಾಹಿತಿ ನೀಡಲಾಗಿದೆ. ಸರ್ಕಾರ ವತಿಯಿಂದ ಸಾರ್ವಜನಿಕವಾಗಿ ಮೀಸಲಾತಿ ಖರಾಬು ಜಮೀನುಗಳನ್ನು ಪಹಣಿ / RTC ಅಡಿಯಲ್ಲಿ ಬ ಖರಾಬು ಎಂದು ನಮೂದಿಸಿರುತ್ತಾರೆ. ವ್ಯವಸಾಯಕ್ಕೆ ಯೋಗ್ಯವಲ್ಲದ ಖರಾಬುನ್ನು ಅ ಖರಾಬು ಸರ್ಕಾರಿ ಸ್ವತ್ತು ಆಗಿರಿರುವುದಿಲ್ಲ. ಅದರಲ್ಲಿ ಖಾಸಗಿಯವರು ವ್ಯವಸಾಯಕ್ಕೆ ಬಳಸುತ್ತಿಲ್ಲವೆಂದು ಅದಕ್ಕೆ ವ್ಯವಸಾಯ ಜಮೀನಿನ ಕಂದಾಯ ವಿನಾಯ್ತಿ ಕೊಟ್ಟು ಖರಾಬು ಭಾಗಕ್ಕೆ ಸೇರಿಸಿರುತ್ತಾರೆ.

ಅ ಖರಾಬು ಎಂದರೇನು?

ಜಮೀನಿನಲ್ಲಿರುವ ಉಳುಮೆ ಮಾಡಲಿಕ್ಕೆ ಬರದ ಜಮೀನನ್ನು ಬರದ ಜಮೀನನ್ನು ಅ ಖರಾಬು ಜಮೀನು ಎಂದು ಕರೆಯುತ್ತಾರೆ. ಈ ಜಮೀನಿನ ವಿಸ್ತೀರ್ಣ ಮತ್ತು ನಾಕಶ ಇರುತ್ತದೆ. ಆದರೆ ತೆರಿಗೆ ಇರುವುದಿಲ್ಲ. ಸರ್ಕಾರದ ಅಧೀನದಲ್ಲಿರುವುದರಿಂದ ಇದಕ್ಕೆ ತೆರಿಗೆ ಇರುವುದಿಲ್ಲ. ಕೃಷಿ ಮಾಡುಲಿಕ್ಕೆ ಈ ಜಮೀನು ಯೋಗ್ಯವಲ್ಲದ ಕಾರಣ ಇದಕ್ಕೆ ತೆರಿಗೆ ಕಟ್ಟುವ ಅವಶ್ಯಕತೆಯಿಲ್ಲ, ಉದಾರಣೆಗೆ ಗುಡ್ಡ,ಸಣ್ಣ ನಾಲೆ, ಕಣಮನೆ, ಮರಡಿಕೊರಕಲ್ಲು,ಪಾಳು ಜಮೀನು ಆಗಿರಬಹುದು. ಇವೆಲ್ಲಾ ಅ ಖರಾಬು ಜಮೀನಿನಲ್ಲಿ ಬರುತ್ತದೆ. ನಿಮ್ಮ ಜಮೀನಿನಲ್ಲಿರುವ ಅ ಖರಾಬು ಜಮೀನನ್ನು ಸರಿಪಡಿಸಿಕೊಂಡು ಉಳುಮೆ ಮಾಡಬೇಕೆಂದರೆ ನಿಮ್ಮ ಗ್ರಾಮ ಪಂಚಾಯತಿ ತಲಾಟೆ ಅಥವಾ ವಿಲೇಜ್ ಅಕೌಂಟೆಟ್ ನನ್ನು ಭೇಟಿಯಾಗಿ ರೈತರು ವಿಚಾರೀಸಬಹುದು. ಅ ಖರಾಬು ಭೂಮಿಯಲ್ಲಿ ಬೆಳೆ ಬೆಳೆದಿದ್ದರೆ ಅದಕ್ಕೆ ವಿಮೆ ಇರುವುದಿಲ್ಲ. ಬೆಳೆ ಸಮೀಕ್ಷೆ ಮಾಡುವುದಕ್ಕಾಗುವುದಿಲ್ಲ. ಬೆಳೆ ಸಾಲ ಪಡೆಯುವುದಕ್ಕೂ ಆಗುವುದಿಲ್ಲ. ಏಕೆಂದರೆ ಈ ಜಮೀನು ಸರ್ಕಾರದ ಸುಪರ್ದಿಯಲ್ಲಿರುತ್ತದೆ.

ಬ ಖರಾಬು ಎಂದರೇನು ?

ಭೂಮಿಯನ್ನು ಸಾರ್ವಜನಿಕರ ಉಪಯೋಗಕ್ಕೆ ಬಿಟ್ಟಿರುವ ಜಮೀನನ್ನು ಬ ಖರಾಬು ಎಂದು ಕರಿಯುತ್ತಾರೆ. ಉದಾಹರಣೆ ರಸ್ತೆ ಬಂಡಿದಾರಿ, ಸ್ಮಶಾನ ಭೂಮಿ,ಕಾಲುದಾರಿ, ಹಳ್ಳ ಕೊಳ್ಳ, ರಾಜಕಾಲುವೆ, ಹೀಗೆ ಅನೇಕ ಜಮೀನುಗಳು ಬರುತ್ತವೆ. ಬ ಖರಾಬು ಸರ್ಕಾರ ಅಡಿಯಲ್ಲಿ ಬರುತ್ತದೆ.

ಜಮೀನುಗಳಲ್ಲಿ ಪ್ರಕೃತಿದತ್ತವಾಗಿ ಹರಿಯುವ ಹಳ್ಳ ಕೊಳ್ಳ, ರಾಜಕಾಲುವೆ, ಸಾರ್ವಜನಿಕ ಬಳಕೆಗೆ ಉಪಯೋಗವಾಗುವ ಕಾಲುದಾರಿ ಬಿ ಖರಾಬು ಭೂಮಿ ಎನಿಸಿದೆ. ಜತೆಗೆ ಉಳುಮೆ ಮಾಡಲಾಗದ ಪಾಳು ಭೂಮಿ ಕೂಡ ಈ ವರ್ಗಕ್ಕೆ ಸೇರಿದೆ ಇಂತಹ ಭೂಮಿ ಆಯಾ ನಂಬರ್ಗಳ ವ್ಯಾಪ್ತಿಯಲ್ಲಿ ಗುಂಟೆಗಳಷ್ಟು ಪ್ರಮಾಣದಲ್ಲಿ ಇರುತ್ತೇವೆ. ಇವುಗಳ ಸ್ವರೂಪ ಬದಲಿಸುಲು ಕಾನೂನಿನಲ್ಲಿ ಅವಕಾಶವಿಲ್ಲ.

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಗಮನಕ್ಕೆ:
ಗ್ರಾಮ ಪಂಚಾಯಿತಿಯ ಚುನಾವಣೆಗಾಗಿ ನೀವು ಮಾಡುವ ಪ್ರಚಾರ ಹಾಗೂ ಪ್ರತಿನಿತ್ಯದ ಕೆಲಸಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಳ್ಳುವುದರಿಂದ ಜನಾಕರ್ಷಣೆ ಆಗುತ್ತದೆ. ಹಾಗೂ ನಿಮ್ಮ ಕಾರ್ಯ ವೈಖರಿ ಜನರಿಗೆ ತಿಳಿದು ಜನ ನಿಮ್ಮನ್ನು ಬೆಂಬಲಿಸಲು ಮುಂದಾಗುತ್ತಾರೆ. ಆದ್ದರಿಂದ ನಿಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬೇಕಾದ ಪೋಸ್ಟರ್ಗಳು ಹಾಗೂ ವಿಡಿಯೋಗಳನ್ನು ನಾವು ಅತ್ಯುತ್ತಮ ಕಡಿಮೆ ದರದಲ್ಲಿ ಮಾಡಿಕೊಡುತ್ತೇವೆ ನಿಮಗೆ ಹಬ್ಬಗಳಿಗೆ ವಿಶೇಷ ಸಂದರ್ಭಗಳಲ್ಲಿ ಅಥವಾ ಹುಟ್ಟುಹಬ್ಬಗಳಲ್ಲಿ ಶುಭಕೋರುವ ಪೋಸ್ಟರ್ಗಳು ಬೇಕಿದ್ದರೆ ಈ ಕೆಳಗೆ ನೀಡಿರುವ ನಂಬರನ್ನು ಸಂಪರ್ಕಿಸಿ. 9845499218

Spread positive news

Leave a Reply

Your email address will not be published. Required fields are marked *