ಕುರಿ ಟಗರು ಸಾಕಲು ಸರ್ಕಾರದಿಂದ 43,750 ರೂ. ಸಹಾಯಧನ! ಇಂದೇ ಅರ್ಜಿ ಹಾಕಿ
ಸಹಾಯಧನ: ನಿರ್ದಿಷ್ಟ ಸಮುದಾಯಕ್ಕೆ ಮಾತ್ರ ಸೀಮಿತವಾಗಿದ್ದ ಕುರಿ ಸಾಕಾಣಿಕೆ ಇಂದು ಲಾಭದಾಯಕ ಹಾಗೂ ವೃತ್ತಿಪರ ಉದ್ಯೋಗವಾಗಿ ರೂಪಾಂತರಗೊಂಡಿದೆ. ಹೆಚ್ಚುತ್ತಿರುವ ಯುವಕರ ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ರಾಜ್ಯದ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಜೀವನಮಟ್ಟ ಸುಧಾರಣೆ ಹಾಗೂ ಗ್ರಾಮೀಣ ಆರ್ಥಿಕತೆಯ ಬಲವರ್ಧನೆಗಾಗಿ ಕರ್ನಾಟಕ ಸರ್ಕಾರ ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯು ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಆರ್ಥಿಕವಾಗಿ ಹಿಂದುಳಿದ ಸದಸ್ಯರಿಗೆ ಸುಸ್ಥಿರ ಜೀವನೋಪಾಯ ಒದಗಿಸುವ ಗುರಿ ಹೊಂದಿದೆ. ಏನಿದು ಅಮೃತ ಸ್ವಾಭಿಮಾನಿ…

