ಗೃಹಲಕ್ಷಿಯರಿಗೆ : ಗೃಹಲಕ್ಷ್ಮಿಯರಿಗೆ ರಾಜ್ಯ ಸರ್ಕಾರದಿಂದ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ಮಹಿಳೆಯರಿಗೆ 30,000 ರೂ.ನಿಂದ 3 ಲಕ್ಷ ರೂಪಾಯಿವರೆಗೆ ವೈಯಕ್ತಿಕ ಸಾಲ ಪಡೆಯಬಹುದಾಗಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ. ವೈಯಕ್ತಿಕ ಸಾಲವನ್ನು 6 ಲಕ್ಷ ರೂಪಾಯಿಗೆ ಹೆಚ್ಚಳ ಮಾಡುವಂತೆ ಬ್ಯಾಂಕುಗಳಿಗೆ ಮನವಿ ಮಾಡಿದ್ದಾರೆ.
ಮೊದಲು ನೋಂದಣಿ ಮಾಡಿಕೊಂಡವರಿಗೆ ಸಾಲ ಸೌಲಭ್ಯ ಸಿಗಲಿದೆ. ರಾಷ್ಟ್ರೀಕೃತ ಬ್ಯಾಂಕುಗಳ ಬಡ್ಡಿ ದರದ ಅನ್ವಯ ಕಡಿಮೆ ದರದಲ್ಲಿ ಸಾಲ ಸೌಲಭ್ಯ ಸಿಗಲಿದೆ. ಕೇವಲ ಆರು ತಿಂಗಳಲ್ಲಿ ಸಾಲ ಸಿಗಲಿದ್ದು, ತಿಂಗಳಿಗೆ 200 ರೂಪಾಯಿಯಂತೆ 6 ತಿಂಗಳು ಹಣ ಕಟ್ಟಿದರೆ ಸದಸ್ಯತ್ವ ಸಿಗುತ್ತದೆ ಎಂದು ತಿಳಿಸಿದ್ದಾರೆ.
ಗೃಹಲಕ್ಷಿಯರಿಗೆ ಸಾಲ ಪಡೆಯುವ ಪ್ರಕ್ರಿಯೆ ಮತ್ತು ನಿಯಮಗಳು –
- ಮೊದಲು ನೋಂದಣಿ ಮಾಡಿಕೊಂಡ ಮಹಿಳೆಯರಿಗೆ ಈ ಸಾಲ ಸೌಲಭ್ಯದ ಪ್ರಯೋಜನ ಸಿಗಲಿದೆ.
- ಅರ್ಹ ಗೃಹಲಕ್ಷ್ಮಿಯರು ಕೇವಲ ಆರು ತಿಂಗಳಲ್ಲಿ ವೈಯಕ್ತಿಕ ಸಾಲ ಪಡೆಯಬಹುದು.
- ಸದಸ್ಯತ್ವ ಪಡೆಯಲು ತಿಂಗಳಿಗೆ ಕೇವಲ 200 ರಂತೆ ಆರು ತಿಂಗಳವರೆಗೆ ಹಣ ಕಟ್ಟಬೇಕಾಗುತ್ತದೆ.
- ರಾಷ್ಟ್ರೀಕೃತ ಬ್ಯಾಂಕುಗಳ ಪ್ರಸ್ತುತ ಬಡ್ಡಿ ದರಗಳ ಅನ್ವಯ ಈ ಸಾಲ ದೊರೆಯಲಿದೆ.
- ಈ ಸಾಲವನ್ನು ಪಡೆಯಲು ಅಗತ್ಯವಿರುವ ದಾಖಲೆಗಳ ಪ್ರಮಾಣವು ಅತ್ಯಂತ ಕಡಿಮೆ ಇರಲಿದೆ.
- ಈ ಹೊಸ ಉಪಕ್ರಮವು ಗೃಹಲಕ್ಷ್ಮಿಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಮತ್ತು ತಮ್ಮ ಸಣ್ಣ ಉದ್ಯಮಗಳನ್ನು ಪ್ರಾರಂಭಿಸಲು ಉತ್ತೇಜನ ನೀಡುವ ಗುರಿಯನ್ನು ಹೊಂದಿದೆ.
ಹೆಚ್ಚುವರಿ ಪರಿಹಾರದ ವಿವರ..?
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ, ಬೆಳೆ ನಷ್ಟಕ್ಕೆ ಪರಿಹಾರವಾಗಿ ಪ್ರತಿ ಹೆಕ್ಟೇರ್‌ಗೆ 8,500 ರೂಪಾಯಿ ಹೆಚ್ಚುವರಿ ಇನ್‌ಪುಟ್ ಸಬ್ಸಿಡಿಯನ್ನು ನೀಡಲು ತೀರ್ಮಾನಿಸಲಾಗಿದೆ.
ಈ ಪರಿಷ್ಕೃತ ಪರಿಹಾರವು ಮಳೆಯಾಶ್ರಿತ, ನೀರಾವರಿ ಮತ್ತು ಬಹುವಾರ್ಷಿಕ ಬೆಳೆಗಳಿಗೆ ಈ ಕೆಳಗಿನಂತೆ ವಿತರಿಸಲಾಗುತ್ತದೆ:
- ಮಳೆಯಾಶ್ರಿತ ಬೆಳೆಗಳು: ಈ ಹಿಂದೆ ಪ್ರತಿ ಹೆಕ್ಟೇರ್‌ಗೆ 8,500 ರೂ. ಇದ್ದ ಪರಿಹಾರವನ್ನು ಈಗ 17,000 ರೂ.ಗೆ ಹೆಚ್ಚಿಸಲಾಗಿದೆ.
- ನೀರಾವರಿ ಬೆಳೆಗಳು: ಈ ಹಿಂದೆ 17,000 ರೂ. ಇದ್ದ ಪರಿಹಾರವನ್ನು 25,500 ರೂ.ಗೆ ಏರಿಕೆ ಮಾಡಲಾಗಿದೆ.
- ಬಹುವಾರ್ಷಿಕ ಬೆಳೆಗಳು: ಈ ಹಿಂದೆ 22,500 ರೂ. ಇದ್ದ ಪರಿಹಾರವನ್ನು 31,000 ರೂ.ಗೆ ಹೆಚ್ಚಿಸಲಾಗಿದೆ.
ಈ ಪರಿಹಾರವು ಗರಿಷ್ಠ ಎರಡು ಹೆಕ್ಟೇರ್‌ಗೆ ಸೀಮಿತವಾಗಿದ್ದು, ರೈತರಿಗೆ ತಮ್ಮ ಆರ್ಥಿಕ ತೊಂದರೆಯನ್ನು ಸ್ವಲ್ಪ ಮಟ್ಟಿಗೆ ನೀಗಿಸಲು ಸಹಾಯಕವಾಗಲಿದೆ.
ಒಂದು ರಾಷ್ಟ್ರ ಒಂದು ಪಡಿತರ ಚೀಟಿ (ONORC) ಯೋಜನೆಯ ಭಾಗ:
ಇದು ಹೊಸ ಡಿಜಿಟಲ್ ರೇಷನ್ ಕಾರ್ಡ್ ಕೇಂದ್ರ ಸರ್ಕಾರದ ಒಂದು ರಾಷ್ಟ್ರ ಒಂದು ಪಡಿತರ ಚೀಟಿ (One Nation, One Card) ಯೋಜನೆಯಡಿ ದೇಶದ ಯಾವುದೇ ರಾಜ್ಯದಲ್ಲಿರುವ ನ್ಯಾಯಬೆಲೆ ಅಂಗಡಿ ಅಥವಾ ಪಡಿತರ ಕೇಂದ್ರದಿಂದ ನೀವು ಸುಲಭವಾಗಿ ಪಡಿತರ ಪಡೆಯಬಹುದು. ಇದು ನಿಮ್ಮ ಕಾರ್ಡ್ ಸಂಖ್ಯೆ ಮತ್ತು ಆಧಾರ್ ಸಂಖ್ಯೆಯೊಂದಿಗೆ ನೇರವಾಗಿ ಜೋಡಿಸಲ್ಪಟ್ಟಿರುತ್ತದೆ. ಹಾಗಾದ್ರೆ ಡಿಜಿಟಲ್ ರೇಷನ್ ಕಾರ್ಡ್ ಪ್ರಮುಖ ಪ್ರಯೋಜನಗಳೇನು ಮತ್ತು ಇದಕ್ಕಾಗಿ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಡೌನ್ಲೋಡ್ ಮಾಡುವುದು ಹೇಗೆ ಎಲ್ಲವನ್ನು ತಿಳಿಯಿರಿ.
ಹೊಸ ಡಿಜಿಟಲ್ ರೇಷನ್ ಕಾರ್ಡ್ (Digital Ration Card) ಪ್ರಮುಖ ಪ್ರಯೋಜನಗಳು:
* ಸುರಕ್ಷತೆ ಮತ್ತು ಸುಲಭ ಲಭ್ಯತೆ: ನಿಮ್ಮ ಫೋನ್ಲ್ಲಿ ಇರುವುದರಿಂದ ಡಿಜಿಟಲ್ ರೇಷನ್ ಕಾರ್ಡ್ ಕಳೆದುಹೋಗುವ ಅಥವಾ ಹಾಳಾಗುವ ಭಯವಿಲ್ಲ. ತುರ್ತು ಸಂದರ್ಭದಲ್ಲಿ ನೀವು ಇದನ್ನು ಸುಲಭವಾಗಿ ತೋರಿಸಬಹುದು.
* ಪಾರದರ್ಶಕತೆ ಮತ್ತು ಭ್ರಷ್ಟಾಚಾರ ನಿಯಂತ್ರಣ: ಇದು ಪಡಿತರ ವಿತರಣಾ ವ್ಯವಸ್ಥೆಯನ್ನು ಹೆಚ್ಚು ಪಾರದರ್ಶಕಗೊಳಿಸುತ್ತದೆ. ನಕಲಿ ಕಾರ್ಡ್ಗಳನ್ನು ತಡೆಯಲು ಸಹಾಯ ಮಾಡುತ್ತದೆ. ನ್ಯಾಯಬೆಲೆ ಅಂಗಡಿಗಳಲ್ಲಿ ನೀವು ಎಷ್ಟು ಪಡಿತರ ತೆಗೆದುಕೊಂಡಿದ್ದೀರಿ ಎಂಬುದರ ಮಾಹಿತಿ ದಾಖಲಾಗುತ್ತದೆ.
* ವಲಸೆ ಕಾರ್ಮಿಕರಿಗೆ ಸಹಾಯಕ: ಕೆಲಸ ಅರಸಿ ಬೇರೆ ರಾಜ್ಯಗಳಿಗೆ ಹೋಗುವ ವಲಸೆ ಕಾರ್ಮಿಕರಿಗೆ ಇದು ತುಂಬಾ ಉಪಯುಕ್ತವಾಗಿದೆ. ಅವರು ಯಾವುದೇ ರಾಜ್ಯದಲ್ಲಿ ತಮ್ಮ ಪಡಿತರವನ್ನು ಪಡೆಯಲು ಸಾಧ್ಯವಾಗುತ್ತದೆ.
* ಗುರುತಿನ ಪುರಾವೆ: ಇದು ಸರ್ಕಾರಿ ಯೋಜನೆಗಳ ಲಾಭ ಪಡೆಯಲು ಮತ್ತು ಗುರುತಿನ ಪುರಾವೆಯಾಗಿ ಬಳಸಲು ಸಹ ಉಪಯುಕ್ತವಾಗಿದೆ.

