ಇಸ್ವತ್ತು ಪಡೆಯಲು ಬೇಕಾದ 12 ಕಡ್ಡಾಯ ದಾಖಲೆಗಳ ಪಟ್ಟಿ.

ಇಸ್ವತ್ತು : ಪ್ರೀಯ ಸಾರ್ವಜನಿಕರೇ ಇವತ್ತು ನಾವು ಒಂದು ಹೊಸ ವಿಷಯದ ಬಗ್ಗೆ ಮಾಹಿತಿ ನೀಡುತ್ತೇನೆ. ಸಾರ್ವಜನಿಕರು ಇದರ ಬಗ್ಗೆ ಮಾಹಿತಿ ಪಡೆಯಬೇಕು. ಮತ್ತು ಸರ್ಕಾರದಿಂದ ಬರುವ ಎಲ್ಲಾ ಯೋಜನೆಗಳ ಬಗ್ಗೆ ಮಾಹಿತಿ ಪಡೆದು ಸದುಪಯೋಗ ಪಡೆದುಕೊಳ್ಳಬೇಕು. ಗ್ರಾಮ ಪಂಚಾಯತಿಗಳ ಸ್ವಂತ ಸಂಪನ್ಮೂಲ ಹೆಚ್ಚಿಸುವ ಉದ್ದೇಶದೊಂದಿಗೆ ಅಕ್ರಮ ಲೇಔಟ್‌ಗಳ ನಿವೇಶನಗಳಿಗೆ ಇ-ಖಾತಾ ನೀಡಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಇಲಾಖೆ ಅಭಿವೃದ್ಧಿಪಡಿಸಿರುವ ಇ-ಸ್ವತ್ತು 2.0 ತಂತ್ರಾಂಶಕ್ಕೆ ಚಾಲನೆ ನೀಡಲಾಗಿದ್ದು, ಇನ್ಮುಂದೆ ಇ-ಸ್ವತ್ತು ಪಡೆಯಲು ಮತ್ತಷ್ಟು ಸುಲಭವಾಗಿದೆ.

ಅದೇ ರೀತಿ ಈಗ ಸರ್ಕಾರವು ಗ್ರಾಮಗಳ ಅಭಿವೃದ್ಧಿಗೆ ಸಂಪೂರ್ಣ ಒತ್ತು ನೀಡಿದೆ. ರೈತರು ಸಹ ಉತ್ಸುಕರಾಗಿ ಇದರ ಬಗ್ಗೆ ಮಾಹಿತಿ ಪಡೆದು ಸದುಪಯೋಗ ಪಡೆದುಕೊಳ್ಳಬೇಕು. ಈಗಾಗಲೇ ಗ್ರಾಮ ಪಂಚಾಯತಿಗಳ ಸ್ವಂತ ಸಂಪನ್ಮೂಲ ಹೆಚ್ಚಿಸುವ ಮತ್ತು ಆಸ್ತಿ ಮಾಲೀಕರಿಗೆ ಕಾನೂನುಬದ್ಧ ಹಕ್ಕು ನೀಡುವ ಉದ್ದೇಶದೊಂದಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಇ-ಸ್ವತ್ತು 2.0 ತಂತ್ರಾಂಶವನ್ನು ಅಭಿವೃದ್ಧಿಪಡಿಸಿದ್ದು, ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕೃತ ಚಾಲನೆ ನೀಡಲಿದ್ದಾರೆ.

ಅಕ್ರಮ ಲೇಔಟ್ ಆಸ್ತಿಗಳಿಗೂ ಸಿಗಲಿದೆ ಮುಕ್ತಿ
ಗ್ರಾಮಠಾಣಗಳ ಹೊರಗೆ ಭೂಪರಿವರ್ತನೆ ಮಾಡಿಸದೆ, ಮನೆ ನಿರ್ಮಿಸಿಕೊಂಡು ನೆಲೆಸಿರುವ ಜನರಿಗೆ ಈ ಯೋಜನೆಯಿಂದ ಭಾರೀ ಅನುಕೂಲವಾಗಲಿದೆ. ಈಗಾಗಲೇ ಇಂತಹ ಬಡಾವಣೆಗಳಿಗೆ ಕುಡಿಯುವ ನೀರು, ಬೀದಿ ದೀಪ, ರಸ್ತೆ, ಚರಂಡಿ ಮುಂತಾದ ಮೂಲಸೌಕರ್ಯಗಳನ್ನು ಪಂಚಾಯತಿಗಳು ಒದಗಿಸುತ್ತಿವೆ. ಆದರೆ ತೆರಿಗೆ ಸಂಗ್ರಹವಾಗದ ಕಾರಣ ಗ್ರಾಮ ಪಂಚಾಯತಿಗಳಿಗೆ ಇದು ಆರ್ಥಿಕ ಹೊರೆಯಾಗಿ ಪರಿಣಮಿಸಿತ್ತು.

ಗ್ರಾಮಠಾಣಗಳ ಹೊರಗೆ ಭೂಪರಿವರ್ತನೆ ಮಾಡಿಸದೆ, ಮನೆ ನಿರ್ಮಿಸಿಕೊಂಡು ನೆಲೆಸಿರುವ ಜನರಿಗೆ ಕುಡಿಯುವ ನೀರು, ಬೀದಿ ದೀಪ, ನೀಡಲಾಗಿದೆ. ರಸ್ತೆ, ಚರಂಡಿ ಇತ್ಯಾದಿ ನಾಗರಿಕ ಸೌಲಭ್ಯಗಳನ್ನು ಇದರಿಂದಾಗಿ ಗ್ರಾಮ ಪಂಚಾಯತಿಗಳಿಗೆ ಆರ್ಥಿಕವಾಗಿ ಹೊರೆಯಾಗುತ್ತಿದೆ. ಈ ಕಾರಣದಿಂದಾಗಿ ರಾಜ್ಯ ಸರ್ಕಾರ ಕರ್ನಾಟಕ ಗ್ರಾಮ ಸ್ವರಾಜ್ ಹಾಗೂ ಪಂಚಾಯತ್‌ರಾಜ್ ಅಧಿನಿಯಮ-1993 ಪ್ರಕರಣ 199ಕ್ಕೆ ತಿದ್ದುಪಡಿ ತಂದು ಪ್ರಕರಣ 199ಬಿ ಮತ್ತು 199ಸಿ ಸೇರಿಸಿ ಏ.7ರಂದು ಅಧಿಸೂಚನೆ ಹೊರಡಿಸಿದೆ. ಇದರನ್ವಯ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ (ಗ್ರಾಮ ಪಂಚಾಯತಿಗಳ ತೆರಿಗೆ, ದರ ಮತ್ತು ಶುಲ್ಕ) ನಿಯಮ-2025ನ್ನು ರೂಪಿಸಿದೆ.

ಹೊಸ ಆಸ್ತಿಗಳ ತೆರಿಗೆ ವ್ಯಾಪ್ತಿಗೆ ಕ್ರಮಗಳು, ತೆರಿಗೆ ನಿರ್ಧರಣಾ ವಿಧಾನಗಳ ಬಗ್ಗೆ ನಿಯಮಗಳಲ್ಲಿ ತಿಳಿಸಲಾಗಿದೆ. ಪಂಚಾಯತಿ ವ್ಯಾಪ್ತಿಯಲ್ಲಿ ಹೊಸ ಬಡಾವಣೆಗಳ ಅನುಮೋದನೆಗೆ ಅನುಸರಿಸಬೇಕಾದ ಕ್ರಮಗಳ ಬಗ್ಗೆಯೂ ಉಲ್ಲೇಖಿಸಲಾಗಿದೆ. ಗ್ರಾಮ ಪಂಚಾಯತಿ, ತಾಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿ ಅಧಿಕಾರಿಗಳ ಜವಾಬ್ದಾರಿ, ಕಾಲಾವಧಿ, ಅಪೀಲು ಹೀಗೆ ಪ್ರತಿಯೊಂದು ವಿಷಯದಲ್ಲಿ ಯಾವುದೇ ಗೊಂದಲಕ್ಕೆ ಆಸ್ಪದ ಇಲ್ಲದಂತೆ ವಿವರಿಸಲಾಗಿದೆ.

ಇ-ಸ್ವತ್ತು ಪಡೆಯಲು ನೀಡಬೇಕಾದ ದಾಖಲಾತಿಗಳು –
1 ಋಣಭಾರ ಪ್ರಮಾಣ ಪತ್ರ (ನಮೂನೆ-15)
2.ಸೇಲ್ ಡೀಡ್ / ಸ್ವತ್ತಿನ ಕಾರ್ಡ್ / ಪಿತ್ರಾರ್ಜಿತ ಆಸ್ತಿ/ ಆಸ್ತಿ ವಿಭಜನೆ / ಗಿಫ್ಟ್ ಡೀಡ್ / ವಿಲ್ / ಹಕ್ಕುಪತ್ರ / ರಿಲೀಜ್ ಡೀಡ್ / ವರ್ಗಾವಣೆ / ಸೆಟ್ಸ್‌ಮೆಂಟ್ / ನ್ಯಾಯಾಲಯದ ಆದೇಶ / ಒಟ್ಟುಗೂಡಿಸು / ವಿಭಾಗ ಪತ್ರ / ಅದಲು ಬದಲು / ಇತರೆ ನೋಂದಾಯಿತ ಪತ್ರ (ನಮೂದಿಸು)
3 ಹಕ್ಕುಪತ್ರ
4 ಭೂ ಪರಿವರ್ತಿತ ದಾಖಲಾತಿಗಳು.
5.ಅನುಮೋದಿತ ಬಡಾವಣೆ ನಕ್ಷೆ/ ಏಕನಿವೇಶನ ನಕ್ಷೆ (ಭೂ ಪರಿವರ್ತನೆಯಾದ)
6.ಕರ್ನಾಟಕ ಭೂ ಕಂದಾಯ ಕಾಯಿದೆ 164 ರ ಸೆಕ್ಷನ್ 94 ಸಿ ಅಡಿ ವಿತರಿಸಿದ ಹಕ್ಕು ಪತ್ರ
7.ಕಟ್ಟಡವಾಗಿದ್ದಲ್ಲಿ ವಿದ್ಯುತ್‌ ರಸೀದಿ
8.ಕಂದಯ ಪಾವತಿ ರಸೀದಿ
9.ಆಧಾರ್ ಹೊರತುಪಡಿಸಿ ಗುರುತಿನ ಚೀಟಿ(ಮತದಾರರ ಗುರುತಿನ ಚೀಟಿ ಪ್ಯಾನ್ ಕಾರ್ಡ್, ಪಾಸ್ ಪೋರ್ಟ್ ಇತ್ಯಾದಿ)
10.ಆಸ್ತಿಯೊಂದಿಗೆ ನಿಂತು ತೆಗೆಸಿದ ಛಾಯಾಚಿತ್ರ.
11 ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ
12.ಪೌತಿ ಸಂಬಂಧ ಕರನಿರ್ಧರಣೆ ಪಟ್ಟಿ ಬದಲಾವಣೆಯಾಗಿದ್ದಲ್ಲಿ ವಂಶವೃಕ್ಷ ಹಾಗೂ ಮರಣ ಪ್ರಮಾಣ ಪತ್ರ.

ತೊಗರಿಯಲ್ಲಿ ಕಾಯಿಕೊರಕದ (ಹೆಲಿಕೊವರ್ಪಾ) ನಿರ್ವಹಣೆಗಾಗಿ ಶೇ. 25-50ರಷ್ಟು ಹೂ ಬಿಡುವ ಸಮಯದಲ್ಲಿ ಮತ್ತು ಕಾಯಿ ಬಲಿಯುವ ಹಂತದಲ್ಲಿದ್ದಾಗ ಮೀಟರಿಗೆ 1 ಕೀಡೆ ಅಥವಾ 10 ಗಿಡಗಳಲ್ಲಿ 1 ಕೀಡೆ ಕಂಡುಬಂದಾಗ ಅಥವಾ ಪ್ರತಿ ಗಿಡದಲ್ಲಿ 2 ತತ್ತಿ ಅಥವಾ ಒಂದು ಕೀಡೆ ಕಾಣಿಸಿಕೊಂಡರೆ ಮೊದಲನೆ ಸಿಂಪರಣೆಯಾಗಿ ತತ್ತಿ ನಾಶಕಗಳಾದ 0.6 ಗ್ರಾಂ. ಥೈಯೊಡಿಕಾರ್ಬ 75ಡಬ್ಲೂ.ಪಿ. ಅಥವಾ 2 ಮಿ.ಲೀ.ಪ್ರೊಪೆನೊಫಾಸ್ 50 ಇ.ಸಿ.ಅಥವಾ 0.6ಗ್ರಾಂ. ಮಿಥೋಮಿಲ್ 40 ಎಸ್.ಪಿ.ಯನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.

ಕಡಲೆಯಲ್ಲಿ ಕಾಯಿಕೊರಕದ ನಿಯಂತ್ರಣಕ್ಕಾಗಿ ಪ್ರತಿ ಲೀಟರ ನೀರಿನಲ್ಲಿ 2 ಗ್ರಾಂ.ಇಮಾಮೆಕ್ಟಿನ್ ಬೆಂಝೋಯೇಟ್ ಬೆರೆಸಿ ಸಿಂಪಡಿಸಬೇಕು. ಬೆಳೆಯ 35 ರಿಂದ 40 ದಿವಸದ ಬೆಳೆಯಲ್ಲಿ ಕುಡಿ ಚಿವುಟಬೇಕು. ಹಾಗೂ 20 ಪಿಪಿಎಮ್ ಎನ್.ಎ.ಎ.ಸಿಂಪಡಿಸುವುದರಿಂದ ಹೆಚ್ಚಿನ ಇಳುವರಿ ಪಡೆಯಬಹುದು.

Spread positive news

Leave a Reply

Your email address will not be published. Required fields are marked *