ರೇಷನ್ ಕಾರ್ಡ:ಪ್ರೀಯ ರೈತರೇ ಸರ್ಕಾರವು ದಿನೇ ದಿನೇ ರೈತರಿಗೆ ಸಂಕಷ್ಟ ಎದುರು ಮಾಡುತ್ತಿದೆ. ಸರ್ಕಾರವು ತಂದಿರುವ ಕೆಲವು ಯೋಜನೆಗಳು ಒಬ್ಬರಿಗೆ ಲಾಭ ಒಬ್ಬರಿಗೆ ನಷ್ಟ ಎನ್ನುವಂತೆ ಇದೆ. ಏಕೆಂದರೆ ಗ್ಯಾರಂಟಿ ಯೋಜನೆಗಳ ಭರವಸೆ ಮೂಲಕ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ, ಇದೀಗ ಈ ಯೋಜನೆಗಳ ಅನುಷ್ಠಾನಕ್ಕಾಗಿ ಲಭ್ಯವಿರುವ ಸಂಪನ್ಮೂಲ ಕ್ರೋಢೀಕರಿಸಲು ಪರದಾಡುತ್ತಿದೆ. ರಾಜ್ಯ ಸರ್ಕಾರ ಇದೀಗ ಹೊಸ, ಹೊಸ ಫಲಾನುಭವಿಗಳ ಮಾರ್ಗಗಳ ಸಂಖ್ಯೆಯನ್ನು ಕಡಿತಗೊಳಿಸಲು ಮುಂದಾಗಿದೆ.
ಈ ಮೂಲಕ ಸರ್ಕಾರವು ಈಗ ಜಾರಿಗೆ ತಂದಿರುವ ಯೋಜನೆಗಳಲ್ಲಿ ಗೃಹಜ್ಯೋತಿ ಒಂದು, ಈ ಯೋಜನೆಯಡಿ ಸರ್ಕಾರವು ಮಾಸಿಕ 200 ಯೂನಿಟ್ ವರೆಗೆ ವಿದ್ಯುತ್ ಬಳಸುವ ಫಲಾನುಭವಿ ಗ್ರಾಹಕರಿಗೆ ವಿದ್ಯುತ್ ಶುಲ್ಕ ಇರುವುದಿಲ್ಲ. ಸಂಪೂರ್ಣ ವಿದ್ಯುತ್ ಫ್ರೀ ಮಾಡಿತ್ತು, ಹೀಗಾಗಿ ಗ್ರಾಹಕರು ಸರಾಸರಿ ಬಳಕೆ ವಿದ್ಯುತ್ತನ್ನು ಮಾನದಂಡವಾಗಿಟ್ಟುಕೊಂಡು ಪ್ರತಿ ತಿಂಗಳಿಗೆ ಗರಿಷ್ಠ ಬಳಕೆ ಮಿತಿಯನ್ನು ವಿಧಿಸಲಾಗಿದೆ.
ಹೀಗಾಗಿ ಫಲಾನುಭವಿ ಗ್ರಾಹಕರು ಬಳಸುವ ವಿದ್ಯುತ್ ಮಿತಿಯನ್ನು ದಾಟಿದ ನಂತರ 200 ಯೂನಿಟ್ ವಿದ್ಯುತ್ನವರೆಗೆ ಹೆಚ್ಚುವರಿ ಬಳಕೆಗೆ ಮಾತ್ರ ಶುಲ್ಕ ನೀಡಬೇಕು. ಅದನ್ನು ಬಿಟ್ಟು ಇನ್ನೂರು ಯೂನಿಟ್ ದಾಟಿದ ನಂತರ ಪೂರ್ಣ ಪ್ರಮಾಣದ ಶುಲ್ಕ ಭರಿಸಬೇಕಾಗಿದೆ.
ಕಾರ್ಡುಗಳ ಪರಿಷ್ಕರಣೆಗೆ ವಿದ್ಯುತ್ ಬಳಕೆಯನ್ನು ಮಾನದಂಡ ರಾಜ್ಯ ಸರ್ಕಾರ ವಾಗಿರಿಸಿಕೊಳ್ಳಲು ತೀರ್ಮಾನಿಸಿದೆ. ದೇಶದಲ್ಲೇ ಅತ್ಯಧಿಕ ಪ್ರಮಾಣದ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ರಾಜ್ಯ ಕರ್ನಾಟಕವಾಗಿದೆ. ಇದೀಗ ಕಾರ್ಡು ಪರಿಷ್ಕರಣೆಗೆ ಹೊಸ ನಿಯಮವೊಂದನ್ನು ಅಳವಡಿಸಿಕೊಳ್ಳ ಇದೀಗ, ಬಿ.ಪಿ.ಎಲ್. ಆಗಿದೆ. ಇದರ ಅನ್ವಯ ಇನ್ನು ಮುಂದೆ ಮಾಸಿಕ 150 ಯೂನಿಟ್ ವಿದ್ಯುತ್ ಬಳಸುವ ಗ್ರಾಹಕರನ್ನು ಬಿಪಿಎಲ್ ವ್ಯಾಪ್ತಿಯಿಂದ ಹೊರಗಿಡಲಾಗುತ್ತದೆ.
ರೈತರ ಕೃಷಿ ಪಂಪ್ಸೆಟ್ಗಳಿಗೆ ಹಗಲು ಹೊತ್ತಿನಲ್ಲಿ ಏಳು ಗಂಟೆಗಳ ಕಾಲ ವಿದ್ಯುತ್ ನೀಡಲು ಕುಸುಮ್-ಬಿ ಮತ್ತು ಸಿ ಯೋಜನೆಗಳಿಗೆ ಸರ್ಕಾರ ಆದ್ಯತೆ ನೀಡುತ್ತಿದೆ ಎಂದು ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ. ಕುಸುಮ್-ಬಿ ಯೋಜನೆಯಡಿ ಸೋಲಾರ್ ವಿದ್ಯುತ್ ಕಲ್ಪಿಸಲಾಗುವುದು ಮತ್ತು ಸಬ್ಸಿಡಿಯನ್ನು ಹೆಚ್ಚಿಸಲಾಗಿದೆ. ಅಲ್ಲದೆ, ಅಕ್ರಮ ಪಂಪ್ಸೆಟ್ಗಳನ್ನು ಸಕ್ರಮಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ ಮತ್ತು ಶೀಘ್ರ ಸಂಪರ್ಕ ಯೋಜನೆ ಜಾರಿಗೆ ತರಲಾಗಿದೆ.
ಕಾರ್ಡುದಾರ ಕುಟುಂಬವು ಮಾಸಿಕ 150 ಯೂನಿಟ್ ವಿದ್ಯುತ್ ಬಳಕೆ ಮಾಡಿದರೆ ಅವರಿಗೆ ಬಿಪಿಎಲ್ ಕಾರ್ಡ್ ಅನ್ವಯ ದೊರೆಯುತ್ತಿರುವ ಉಚಿತ ಪಡಿತರ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಸ್ಥಗಿತಗೊಳಿಸಲು ರಾಜ್ಯ ಸರ್ಕಾರ ಹೊಸ ಆದೇಶ, ಹೊರಡಿಸಿದೆ.
ಸರ್ಕಾರಿ ನೌಕರ, 3 ಹೆಕ್ಟೇರ್ಗಿಂತ ಹೆಚ್ಚಿನ ಪ್ರಮಾಣದ ಜಮೀನಿರುವ ಕುಟುಂಬ, ಒಂದಕ್ಕಿಂತ ಹೆಚ್ಚು ವಾಣಿಜ್ಯ ಬಳಕೆ ವಾಹನಗಳನ್ನು ಹೊಂದಿರುವ ಕುಟುಂಬಗಳನ್ನು ಬಿ.ಪಿ.ಎಲ್. ವ್ಯಾಪ್ತಿಯಿಂದ ಹೊರಗಿಡಲು ಪರಿಗಣಿಸಲಾಗುತ್ತಿತ್ತು ಅದರ ಸಾಲಿಗೆ ಇದೀಗ ಮಾಸಿಕ 150 ಯೂನಿಟ್ ವಿದ್ಯುತ್ ಸೇರ್ಪಡೆಯಾಗಲಿವೆ.
ರೈತರಿಗೆ ಶೇ.10 ಪಾಲುದಾರಿಕೆಗೆ ಮನವಿ –
ರಾಜ್ಯದ ಗದಗ ಜಿಲ್ಲೆಯಲ್ಲಿ ಪವನ ಶಕ್ತಿ ಹಾಗೂ ಸೌರ ವಿದ್ಯುತ್ ಉತ್ಪಾದನೆಗೆ ಹೆಚ್ಚಿನ ಅವಕಾಶ ಇದೆ. ಸರ್ಕಾರವು ಇದರ ಬಗ್ಗೆ ಹೆಚ್ಚಿನ ಗಮನ ವಹಿಸಿದೆ. ಅದಕ್ಕಾಗಿ ಇದರ ಲಾಭ ಇಲ್ಲಿನ ರೈತರಿಗೆ ಸಿಗುವಂತಾಗಬೇಕು. ಈ ಯೋಜನೆಗಳಿಗೆ ಜಮೀನು ನೀಡುವ ರೈತರಿಗೆ ಯೋಜನೆಯಲ್ಲಿಶೇ.10 ಪಾಲುದಾರಿಕೆ ನೀಡಬೇಕು. ವಿದ್ಯುತ್ ಉತ್ಪಾದಿಸುವ ಉತ್ತರ ಕನ್ನಡ ಜಿಲ್ಲೆಗೆ ಈ ಹಿಂದೆ ಕೆಲವು ರಿಯಾಯಿತಿ ನೀಡಲಾಗುತ್ತಿತ್ತು. ಅದೇ ರೀತಿ ಗದಗ ಜಿಲ್ಲೆಗೂ ರಿಯಾಯಿತಿ ಸಿಗಬೇಕು ಇದರಿಂದ ಸರ್ಕಾರಕ್ಕೆ ಹಾಗೂ ರೈತರಿಗೆ ವಿದ್ಯುತ್ ಕೊರತೆ ಆಗಲ್ಲ. ಕ್ರಮೇಣ ನೈಸರ್ಗಿಕ ವಿಕೋಪದಿಂದ ಎಲ್ಲವೂ ನಷ್ಟದಲ್ಲಿದ್ದೇವೆ. ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ ಹೇಳಿದರು.
ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯಿಂದ ಮಹತ್ವದ ಆದೇಶ –
ಕೃಷಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಇನ್ನೂ ಮುಂದೆ ರೈತರ ನೀರಾವರಿ ಪಂಪ್ಸೆಟ್ಗಳ ವಿದ್ಯುದೀಕರಣ ಕಾಮಗಾರಿಯನ್ನು ಅಗತ್ಯವಿರುವ ವಿದ್ಯುತ್ ಮೂಲ ಸೌಕರ್ಯದೊಂದಿಗೆ ಶೀಘ್ರವಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನವೀಕೃತ ಶೀಘ್ರ ಸಂಪರ್ಕ ಯೋಜನೆ ಜಾರಿಗೆ ತಂದಿದೆ. ರೈತರ ಹಿತದೃಷ್ಟಿಯಿಂದ ಇಂತಹ ಸ್ಥಿತಿಯಲ್ಲಿ ನಾವು ರೈತರ ಪರವಾಗಿ ನಿಲ್ಲಬೇಕೆಂಬ ದೃಷ್ಟಿಯಿಂದ ಈ ಹೆಜ್ಜೆ ಇಟ್ಟಿದೆ.
2023ರ ಸೆಪ್ಟೆಂಬರ್ 22ಕ್ಕೂ ಮುನ್ನ ಹಾಗೂ ನಂತರ ನೋಂದಣಿಗೊಂಡ/ಹಾಲಿ ಕೃಷಿ ಪಂಪ್ಸೆಟ್ಗಳಿಗೆ ರೈತರು ಇಚ್ಛಿಸಿದ್ದರೆ, ಕೆಇಆರ್ಸಿ ನಿಯಮಾವಳಿಗಳಂತೆ ವಿದ್ಯುತ್ ಜಾಲ ಶುಲ್ಕ 15,000 ರೂ. ಮತ್ತು ಠೇವಣಿ ಹಣವನ್ನು ಪಾವತಿಸಿ, ತಮ್ಮ ಸ್ವಂತ ಖರ್ಚಿನಲ್ಲಿ ವಿದ್ಯುತ್ ಲೈನ್ ಸೇರಿದಂತೆ ವಿದ್ಯುತ್ ಮೂಲ ಸೌಕರ್ಯ ನಿರ್ಮಾಣ ಕಾರ್ಯ ಕೈಗೊಂಡರೆ ಹೆಸ್ಕಾಂ ವತಿಯಿಂದ ಎರಡು ಅಥವಾ ಹೆಚ್ಚಿನ ಸಂಖ್ಯೆಯ ರೈತರ ಪಂಪ್ಸೆಟ್ಗಳನ್ನು ಒಟ್ಟುಗೂಡಿಸಿ, ಸೂಕ್ತ ಸಾಮರ್ಥ್ಯದ ಟ್ರಾನ್ಸ್ಫಾರ್ಮರ್ನ್ನು ಒದಗಿಸಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು ಎಂದು ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.