ಜಮೀನು ಖರೀದಿ : ಭೂಮಿ ಖರೀದಿ ಜೀವನದಲ್ಲಿ ಬಹುಮುಖ್ಯ ಹೂಡಿಕೆಯಾಗಿರುತ್ತದೆ. ಆದರೆ ಖರೀದಿಸುವ ಮೊದಲು ಆ ಭೂಮಿಗೆ ಸಂಬಂಧಿಸಿದ ಎಲ್ಲಾ ಕಾನೂನು ದಾಖಲೆಗಳನ್ನು ಪರಿಶೀಲಿಸುವುದು ಅತ್ಯಂತ ಅಗತ್ಯ. ಸರಿಯಾದ ದಾಖಲೆಗಳನ್ನು ಪರಿಶೀಲಿಸಿದರೆ ಆ ಭೂಮಿಯ ಹಕ್ಕು ಸ್ಪಷ್ಟವಾಗಿರುವುದು, ಯಾವುದೇ ವಿವಾದವಿಲ್ಲದಿರುವುದು ಮತ್ತು ಭವಿಷ್ಯದಲ್ಲಿ ಕಾನೂನು ಸಮಸ್ಯೆಗಳು ಎದುರಾಗದಂತೆ ತಡೆಯಬಹುದು. ಭೂಮಿಯ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸುವುದು ಖರೀದಿದಾರನ ಶಾಂತಿ ಮತ್ತು ಶ್ರಮದಿಂದ ಗಳಿಸಿದ ಹಣವನ್ನು ವಂಚನೆಗಳಿಂದ ರಕ್ಷಿಸುವಲ್ಲಿ ಸಹಾಯ ಮಾಡುತ್ತದೆ. ಭೂಮಿ ಖರೀದಿಸುವ ಮೊದಲು ಆ ಭೂಮಿಯು ನಿಜವಾಗಿಯೂ ಹಕ್ಕುಸ್ವಾಮ್ಯಕ್ಕೆ ಹೊಂದಿರುವುದೇ ಮತ್ತು ಯಾವುದೇ ವಿವಾದಗಳಿಲ್ಲದಿರುವುದೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಕೆಲವು ಮುಖ್ಯ ದಾಖಲೆಗಳನ್ನು ಪರಿಶೀಲಿಸುವುದು ಅತ್ಯಂತ ಅಗತ್ಯ.
ಭೂಮಿ ಖರೀದಿಸುವ ಮೊದಲು ಪರಿಶೀಲಿಸಬೇಕಾದ ಪ್ರಮುಖ ದಾಖಲೆಗಳು
1) RTC:- ಈ ದಾಖಲೆಯು ಆಸ್ತಿ ಯಾರ ಹೆಸರಲ್ಲಿದೆ, ಸಾಗುವಳಿ ಯಾರು ಮಾಡುತ್ತಿದ್ದಾರೆ ಎಂಬ ಮಾಹಿತಿ ನೀಡುತ್ತದೆ.
2) ಆಕಾರಬಂದ :- ಇದು ಹೊಲದ ಅಂತಿಮ ವಿಸ್ತೀರ್ಣ ಮತ್ತು ಮಾಲಿಕತ್ವದ ಕುರಿತು ಸ್ಪಷ್ಟತೆ ನೀಡುತ್ತದೆ.
3) SALE DEED:- ಈ ದಾಖಲೆಯ ಮೂಲಕ ನಮಗೆ ಜಮಿನು ಯಾರಿಂದ ಯಾರಿಗೆ, ಯಾವ ದರಕ್ಕೆ ಮತ್ತು
ಯಾವ ಷರತ್ತು ಗಳಲ್ಲಿ ಖರೀದಿಸಲಾಗಿದೆ ಎಂಬ ಮಾಹಿತಿ ತಿಳಿಯುತ್ತದೆ.
4) MOTHER DEED:- ಆಸ್ತಿಯ ಮೂಲ ಮಾಲಿಕರ ಪೂರೈಕೆ ಮತ್ತು ಹಿಂದಿನ ಇತಿಹಾಸವನ್ನು ಈ ಪತ್ರ ತೋರಿಸುತ್ತದೆ.
5) Form 10:- ಒಂದು ಜಮೀನಿಗೆ ತನ್ನದೇ ಆದ ಪ್ರತ್ಯೇಕ ನಕ್ಷೆ, ವಿಸ್ತೀರ್ಣ ಮತ್ತು ಸರ್ವೇ ನಂಬರ್, ಹಿಸ್ಸಾ ಸಂಖ್ಯೆ ಇರುವುದನ್ನು form 10 ಎಂದು ಕರೆಯುತ್ತಾರೆ. ಆಸ್ತಿ ರಿಜಿಸ್ಟರ್ ಮಾಡುವಂತ ಸಮಯದಲ್ಲಿ ಈ ನಮುನೆಯು ಅಗತ್ಯವಾಗಿದೆ.
6) Survey sketch:- ಪ್ರತಿಯೊಂದು ಖರೀದಿಸಿದ ಜಮೀನಿಗೆ ನಕ್ಷೆ ಇದ್ದೆ ಇರುತ್ತೆ. ನಕ್ಷೆಯಲ್ಲಿ ಖರೀದಿಸಿದ ಜಮೀನು ಯಾವ ದಿಕ್ಕಿನಲ್ಲಿದೆ, ಅದರ ವಿಸ್ತೀರ್ಣ ಎಷ್ಟಿದೆ, ಸದರಿ ಜಮೀನಿನ ಅಕ್ಕ ಪಕ್ಕ ಯಾರೆಲ್ಲ ಇದ್ದಾರೆ ಎಂಬುದನ್ನು ಈ ಪತ್ರ ತೋರಿಸುತ್ತದೆ. ಈ ನಕ್ಷೆ ಕಡ್ಡಾಯವಾಗಿ ಸರ್ವೇ ಕಚೇರಿಯಿಂದ ಪಡೆದುಕೊಳ್ಳಬೇಕು.
7) ಟಿಪ್ಪಣಿ ಪುಸ್ತಕ:- ಒಂದು ಆಸ್ತಿಯು ಅಥವಾ ಜಮೀನಿನ ಗುಣಲಕ್ಷಣಗಳು ಹೇಳುವ ಪತ್ರಿಕೆ ಟಿಪ್ಪಣಿ ಪುಸ್ತಕ ಎಂದು ಕರೆಯುತ್ತಾರೆ. ಇದು ಮಣ್ಣು, ರಸ್ತೆ, ಕಾಲುದಾರಿ, ಬಂಡಿದಾರಿ ಸೇರಿದಂತೆ ಭೌಗೋಳಿಕ ಲಕ್ಷಣಗಳ ವಿವರ ತೋರಿಸುತ್ತದೆ.
8) PTCL :- ಈ ದಾಖಲೆಯು ಜಮೀನು ಸರ್ಕಾರದಿಂದ ಕೊಟ್ಟಿದೆಯಾ, ಇನಾಂ ಅಥವಾ SC/STಗೆ ನೀಡಿದ ಭೂಮಿಯಾ ಎಂಬ ಮಾಹಿತಿ ನೀಡುತ್ತದೆ. ಇಂತ ಜಮೀನುಗಳು ಖರೀದಿ ಪೂರ್ವ ಒಪ್ಪಿಗೆಯನ್ನು ಸರ್ಕಾರದಿಂದ ಪಡೆದುಕೊಂಡು ನೀವು ಖರೀದಿ ಮಾಡಬಹುದು.
9) ಋಣಭಾರ / EC [Encumbrance Certificate]:- ಇದರ ಮೂಲಕ ಆಸ್ತಿ ಮೇಲಿನ ಸಾಲ ಅಥವಾ ಗುತ್ತಿಗೆಗಳ ಮಾಹಿತಿ ತಿಳಿದುಬರುತ್ತದೆ.
10) Mutation Report :- ಇದು ಜಮೀನಿನ ಮಾಲಿಕತ್ವ ಬದಲಾವಣೆಗಳ ಮತ್ತು ಹಿಂದಿನ ವ್ಯವಹಾರಗಳ ದಾಖಲೆಯಾಗಿದೆ.
11) ಸಾಗುವಳಿ ಚೀಟಿ :- ಪ್ರಸ್ತುತವಾಗಿ ಯಾರು ಜಮೀನು ಚಲಾವಣೆ ಮಾಡುತ್ತಿದ್ದಾರೆ ಎಂಬುದನ್ನು ಹೇಳುತ್ತದೆ.
12) ವಂಶಾವಳಿ ಪ್ರಮಾಣ ಪತ್ರ :- ಇದು ಜಮಿನು ಮಾರುವ ವ್ಯಕ್ತಿಯ ಕುಟುಂಬದ ಸದಸ್ಯರ ವಿವರ ಮತ್ತು ಒಪ್ಪಿಗೆಯ ಖಚಿತೀಕರಣ.
ಹೆಚ್ಚುವರಿ ಮಾಹಿತಿ :-
> ಮೊದಲನೆಯದಾಗಿ, ಕನಿಷ್ಠ 13 ವರ್ಷಗಳ EC ಯನ್ನು ಪರಿಶೀಲಿಸಬೇಕು.
> ಎರಡನೆಯದಾಗಿ, ಅನುಭವಿ ವಕೀಲರಿಂದ ಅಗತ್ಯವಿರುವ ದಾಖಲೆಗಳ ಬಗ್ಗೆ ಕಾನೂನು ಅಭಿಪ್ರಾಯ ಪಡೆಯುವುದು.
> ಕೊನೆಯದಾಗಿ, ನೀವು ಭೂಮಾಪನ ಮತ್ತು ತಿಪ್ಪಣಿಯ ಪ್ರಕಾರ ಭೂಮಿಯನ್ನು ಪರಿಶೀಲಿಸಲು ಒಬ್ಬ ಸರ್ವೇಯರ್ನೊಂದಿಗೆ ಸ್ಥಳಕ್ಕೆ ಭೇಟಿ ನೀಡಬೇಕು.
ಈ ಮೂಲಕ ನಿಮಗೆಲ್ಲ ತಿಳಿಸುವುದೆನೆಂದರೆ ಭೂಮಿಯನ್ನು ಖರೀದಿಸುವ ಮೊದಲು ಈ ಮೆಲೆ ನಿಡಿರುವ ಎಲ್ಲಾ ಸೂಚನೆಗಳು,ನಿಯಮಗಳು ಮತ್ತು ನಿಬಂಧನೆಗಳನ್ನು ನೆನಪಿನಲ್ಲಿ ಇಟ್ಟುಕೊಂಡು ಮಾರಾಟ ಮಾಡಬೇಕಾದ ನಿರ್ದಿಷ್ಟ ಭೂಮಿಗೆ ಸಂಬಂಧಿಸಿದ ಎಲ್ಲಾ ಮೂಲ ದಾಖಲೆಗಳನ್ನು ಪರಿಶೀಲಿಸಿ ತದನಂತರ ಭೂಮಿಯನ್ನು ಖರೀದಿಸಬೇಕು.
-
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಗಮನಕ್ಕೆ:
ಗ್ರಾಮ ಪಂಚಾಯಿತಿಯ ಚುನಾವಣೆಗಾಗಿ ನೀವು ಮಾಡುವ ಪ್ರಚಾರ ಹಾಗೂ ಪ್ರತಿನಿತ್ಯದ ಕೆಲಸಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಳ್ಳುವುದರಿಂದ ಜನಾಕರ್ಷಣೆ ಆಗುತ್ತದೆ. ಹಾಗೂ ನಿಮ್ಮ ಕಾರ್ಯ ವೈಖರಿ ಜನರಿಗೆ ತಿಳಿದು ಜನ ನಿಮ್ಮನ್ನು ಬೆಂಬಲಿಸಲು ಮುಂದಾಗುತ್ತಾರೆ. ಆದ್ದರಿಂದ ನಿಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬೇಕಾದ ಪೋಸ್ಟರ್ಗಳು ಹಾಗೂ ವಿಡಿಯೋಗಳನ್ನು ನಾವು ಅತ್ಯುತ್ತಮ ಕಡಿಮೆ ದರದಲ್ಲಿ ಮಾಡಿಕೊಡುತ್ತೇವೆ ನಿಮಗೆ ಹಬ್ಬಗಳಿಗೆ ವಿಶೇಷ ಸಂದರ್ಭಗಳಲ್ಲಿ ಅಥವಾ ಹುಟ್ಟುಹಬ್ಬಗಳಲ್ಲಿ ಶುಭಕೋರುವ ಪೋಸ್ಟರ್ಗಳು ಬೇಕಿದ್ದರೆ ಈ ಕೆಳಗೆ ನೀಡಿರುವ ನಂಬರನ್ನು ಸಂಪರ್ಕಿಸಿ. 9845499218