ಬೆಳೆವಿಮೆ : ರೈತರೇ ನಮಸ್ತೆ. ಇಂದು ನಾವು ಒಂದು ಮುಖ್ಯವಾದ ವಿಷಯದ ಬಗ್ಗೆ ಚರ್ಚಿಸೋಣ. ಈಗಾಗಲೇ ಕೆಲವು ಕಡೆ ವರುಣನ ಆರ್ಭಟ ಜೋರಾಗಿದೆ.ಇಂತಹ ಸ್ಥಿತಿಯಲ್ಲಿ ರೈತರ ಬೆಳೆಯೂ ಕೈಗೆ ಸಿಗುತ್ತಿಲ್ಲ. ಬೆಳೆ ಎಲ್ಲಾ ನೀರು ಪಾಲಾಗಿ ರೈತನ ಸ್ಥಿತಿ ಗಂಭೀರವಾಗಿದ್ದು, ರೈತರು ಹಲವು ಬಾರಿ ಸರ್ಕಾರದ ಮೊರೆ ಹೋಗಿದ್ದಾರೆ. ಅದಕ್ಕಾಗಿ ಈಗ ನಾವು ಈ ಬೆಳೆವಿಮೆ ಹಾಗೂ ಯಾರನ್ನು ಸಂಪರ್ಕಿಸಬೇಕು ಎಂದು ಸಂಪೂರ್ಣ ಮಾಹಿತಿ ನೀಡುತ್ತೇನೆ. ರೈತರು ದಯವಿಟ್ಟು ಸಂಪೂರ್ಣ ಮಾಹಿತಿ ಪಡೆದು ಬೆಳೆವಿಮೆ ಹಣ ಪಡೆಯಬೇಕು ಎಂದು ವಿನಂತಿಸಿಕೊಳ್ಳುತ್ತೇನೆ.
ಹೌದು ರೈತರೇ ನೀವು ನೋಡುತ್ತಿರುವ ಹಾಗೆ ಸದ್ಯದ ಸ್ಥಿತಿಯಲ್ಲಿ ವಾತಾವರಣ ತುಂಬಾ ಹದಗೆಟ್ಟಿದೆ. ವರುಣನ ಆರ್ಭಟ ಜೋರಾಗಿದೆ. ಎಲ್ಲಾ ಬೆಳೆಗಳು ನೀರು ಪಾಲಾಗಿ ನಿಂತಿದೆ. ಇಂತಹ ಸ್ಥಿತಿಯಲ್ಲಿ ರೈತರ ಪರವಾಗಿ ನಿಲ್ಲುವುದು ಎಲ್ಲಾ ನಾಗರಿಕರ ಕರ್ತವ್ಯವಾಗಿದೆ. ಹಾಗೂ ಸರ್ಕಾರವು ಇದರ ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗಿದೆ. ಬೆಳೆವಿಮೆ ಹಣ ಬಿಡುಗಡೆಯ ಮಾಹಿತಿಯು ಜಿಲ್ಲೆ ಮತ್ತು ಬೆಳೆ ಹಾನಿಯ ಅವಲಂಬಿತವಾಗಿರುತ್ತದೆ. ಉದಾಹರಣೆಗೆ, ಧಾರವಾಡ ಜಿಲ್ಲೆಯಲ್ಲಿ ಕುಂದಗೋಳ ಮತ್ತು ಹುಬ್ಬಳ್ಳಿ ತಾಲೂಕಿನ ರೈತರಿಗೆ ಫಸಲ್ ಬೀಮಾ ಯೋಜನೆಯಡಿ 31.75 ಕೋಟಿ ರೂ. ಬೆಳೆವಿಮೆ ಹಣ ಬಿಡುಗಡೆಯಾಗಿದೆ.
ಕಲಬುರಗಿ ಜಿಲ್ಲೆಯ ರೈತರಿಗೆ 2024-25ರ ಮುಂಗಾರು ಹಂಗಾಮಿಗೆ ಮಂಜೂರಾದ ರೂ. 656 ಕೋಟಿ ಬೆಳೆವಿಮೆಯಲ್ಲಿ ಇನ್ನೂ 315 ಕೋಟಿ ರೂ. ಬಾಕಿ ಇದೆ ಎಂದು ರೈತ ಸಂಘಗಳು ಒತ್ತಾಯಿಸಿವೆ. ಆದರೆ ಈ ಹಣ ರೈತರಿಗೆ ತಲುಪಲು ಸರ್ಕಾರವು ಬೇಗನೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತೇವೆ.
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಪರಿಹಾರಕ್ಕಾಗಿ ಕಾಯುತ್ತಿರುವ ರೈತರಿಗೆ ಮತ್ತೊಂದು ಒಳ್ಳೆಯ ಸುದ್ದಿ ಇದೆ. ಈ ಹಿಂದೆ 30 ಲಕ್ಷ ರೈತರ ಖಾತೆಗಳಿಗೆ ಹಣ ಬರುತ್ತದೆ ಎಂದು ಹೇಳಲಾಗಿತ್ತು. ಈಗ ಸುಮಾರು 3900 ಕೋಟಿ ರೂ.ಗಳನ್ನು 30 ಲಕ್ಷ ರೈತರ ಖಾತೆಗಳಿಗೆ ಅಲ್ಲ, 35 ಲಕ್ಷ ರೈತರ ಖಾತೆಗಳಿಗೆ ಕಳುಹಿಸಲಾಗುವುದು ಎಂದು ತಿಳಿದುಬಂದಿದೆ. ಶೀಘ್ರ ಹಣ ರೈತರ ಖಾತೆಗೆ ಜಮೆಯಾಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ, ವಿಮಾ ಕಂಪನಿಗಳಿಗೆ ದಂಡ ವಿಧಿಸುವ ಹೊಸ ನಿಯಮ ಜಾರಿಗೆ ತರಲಾಗಿದೆ. ರೈತರು ಗ್ರಾಮ ಮಟ್ಟದಲ್ಲಿಯೇ ನೋಂದಣಿ ಮಾಡಿಕೊಳ್ಳಬಹುದು. ಹವಾಮಾನ ವೈಪರೀತ್ಯದಿಂದ ಬೆಳೆ ನಷ್ಟವಾದರೆ, ಈ ಯೋಜನೆಗಳ ಮೂಲಕ ರೈತರು ಸುಲಭವಾಗಿ ಪರಿಹಾರ ಪಡೆಯಬಹುದು.
ಪ್ರಮುಖ ಬೆಳೆವಿಮೆ ಯೋಜನೆಗಳು:
1. ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆ (PMFBY)
ಆರಂಭ: 2016
ಉದ್ದೇಶ: ಹಾನಿಗೊಳಗಾದ ರೈತರಿಗೆ ಸೂಕ್ತ ಪರಿಹಾರ ನೀಡುವುದು ಮತ್ತು ವೈಶಿಷ್ಟ್ಯಗಳು:
ಕಡಿಮೆ ಪ್ರೀಮಿಯಂ ದರ:
ಖರೀಫು( ಮುಂಗಾರು) ಬೆಳೆ – 2%
ರಬೀ(ಹಿಂಗಾರು) ಬೆಳೆ – 1.5%
ವಾರ್ಷಿಕ/ವಾಣಿಜ್ಯ ಬೆಳೆ – 5%
ಉಳಿದ ವಿಮಾ ಮೊತ್ತವನ್ನು ಸರ್ಕಾರ ಭರಿಸುತ್ತದೆ
ಕೃಷಿ ಭೂಮಿ ನೋಂದಾಯಿಸಿದ ರೈತರಿಗೆ ಅನಿವಾರ್ಯ
ಮೊಬೈಲ್ ಆಪ್ ಮೂಲಕವೂ ನೋಂದಣಿ ಸಾಧ್ಯ.
ನಿಮ್ಮ ಬೆಳೆವಿಮೆ ಹಣದ ಸ್ಥಿತಿಯನ್ನು ಪರಿಶೀಲಿಸಲು 3 ರೀತಿಯ ವಿಧಾನಗಳಿವೆ –
1) ಆನ್‌ಲೈನ್ ಪೋರ್ಟಲ್ ಬಳಸಿ: ಫಸಲ್ ಬೀಮಾ ಯೋಜನೆ ಅಥವಾ ಸಂಬಂಧಪಟ್ಟ ವಿಮಾ ಕಂಪನಿಯ ವೆಬ್‌ಸೈಟ್‌ಗೆ ಭೇಟಿ ನೀಡಿ ಹಣ ಬಿಡುಗಡೆ ಕುರಿತು ಮಾಹಿತಿ ಪಡೆಯಬಹುದು.
2) ಸ್ಥಳೀಯ ಕೃಷಿ ಇಲಾಖೆಯನ್ನು ಸಂಪರ್ಕಿಸಿ: ನಿಮ್ಮ ಹತ್ತಿರದ ಕೃಷಿ ಇಲಾಖೆ ಕಚೇರಿಗೆ ಭೇಟಿ ನೀಡಿ ಅಥವಾ ದೂರವಾಣಿ ಮೂಲಕ ಸಂಪರ್ಕಿಸಿ ನಿಮ್ಮ ಬೆಳೆವಿಮೆ ಹಣದ ಬಗ್ಗೆ ಮಾಹಿತಿ ಕೇಳಿ.
3) ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ: ಬೆಳೆವಿಮೆಗಾಗಿ ನೀವು ಯಾವ ವಿಮಾ ಕಂಪನಿಯನ್ನು ಆರಿಸಿಕೊಂಡಿದ್ದೀರೋ, ಆ ಕಂಪನಿಯ ಏಜೆಂಟ್ ಅಥವಾ ವಿಮಾ ಕಂಪನಿಯ ಅಧಿಕಾರಿಗಳನ್ನು ನೇರವಾಗಿ ಸಂಪರ್ಕಿಸಿ ಮಾಹಿತಿ ಪಡೆಯಬಹುದು.
ಅಥವಾ ನಿಮಗೆ ಏನಾದರೂ ಬೆಳೆವಿಮೆ ಹಣದ ಬಗ್ಗೆ, ಬೆಳೆವಿಮೆ ಅರ್ಜಿ ಬಗ್ಗೆ ಸಂದೇಹ ಇದ್ದಲ್ಲಿ ಕೂಡಲೇ ಕಂಪ್ಲೆಟ ನೊಂದಣಿ ಮಾಡ ಬೇಕಾದ ಟೋಲ್ ಫ್ರೀ ನಂಬರ 18004256678. ಈ ನಂಬರ್ ಕಾಲ್ ಮಾಡಿ ಮಾತನಾಡಿ. ಹಾಗೂ ನಿಮ್ಮ ಬೆಳೆವಿಮೆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ.
ಆನ್ಲೈನ್ ಅಲ್ಲಿ ಬೆಳೆವಿಮೆ ಹಣ ಹೇಗೆ ನೋಡಬೇಕು?
ಮೊದಲಿಗೆ ಗೂಗಲ್ ನಲ್ಲಿ ::SAMRAKSHANE-KARNATAKA :: Crop Insurance Application – NIC-Bangalore https://share.google/LfUHgNGeDo6U81QTh
ಈ ಲಿಂಕ್ ಅನ್ನು ಕ್ಲಿಕ್ ಮಾಡಬೇಕು.
• ನಂತರ ಅಲ್ಲಿ ನಿಮಗೆ ವರ್ಷ ಮತ್ತು ಹಂಗಾಮು ತೋರಿಸುತ್ತದೆ. ಅಲ್ಲಿ ಮುಂದೆ ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ.
• ನಂತರ ಚೆಕ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ.
• ಅಲ್ಲಿ ನಿಮ್ಮ ಬೆಳೆವಿಮೆ ಮಾಹಿತಿ ಹಾಕಿದ ಕೂಡಲೇ ನಿಮ್ಮ ಬೆಳೆವಿಮೆ ಹಣದ ಬಗ್ಗೆ ಮಾಹಿತಿ ಸಿಗುತ್ತದೆ.
ರಾಜಸ್ಥಾನದ ವಿವಿಧ ಜಿಲ್ಲೆಗಳಿಂದ ಸುಮಾರು 35000 ರೈತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇದು ಮಾತ್ರವಲ್ಲದೆ, ದೇಶದ 23 ರಾಜ್ಯಗಳ ರೈತರು ಸಹ ಈ ಕಾರ್ಯಕ್ರಮದಲ್ಲಿ ವರ್ಚುವಲ್ ಆಗಿ ಸೇರಲಿದ್ದಾರೆ. ಹಣ ಯಾವಾಗ ಬರುತ್ತದೆ, ಅದನ್ನು ಹೇಗೆ ಪರಿಶೀಲಿಸಬೇಕು, ಹೇಗೆ ಅರ್ಜಿ ಸಲ್ಲಿಸಬೇಕು, ಪ್ರತಿ ಕ್ಷಣವೂ ನವೀಕರಣಗಳನ್ನು ತಿಳಿದುಕೊಳ್ಳಿ.
ಗಮನಿಸಿ : ಪ್ರಕೃತಿ ವಿಕೋಪ, ಕೆಟ್ಟ ಹವಾಗುಣ ಇತ್ಯಾದಿಯಿಂದ ಬೆಳೆಗಳಿಗೆ ಹಾನಿಯಾಗಿದ್ದರೆ ರೈತರು ವಿಮಾ ಹಣಕ್ಕೆ ಕ್ಲೇಮ್ ಸಲ್ಲಿಸಬಹುದು. ಅಧಿಕಾರಿಗಳು ರೈತರ ಜಮೀನಿಗೆ ಬಂದು ಸಮೀಕ್ಷೆ ನಡೆಸಿ ಬೆಳೆಹಾನಿ ಅಂದಾಜು ಮಾಡುತ್ತಾರೆ. ಅವರ ಶಿಫಾರಸು ಪ್ರಕಾರ ಕ್ಲೇಮ್ ಹಣ ನಿರ್ಧಾರವಾಗುತ್ತದೆ.