ಇತ್ತೀಚಿನ ದಿನಗಳಲ್ಲಿ ನಮ್ಮ ರಾಜ್ಯದ ಕೆಲವು ಭಾಗಗಳಲ್ಲಿ ಮಳೆ ಸಾಕಷ್ಟು ಪ್ರಮಾಣದಲ್ಲಿ ಆಗುತ್ತಿರುವುದು ಗಮನಕ್ಕೆ ಬಂದಿದೆ. ಕೆಲವು ಭಾಗಗಳಲ್ಲಿ ಮಳೆಯ ಕೊರತೆಯೂ ಇದೆ.ಇತ್ತೀಚಿನ ನವೀಕರಣಗಳನ್ನು ಹವಾಮಾನ ಇಲಾಖೆಗಳು ನೀಡಿವೆ.ಹವಾಮಾನ ಇಲಾಖೆಯ ಪ್ರಕಾರ, ಸೆಪ್ಟೆಂಬರ್ 30 ರವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ರಾಜ್ಯದ 14 ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ಅನ್ನು ಅನ್ವಯಿಸಬೇಕು ಎಂದು ಘೋಷಿಸಲಾಗಿದೆ.ಜಮೀನುಗಳಲ್ಲಿ ಕೆಲಸ ಮಾಡುವ ರೈತರು, ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು, ಮನೆಯಿಂದ ಆಚೆ ಕೆಲಸಕ್ಕೆ ಹೋಗುವವರು ಮುನ್ನೆಚ್ಚರಿಕೆಯ ಕ್ರಮಗಳನ್ನ ತೆಗೆದುಕೊಳ್ಳಲು ಸೂಚಿಸಲಾಗಿದೆ. ಭಾರೀ ಮಳೆಯಿಂದಾಗಿ ಅನೇಕ ಪ್ರದೇಶಗಳಲ್ಲಿ ಭೂಕುಸಿತಗಳು, ಮನೆ ಕುಸಿತ ಮತ್ತು ಗುಡ್ಡ ಕುಸಿತ ಸಂಭವಿಸುತ್ತಿವೆ. ಸೆಪ್ಟೆಂಬರ್ 24 ರವರೆಗೆ ರಾಜ್ಯದ 12 ಜಿಲ್ಲೆಗಳಲ್ಲಿ ಅನಿಯಂತ್ರಿತ ಮಳೆಯಾಗುತ್ತಿರುವುದರಿಂದ ಹವಾಮಾನ ಇಲಾಖೆಯು ಯಲ್ಲೋ ಅಲಟ೯ನ್ನು ಘೋಷಿಸಿದೆ.
ಈಗಾಗಲೇ ಭಾರಿ ಮಳೆಯಿಂದ ರಾಜ್ಯದಲ್ಲಿ ಹಲವಾರು ರೈತರು ಬೆಳೆಯನ್ನು ತೆಗೆದು ಕೊಳ್ಳಲು ಆಗದೆ ಕಷ್ಟದಲ್ಲಿ ಇದ್ದಾರೆ. ಅನಿಯಮಿತ ಹವಾಮಾನ ಪರಿಸ್ಥಿತಿಗಳು ರೈತರನ್ನು ಬದುಕಲು ಕಷ್ಟಕರವಾಗಿಸಿದೆ. ರೈತರ ಈ ಕಷ್ಟಕ್ಕೆ ಪರಿಹಾರವಾಗಿ, ಜೆಡಿಎಸ್ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರಕ್ಕೆ 25000 ರೂಪಾಯಿಗಳನ್ನು ನೀಡುವ ಮೂಲಕ ತೀವ್ರ ಮಳೆಯಿಂದ ಭಾರಿ ನಷ್ಟವನ್ನು ಅನುಭವಿಸಿದ ರೈತರಿಗೆ ಸಹಾಯ ಮಾಡುವಂತೆ ವಿನಂತಿಸಿದ್ದಾರೆ.
ಈಗ ಹವಾಮಾನ ಇಲಾಖೆಯು ಯಾವ ಜಿಲ್ಲೆಗಳಿಗೆ
ಯಲ್ಲೋ ಅಲರ್ಟ್ ಘೋಷಿಸಿದೆ ಎಂದು ನೋಡೋಣ:
ಬೆಂಗಳೂರು, ಮೈಸೂರು, ಮಂಡ್ಯ, ಹಾಸನ, ಬೆಳಗಾವಿ, ಬಾಗಲಕೋಟೆ, ಉತ್ತರ ಕನ್ನಡ, ದಕ್ಷಿಣ ಕನ್ನಡ,
ಉಡುಪಿ, ಯಾದಗಿರಿ, ರಾಯಚುರ, ವಿಜಾಪುರ, ಕಲಬುರ್ಗಿ, ಬಿದಿರ ಈ ಜಿಲ್ಲೆಗಳಿಗೆ ಯಲ್ಲೋ ಅಲಟ೯ ನಿಡಲಾಗಿದೆ.
ಧಾರವಾಡ, ಗದಗ, ಹಾವೇರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ತುಮಕೂರು, ವಿಜಯನಗರ, ಶಿವಮೊಗ್ಗ, ರಾಮನಗರ, ಕೋಲಾರ ಈ ಜಿಲ್ಲೆಗಳಲ್ಲಿ ಕೂಡ ಮಳೆಯಾಗಲಿದೆ.
ಮುದ್ದೇಬಿಹಾಳ, ಕಮಲಾಪುರ, ನೆಲೋಗಿ, ಬಿಳಗಿ, ಆಲಮಟ್ಟಿ, ಗೊಕರ್ಣ, ತಾಳಿಕೊಟಿ, ಗಂಗಾಪುರ, ಸುಳ್ಯ, ಬಂಟ್ವಾಳ, ಗುಬ್ಬಿ, ಅಥಣಿ, ಶಾಂತಿನಗರ , ಶಂಕೇಶ್ವರ, ಪುತ್ತೂರು, ಪೊನ್ನಂಪೇಟೆ, ಕೊಟ್ಟಿಗೆಹಾರ, ಹೆಚ್.ಡಿ.ಕೋಟೆ, ಧರ್ಮಸ್ಥಳ,ಹುಣಸಗಿ, ಭಾಗಮಂಡಲ, ಚಿಂಚೋಲಿ ಈ ಪ್ರದೇಶಗಳಲ್ಲಿ ಮಳೆಯಾಗುತ್ತಿದ್ದೆ.
ಕರಾವಳಿ ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಸೆಪ್ಟೆಂಬರ್ 19 ರಿಂದ 24ರವರೆಗೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಮುಂಸೂಚನೆ ನಿಡಲಾಗಿದೆ.
ಮೇಲೆ ಹೇಳಿದಂತೆ ಈ ವರ್ಷವೂ ಮಳೆ ತೀವ್ರವಾಗಿ ಸುರಿಯುತ್ತಿದೆ, ಆದ್ದರಿಂದ ಎಲ್ಲಾ ನಾಗರಿಕರು ನಿಮ್ಮ ರಕ್ಷಣೆಗಾಗಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ಇಲ್ಲಿ ತಿಳಿಸಲಾಗಿದೆ. ಸರ್ಕಾರವು ನಿಧಿ, ಆಶ್ರಯ ಇತ್ಯಾದಿಗಳನ್ನು ಮತ್ತು ಇತರ ಜೀವನಾವಶ್ಯಕ ವಸ್ತುಗಳನ್ನು ಒದಗಿಸುವ ಮೂಲಕ ಸಾರ್ವಜನಿಕರಿಗೆ ಸಹಾಯ ಮಾಡಲು ತನ್ನ ಅತ್ಯುತ್ತಮ ಪ್ರಯತ್ನವನ್ನು ಮಾಡುತ್ತದೆ.