ಧಾರವಾಡ ಕೃಷಿಮೇಳ ಒಟ್ಟಾರೆ 23.74 ಲಕ್ಷ ಜನ ಭೇಟಿ

ಕೃಷಿ ಮೇಳ : ಪ್ರೀಯ ರೈತರೇ ಇವತ್ತು ನಾವು ಒಂದು ಮಹತ್ವದ ವಿಷಯ ಬಗ್ಗೆ ಮಾತಾಡೋಣ. ಅದು ಏನೆಂದರೆ ಧಾರವಾಡ ಕೃಷಿ ಮೇಳ ಇಂದಿನಿಂದ (ಸೆ.13 ರಿಂದ 16ರ ವರೆಗೆ) ನಾಲ್ಕು ದಿನ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯಿತು. ಅಬ್ಬಾ! ಎಷ್ಟು ಜನ, ಎಲ್ಲಿ ನೋಡಿದರಲ್ಲಿ ರೈತರು ತುಂಬಿ ತುಳುಕುತ್ತಿದ್ದರು. ರೈತ ಜಾತ್ರೆಗೆ ಇದೊಂದು ಮಹತ್ವದ ವೇದಿಕೆ ಎಂದು ಹೇಳಬಹುದಾದ ಸಂಭವ. ಬನ್ನಿ ಹಾಗಾದರೆ ಕೃಷಿ ಮೇಳ ಧಾರವಾಡದ ವಿಶೇಷತೆ ಏನಿದೆ ಎಂದು ತಿಳಿಯೋಣ.

ಒಟ್ಟಾರೆ ನಾಲ್ಕು ದಿನದ ಈ ಕೃಷಿ ಮೇಳಕ್ಕೆ ಸುಮಾರು 23.74 ಲಕ್ಷ ಜನ ಭಾಗವಹಿಸಿದ್ದರು ಎಂದು ಮೂಲಗಳು ತಿಳಿಸಿವೆ. ಬೆಳಿಗ್ಗಿನಿಂದಲೇ ತಂಡೋಪ ತಂಡವಾಗಿ ಬಂದ ಜನ ವೇದಿಕೆಗಿಂತ ಪ್ರದರ್ಶನ ತಾಕುಗಳು, ಮಳಿಗೆಗಳು, ಪ್ರಾಣಿಪ್ರಪಂಚದ ಮಳಿಗೆಗಳ ಹತ್ತಿರಕ್ಕೆ ಧಾವಿಸಿ, ವೈವಿಧ್ಯಮಯ ತಳಿಗಳ ಕೋಳಿ, ಕುರಿ, ಮೀನು ಪ್ರಪಂಚವನ್ನು ಕಣ್ತುಂಬಿಕೊಂಡರು. ಗೋಲ್ಡ್‌ ಫಿಶ್‌ ಸೇರಿದಂತೆ ವೈವಿಧ್ಯಮಯ ಆಲಂಕಾರಿಕ ಮೀನುಗಳನ್ನು ಚಿಣ್ಣರು ಹಾಗೂ ಮಹಿಳೆಯರು ಹೆಚ್ಚು ಖರೀದಿಸುತ್ತಿದ್ದರು.

ಬೀಜಗಳ ಮಾರಾಟ –
ವಾರ್ಷಿಕ ಕೃಷಿ ಮೇಳವು ರಬಿ ಋತುವಿಗೆ ಗುಣಮಟ್ಟದ ಬೀಜಗಳನ್ನು ಖರೀದಿಸುವ ರೈತ ಸಮುದಾಯಕ್ಕೆ ಬಹುನಿರೀಕ್ಷಿತ ಕಾರ್ಯಕ್ರಮವಾಗಿದೆ. ಈ ವರ್ಷ, ವಿಶ್ವವಿದ್ಯಾಲಯವು 1,141.2 ಕ್ವಿಂಟಲ್ ರಬಿ ಬೀಜಗಳು ಮತ್ತು 245 ಕೆಜಿ ತರಕಾರಿ ಬೀಜಗಳನ್ನು ಮಾರಾಟ ಮಾಡಿದೆ.

ಈ ಬಾರಿ ಅತಿಯಾದ ಮಳೆಯಿಂದ ರಾಜ್ಯದಾದ್ಯಂತ ಸಾಕಷ್ಟು ಬೆಳೆ ನಾಶವಾಗಿದ್ದು, ಈಗಾಗಲೇ ಜಂಟಿ ಸಮೀಕ್ಷೆ ಮಾಡಲು ಹೇಳಿದ್ದೇವೆ. ರೈತರಿಗೆ ಆದಷ್ಟು ಬೇಗ ಪರಿಹಾರ (Crop Relief) ಕೊಡುತ್ತೇವೆ. ದುಡ್ಡಿಗೆ ಕೊರತೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದರು.

ಧಾರವಾಡದ (Dharwad) ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಕೃಷಿ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಧಾರವಾಡದ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಮುತುವರ್ಜಿಯಿಂದ ಶೀಘ್ರ ಜಂಟಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸಿದ್ದಾರೆ ಎಂದು ಡಿಸಿ ಹಾಗೂ ಸಚಿವರಿಗೆ ಅಭಿನಂದನೆ ಸಲ್ಲಿಸಿದರು.

ರೈತರ ಸ್ಥಿತಿ ಸುಧಾರಿಸಿ ಅವರ ಆದಾಯ ಹೆಚ್ಚಿಸುವ ಗುರಿಯೊಂದಿಗೆ ಕೃಷಿ ವಿಜ್ಞಾನಿಗಳು ನಿರಂತರವಾಗಿ ಆಧುನಿಕ ತಂತ್ರಜ್ಞಾನ ಮತ್ತು ಸುಧಾರಿತ ಬೆಳೆಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಇದರ ಭಾಗವಾಗಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಅಲಸಂದೆ, ಸೂರ್ಯಕಾಂತಿ ಹಾಗೂ ಮೆಕ್ಕೆಜೋಳದ ಸಂಕಿರಣ ತಳಿಗಳನ್ನು ಅಭಿವೃದ್ಧಿ ಪಡಿಸಿ, ಕೃಷಿ ಮೇಳದಲ್ಲಿ ಪ್ರದರ್ಶನ ಜತೆಗೆ ಬೀಜಗಳನ್ನೂ ಮಾರಾಟ ಮಾಡುತ್ತಿದೆ. ಇವೆಲ್ಲವೂ ಅಲ್ಪಾವಧಿಯ ಬೆಳೆಗಳಾಗಿದ್ದು, ಬಹುಮುಖ್ಯವಾಗಿ ರೋಗ ನಿರೋಧಕ ಶಕ್ತಿ ಹೊಂದಿವೆ. ಹೀಗಾಗಿ, ರೈತರು ಅಧಿಕ ಇಳುವರಿ ಮೂಲಕ ಹೆಚ್ಚಿನ ಆದಾಯ ಗಳಿಸಲು ಸಹಕಾರಿಯಾಗಿವೆ.

ನಮ್ಮ ರಾಜ್ಯ ಹಾಲು ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಗುಜರಾತ್ ಒಂದನೇ ಸ್ಥಾನದಲ್ಲಿದೆ. ಒಂದು ಕೋಟಿ ಲೀಟರ್ ಹಾಲು ಉತ್ಪಾದನೆ ನಮ್ಮ ರಾಜ್ಯದಲ್ಲಾಗುತ್ತಿದೆ. ಮುಂದೆ ನಂಬರ್ ಒನ್ ಸ್ಥಾನಕ್ಕೆ ನಾವು ಹೋಗಬೇಕು. ಒಂದೇ ಬೆಳೆ ಬೇಳೆಯುವಂತೆ ಆಗಬಾರದು. ತೋಟಗಾರಿಕೆ, ತರಕಾರಿ, ಭತ್ತ, ರಾಗಿ ಬೆಳೆಯಬೇಕು. ಬಹಳ ಜನರಿಗೆ ಈಗ ಮಧುಮೇಹ ಇದೆ. ಹೀಗಾಗಿ ಸಿರಿಧಾನ್ಯ ಬೆಳೆಯಲು ನಾವು ಸಬ್ಸಿಡಿ ಕೊಡುತ್ತಿದ್ದೇವೆ. ಹೆಚ್ಚು ಸಿರಿ ಧಾನ್ಯ ಬೆಳೆಯಬೇಕು. ಮನುಷ್ಯನಿಗೆ ಆಹಾರ ಪದ್ಧತಿಯಿಂದ ದೈಹಿಕ ಕಾಯಿಲೆ ಬರುತ್ತಿವೆ.

ಕೃಷಿ ವಿಜ್ಞಾನಿಗಳು ಇದನ್ನ ಗಮನಕ್ಕೆ ತೆಗೆದುಕೊಳ್ಳಬೇಕು. ಅಕ್ಕಿ, ಗೋಧಿಯಲ್ಲಿ ಸಕ್ಕರೆ ಇದೆ. ಸಿರಿಧಾನ್ಯದಲ್ಲಿ ಸಕ್ಕರೆ ಕಡಿಮೆ ಇದೆ. ಹೀಗಾಗಿ ಅವುಗಳನ್ನು ಬೆಳೆಯಬೇಕು. ಸಂಶೋಧನೆಗೆ ಹೆಚ್ಚು ಒತ್ತು ಕೊಡಬೇಕು. ಹೊಸ ತಳಿ ಬಂದ ಮೇಲೆ ಅವು ರೈತರಿಗೆ ತಲುಪಬೇಕು. ಲ್ಯಾಬ್ ಟು ಲ್ಯಾಂಡ್ ಆಗಬೇಕು ಮತ್ತು ಲ್ಯಾಂಡ್ ಟು ಲ್ಯಾಬ್ ಆಗಬೇಕು. ಇವತ್ತು ಮತ್ತು ನಿನ್ನೆ ಕೃಷಿ ಮೇಳಕ್ಕೆ 6 ಲಕ್ಷ ರೈತರು ಬಂದಿದ್ದಾರೆ. ನಾವು ಭಾಗವಹಿಸಿ ಹೇಳೋದು ಒಂದು ಭಾಗ. ಆದರೆ, ರೈತರು ಭಾಗವಹಿಸುವುದು ಮುಖ್ಯ. ಹೊಸ ತಳಿ, ಹೊಸ ಬೀಜ, ಹೊಸತು ಏನೆಲ್ಲಾ ಇದೆ ಎಂದು ತಿಳಿಯಬೇಕು.

ಸಾಧಕರ ಕಥೆಗಳು –
ಸಮಾಪ್ತಿಯ ದಿನದಂದು, ನವೀನ ಮತ್ತು ಸುಸ್ಥಿರ ಪದ್ಧತಿಗಳ ಮೂಲಕ ಕೃಷಿಯಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದ ಪ್ರಗತಿಪರ ರೈತರ ಯಶೋಗಾಥೆಗಳನ್ನು ಆಚರಿಸಲು ಮತ್ತು ಹಂಚಿಕೊಳ್ಳಲು ಸ್ಪೂರ್ತಿದಾಯಕ ಅಧಿವೇಶನವನ್ನು ಆಯೋಜಿಸಲಾಗಿತ್ತು.

ಧಾರವಾಡ ಜಿಲ್ಲೆಯ ಶೌಕತಲಿ ಎಚ್. ಲಂಬೂನವರ್ ಮತ್ತು ಶಿವಲೀಲಾ ಎಸ್. ಹಿತ್ತಲಮನಿ, ಬೆಳಗಾವಿ ಜಿಲ್ಲೆಯ ರೇಣುಕಾ ಎಂ. ಭೋಜನವರ್, ಹಾವೇರಿ ಜಿಲ್ಲೆಯ ಬಸಮ್ಮ ಪಿ. ಚನ್ನೂರ್ ಮತ್ತು ಶಿವಾನಂದ ಮಂಗಣ್ಣವರ್ ತಮ್ಮ ಅನುಭವಗಳನ್ನು ಹಂಚಿಕೊಂಡರು.

Spread positive news

Leave a Reply

Your email address will not be published. Required fields are marked *