ಪ್ರಸ್ತುತ ಕೃಷಿಯಲ್ಲಿ ಹವಾಮಾನ ನಿಯಂತ್ರಿತ ಕೃಷಿಯು ಅತ್ಯಂತ ಪ್ರಮುಖ ಪಾತ್ರವನ್ನು ವಹಿಸಿದೆ. ಅನೇಕ ಆಧುನಿಕ ರೈತರು ತಮ್ಮ ಈ ಕೃಷಿಯನ್ನು ಉದ್ಯಮವಾಗಿ ಪರಿವರ್ತನೆಗೊಳಿಸಿದ್ದಾರೆ. ಅದೇ ರೀತಿಯ ಕೃಷಿಯಲ್ಲಿ ಬರುವುದು ಅಣಬೆ ಕೃಷಿ. ಅಣಬೆ ಕೃಷಿಗೆ ದೇಶ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಮಾರುಕಟ್ಟೆ ಇದೆ. ಹಾಗೂ ಬೆಲೆಯು ಉತ್ತಮವಾಗಿ ಸಿಗುತ್ತದೆ. ಪ್ರಸ್ತುತ ದಿನಮಾನಗಳಲ್ಲಿ ಅಣಬೆ ಕೃಷಿಯು ದಿನದಿಂದ ದಿನಕ್ಕೆ ತನ್ನ ವ್ಯಾಪ್ತಿಯನ್ನು ಹೆಚ್ಚಿಸುತ್ತಾ ಹೋಗುತ್ತಿದೆ. ನಾವು ದಿನನಿತ್ಯ ಅನೇಕ ಪ್ರಗತಿಪರ ಅಣಬೆ ಕೃಷಿಕರನ್ನು ನೋಡುತ್ತಿದ್ದೇವೆ. ಅವರ ಯಶೋಗಾಥೆ ಹಾಗೂ ಉದ್ಯಮವನ್ನು ತಮ್ಮ ಮುಂದೆ ಇಡುತ್ತೇವೆ.
ಅಣಬೆ ಕೃಷಿಗೆ ತಂತ್ರಜ್ಞಾನ ಹಾಗೂ ಕೌಶಲ್ಯತೆ ಅತ್ಯಂತ ಮಹತ್ವದ ಪಾತ್ರವನ್ನು ವಹಿಸುತ್ತದೆ. ಇದಕ್ಕಾಗಿ ನೀವು ಅಡಬೆ ಕೃಷಿ ಮಾಡಬೇಕಿದ್ದರೆ ತರಬೇತಿ ಅತ್ಯವಶ್ಯಕ. ಹಾಗಾಗಿ ಈ ತರಬೇತಿಯು ಕೌಶಲ್ಯವುಳ್ಳ ವಿಜ್ಞಾನಿಗಳಿಂದ ಹಾಗೂ ಉದ್ಯಮಿಗಳ ನೇತೃತ್ವದಲ್ಲಿ ಪಡೆದರೆ ನೀವು ಉತ್ತಮವಾಗಿ ಹಣಬೆ ಕೃಷಿಯನ್ನು ಮಾಡಬಹುದು. ಅದಕ್ಕಾಗಿ ಒಂದು ಒಳ್ಳೆಯ ಸುವರ್ಣ ಅವಕಾಶ ಇಲ್ಲಿದೆ. ಈ ಎಲ್ಲ ಮಾಹಿತಿಗಳಿಗಾಗಿ ಸಂಪೂರ್ಣ ಅಂಕಣವನ್ನು ಕೊನೆಯವರೆಗೆ ಸ್ಪಷ್ಟವಾಗಿ ಓದಿ.
ಈ ತರಬೇತಿಯು ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು, ರೈತ ತರಬೇತಿ ಸಂಸ್ಥೆ, ವಿಸ್ತರಣಾ ನಿರ್ದೇಶನಾಲಯ ಮತ್ತು ಕೃಷಿ ಸೂಕ್ಷ್ಮ ಜೀವಶಾಸ್ತ್ರ ವಿಭಾಗ, ಕೃಷಿ ಮಹಾವಿದ್ಯಾಲಯ ಜಿಕೆವಿಕೆ ಇವರ ಸಹಯೋಗದಲ್ಲಿ ನಡೆಯಲಿದೆ. ಈ ಸಂಸ್ಥೆಗಳು ಕೃಷಿಯ ವಿಭಾಗದಲ್ಲಿ ಅತ್ಯಂತ ಒಳ್ಳೆಯ ಹೆಸರು ಪಡೆದಿದೆ. ಹಾಗೂ ಅನೇಕ ರೈತರಿಂದ ಪ್ರಶಂಸೆ ಗಳಿಸಿದೆ. ಹಾಗಾಗಿ ರೈತರು ಈ ತರಬೇತಿಯನ್ನು ಪಡೆದುಕೊಳ್ಳಬೇಕು.
ಈ ತರಬೇತಿ ಎಷ್ಟು ದಿನ ಮತ್ತು ಯಾವಾಗ ಇರಲಿದೆ?
ಕೃಷಿ ವಿಶ್ವವಿದ್ಯಾಲಯ ಬೆಂಗಳೂರು ಇವರ ನೇತೃತ್ವದಲ್ಲಿ ನಡೆಯುವ ಈ ತಂತ್ರಜ್ಞಾನ ತರಬೇತಿಯು ಐದು ದಿನಗಳನ್ನು ಸಾಮರ್ಥ್ಯ ಅಭಿವೃದ್ಧಿ ತರಬೇತಿ ಇಂದ ಕೂಡಿರುತ್ತದೆ ಹಾಗೂ ಬೆಳಗ್ಗೆ 9:30 ರಿಂದ ಸಾಯಂಕಾಲ 5:00 ವರೆಗೆ ನಡೆಯಲಿದೆ.
ಈ ತರಬೇತಿಯ ವಿಧಾನ ಯಾವ ರೀತಿ ಇರಲಿದೆ?
ಈ ತರಬೇತಿಯು ಒಟ್ಟು ನಾಲ್ಕು ವಿಧಾನಗಳನ್ನು ಹೊಂದಿದೆ. ಉಪನ್ಯಾಸ, ಕೌಶಲ್ಯ ತರಬೇತಿ, ಪ್ರಾತ್ಯಕ್ಷಿಕೆ ಹಾಗೂ ಕ್ಷೇತ್ರ ಭೇಟಿ, ಈ ವಿಧಾನಗಳು ಇರಲಿವೆ.
ಆದ್ದರಿಂದ ರೈತರು ತಂತ್ರಜ್ಞಾನದ ತಮ್ಮ ಸಂಪೂರ್ಣ ಕೌಶಲ್ಯವನ್ನು ಅಭಿವೃದ್ಧಿಪಡಿಸಿಕೊಳ್ಳಬಹುದು.
ಈ ಉತ್ಪಾದನಾ ತಂತ್ರಜ್ಞಾನ ತರಬೇತಿ ಯಾರಿಗೆಲ್ಲ ಇರಲಿದೆ?
ಆಸಕ್ತ ಕೃಷಿಕರು ಕೃಷಿಕ ಮಹಿಳೆಯರು ಗ್ರಾಮೀಣ ಯುವಕರು ಅಥವಾ ಯುವತಿಯರು ಮತ್ತು ಅಣಬೆ ಉದ್ಯಮದಲ್ಲಿ ಆಸಕ್ತಿ ಇರುವ ನಗರವಾಸಿಗಳು ಈ ತರಬೇತಿಯನ್ನು ಆಯ್ಕೆ ಮಾಡಿಕೊಳ್ಳಬಹುದು.
ಈ ತಂತ್ರಜ್ಞಾನ ತರಬೇತಿಯ ಉದ್ದೇಶಗಳೇನು?
- ಅಣಬೆ ಉತ್ಪಾದನಾ ಕೌಶಲ್ಯವನ್ನು ಆಸಕ್ತ ರೈತರಿಗೆ ತಿಳಿಸಿಕೊಡುವುದು.
- ಪ್ರಾತ್ಯಕ್ಷಿಕೆಯ ಮೂಲಕ ಅಣಬೆ ಬೇಸಾಯದ ಹಂತಗಳನ್ನು ಪರಿಚಯಿಸುವುದು ಹಾಗೂ ರೈತರಿಗೆ ತಿಳಿಸಿಕೊಡುವುದು.
- ಪೌಷ್ಟಿಕತೆ ಮತ್ತು ಮೌಲ್ಯವರ್ಧನೆ ಕುರಿತು ತಿಳಿಸುವುದು.
- ಯಾವ ರೀತಿ ರೈತರು ತಮ್ಮ ಕೃಷಿಯಲ್ಲಿ ಮಾರುಕಟ್ಟೆ ತಾಂತ್ರಿಕತೆ & ಉದ್ಯಮಶೀಲತೆ ಅಭಿವೃದ್ಧಿ ಕುರಿತು ಮಾಹಿತಿ
ಈ ತರಬೇತಿಯು ಯಾವ ವಿಷಯಗಳನ್ನು ಒಳಗೊಂಡಿರುತ್ತದೆ?
- ಅಣಬೆ ಕೃಷಿ: ಪರಿಚಯ ಮತ್ತು ಮಹತ್ವ
- ಆಯಿಸ್ಟರ್, ಬಟನ್ ಮತ್ತು ಮಿಲ್ಕಿ ಅಣಬೆಯ ಉತ್ಪಾದನಾ ತಂತ್ರಜ್ಞಾನಗಳು
- ಬೀಜ ಉತ್ಪಾದನೆ
- ಆಯಿಸ್ಟರ್ ಅಣಬೆ ಕೃಷಿ ಉತ್ಪಾದನಾ ತಂತ್ರಜ್ಞಾನಗಳು
- ಇತರೆ ಅಣಬೆ ಕೃಷಿ ಉತ್ಪಾದನಾ ತಂತ್ರಜ್ಞಾನಗಳು
- ಅಣಬೆ ಉದ್ಯಮಿಯೊಂದಿಗೆ ಚರ್ಚೆ ಮತ್ತು ಅವರ ಘಟಕಕ್ಕೆ ಕ್ಷೇತ್ರ ಭೇಟಿ
- ಅಣಬೆಯ ಸಂಸ್ಕರಣೆ, ಸಂರಕ್ಷಣೆಯಲ್ಲಿ ಸುರಕ್ಷತಾ ವಿಧಾನಗಳು
- ಈ ಬೆಳೆಯ ವೈವಿಧ್ಯತೆ ಮತ್ತು ಮೌಲ್ಯವರ್ಧನೆ
- ಅಣಬೆ ಉತ್ಪಾದನೆಯ ಆರ್ಥಿಕತೆ ಹಾಗೂ ಮಾರುಕಟ್ಟೆ ನಿರ್ವಹಣೆ
- ಅಣಬೆಯಲ್ಲಿ ರೋಗ ಮತ್ತು ಕೀಟಗಳ ನಿರ್ವಹಣೆ
- ಬೆಳೆಗಾರರಲ್ಲಿ ಉದ್ಯಮಶೀಲತೆ ಅಭಿವೃದ್ಧಿಗೆ ಪ್ರೇರಣೆ
- ಈ ಉದ್ಯಮ ಆರಂಭಿಸಲು ಧನ ಸಹಾಯಕ್ಕಾಗಿ ಪ್ರಾಯೋಜನಾ ವರದಿ ತಯಾರಿಕೆ ಹಾಗೂ ನಿರ್ವಹಣೆ
ಅರ್ಜಿ ಸಲ್ಲಿಸುವ ಕೊನೆಯ ದಿನ ಯಾವಾಗ?
ಈ ಉತ್ಪಾದನಾ ತಂತ್ರಜ್ಞಾನ ತರಬೇತಿಗಾಗಿ ದಿನಾಂಕ 08-09-2025 ರೊಳಗೆ ಸಲ್ಲಿಸತಕ್ಕದ್ದು.
ಈ ಉತ್ಪಾದನಾ ತಂತ್ರಜ್ಞಾನ ತರಬೇತಿಗಾಗಿ ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು!
ಆಸಕ್ತ ಕೃಷಿಕರು ರೂ. 4720 ಯನ್ನು ಕೆಳಗೆ ತಿಳಿಸಿರುವ ಬ್ಯಾಂಕ್ ಖಾತೆಗೆ ಜಮಾ ಮಾಡಿ ಹಾಗೂ ಕೆಳಗೆ ನೀಡಿರುವ ಸಂಖ್ಯೆಗೆ ಪಾವತಿ ಮಾಡಿದ ಸ್ಕ್ರೀನ್ ಶಾಟ್ ಹಾಗೂ ತರಬೇತಿಗೆ ಹಾಜರಾಗುವ ರೈತರ ಆಧಾರ್ ಪ್ರತಿಯನ್ನು ಕಳುಹಿಸತಕ್ಕದ್ದು. ಈ ಒಟ್ಟು ಪಾವತಿಸಿದ ಹಣದಲ್ಲಿ ವಸತಿ ಸೌಲಭ್ಯ ಇರುವುದಿಲ್ಲ. ಆದರೆ ಬೆಳಗಿನ ಉಪಹಾರ ಹಾಗೂ ಮಧ್ಯಾಹ್ನದ ಊಟದ ವ್ಯವಸ್ಥೆ ಇರುತ್ತದೆ.
Account number: 0425101030797
Account name: chief instructor Canara Bank GKVK Bengaluru
IFSC code : CNRB0002737
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಯಾವ ರೀತಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ?
ಮೊದಲ 20 ಅಭ್ಯರ್ಥಿಗಳನ್ನು ತರಬೇತಿಗೆ ಆದ್ಯತೆಯ ಮೇಲೆ ಪರಿಗಣಿಸಲಾಗುತ್ತದೆ ಮತ್ತು ನಂತರದವರನ್ನು ಮುಂದಿನ ತರಬೇತಿಯ ತಂಡಕ್ಕೆ ಪರಿಗಣಿಸಲಾಗುವುದು.
ಮೊತ್ತವನ್ನು ಪಾವತಿಸಿದ ನಂತರ ಸ್ಟೀನ್ ಶಾಟ್ನ್ನು ಮತ್ತು ಆಧಾರ್ ಪ್ರತಿಯನ್ನು ಈ ಕೆಳಕಂಡ ಮೊಬೈಲ್ ನಂಬರ್‌ಗೆ ಕಳುಹಿಸತಕ್ಕದ್ದು.
ಒಮ್ಮೆ ಬಂದ ಮೊತ್ತವನ್ನು ಯಾವುದೇ ಕಾರಣಕ್ಕೂ ಮರುಪಾವತಿ ಮಾಡಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
080-23626455 / 9620459342 / 9742988880 (9.00 ರಿಂದ 4.00 ಗಂಟೆವರೆಗೆ ಮಾತ್ರ)