ರೈತರ ಭೂಮಿಯ ಜಂಪ್‌ ಸರ್ವೆ ಪಹಣಿ ಸಮಸ್ಯೆಗೆ ಪರಿಹಾರ: 65 ವರ್ಷದ ವಿಘ್ನಕ್ಕೆ ಮುಕ್ತಿ

ಕಳೆದ 65 ವರ್ಷಗಳಿಂದ ಬಗೆಹರಿಯದೇ ಉಳಿದುಕೊಂಡಿದ್ದ ಕೊಪ್ಪಳ ಜಿಲ್ಲೆಯ ರೈತರ ಭೂಮಿಯ ಜಂಪ್‌ ಸರ್ವೆ ಪಹಣಿ ಸಮಸ್ಯೆಗೆ ಜಿಲ್ಲಾಡಳಿತ ಕೈಗೊಂಡ ತ್ವರಿತ ಕ್ರಮಕ್ಕೆ ಕಂದಾಯ ಇಲಾಖೆ ಮೆಚ್ಚುಗೆ ವ್ಯಕ್ತಪಡಿಸಿದೆ.ಖುದ್ದು ಕಂದಾಯ ಸಚಿವ ಕೃಷ್ಣ ಬೈರೇಗೌಡ, ಜಿಲ್ಲೆಯ ಸಾಧನೆ ಕಂಡು ಹರ್ಷ ವ್ಯಕ್ತ ಪಡಿಸಿರುವುದಲ್ಲದೇ ಸಮರ್ಪಕವಾಗಿ ಕಾರ್ಯ ನಿರ್ವಹಿಸಿದ ಅಧಿಕಾರಿಗಳ ಶ್ರಮವನ್ನು ಕೊಂಡಾಡಿ ಅಭಿನಂದನಾ ಪತ್ರ ಬರೆದು ಕಳುಹಿಸಿದ್ದಾರೆ.

ಯಾರಿಗೆಲ್ಲಾ ಅಭಿನಂದನಾ ಪತ್ರ

ಈ ಹಿಂದಿನ ಜಿಲ್ಲಾಧಿಕಾರಿ ನಲೀನ್‌ ಅತುಲ್‌, ಉಪ ವಿಭಾಗಾಧಿಕಾರಿ ಕ್ಯಾ.ಮಹೇಶ ಮಾಲಗಿತ್ತಿ, ಕೊಪ್ಪಳ ಹಾಗೂ ಯಲಬುರ್ಗಾ ತಾಲೂಕಿನ ತಹಸೀಲ್ದಾರರು, ಡಿಸಿ ಕಚೇರಿಯ ತಾಂತ್ರಿಕ ಸಹಾಯಕರು ಹಾಗೂ ಪದ ನಿಮಿತ್ತ ಭೂ ದಾಖಲೆಗಳ ಉಪ ನಿರ್ದೇಶಕರು ನಿರಂತರ ಶ್ರಮ ಹಾಕಿದ ಪರಿಣಾಮ ವಿಶೇಷವಾಗಿ ಕೊಪ್ಪಳ ಹಾಗೂ ಯಲಬುರ್ಗಾ ತಾಲೂಕಿನಲ್ಲಿದ್ದ 5500ಕ್ಕೂ ರೈತರ ಜಂಪ್‌ ಸರ್ವೆ ಪಹಣಿ ಸಮಸ್ಯೆಗಳು ಬಗೆಹರಿದಿವೆ. ಹೀಗಾಗಿ ಸಚಿವರಿಂದ ಅಭಿನಂದನಾ ಪತ್ರ ಅಧಿಕಾರಿಗಳಿಗೆ ದೊರಕಿದೆ.
ಏನಿದು ಜಂಪ್‌ ಸರ್ವೆ ಸಮಸ್ಯೆ?

ಕೊಪ್ಪಳ ಹಾಗೂ ಯಲಬುರ್ಗಾ ತಾಲೂಕಿನ ಹಲವು ಗ್ರಾಮಗಳ ರೈತರಿಗೆ ಭೂಮಿಯಿದ್ದರೂ ಅದರಡಿ ಸರಕಾರಧಿದ ಯೋಜನೆ ಪಡೆಯುವ ಅವಕಾಶವಿರಲಿಲ್ಲ. ಕಷ್ಟದ ಸಮಯದಲ್ಲಿನಿಯಮಾನುಸಾರ ಭೂಮಿ ಮಾರಾಟ ಮಾಡುವಂತಿರಲಿಲ್ಲ. ಈ ಎಲ್ಲ ಗ್ರಾಮಗಳ ಭೂ ದಾಖಲೆ 1963 ರಲ್ಲಿರಿವಿಜನ್‌ ಸೆಟಲ್‌ ಮೆಂಟ್‌ ಆಗಿದೆ. ಸದರಿ ರಿವಿಶನ್‌ ಭೂಮಾಪನ ವ್ಯವಸ್ಥೆಯ ದಾಖಲೆಗಳಂತೆ 1953-54 ರ ಖಾತಾ ಪಹಣಿ ಹಾಗೂ 1963 ರಿಂದ 1999ರ ಕೈಬರಹ ಪಹಣಿಗಳು ಆಕಾರ್‌ ಬಂದನಂತೆ ಹೊಂದಾಣಿಕೆಯಾಗಬೇಕಾಗಿತ್ತು.

ಆದರೆ, ಈ ಕೆಲಸ ನನೆಗುದಿಗೆ ಬಿದ್ದು ಭೂ ದಾಖಲೆಗಳ ಪ್ರಕಾರ ಪಹಣಿ ಪತ್ರಿಕೆಗಳು ಹೊಂದಾಣಿಕೆಯಾಗದೆ ಇದ್ದರಿಂದ ರೈತರ ಜಮೀನು ಅನುಭೋಗದಲ್ಲಿಒಂದು ಕಡೆ ಇದ್ದರೆ ಭೂ ದಾಖಲೆಗಳಲ್ಲಿಸರ್ವೆ ನಂಬರ್‌ಗಳು ಮತ್ತೊಂದು ಕಡೆಯಿದ್ದವು.

ಈ ಎಲ್ಲ ಗ್ರಾಮಗಳ ತಿದ್ದುಪಡಿ ಕಾರ್ಯ 2021 ರಿಂದ ಕೈಗೆತ್ತಿಕೊಂಡು ಕಂದಾಯ ಆದಾಲತ್‌ ಮುಖಾಂತರ ಗ್ರಾಮದ ತಿದ್ದುಪಡಿ ಮಾಡಬೇಕಾದ ಸರ್ವೆ ನಂಬರ್‌ಗಳಿಗೆ ಮುಂಚಿತವಾಗಿ ದಾಖಲೆಗಳನ್ನು ಪಿಡಿಒಗಳಿಂದ ತಯಾರಿಸಿ ತಾಲೂಕು ಭೂಮಾಪಕರು ಹಾಗೂ ಪರ್ಯಾಯ ವೀಕ್ಷಕರಿಂದ ಗ್ರಾಮದಲ್ಲಿ ಗ್ರಾಮ ಸಭೆ ಮಾಡಿ ಸಮರ್ಪಕ ಮಾಹಿತಿ ಪಡೆಯಲಾಯಿತು.
ಹೊಂದಾಣಿಕೆ ಕಡತ ರವಾನೆ

ಪಹಣಿದಾರರು ಆಯಾ ಸರ್ವೆ ನಂಬರ್‌ನಲ್ಲಿಸಾಗುವಳಿ ಮಾಡುತ್ತಿರುವ ಬಗ್ಗೆ ಭೂಮಾಪಕರು ವರದಿ ನೀಡಿದರು. ನಂತರ ತಾಲೂಕು ಮಟ್ಟದಲ್ಲಿ ತಹಸೀಲ್ದಾರರು ಪ್ರತಿ ಸರ್ವೆ ನಂಬರಗಳ ರೈತರಿಗೆ ಪಿಡಿಒ ಹಾಗೂ ಭೂಮಾಪಕರು ನೀಡಿದ ವರದಿ ಪರಿಶೀಲಿಸಿ ಆಯಾ ಸರ್ವೆ ನಂಬರ್‌ಗಳ ರೈತರ ಸಮಕ್ಷಮ ಹೊಂದಾಣಿಕೆ ಮಾಡಿ ಕಡತವನ್ನು ಎಸಿಗೆ ರವಾನಿಸಿದರು. ಎಲ್ಲಭೂ ದಾಖಲೆಗಳು, ಹಳೆಯ ಕೈ ಬರಹ ಪಹಣಿಗಳು ಮತ್ತು ರೈತರ ಒಪ್ಪಿಗೆ ಪತ್ರ ಆಧಾರದ ಮೇಲೆ ಜಂಪ್‌ ಸರ್ವೆ ನಂಬರ್‌ಗಳನ್ನು ಬದಲಾವಣೆ ಮಾಡಿ ರಿವಿಜನ್‌ ಸೆಟಲ್ಮೆಂಟ್‌ ಪ್ರಕಾರ ತಿದ್ದುಪಡಿ ಆದ ಪಹಣಿಗಳೆಂದು ಉಪವಿಭಾಗಾಧಿಕಾರಿ ನಮೂದಿಸಿ ಆದೇಶ ಹೊರಡಿಸಿದ್ದರಿಂದ ಜಿಲ್ಲೆಯ 38 ಗ್ರಾಮಗಳ ರೈತರ ಸಮಸ್ಯೆಗಳಿಗೆ ಮುಕ್ತಿ ಸಿಗುತ್ತಿದೆ.

ಕೊಪ್ಪಳ ಹಾಗೂ ಯಲಬುರ್ಗಾ ತಾಲೂಕಿನಲ್ಲಿ ಜಂಪ್‌ ಸರ್ವೆ ಸಮಸ್ಯೆಯಿಂದ ಹಲವು ಗ್ರಾಮಗಳು ಬಳಲುತ್ತಿದ್ದವು. ಇಲಾಖೆಯ ಅಧಿಕಾರಿಗಳೆಲ್ಲರ ಸಾಂಘಿಕ ಪ್ರಯತ್ನದಿಂದ ಈ ಸಮಸ್ಯೆ ಬಗೆಹರಿಸಲಾಗಿದೆ ಎಂದು ಕಲಬುರಗಿ ಕೆಕೆಆರ್‌ಡಿಬಿ ಕಾರ್ಯದರ್ಶಿ ನಲೀನ್‌ ಅತುಲ್‌ ತಿಳಿಸಿದ್ದಾರೆ.

ಜಂಪ್‌ ಸರ್ವೆ ಸಮಸ್ಯೆಯಿರುವ ಗ್ರಾಮಗಳಲ್ಲಿಸಮಸ್ಯೆ ಬಗೆಹರಿದಿದ್ದಕ್ಕೆ ಕಂದಾಯ ಸಚಿವರು ಅಭಿನಂದನಾ ಪತ್ರ ಕಳುಹಿಸಿದ್ದಾರೆ. ಈ ಹಿಂದಿನ ಜಿಲ್ಲಾಧಿಕಾರಿಗಳು ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು, ಭೂ ದಾಖಲೆಗಳ ಉಪ ನಿರ್ದೇಶಕರು ಸೇರಿ ಎಲ್ಲಅಧಿಕಾರಿಗಳ ಶ್ರಮದಿಂದ ಶೇಕಡಾ 90 ರಷ್ಟು ಸಮಸ್ಯೆ ಬಗೆಹರಿದಿದೆ. ಉಳಿದ ರೈತರ ಪಹಣಿ ಸಮಸ್ಯೆ ಶೀಘ್ರ ಬೇಗ ಬಗೆಹರಿಸಲಾಗುವುದು ಕೊಪ್ಪಳ ಜಿಲ್ಲಾಧಿಕಾರಿ ಸುರೇಶ ಇಟ್ನಾಳ್‌

ಜಂಪ್‌ ಸರ್ವೆ ಕೇಸ್‌ಗಳ ವಿಲೇವಾರಿಗೆ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿವಿಶೇಷ ಮುತುವರ್ಜಿ ವಹಿಸಲಾಗಿತ್ತು. ಹೀಗಾಗಿ ಸಮಸ್ಯೆ ತ್ವರಿತವಾಗಿ ಬಗೆಹರಿಯಿತು. ಇದನ್ನು ನೋಡಿ ಕಂದಾಯ ಸಚಿವರು ಅಭಿನಂದನಾ ಪತ್ರ ಬರೆದಿರುವುದು ಕೆಲಸ ಮಾಡಲು ಮತ್ತಷ್ಟು ಪ್ರೇರಣೆ ನೀಡಿದೆ ಕೊಪ್ಪಳದ ಉಪ ವಿಬಾಗಾಧಿಕಾರಿಗಳು ಕ್ಯಾ.ಮಹೇಶ ಮಾಲಗಿತ್ತಿ ತಿಳಿಸಿದ್ದಾರೆ.

Spread positive news

Leave a Reply

Your email address will not be published. Required fields are marked *