ಪ್ರಿಯ ಸಾರ್ವಜನಿಕರೇ ಇವತ್ತು ನಾವು ಒಂದು ಹೊಸ ಸುದ್ದಿ ಕೊಡುತ್ತೇನೆ. ಶಿಕ್ಷಣ ಸಚಿವಾಲಯದ ಅಧೀನ ಸ್ವಾಯತ್ತ ಸಂಸ್ಥೆ, ಕೇಂದ್ರ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ವಿಭಾಗದ ವತಿಯಿಂದ ಜವಾಹರ ನವೋದಯ ವಿದ್ಯಾಲಯಗಳಲ್ಲಿ 2026-27ನೇ ಸಾಲಿಗೆ ಆಯ್ಕೆ ಪರೀಕ್ಷೆಯ ಮೂಲಕ 6ನೇ ತರಗತಿಗೆ ಪ್ರವೇಶಕ್ಕಾಗಿ ಅರ್ಹ ವಿದ್ಯಾರ್ಥಿಗಳಿಂದ ಆನ್ಲೈಸನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು 2025 ನೇ ಜುಲೈ 29 ಕೊನೆಯ ದಿನಾಂಕವಾಗಿದೆ. ಅರ್ಜಿ ಸಲ್ಲಿಸಬಯಸುವ ವಿದ್ಯಾರ್ಥಿಗಳು ಕಾರ್ಯನಿರ್ವಹಿಸುತ್ತಿರುವ ಸಂಬಂಧಿಸಿದ ಜವಾಹರ ನವೋದಯ ವಿದ್ಯಾಲಯಗಳ ಆಯಾ ಜಿಲ್ಲೆಯ ನಿವಾಸಿಗಳು ಆಗಿರಬೇಕು ಮತ್ತು 2025-26 ನೇ ಶೈಕ್ಷಣಿಕ ವರ್ಷದಲ್ಲಿ ಅದೇ ಜಿಲ್ಲೆಯ ಸರ್ಕಾರಿ/ ಸರ್ಕಾರದಿಂದ ಮಾನ್ಯತೆ ಪಡೆದಿರುವ ಶಾಲೆಯಲ್ಲಿ 5ನೇ ತರಗತಿಯಲ್ಲಿ ಓದುತ್ತಿರಬೇಕು.
ವಿದ್ಯಾರ್ಥಿಯು 3 ಮತ್ತು 4 ನೇ ತರಗತಿಯ ಪೂರ್ಣ ಶೈಕ್ಷಣಿಕ ವರ್ಷವನ್ನು ಸರ್ಕಾರಿ/ಸರ್ಕಾರದಿಂದ ಮಾನ್ಯತೆ ಪಡೆದಿರುವ ಶಾಲೆಯಲ್ಲಿ ಪೂರ್ಣಾವಧಿ ಶಾಲಾ ಶಿಕ್ಷಣ ಪಡೆದು ತೇರ್ಗಡ ಹೊಂದಿರಬೇಕು. ದಿನಾಂಕ:01-05-2014 ರಿಂದ ದಿನಾಂಕ: 31-07-2016 ಮಧ್ಯೆ ಜನಿಸಿದವರಾಗಿರಬೇಕು.
ಪ್ರತಿ ಜಿಲ್ಲೆಯಲ್ಲಿ ಸಹ ಶಿಕ್ಷಣ ವಸತಿ ಶಾಲೆಗಳು, ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕ ವಸತಿ ವ್ಯವಸ್ಥೆ, ಉಚಿತ ಶಿಕ್ಷಣ, ಆಹಾರ ಮತ್ತು ವಸತಿ ವ್ಯವಸ್ಥೆ, ವಲಸೆ ಯೋಜನೆಯ ಮೂಲಕ ವೈವಿಧ್ಯಮಯ ಸಾಂಸ್ಕøತಿಕ ವಿನಿಮಯ, ಕ್ರೀಡೆ ಮತ್ತು ಆಟೋಟಗಳಿಗೆ ಉತ್ತೇಜನ ನೀಡಲಾಗುತ್ತಿದೆ. ಎನ್.ಸಿ.ಸಿ., ಸ್ಕೌಟ್ಸ್ ಮತ್ತು ಗೈಡ್ಸ್ ಎನ್.ಎಸ್.ಎಸ್. ತರಬೇತಿ ನೀಡಲಾಗುವುದು.
ಜಿಲ್ಲೆಯಲ್ಲಿ ಕನಿಷ್ಠ ಶೇ. 75% ರಷ್ಟು ಸ್ಥಾನಗಳು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಂದ ತುಂಬಲಾಗುವುದು. ಸರ್ಕಾರದ ನಿಯಮದನ್ವಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಒಬಿಸಿ ಮತ್ತು ದಿವ್ಯಾಂಗ ವಿದ್ಯಾರ್ಥಿಗಳಿಗೆ ಮೀಸಲಾತಿ ಇದೆ. ಕನಿಷ್ಠ 1/3 ರಷ್ಟು ಸ್ಥಾನಗಳು ಬಾಲಕಿಯರಿಗೆ ಮೀಸಲಾಗಿರುತ್ತವೆ.
ಮತ್ತೆ ಯಾವ ಯಾವ ವಿದ್ಯಾರ್ಥಿ ವೇತನ ಜಾರಿಯಲ್ಲಿದೆ?
* ವಿದ್ಯಾರ್ಥಿವೇತನ ನೀಡುವ ಇಲಾಖೆ ಮತ್ತು ಅರ್ಜಿ
* ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ.
* ಆರ್ಯ ವೈಶ್ಯ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ.
* ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ.
* ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ.
* ತಾಂತ್ರಿಕ ಶಿಕ್ಷಣ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ.
* ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ
ಆಯ್ಕೆ ಪರೀಕ್ಷೆ ದಿನಾಂಕ ಬೇಸಿಗೆಕಾಲ 2025 ನೇ ಡಿಸೆಂಬರ್ 13 ಹಾಗೂ ಚಳಿಗಾಲದಲ್ಲಿ 2026 ಏಪ್ರಿಲ್ 11 ರಂದು ಆಯ್ಕೆ ಪರೀಕ್ಷೆಗಳು ನಡೆಯುತ್ತವೆ ನೋಂದಣಿ ಮತ್ತು ವಿವರಗಳಿಗಾಗಿ ವೆಬ್ಸೈಟ್ https://navodava.gov.in ನ್ನು ಸಂಪರ್ಕಿಸಬಹುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ಅರ್ಜಿ ಹಾಕಲು ಬೇಕಾದ ದಾಖಲೆಗಳು –
* ವಿದ್ಯಾರ್ಥಿಗಳ ಎಸ್.ಎ.ಟಿ.ಎಸ್ ಗುರುತಿನ ಸಂಖ್ಯೆ / ಕಾಲೇಜು ನೋಂದಣಿ ಸಂಖ್ಯೆ
* ವಿದ್ಯಾರ್ಥಿ ಮತ್ತು ಪೋಷಕರ ಆಧಾರ್ ಸಂಖ್ಯೆ
* ವಿದ್ಯಾರ್ಥಿ ಮೊಬೈಲ್ ಸಂಖ್ಯೆ
* ವಿದ್ಯಾರ್ಥಿಯ ಹೆಸರಿನಲ್ಲಿರುವ ಆರ್.ಡಿ ಇಂದ ಶುರುವಾಗುವ ಜಾತಿ / ಆದಾಯ / ಆರ್ಥಿಕವಾಗಿ ದುರ್ಬಲ ವಿಭಾಗದ (ಬ್ರಾಹ್ಮಣ ವರ್ಗದ ವಿದ್ಯಾರ್ಥಿಗಳಿಗೆ ಮಾತ್ರ) ಪ್ರಮಾಣ ಪತ್ರಗಳ ಸಂಖ್ಯೆ.
* ಇ-ದೃಢೀಕರಿಸಿದ ದಾಖಲೆಗಳ ಸಂಖ್ಯೆಗಳು
* ದಿವ್ಯಾಂಗ ವಿದ್ಯಾರ್ಥಿಯಾಗಿದ್ದಲ್ಲಿ ಭಾರತ ಸರ್ಕಾರದಿಂದ ನೀಡಿರುವ ಅಂಗವೈಕಲ್ಯ ಕಾರ್ಡ್ ಸಂಖ್ಯೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 29.07.2025 ಯಾಗಿದ್ದು ಅರ್ಜಿಯನ್ನು https://cbseitms.rcil.gov.in/nvs/Index/Registration ವೆಬ್ ಸೈಟ್‍ನಲ್ಲಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಜವಾಹರ್ ನವೋದಯ ವಿದ್ಯಾಲಯ ಇರುವ ಜಿಲ್ಲೆಯ ನಿವಾಸಿಯಾಗಿರಬೇಕು, 2025-26ರ ಶೈಕ್ಷಣಿಕ ಅವಧಿಯಲ್ಲಿ 5ನೇ ತರಗತಿಯಲ್ಲಿ ಓದುತ್ತಿರಬೇಕು. ಅಭ್ಯರ್ಥಿಯು 01.05.2014 ರಿಂದ 30.07.2016ರ ನಡುವೆ ಜನಿಸಿರಬೇಕು. ಪರೀಕ್ಷೆ ನಡೆಯುವ ದಿನಾಂಕ 13.12.2025 ಅಗಿರುತ್ತೇದೆ ಎಂದು ಜ.ನ.ವಿ, ಉಡುವಳ್ಳಿ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನವೋದಯ ವಿದ್ಯಾಲಯ ಯೋಜನೆಯ ಪ್ರಕಾರ, ಪ್ರತಿ ಜಿಲ್ಲೆಯಲ್ಲಿ ಹಂತ ಹಂತವಾಗಿ ಒಂದು ಜವಾಹರ್ ನವೋದಯ ವಿದ್ಯಾಲಯವನ್ನು ಸ್ಥಾಪಿಸಲಾಗುವುದು.
ಪ್ರಸ್ತುತ, 27 ರಾಜ್ಯಗಳು ಮತ್ತು 08 ಕೇಂದ್ರಾಡಳಿತ ಪ್ರದೇಶಗಳಲ್ಲಿ 654 ವಿದ್ಯಾಲಯಗಳು ಕಾರ್ಯನಿರ್ವಹಿಸುತ್ತಿವೆ.
ಈ ರೀತಿ ಅರ್ಜಿ ಸಲ್ಲಿಸಿ
JNV ತರಗತಿ 6 ನೇ ತರಗತಿಯಲ್ಲಿ ಪ್ರವೇಶಕ್ಕಾಗಿ ನೋಂದಾಯಿಸಲು, ನೀವು ನವೋದಯ ವಿದ್ಯಾಲಯದ ಅಧಿಕೃತ ವೆಬ್‌ಸೈಟ್ ಅಂದರೆ navodaya.gov.in ಭೇಟಿ ನೀಡಿ
ಇಲ್ಲಿ ನೀವು ಮುಖಪುಟದಲ್ಲಿ ಕ್ಲಾಸ್ 6 ಅಪ್ಲಿಕೇಶನ್ ಲಿಂಕ್ ಅನ್ನು ನೋಡುತ್ತೀರಿ, ಅದರ ಮೇಲೆ ಕ್ಲಿಕ್ ಮಾಡಿ.
ಹೀಗೆ ಮಾಡುವುದರಿಂದ ಹೊಸ ಪುಟ ತೆರೆದುಕೊಳ್ಳುತ್ತದೆ. ಈ ಪುಟದಲ್ಲಿ ನಿಮ್ಮ ವಿವರಗಳನ್ನು ನೀವು ನಮೂದಿಸಬೇಕಾಗುತ್ತದೆ.
ಅಗತ್ಯ ವಿವರಗಳನ್ನು ನಮೂದಿಸಿ ಮತ್ತು ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
ಮುಂದಿನ ಹಂತದಲ್ಲಿ ಶುಲ್ಕವನ್ನು ಪಾವತಿಸಿ ಮತ್ತು ಫಾರ್ಮ್ ಅನ್ನು ಸಲ್ಲಿಸಿ.
ಎಲ್ಲಾ ವಿವರಗಳನ್ನು ಸರಿಯಾಗಿ ಪರಿಶೀಲಿಸಿದ ನಂತರ ಮತ್ತು ದೃಢೀಕರಣದ ನಂತರ ಫಾರ್ಮ್ ಅನ್ನು ಸಲ್ಲಿಸಿ.
ಈ ಪುಟವನ್ನು ಡೌನ್ಲೋಡ್ ಮಾಡಿ ಮತ್ತು ಭವಿಷ್ಯದಲ್ಲಿ ಇದು ನಿಮಗೆ ಉಪಯುಕ್ತವಾಗಿರುತ್ತದೆ.
ಜೂನ್ 15 ರಿಂದ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಲಭ್ಯವಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜೂನ್ 15 ರಿಂದ ನವೆಂಬರ್ 15 ರವರೆಗೆ ಈ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದು.
ಅರ್ಹತೆಯ ಭಾಗವಾಗಿ, ವಿದ್ಯಾರ್ಥಿಗಳು 2025-26 ನೇ ಸಾಲಿನಲ್ಲಿ 5 ನೇ ತರಗತಿಯಲ್ಲಿ ಓದುತ್ತಿರಬೇಕು ಮತ್ತು ಅವರ ವಯಸ್ಸು ಮೇ 1, 2014 ಮತ್ತು ಏಪ್ರಿಲ್ 30, 2016 ರ ನಡುವೆ ಇರಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪರೀಕ್ಷೆಯು ಎರಡು ಹಂತಗಳಲ್ಲಿ ನಡೆಯಲಿದೆ – ಜನವರಿ 17 (ಹಂತ 1) ಮತ್ತು ಏಪ್ರಿಲ್ 11 (ಹಂತ 2). ಯಾವುದೇ ಅರ್ಜಿ ಶುಲ್ಕವಿಲ್ಲದೆ navodaya.gov.in ಅಥವಾ cbseitms.rcil.gov.in ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕೆಂದು ಅವರು ಹೇಳಿದರು. ಒಟ್ಟು 100 ಅಂಕಗಳಿಗೆ 2 ಗಂಟೆಗಳ ಪರೀಕ್ಷೆ ಇದೆ. ಜೂನ್‌ನಲ್ಲಿ ಫಲಿತಾಂಶ ಬಿಡುಗಡೆಯಾಗಲಿದೆ.