ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ(ಪಿಎಂ-ಕಿಸಾನ್) ಯೋಜನೆಗೆ ಹೊಸದಾಗಿ ಸೇರುವವರು, ಫಲಾನುಭವಿಯಾಗಲು ಬಯಸುವವರು ‘ಕೃಷಿಕರ ಗುರುತಿನ ಚೀಟಿ’ ಹೊಂದುವುದು ಕಡ್ಡಾಯವಾಗಿದೆ. ಈ ಬಗ್ಗೆ ಕೇಂದ್ರ ಕೃಷಿ ಮತ್ತು ರೈತರ ಕ್ಷೇಮಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.
ಪಿಎಂ-ಕಿಸಾನ್ ರೈತರ ವಿಶಿಷ್ಟ ಗುರುತಿನ ಚೀಟಿಗಳು
ಅರ್ಜಿದಾರರು ಕೃಷಿ ಭೂಮಿ ಹೊಂದಿದ್ದಾರೆ ಎಂಬುದನ್ನು ರೈತರ ಗುರು ತಿನ ಚೀಟಿ ದೃಢಪಡಿಸುತ್ತದೆ. ಆದ ಕಾರಣ, ಹೊಸದಾಗಿ ಅರ್ಜಿ ಸಲ್ಲಿಸುವವರು ಕೃಷಿಕರ ಗುರುತಿನ ಚೀಟಿ ಹೊಂದಬೇಕಿದೆ. ಗುರುತಿನ ಚೀಟಿ ಇದ್ದಲ್ಲಿ ನೋಂದಣಿ ಪ್ರಕ್ರಿಯೆ ಸುಲಭ. ಹಾಗಾಗಿ, ಹೊಸ ಅರ್ಜಿದಾರರೆಲ್ಲರೂ ‘ಫಾರ್ಮಸ್್ರ ರಿಜಿಸ್ಟ್ರಿ’ಯಲ್ಲಿ ನೋಂದಣಿ ಮಾಡಿಕೊಳ್ಳಬೇಕು. 10 ರಾಜ್ಯಗಳಲ್ಲಿ ಈ ವ್ಯವಸ್ಥೆ ಜ.1ರಿಂದಲೇ ಜಾರಿಗೆ ಬಂದಿದೆ. ಮುಂಬರುವ ದಿನಗ ‘ಳಲ್ಲಿ ಉಳಿದ ರಾಜ್ಯಗಳಿಗೂ ಇದು ವಿಸ್ತರಣೆಯಾಗಲಿದೆ ಎಂದು ಇಲಾಖೆ ಪ್ರಕಟಣೆಯ್ಲಿ ಹೇಳಲಾಗಿದೆ. ‘ಕಿಸಾನ್ ಪೆಹಚಾನ್ ಪತ್ರ’ ಅಥವಾ ‘ರೈತ ಗುರುತಿನ ಚೀಟಿ’ ಎನ್ನುವುದು ರಾಜ್ಯಗಳ ಭೂ ದಾಖಲೆಗಳ ಜತೆಗೆ ಲಿಂಕ್ ಆಗಿರುವ ಆಧಾರ್ ರೀತಿಯ ವಿಶಿಷ್ಟ ಡಿಜಿಟಲ್ ಗುರುತಿನ ಸಂಖ್ಯೆಯಾಗಿದೆ. ಇದರಲ್ಲಿ ರೈತನ ಹೆಸರು, ಕೃಷಿಭೂಮಿ ಮಾಹಿತಿ, ಆ ಭೂಮಿಯಲ್ಲಿ ಬೆಳೆಯುತ್ತಿರುವ ಬೆಳೆಗಳ ವಿವರಗಳಿರುತ್ತವೆ.
ರಾಜ್ಯ ಸರ್ಕಾರದ ಕಡೆಯಿಂದ ಮಹತ್ವದ ಆದೇಶ ಹೊರ ಬರುತ್ತಿದೆ. ವಿಧಾನಸೌಧದಲ್ಲಿ ಮಾತನಾಡಿದ ಸಚಿವರು ರೈತರಿಗಾಗುತ್ತಿರುವ ತೊಂದರೆಗಳನ್ನು ನಿವಾರಿಸುವ ಸಲುವಾಗಿ ಸರ್ಕಾರ ಪಹಣಿ ತಿದ್ದುಪಡಿ ಮತ್ತು ಪೌತಿ ಖಾತೆ ಇತ್ಯಾದಿಗಳ ಇತ್ಯರ್ಥಕ್ಕಾಗಿ ಕಂದಾಯ ಅದಾಲತ್ಗಳನ್ನು ನಡೆಸುತ್ತಿದೆ. ಮಂಜೂರಾದ ಜಮೀನುಗಳ ಪೋಡಿ, ದುರಸ್ತಿ ಕಾರ್ಯವನ್ನು ಆನ್ಲೈನ್ ಮುಖಾಂತರ ನಿರ್ವಹಿಸಲು ಹೊಸ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ವಿಧಾನ ಮಂಡಲ ಕಲಾಪದಲ್ಲಿ ತಿಳಿಸಿದ್ದಾರೆ.
18 ನೇ ಕಂತನ್ನು ಅಕ್ಟೋಬರ್ 5, 2024 ರಂದು ಬಿಡುಗಡೆ ಮಾಡಲಾಯಿತು. ಪಿಎಂ ಕಿಸಾನ್ ಯೋಜನೆಗೆ ಅರ್ಹರಾಗಲು, ರೈತರು ಈ ಕೆಳಗಿನ ಅವಶ್ಯಕತೆಗಳನ್ನು ಪೂರೈಸಬೇಕು. ಮೊದಲಿಗೆ ಇಕೆವೈಸಿ ಪೂರ್ಣಗೊಳಿಸಿಬೇಕು. ನಂತರ ನಿಮ್ಮ ಬ್ಯಾಂಕ್ ಖಾತೆಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಿರಬೇಕು. ನಿಮ್ಮ ಭೂ ದಾಖಲೆಗಳನ್ನು ಪರಿಶೀಲಿಸಿ ಸಲ್ಲಿಕೆ ಮಾಡಿರಬೇಕು.ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ “PM ಕಿಸಾನ್ ಮೊಬೈಲ್ ಅಪ್ಲಿಕೇಶನ್” ನಲ್ಲಿ ಮುಖದ ದೃಢೀಕರಣ ವೈಶಿಷ್ಟ್ಯವನ್ನು ಬಳಸಿಕೊಂಡು ರೈತರು ತಮ್ಮ eKYC ಅನ್ನು ಮನೆಯಿಂದಲೇ ಸುಲಭವಾಗಿ ಪೂರ್ಣಗೊಳಿಸಬಹುದು.
ಅನ್ನದಾತರಿಗೆ ಕೇಂದ್ರ ಸರ್ಕಾರ ವಿಶೇಷ ಯೋಜನೆ ಜಾರಿಗೆ ತಂದಿದೆ. ಅದು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ. ಈ ಯೋಜನೆಗೆ ಸೇರುವವರಿಗೆ ಮೋದಿ ಸರ್ಕಾರ ಪ್ರತಿ ವರ್ಷ ಉಚಿತವಾಗಿ ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಮಾಡುತ್ತಿದೆ. ಈ ಮಹತ್ವಾಕಾಂಕ್ಷಿ ಯೋಜನೆಯಿಂದ ಕೋಟ್ಯಾಂತರ ರೈತರು ಪ್ರಯೋಜನ ಪಡೆಯುತ್ತಿದ್ದಾರೆ. 19ನೇ ಕಂತಿನ ಹಣ ಬಿಡುಗಡೆಯಾಗುವುದು ತುಸು ವಿಳಂಬವಾದ ಹಿನ್ನೆಲೆಯಲ್ಲಿ ಮುಂದಿನ ಕಂತಿನ ಹಣ ಯಾವಾಗ ಬಿಡುಗಡೆ ಆಗಬಹುದು ಎಂಬ ಕಾತರತೆ ಈ ಯೋಜನೆಯ ಫಲಾನುಭವಿಗಳಲ್ಲಿ ಮನೆಮಾಡಿದೆ.
FID ( ಫ್ರೂಟ್ಸ್ ಐಡಿ) ಲಾಭ ಏನು?
• ರೈತರಿಗೆ ಇದರಿಂದ ಸಬ್ಸಿಡಿ ಹಾಗೂ ತಾನು ಹೊಂದಿರುವ ಭೂಮಿಯ ಬಗ್ಗೆ ಮಾಹಿತಿ ದೊರೆಯುತ್ತದೆ.
• ಸರ್ಕಾರವು ರೈತರ ಮಕ್ಕಳಿಗೆ ವಿದ್ಯಾರ್ಥಿವೇತನ ಈ ನಂಬರ್ ಆದಾರದ ಮೇಲೆ ನೀಡುತ್ತದೆ.
• ಸರ್ಕಾರದ ಪ್ರತಿಯೊಂದು ಕೃಷಿ ಯೋಜನೆ ಪಡೆಯಬಹುದು.
• ಇದರಲ್ಲಿ ಜಮೀನಿನ ಸಂಪೂರ್ಣ ಮಾಹಿತಿ ಪಡೆಯಲು ಸಹಾಯವಾಗುತ್ತದೆ.
• ರಾಜ್ಯದ ಮುಖ್ಯಮಂತ್ರಿಯವರು ಮೊನ್ನೆ ಬಜೆಟ್ ಅಲ್ಲಿ ಘೋಷಣೆ ಮಾಡಿದ ವಾರ್ಷಿಕ 1250 ರೂಪಾಯಿ ಡಿಸೆಲ್ ಸಹಾಯಧನವನ್ನು ಫ್ರೂಟ್ಸ್ ಐಡಿ ಮೂಲಕ ನೇರವಾಗಿ ರೈತರ ಅಕೌಂಟಿಗೆ ಜಮಾ ಆಗುತ್ತದೆ.