ಪ್ರೀಯ ರೈತರೇ ಸರ್ಕಾರವು ಹಾಗೂ ಇನ್ನೀತರ ಖಾಸಗಿ ಹಾಗೂ ಅರೆಸರ್ಕಾರಿ ಸಂಸ್ಥೆಗಳು ರೈತರ ನೆರವಿಗೆ ಸದಾ ನಿಂತಿವೆ. ಅದೇ ರೀತಿ ರೈತರು ಈಗಾಗಲೇ ಮುಂಗಾರು ಹಂಗಾಮಿನಲ್ಲಿ ಬೆಳೆಗಳನ್ನು ಬೆಳೆದಿದ್ದು ಮಳೆಯು ಸಹ ವಾಡಿಕೆಗಿಂತ ಚೆನ್ನಾಗಿ ಆಗಿದೆ. ಹಾಗೂ ಹಿಂಗಾರು ಮಳೆ ಸಹ ಚೆನ್ನಾಗಿ ಆಗುವ ನಿರೀಕ್ಷೆಯಿದೆ. ರೈತರು ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಖುಷಿಯಲ್ಲಿದ್ದಾರೆ. ವಾಡಿಕೆಗಿಂತ ಹೆಚ್ಚು ಮಳೆ ಆಗಿದೆ. ಹಾಗೂ ಮುಂಗಾರು ಉತ್ಪನ್ನಗಳು ಸಹ ಬಹಳಷ್ಟು ಬಂದಿದೆ. ಅದೇ ರೀತಿ ರೈತರು ಸಹ ಇನ್ನೂ ಹಿಂಗಾರು ಬೆಳೆ ಬೆಳೆಯಲು ಮುಂದಾಗಿದ್ದಾರೆ. ಮುಂಗಾರು ಬೆಳೆ ಕಟಾವು ಮಾಡಿ ಹಿಂಗಾರು ಬೆಳೆ ಬೆಳೆಯಲು ಮುಂದಾಗಿದ್ದಾರೆ. ಇದಕ್ಕೆ ಪೂರಕವಾಗಿ ಸರ್ಕಾರವು ಹಾಗೂ ಹಲವಾರು ಕೃಷಿ ವಿಶ್ವವಿದ್ಯಾಲಯಗಳು ಹಿಂಗಾರು ಬೀಜ ವಿತರಣೆ ಮಾಡಲು ಪ್ರಾರಂಭಿಸಿದೆ.
ಕೃಷಿ ವಿಜ್ಞಾನ ಕೇಂದ್ರ ವಿಜಯಪುರ 01, ಹಿಟ್ಟನಹಳ್ಳಿ ಫಾರ್ಮ್ ನಲ್ಲಿ ಬಿತ್ತನೆಗೆ ಯೋಗ್ಯವಿರುವ ಕಡಲೆಬೀಜ BGD 111-1 ತಳಿಯ 20 ಕೆಜಿಗೆ 2300 ರಂತೆ ಹಿಟ್ನಳ್ಳಿ ಫಾಮ್ ನಲ್ಲಿ ಲಭ್ಯವಿರುತ್ತದೆ.
➡️
ಸಂಪರ್ಕಕ್ಕಾಗಿ
ಡಾ. ಶಿವರಾಜ್ ಕಾಂಬಳೆ
8618667839.
ಮೆಕ್ಕೆಜೋಳಕ್ಕೆ ಬಂಪರ್ ಬೆಲೆ ಬಂದಿದ್ದು, ರೈತರಲ್ಲಿ ಸಂತಸ ತಂದಿದೆ. ಕೋಳಿಯ ಆಹಾರ ಸೇರಿ ಕೆಲವು ಉದ್ಯಮಗಳಿಗೆ ಮಾತ್ರ ಸೀಮಿತವಾಗಿದ್ದ ಮೆಕ್ಕೆಜೋಳದಿಂದ ಈಗ ಎಥೆನಾಲ್ ಉತ್ಪಾದನೆ ಮಾಡಲಾಗುತ್ತಿದ್ದು, ಇದರ ಪರಿಣಾಮ ಮೆಕ್ಕೆಜೋಳಕ್ಕೆ ಭಾರಿ ಬೇಡಿಕೆ ಬಂದಿದೆ.ಕೊಪ್ಪಳ ಮಾರುಕಟ್ಟೆಯಲ್ಲಿ ಒಂದು ಕ್ವಿಂಟಲ್ ಮೆಕ್ಕೆಜೋಳ 2950 ರೂ.ವರೆಗೂ ಮಾರಾಟವಾಗಿದ್ದು, ಈ ಹಿಂದಿನ ಎಲ್ಲಾ ದಾಖಲೆಗಳನ್ನು ಹಿಂದಿಕ್ಕಿದೆ. ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ನೀಡುವಂತೆ ರೈತರು ಒತ್ತಾಯಿಸುತ್ತಿದ್ದರು. ಪ್ರಸ್ತುತ ಕೇಂದ್ರ ಸರ್ಕಾರ 2330 ರೂ. ಬೆಂಬಲ ಬೆಲೆ ಘೋಷಿಸಿದ್ದು, ಇದಕ್ಕಿಂತಲೂ ಮಾರುಕಟ್ಟೆಯಲ್ಲಿ ದರ ಹೆಚ್ಚಳವಾಗಿದೆ.
ಅದೇ ರೀತಿ ಈಗ ನೀವು ಮುಂಗಾರು ಬೆಳೆ ಸಮೀಕ್ಷೆ ವೇಳೇಯಲ್ಲಿ ಯಾವುದೇ ತಪ್ಪುಗಳು ಕಂಡುಬಂದಲ್ಲಿ ಹಾಗೂ ನೀವು ಸಮೀಕ್ಷೇ ಮಾಡುವಾಗ ಬೆಳೆಗಳ ಮಾಹಿತಿ ತಪ್ಪಾಗಿ ನೀಡಿದ್ದರೆ ಕೂಡಲೇ ಅದನ್ನು ತಿದ್ದುಪಡಿ ಮಾಡಲು ಅವಕಾಶ ನೀಡಲಾಗಿದ್ದು ರೈತರಿಗೆ ಇದರ ಸದುಪಯೋಗ ಪಡೆದುಕೊಳ್ಳಬೇಕು. ರೈತರಿಗೆ ಇದೊಂದು ಮಹತ್ವದ ವಿಷಯವಾಗಿದೆ. ಆಕ್ಷೇಪಣೆ ಹಾಗೂ ಮಹಜರ್ ಮಾಡಲು ಅವಕಾಶ ನೀಡಲಾಗಿದ್ದು ತಪ್ಪಾಗಿ ನಮೂದಿಸಿರುವ ಬೆಳೆ ಮಾಹಿತಿಯನ್ನು ಶೀಘ್ರವಾಗಿ ಸರಿಪಡಿಸಿಕೊಳಲ್ಲು ಸರ್ಕಾರವು ಮತ್ತೊಂದು ಬಾರಿ ಅವಕಾಶ ಕಲ್ಪಿಸಿದೆ.
ರಾಜ್ಯ ಸರ್ಕಾರವು ಈಗಾಗಲೇ ಎರಡು ಕಂತುಗಳ ಬೆಳೆ ಪರಿಹಾರದ ಹಣವನ್ನು ಜಮಾ ಮಾಡಲಾಗಿತ್ತು, ಇಂದು (ಜುಲೈ 11) ಮೂರೆನೇ ಕಂತಿನ ಹಣವನ್ನು ಅರ್ಹ ಫಲಾನುಭವಿ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗಿದೆ. ರಾಜ್ಯದಲ್ಲಿ 17.09 ಲಕ್ಷ ಸಣ್ಣ ಹಾಗೂ ಅತಿ ಸಣ್ಣ ರೈತರ ಜೀವನೋಪಾಯ ನಷ್ಟ ಪರಿಹಾರಾಜ್ಯದಲ್ಲಿ 17.09 ಲಕ್ಷ ಸಣ್ಣ ಹಾಗೂ ಅತಿ ಸಣ್ಣ ರೈತರ ಜೀವನೋಪಾಯ ನಷ್ಟ ಪರಿಹಾರವಾಗಿ ತಲಾ 2800 ರೂ. ರಿಂದ 3000 ರೂ. ಹಣವನ್ನು ರೈತರ ಖಾತೆಗಳಿಗೆ ರಾಜ್ಯ ಸರಕಾರವು ವರ್ಗಾವಣೆ ಮಾಡಿದೆ.
ಮಳೆ ಆಶ್ರಿತ ಮತ್ತು ನಾಲೆಗಳ ಕೊನೆಯ ಭಾಗದಲ್ಲಿರುವ ರೈತರಿಗೂ ಸಹ ಬೆಳೆ ನಷ್ಟ ಪರಿಹಾರ ಸರ್ಕಾರ ನೀಡುತ್ತಿದೆ. ನಮ್ಮ ರಾಜ್ಯದಲ್ಲಿ ಬರಗಾಲ, ಪ್ರವಾಹ ಮತ್ತು ಇತರೆ ನೈಸರ್ಗಿಕ ವಿಪತ್ತುಗಳಿಂದ ಉಂಟಾಗುವ ನಷ್ಟದ ಜೀವನೋಪಾಯ ಪರಿಹಾರ ಬಿಡುಗಡೆ ಮಾಡಲಾಗಿದೆ. ಜಿಲ್ಲಾವಾರು ಅರ್ಹ ರೈತರ ಖಾತೆಗಳಿಗೆ ಬೆಳೆ ಪರಿಹಾರ ಹಣ ಜಮಾ ಮಾಡಲಾಗಿದೆ. ನಿಮ್ಮ ಬ್ಯಾಂಕ್ ಖಾತೆಗೆ ಹಣ ಸಂದಾಯವಾಗಿದೆಯಾ ಎಂದು ಚೆಕ್ ಮಾಡಿಕೊಳ್ಳಬಹುದು. ಈ ಕೆಳಗೆ ನೀಡಿರುವ DBT Status ಚೆಕ್ ಮೂಲಕ ನಿಮಗೆ ಬೆಳೆ ಪರಿಹಾರದ ಹಣ ಬಂದಿದೆಯಾ ಎಂಬುದನ್ನು ನೋಡಬಹುದು.