ಪಿಎಂ ಕಿಸಾನ್ 2000 ರೂಪಾಯಿ ಹಣ ಬಿಡುಗಡೆಯ ದಿನಾಂಕ ಪ್ರಕಟ.

PM KISAN: ಪಿ.ಎಂ ಕಿಸಾನ್ ₹2000 ರೂಪಾಯಿ ಹಣ ಬಿಡುಗಡೆ? 18ನೇ ಕಂತಿನ ಹಣ ಬಿಡುಗಡೆ ದಿನಾಂಕ ಪ್ರಕಟಣೆ!

ಅಪ್ಡೇಟ್(e-kyc) ಮಾಡದಿದ್ದರೆ ಪಿ.ಎಂ ಕಿಸಾನ್ ಹಣ ಬರಲ್ಲ! ಕೇಂದ್ರ ಬಿಜೆಪಿ ಸರ್ಕಾರವು ಪರಿಚಯಿಸಿರುವ ಪ್ರಮುಖ ಯೋಜನೆಗಳಲ್ಲಿ ಒಂದಾಗಿರುವ ಪಿ.ಎಂ ಕಿಸಾನ್‌ (ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ)ನ 18ನೇ ಕಂತಿನ ಹಣಕ್ಕಾಗಿ ಜನ ಕಾಯುತ್ತಿದ್ದಾರೆ. ಆದರೆ, ಈ ಒಂದು ಅಪ್ಡೇಟ್‌ ಮಾಡಿಕೊಳ್ಳದೆ ಇದ್ದರೆ ನಿಮಗೆ ಪಿ.ಎಂ ಕಿಸಾನ್‌ ಕಂತಿನ ಹಣ ಮಿಸ್‌ ಆಗುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರವು ರೈತರಿಗೆ ಪ್ರತಿ ಮೂರು ತಿಂಗಳಿಗೊಮ್ಮೆ ಎರಡು ಸಾವಿರ ರೂಪಾಯಿಯಂತೆ ವಾರ್ಷಿಕ ಆರು ಸಾವಿರ ರೂಪಾಯಿಯನ್ನು ಪಿ.ಎಂ ಕಿಸಾನ್‌ನ ಮೂಲಕ ನೀಡುತ್ತಿದೆ.

ಈಗಾಗಲೇ 17ನೇ ಕಂತಿನ ಹಣವನ್ನು ರೈತರ ಖಾತೆಗೆ ಜಮೆ ಮಾಡಲಾಗಿದ್ದು, ರೈತರು 18ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ. ಈ ನಡುವೆಯೇ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಮಹತ್ವದ ಸೂಚನೆಯೊಂದು ಬಂದಿದ್ದು, ಈ ನಿಯಮವನ್ನು ಒಂದೊಮ್ಮೆ ನೀವು ಪಾಲಿಸದೆ ಇದ್ದರೆ, ಈ ಬಾರಿಯ ಪಿ.ಎಂ ಕಿಸಾನ್‌ ಕಂತಿನ ಹಣ ಮಿಸ್‌ ಆಗುವ ಸಾಧ್ಯತೆ ದಟ್ಟವಾಗಿದೆ.

ಅದು ಏನು ಎನ್ನುವ ವಿವರ ಇಲ್ಲಿದೆ.!

ಪಿಎಂ ಕಿಸಾನ್‌ನ ಮುಂದಿನ ಕಂತಿನ ಹಣ ಬರಬೇಕಾದರೆ ನೀವು ಖಂಡಿತವಾಗಿಯೂ ಇ- ಕೆವೈಸಿ (e-kyc) ಮಾಡಿಸಿಕೊಳ್ಳಬೇಕು. PM – Kisanನ ಮುಂದಿನ ಕಂತಿನ ಹಣ ಬರಬೇಕಾದರೆ, ತಪ್ಪದೆ ಕೂಡಲೇ ನೀವು ಇ -ಕೆವೈಸಿ ಮಾಡಿಸಿಕೊಳ್ಳಬೇಕು ಎಂದು ರಾಜ್ಯ ಸರ್ಕಾರ ಮನವಿ ಮಾಡಿದೆ

ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಲಿಂಕ್ ಮಾಡಿ (e_kyc)
: ಇ -ಕೆವೈಸಿ ಮಾಡಿಸುವುದು ಕಡ್ಡಾಯ:
ಇನ್ನು ಪಿಎಂ ಕಿಸಾನ್‌ ಯೋಜನೆಯ ಅಡಿಯಲ್ಲಿ ಬರುವ ರೈತರು ಕಡ್ಡಾಯವಾಗಿ ಈ ಬಾರಿ (ಮಾಡಿಸದೆ ಇರುವವರು) ಇ- ಕೆವೈಸಿ ಮಾಡಿಸಬೇಕು. ಪಿಎಂ ಕಿಸಾನ್‌ ಯೋಜನೆಯ ಅಡಿಯಲ್ಲಿ ರೈತರು ಆರ್ಥಿಕ ನೆರವನ್ನು ಪಡೆಯಬೇಕಾದರೆ, ಇ – ಕೆವೈಸಿ ಮಾಡಿಸುವುದು ಕಡ್ಡಾಯ ಮಾಡಲಾಗಿದೆ. ಇ -ಕೆವೈಸಿ ಮಾಡಿಸಲು ಬಾಕಿ ಇರುವ ರೈತರು ಕೂಡಲೇ ಇ – ಕೆವೈಸಿ ಮಾಡಿಸಿಕೊಳ್ಳಬೇಕು ಎಂದು ಸರ್ಕಾರ ಸೂಚನೆ ನೀಡಿದೆ.

ಪಿಎಂ ಕಿಸಾನ್‌ಗೆ ಇ- ಕೆವೈಸಿ ಮಾಡಿಸುವುದು ಹೇಗೆ ?
ಒಟಿಪಿ ಆಧಾರಿತ ಇ -ಕೆವೈಸಿ: ಒಟಿಪಿ (otp) ಆಧಾರಿತ ಇ -ಕೆವೈಸಿಯು (e-kyc) ಕೇಂದ್ರ ಸರ್ಕಾರದ ಪಿಎಂ ಕಿಸಾನ್‌ ಪೋರ್ಟಲ್‌ (pm -kisan portal) ನಲ್ಲಿ ಹಾಗೂ ಮೊಬೈಲ್‌ ಅಪ್ಲಿಕೇಷನ್‌ನಲ್ಲಿ ಲಭ್ಯವಿರುತ್ತದೆ. (https://pmkisan.gov.in).

ಬಯೋಮೆಟ್ರಿಕ್‌: ಬಯೋಮೆಟ್ರಿಕ್‌ (Biometric) ಆಧಾರಿತ ಇ -ಕೆವೈಸಿಯನ್ನೂ ನೀವು ಮಾಡಿಸಬಹುದಾಗಿದೆ. ನಿಮ್ಮ ಹತ್ತಿರದ ನಾಗರಿಕ ಸೇವಾ ಕೇಂದ್ರ ಅಥವಾ ಗ್ರಾಮ ಒನ್‌ ಕೇಂದ್ರಗಳಲ್ಲಿ ಮಾಡಿಸಬಹುದಾಗಿರುತ್ತದೆ.

ಫೇಸ್‌ ಸ್ಕ್ಯಾನ್: ಫೇಸ್‌ ಸ್ಕ್ಯಾನ್‌ನ ಮೂಲಕವೂ ಇ – ಕೆವೈಸಿ ಮಾಡಿಸಬಹುದಾಗಿದೆ. ಮುಖ (Face authentication) ದೃಢೀಕರಣದ ಮೂಲಕವೂ ಇದು ಸಾಧ್ಯವಿದೆ. ಪಿಎಂ ಕಿಸಾನ್‌ ಮೊಬೈಲ್‌ ಅಪ್ಲಿಕೇಶನ್‌ನಲ್ಲಿ ಈ ಸೌಲಭ್ಯ ಲಭ್ಯವಿದೆ. ರೈತರು ಈ ಮೇಲಿನ ಯಾವುದಾದರೂ ಒಂದು ಆಯ್ಕೆಯ ಮೂಲಕ ಇ – ಕೆವೈಸಿ ಮಾಡಿಸಬಹುದಾಗಿದೆ.

ಪಿ.ಎಂ ಕಿಸಾನ್ 18ನೇ ಕಂತಿನ 2000 ರೂಪಾಯಿ ಹಣವನ್ನು ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ದಿನಾಂಕ 05-10-2024ರಂದು ಬಿಡುಗಡೆ ಮಾಡಲಿದ್ದಾರೆ.

Spread positive news

Leave a Reply

Your email address will not be published. Required fields are marked *