ಪ್ರೀಯ ರೈತರೇ ಇವತ್ತು ನಾವು ಒಂದು ಮುಖ್ಯವಾದ ವಿಷಯದ ಬಗ್ಗೆ ಚರ್ಚಿಸೋಣ ಬನ್ನಿ. ಈಗಾಗಲೇ ಸರ್ಕಾರವು ಕೈಗೊಂಡಿರುವ ಬೆಳೆ ವಿಮೆ ಬಗ್ಗೆ ಮಾಹಿತಿ ಪಡೆಯೋಣ. ಹಾಗೂ ಸರ್ಕಾರವು ರೈತರಿಗೆ ಬೆಳೆವಿಮೆ ಎಷ್ಟು ಜಮೆ ಮಾಡಿದೆ ಹಾಗೂ ರೈತರಿಗೆ ಪ್ರತಿ ಎಕರೆ ದ್ರಾಕ್ಷಿಗೆ ಎಷ್ಟು ವಿಮೆ ಹಣ ಪಡೆದಿದ್ದಾರೆ ಎಂದು ತಿಳಿಯೋಣ ಬನ್ನಿ.
ಹೌದು ರೈತರೇ ಈಗಾಗಲೇ ಸರ್ಕಾರವು ರೈತರಿಗೆ 2024 ರ ದ್ರಾಕ್ಷಿ ಬೆಳೆ ವಿಮೆ ಹಣ ರೈತರಿಗೆ ಜಮೆ ಆಗಿದ್ದು ರೈತರು ಖುಷಿಯಾಗಿದ್ದಾರೆ. ಹಾಗೂ ಕೆಲವು ಜಿಲ್ಲೆಗಳಲ್ಲಿ ರೈತರ ಅಕೌಂಟಿಗೆ ದ್ರಾಕ್ಷಿ ಬೆಳೆ ವಿಮೆ ಬಿಡುಗಡೆ ಮಾಡಿದ್ದು ಎಕರೆಗೆ 80000 ಸಾವಿರ ಹಣ ಬಿಡುಗಡೆ ಮಾಡಿದ್ದು ಖುಷಿ ಕೊಡುವ ಸಂಗತಿ ಆಗಿದೆ. ಅದೇ ರೀತಿ ರೈತರು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಅರ್ಜಿ ಸ್ಥಿತಿ https://www.samrakshane.karnataka.gov.in/publichome.aspx
ಅದೇ ರೀತಿ ಕಬ್ಬಿನ ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರ ಮತ್ತೆ ಹೆಚ್ಚಿಸಿದ್ದು ಮತ್ತೆ ಕೇಂದ್ರ ಸರ್ಕಾರ ಮೀಟಿಂಗ್ ಮಾಡಿ ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಬೆಳೆ ಹಾನಿ ಪರಿಹಾರ ಎಂದರೇನು? ಅದರ ಬಗ್ಗೆ ತಿಳಿಯೋಣ –
ಬೆಳೆಹಾನಿ ಪರಿಹಾರ ಎಂದರೆ ಪ್ರಕೃತಿಯಲ್ಲಿ ಹೆಚ್ಚಿನ ಮಳೆ, ಅತೀವೃಷ್ಟಿ, ಭಾರಿ ಪ್ರವಾಹ, ಹಾಗೂ ಬರಗಾಲ ಉಂಟಾಗಿ ಬೆಳೆ ಹಾನಿಯಾಗಿದ್ದರೆ ಪ್ರತಿ ಎಕರೆಗೆ ಬೆಳೆಗಳ ಆಧಾರದ ಮೇಲೆ ಬೆಳೆ ಹಾನಿ ಪರಿಹಾರವನ್ನು ರಾಜ್ಯ ಸರ್ಕಾರವು ಪ್ರತಿ ವರ್ಷ ಘೋಷಿಸುತ್ತದೆ. ಹಾಗೂ ಅದು ಬೆಳೆಗಳ ಆಧಾರದ ಮೇಲೆ ವಿಭಜಿಸಿ ಪರಿಹಾರ ನೀಡಲಾಗುವುದು. ರೈತರಿಗೆ ಸಹಾಯ ಮಾಡಬೇಕು ಎಂಬ ಹಿತದೃಷ್ಟಿಯಿಂದ ಸರ್ಕಾರವು ಈ ನಿರ್ಧಾರ ಕೈಗೊಂಡಿದೆ.
ಮುಖ್ಯವಾಗಿ ಬೆಳೆ ಹಾನಿ ಪರಿಹಾರ ಸ್ಟೇಟಸ್ ಚೆಕ್ ಮಾಡಲು ರೈತರು ಈ
https://landrecords.karnataka.gov.in/PariharaPayment/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಅಲ್ಲಿ ಆಧಾರ್ ಕಾರ್ಡ್ ಆಯ್ಕೆ ಮಾಡಿಕೊಂಡು, ಫ್ಲಡ್ ಆಯ್ಕೆ ಮಾಡಿ ಯಾವ ವರ್ಷದ ಸ್ಟೇಟಸ್ ಚೆಕ್ ಮಾಡಬೇಕೆಂದುಕೊಂಡಿದ್ದಾರೋ ಅದನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ಆಧಾರ್ ನಂಬರ್ ಹಾಗೂ ಕ್ಯಾಪ್ಚ್ಯಾ ಕೋಡ್ ನಮೂದಿಸಿ ವಿವರಗಳನ್ನು ಪಡೆಯಲು ಮೇಲೆ ಕ್ಲಿಕ್ ಮಾಡಿ ಸ್ಟೇಟಸ್ ಚೆಕ್ ಮಾಡಬಹುದು.
ಅದೇ ರೀತಿ ಕೃಷಿ ಸಚಿವರು ವಿಮಾ ಕಂಪೆನಿಗೆ ತಾಕಿತ್ತು ಮಾಡಿದ್ದಾರೆ. ಸಚಿವರು ಸ್ಪಷ್ಟನೆ ನೀಡಿದ್ದು ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಕೆಲಸ ಮಾಡಿ ಎಂದು ವಿವರಿಸಿದರು. ಈಗಾಗಲೇ ಬೆಳೆ ವಿಮೆ ಮಾಡಿಸಿರುವ ರೈತರು ಪೂರ್ವ ಮುಂಗಾರು ಹೊಂಗಮಿನ ಪರಿಹಾರಕ್ಕಾಗಿ ಕಾದು ಕುಳಿತಿದ್ದಾರೆ ಪರಿಹಾರ ಕ್ರಮದ ಸಲುವಾಗಿ ವಿಮಾ ಕಂಪನಿಗಳ ಜೊತೆಗೆ ನಿರಂತರ ಸಂಪರ್ಕದಲ್ಲಿರಿ ಎಂದು ಸಚಿವರು ತಾಕಿತ್ತು ಮಾಡಿದರು.
ಬೆಳೆ ಸಮೀಕ್ಷೆ ಮಾಡುವ ವಿಧಾನ –
• ಮೊದಲಿಗೆ ಈ https://play.google.com/store/apps/details?id=com.csk.farmer23_24.cropsurvey
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.
• ಅಥವಾ ಗೂಗಲ್ ಪ್ಲೇ ಸ್ಟೋರ್ ನಲ್ಲಿ Bele darshak 2024 ಎಂದು ಟೈಪ್ ಮಾಡಿ ಡೌನ್ಹೋಡ್ ಮಾಡಿಕೊಳ್ಳಬಹುದು.
• ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ಬೆಳೆ ದರ್ಶಕ್ ಆ್ಯಪ್ ಕಾಣಿಸುತ್ತದೆ. ಅಲ್ಲಿ install ಮೇಲೆ ಕ್ಲಿಕ್ ಮಾಡಬೇಕು. ನಂತರ ಓಪನ್ ಮೇಲೆ ಕ್ಲಿಕ್ ಮಾಡಬೇಕು.
• ಆಗ ನಿಮಗೆ ಬೆಳೆ ದರ್ಶಕ್ 2024 ಕೆಳಗಡೆ ಬೆಳೆ ಸಮೀಕ್ಷೆ ಮಾಹಿತಿ ವೀಕ್ಷಣೆ ಕಾಣಿಸುತ್ತದೆ.
• ಅದರ ಕೆಳಗಡೆ ಸರ್ಕಾರಿ ಸಿಬ್ಬಂದಿ ಪ್ರೈವೆಟ್ ರೆಸಡೆಂಟ್ಸ್ ಹಾಗೂ ರೈತ ಎಂಬ ಆಯ್ಕೆಗಳು ಕಾಣಿಸುತ್ತವೆ. ರೈತ ಮೇಲೆ ಕ್ಲಿಕ್ ಮಾಡಬೇಕು.
• ವೈಲ್ ಯೂಸಿಂಗ್ ದಿಸ್ ಆ್ಯಪ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಅಲೋ ಮೇಲೆ ಕ್ಲಿಕ್ ಮಾಡಬೇಕು.
• ನಂತರ ಅಲ್ಲಿ ಆ್ಯಪ್ ಓಪನ್ ಆದ ತಕ್ಷಣ ಅಲ್ಲಿ ನಿಮ್ಮ ತಾಲೂಕು, ಜಿಲ್ಲೆ, ಸರ್ವೇ ನಂಬರ್, ಹಿಸ್ಸಾ ನಂಬರ್ ಹೀಗೆ ಕೇಳಲಾಗುತ್ತದೆ.
• ನಂತರ ಎಲ್ಲ ಮಾಹಿತಿ ಹಾಕಿ ಸಮೀಕ್ಷೇಗಳ ವಿವರಗಳನ್ನು ಮೇಲೆ ಕ್ಲಿಕ್ ಮಾಡಿ.
• ನಂತರ ಅಲ್ಲಿ ನಿಮಗೆ ಬೇಕಾದ ಮಾಹಿತಿ ದೊರೆಯುತ್ತದೆ.
ಮುಂಗಾರು ಬೆಳೆ ಸಮೀಕ್ಷೆ ವೇಳೇಯಲ್ಲಿ ಯಾವುದೇ ತಪ್ಪುಗಳು ಕಂಡುಬಂದಲ್ಲಿ ಹಾಗೂ ನೀವು ಸಮೀಕ್ಷೇ ಮಾಡುವಾಗ ಬೆಳೆಗಳ ಮಾಹಿತಿ ತಪ್ಪಾಗಿ ನೀಡಿದ್ದರೆ ಕೂಡಲೇ ಅದನ್ನು ತಿದ್ದುಪಡಿ ಮಾಡಲು ಅವಕಾಶ ನೀಡಲಾಗಿದ್ದು ರೈತರಿಗೆ ಇದರ ಸದುಪಯೋಗ ಪಡೆದುಕೊಳ್ಳಬೇಕು. ರೈತರಿಗೆ ಇದೊಂದು ಮಹತ್ವದ ವಿಷಯವಾಗಿದೆ. ಆಕ್ಷೇಪಣೆ ಹಾಗೂ ಮಹಜರ್ ಮಾಡಲು ಅವಕಾಶ ನೀಡಲಾಗಿದ್ದು ತಪ್ಪಾಗಿ ನಮೂದಿಸಿರುವ ಬೆಳೆ ಮಾಹಿತಿಯನ್ನು ಶೀಘ್ರವಾಗಿ ಸರಿಪಡಿಸಿಕೊಳಲ್ಲು ಸರ್ಕಾರವು ಮತ್ತೊಂದು ಬಾರಿ ಅವಕಾಶ ಕಲ್ಪಿಸಿದೆ.