ಬೆಳೆವಿಮೆ ಅರ್ಜಿ ಸ್ಟೇಟಸ್ ಡೈರೆಕ್ಟ್ ಲಿಂಕ್ .

ಪ್ರೀಯ ರೈತರೇ ನಿಮಗೊಂದು ಸಂತಸದ ಸುದ್ದಿ, ಬೆಳೆವಿಮೆ ಮಾಡಿಸಲು ಸರ್ಕಾರವು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅಡಿಯಲ್ಲಿಬೆಳೆ ವಿಮೆ ಮಾಡಿಸಿದ ರೈತರಿಗೆ ಗುಡ್ ನ್ಯೂಸ್. ಮುಂಗಾರು ಹಾಗೂ ಹಿಂಗಾರು ಹಂಗಾಮಿಗೆ ಬೆಳೆ ವಿಮೆ ಮಾಡಿಸಿದ ರೈತರಿಗೆ ವಿಮಾ ಹಣ ಜಮೆ ಮಾಡುವ ಪ್ತಕ್ರಿಯೆ ಆರಂಭವಾಗಿದೆ. ರಾಜ್ಯಾದ್ಯಂತ ಪೂರ್ವ ಮುಂಗಾರು ಉತ್ತಮವಾಗಿದ್ದು, ಮುಂಗಾರು ಕೂಡ ಆರಂಭವಾಗಿದೆ. ಬಿತ್ತನೆ ಬೀಜ, ರಸಗೊಬ್ಬರ ಬೇಡಿಕೆ ಆಧಾರದಲ್ಲಿ ಪೂರೈಕೆಯಾಗಿದ್ದು ಎಲ್ಲೂ ಕೊರತೆಯಾಗದಂತೆ ಎಚ್ಚರ ವಹಿಸಿ ರೈತರಿಗೆ ಸೂಕ್ತ ಮಾರ್ಗದರ್ಶನ ನೀಡಿ ಎಂದು ತಿಳಿಸಲಾಯಿತು. ಬೆಳೆಸಾಲ ಪಡೆಯದ ರೈತರು ನೋಂದಣಿಗಾಗಿ ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ದಾಖಲೆಗಳಾದ ಪಹಣಿ, ಆಧಾರ ಸಂಖ್ಯೆ ಜೋಡಿಸಿದ ಬ್ಯಾಂಕ ಖಾತೆ / ಪಾಸ್ ಬುಕ್ ಮತ್ತು ಆಧಾರ ಸಂಖ್ಯೆಯೊಂದಿಗೆ ಡಿ.ಸಿ.ಸಿ/ಇತರೆ ಬ್ಯಾಂಕ್, ಗ್ರಾಮ್-ಒನ್ ಮತ್ತು ಸಿ.ಎಸ್.ಸಿ ಕೇಂದ್ರಗಳಿಗೆ ಸಂಪರ್ಕಿಸಿ. ರೈತರು ನೋಂದಣಿಗಾಗಿ ಕಡ್ಡಾಯವಾಗಿ FRUITS ID (FID) ಹೊಂದಿರಬೇಕು.

ಅದೇ ರೀತಿ ಮತ್ತೊಂದು ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಕೃಷಿ ಸಚಿವರು ರಾಜ್ಯದ ಕೃಷಿ ಇಲಾಖೆ ಹಾಗೂ ವಿಶ್ವವಿದ್ಯಾಲಯಗಳಲ್ಲಿ ಪ್ರಗತಿಯಲ್ಲಿರುವ ಹಾಗೂ ಪ್ರಾರಂಭವಾಗ ಬೇಕಿರುವ ವಿವಿಧ ಕಟ್ಟಡ ಕಾಮಗಾರಿಗಳನ್ನು ಅತ್ಯಂತ ತ್ವರಿತವಾಗಿ ಮುಕ್ತಾಯ ಗೊಳಿಸುವಂತೆ ಸೂಚನೆ ನೀಡಿದೆ. ರೈತ ಸಂಪರ್ಕ ಕೇಂದ್ರ, ಗೊದಾಮು, ಮಿಲೆಟ್ ಸರಪಳಿ ಪಾರ್ಕ್‌ ಮತ್ತಿತರ ಕಟ್ಟಡಗಳನ್ನು ಆದಷ್ಟು ಬೇಗ ಮುಕ್ತಾಯ ಗೊಳಿಸಬೇಕು ಎಂದು ಅನುಷ್ಠಾನ ಏಜೆನ್ಸಿಗಳಿಗೆ ಸೂಚಿಸಲಾಯಿತು. ಇನ್ನೂ ಪ್ರಾರಂಭವಾಗದೇ ಇರುವ ಕಾಮಗಾರಿಗಳಿಗೆ ಬೇಗ ಚಾಲನೆ ನೀಡಬೇಕು. ಜಾಗದ ಸಮಸ್ಯೆ ಇರುವ ಕಡೆ ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳೀಯ ಶಾಸಕರನ್ನು ಸಂಪರ್ಕಿಸಿ ಸ್ಥಳ ಪಡೆದು ಕೆಲಸ ಪ್ರಾರಂಭಿಶಿವಂತೆ ತಿಳಿಸಿದೆ.

ಅರ್ಜಿಯ ಸ್ಟೇಟಸ ಚೆಕ್ ಮಾಡುವ ವಿಧಾನ
https://www.samrakshane.karnataka.gov.in/
ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿಯ ಸ್ಟೇಟಸ್ ಚೆಕ್ ಮಾಡಬಹುದು.
• ನಂತರ ಅಲ್ಲಿ ವರ್ಷದ ಆಯ್ಕೆ ಮತ್ತು ಹಂಗಾಮು ಆಯ್ಕೆ ಇರುತ್ತದೆ ಅದರಲ್ಲಿ ವರ್ಷ ಮತ್ತು ಹಂಗಾಮು ಹಾಕಬೇಕು.
• ನಂತರ ಅಲ್ಲಿ ಮುಂದೆ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ ನಿಮ್ಮ ಬೆಳೆಗೆ ಸಂಪೂರ್ಣ ಬೆಳೆವಿಮೆ ಜಮೆ ಆಗಿದೆ ಎಂದು ತೋರಿಸುತ್ತದೆ.
• ನಂತರ ಅಲ್ಲಿ ಚೆಕ್ ಸ್ಟೇಟಸ್ ಎಂಬುದರ ಮೇಲೆ ಕ್ಲಿಕ್ ಮಾಡಬೇಕು.
• ನಂತರ ಅಲ್ಲಿ ನಿಮ್ಮ ಬೆಳೆವಿಮೆ ಅಪ್ಲಿಕೇಶನ್ ನಂಬರ್ ಹಾಕಿ ಚೆಕ್ ಮಾಡಬಹುದು.

ಪ್ರಧಾನ ಮಂತ್ರಿ ಫಸಲ್ ಭೀಮಾ ಅಡಿಯಲ್ಲಿ ಸ್ಟೇಟಸ್ ಚೆಕ್ ಮಾಡುವ ಡೈರೆಕ್ಟ್ ಲಿಂಕ್ 👇
https://pmfby.gov.in/
ಈ ಲಿಂಕ್ ಅನ್ನು ಕ್ಲಿಕ್ ಮಾಡಿ. ನಂತರ ಅಲ್ಲಿ ಪ್ರಿಮಿಯಂ ಕ್ಯಾಲ್ಕುಲೇಟರ್ ಅಂತ ಇರುವುದರ ಮೇಲೆ ಕ್ಲಿಕ್ ಮಾಡಿ.
ನಂತರ ಅಲ್ಲಿ ಅಪ್ಲಿಕೇಶನ್ ಸ್ಟೇಟಸ್ ಅಂತ ಇರುತ್ತೆ ಅದರ ಮೇಲೆ ಕ್ಲಿಕ್ ಮಾಡಿ ನಿಮ್ಮ ಅಪ್ಲಿಕೇಶನ್ ನಂಬರ್ ಹಾಕಿ ಸ್ಟೇಟಸ್ ಚೆಕ್ ಮಾಡಬಹುದು.

ಬೆಳೆ ವಿಮೆ ಪರಿಹಾರ ಮತ್ತು ಬೆಳೆ ಹಾನಿ ಪರಿಹಾರ ಎರಡು ಬೇರೆ ಬೇರೆಯಾಗಿದೆ. ಕೆಲ ರೈತರು ಇವೆರೆಡೂ ಒಂದೇ ಎಂದು ಭಾವಿಸಿದ್ದಾರೆ, ಅದು ತಪ್ಪು ಕಲ್ಪನೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದೇವೆ.
ರೈತರಿಗೆ ದೈನಂದಿನವಾಗಿ ಆಗುವ ಹವಾಮಾನದ ಏರಿಳಿತದಿಂದಾಗಿ, ಮಳೆ ಅಥವಾ ಗಾಳಿಯಿಂದ ಬೆಳೆ ಹಾಳಾದಾಗ ಆರ್ಥಿಕತೆಯ ಸಂಕಷ್ಟವನ್ನು ತಪ್ಪಿಸಲು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಜಾರಿಗೆ ತಂದಿದೆ. ಬೆಳೆ ವಿಮೆ ಪರಿಹಾರ ಬಿತ್ತಿದ ಬೆಳೆಗಳಿಗೆ ವಿಮೆ ಮಾಡಿಸಿದ್ದರೆ ಮಾತ್ರ ಹಣ ಬರಲಿದೆ ದೊರೆಯುತ್ತದೆ. ಬೆಳೆ ಹಾನಿ ಪರಿಹಾರವನ್ನು ಸರ್ಕಾರವು ಹಾನಿ ಪ್ರಮಾಣ ಹಾಗೂ NDRF,SDRFಗಳ ಮೂಲ ವರದಿಗಳನ್ನಿಟ್ಟುಕೊಂಡು ಘೋಷಿಸುತ್ತದೆ.

Spread positive news

Leave a Reply

Your email address will not be published. Required fields are marked *