ಕೃಷಿ ಪಂಪ್ ಸೆಟ್ ಗಳಿಗೆ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯ.

ರೈತರಿಗೆ ಮತ್ತೋಂದು ಹೊಸ ಸುದ್ದಿ. ಇಲ್ಲಿದೆ ನೋಡಿ ನೀವು ಕೂಡಲೇ ಮಾಡಬೇಕಾದ ಕೆಲಸ. Aadhaar link is mandatory for farmers pumpsets ರೈತರ ಪಂಪ್‌ಸೆಟ್‌ಗಳಿಗೆ ಆಧಾ‌ರ್ ಲಿಂಕ್ ಕಡ್ಡಾಯ. ಎಂದು ಸರ್ಕಾರವು ಸ್ಪಷ್ಟನೆ ನೀಡಿದೆ. ಅದೇ ರೀತಿ ಸರ್ಕಾರವು ರೈತರಿಗೆ ಈ ಕೆಲಸ ಕಡ್ಡಾಯವಾಗಿ ಮಾಡಬೇಕು ಎಂದು ಆದೇಶ ನೀಡಿದೆ. ಕೃಷಿ ಪಂಪ್‌ಸೆಟ್‌ಗಳ ಆರ್.ಆರ್. ಸಂಖ್ಯೆಯನ್ನು ಆಧಾರ್ ಸಂಖ್ಯೆ ಜೋಡಣೆ ಪ್ರಕ್ರಿಯೆ ಮುಂದಿನ ದಿನಗಳಲ್ಲಿ ಅನ್ನದಾತರ ವಿದ್ಯುತ್ ಸಬ್ಸಿಡಿಗೆ ಕತ್ತರಿ? ಸದ್ಯಕ್ಕೆ ಜೋಡಣೆ ಪ್ರಕ್ರಿಯೆ ಪ್ರಾರಂಭಿಕ ಹಂತದಲ್ಲಿದೆ. ಮುಗಿದ ನಂತರ ತಾಳೆಯಾಗದ ರೈತರ ಸಬ್ಸಿಡಿಗೆ ಕತ್ತರಿ ಬೀಳುವ ಸಾಧ್ಯತೆಯೂ ಇವೆ. ಗ್ಯಾರಂಟಿ ಸೇರಿ ಸರ್ಕಾರದ ವಿವಿಧ ಸಬ್ಸಿಡಿ ಯೋಜನೆಗಳಿಗೆ ಈಗಾಗಲೇ ಆದಾರ್ ಜೋಡಣೆ ಮಾಡಲಾಗಿದೆ.

ಈ ರೀತಿ ಆಧಾರ್ ಕಾರ್ಡ್ ಲಿಂಕ್ ಜೋಡಣೆ ಮಾಡುವ ಉದ್ದೇಶವೇನು?
* ಸರ್ಕಾರ ಪ್ರತಿ ವರ್ಷ ಎಸ್ಕಾಂಗಳಿಗೆ ನೀಡುತ್ತಿರುವ ಸಬ್ಸಿಡಿಗೂ ಹಾಗೂ ವಿದ್ಯುತ್ ಬಳಕೆಗೂ ಹೋಲಿಕೆ ಆಗುತ್ತಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳುವುದು
* ರಾಜ್ಯದಲ್ಲಿರುವ ಅಕ್ರಮ ಪಂಪ್ ಸೆಟ್ ಗಳಿಗೆ ಕಡಿವಾಣ ಹಾಕುವುದು
* ಸಬ್ಸಿಡಿ ನಿಜವಾದ ಫಲಾನುಭವಿಗಳಿಗೆ ಹೋಗುತ್ತಿದೆಯೇ ಎಂಬುದನ್ನು ದೃಢಪಡಿಸಿಕೊಳ್ಳುವುದು
* ಉಚಿತ ವಿದ್ಯುತ್ ಪಡೆಯುತ್ತಿರುವ ಶ್ರೀಮಂತರನ್ನು ಪತ್ತೆ ಹಚ್ಚುವುದು.

ನಾವು ಈ ಮೇಲೆ ನೀಡಿರುವಂತಹ ಎಲ್ಲಾ ಮಾಹಿತಿಯನ್ನು ಸರಿಯಾದ ರೀತಿಯಲ್ಲಿ ಓದಿಕೊಂಡು ನಿಮ್ಮ ಹತ್ತಿರ ಇರುವಂತ KEB ಗೆ ಹೋಗಿ ನೀವು ಎಲ್ಲಾ ದಾಖಲೆಗಳನ್ನು ನೀಡುವುದರ ಮೂಲಕ ನೀವು ನಿಮ್ಮ ಕೃಷಿ ಪಂಪ ಸೆಟ್ ಗಳಿಗೆಆಧಾರ್ ಕಾರ್ಡನ್ನು ಲಿಂಕ್ ಮಾಡಿಸಿಕೊಳ್ಳಬಹುದಾಗಿದೆ.

ಹಾಗೆ ಈ ಹಿಂದೆ ಯಾರೆಲ್ಲ ತಮ್ಮ ಪಹಣಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿದ್ದೀರೋ ಅದೇ ರೀತಿಯಾಗಿ ಈ ಬಾರಿಯೂ ಕೂಡ ನೀವು ನಿಮ್ಮ ಕೃಷಿ ಪಂಸರಿಗೆ ಆಧಾರ್ ಕಾರ್ಡನ್ನು ಲಿಂಕ್ ಮಾಡಿಸುವುದು ಕಡ್ಡಾಯವಾಗಿದೆ. ಅದೇ ರೀತಿಯಾಗಿ ಈಗಾಗಲೇ ನಮ್ಮ ರಾಜ್ಯದಲ್ಲಿ ಪಂಪ್ ಸೆಟ್ ಗಳಿಗೆ ಆಧಾರ್ ಕಾರ್ಡ್ ಜೋಡಣೆ ಮಾಡುವಂತಹ ಕಾರ್ಯವು ಯಾವುದೇ ರೀತಿಯಾಗಿ ಸದ್ದನ್ನು ಮಾಡದೆ ಶುರುವಾಗಿದೆ. ಹಾಗೆ ಕೂಡಲೇ ಎಲ್ಲ ರೈತ ಬಾಂಧವರು ತಮ್ಮ ಆಧಾರ್ ಕಾರ್ಡ್ ಜೋಡಣೆಯನ್ನು ಕೃಷಿ ಪಂಪ್ ಸೆಟ್ ಗಳಿಗೆ ಮಾಡಿಕೊಳ್ಳಬೇಕಾಗುತ್ತದೆ.

ಪಂಪ್ ಸೆಟ್ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವುದು ಕಡ್ಡಾಯವಾಗಿ ಬಿಟ್ಟಿದೆ. ನಮ್ಮ ರಾಜ್ಯದಲ್ಲಿ ನೀರಾವರಿಯಲ್ಲಿ ಕೃಷಿ ಪಂಪ್ ಸೆಟ್ ಗಳ ಆರ್ ಆರ್ ಸಂಖ್ಯೆಗೆ ಸಂಬಂಧಿಸಿದ ಗ್ರಾಹಕರು ತಮ್ಮ ಆಧಾರ್ ನಂಬರ್ ಗೆ ಜೋಡಣೆ ಮಾಡುವುದು ಅವಶ್ಯ ಮಾಡಿದ್ದಾರೆ. ಇಲ್ಲದಿದ್ದರೆ ಸರ್ಕಾರವು ಈ ಕೃಷಿ ಪಂಪ ಸೆಟ್ ಗಳಿಗೆ ನೀಡುವ ಸಹಾಯಧನವನ್ನು ಬಿಡುಗಡೆ ಮಾಡುವುದಿಲ್ಲ ಎಂದು ಆದೇಶ ಮಾಡಿದ್ದಾರೆ. ಆದಕಾರಣ ರೈತರು ಇದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದ ಕಾರಣ ರೈತರು 6 ತಿಂಗಳ ಒಳಗಾಗಿ ನಿಮ್ಮ ಪಂಪ್ಸೆಟ್ ಗಳಿಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿ ಮತ್ತು ಸಹಾಯಧನವನ್ನು ಪಡೆಯುತ್ತಾ ಹೋಗಿರಿ.

ಇದರ ಜೊತೆಗೆ ನೀವು ನಿಮ್ಮ ಪಹಣಿಗೆ ಆಧಾರ್ ಲಿಂಕ್ ಹೇಗೆ ಮಾಡಬಹುದು?
ರೈತರು ತಮ್ಮ ಜಮೀನಿನ ಪಹಣಿ ಮತ್ತು ಆಧಾರ್ ದಾಖಲಾತಿಗಳೊಂದಿಗೆ landrecords.karnataka.gov.in/service ವೆಬ್‌ಸೈಟ್‌ಗೆ ಲಾಗಿನ್ ಮಾಡಬಹುದು. ನಂತರ, ಪಹಣಿಯನ್ನು ಆಧಾರ್ ಜೊತೆಗೆ ಲಿಂಕ್ ಮಾಡಬಹುದು.

ಅದೇ ರೀತಿ ನಿಮ್ಮ ಗ್ರಾಮ ಅಧಿಕಾರಿಗಳ ಮೂಲಕವೂ ಸಹ ಆಧಾರ್ ಕಾರ್ಡ್ ಲಿಂಕ್ ಮಾಡಬಹುದು.
ರೈತರು ತಮ್ಮ ಪಹಣಿ ಮತ್ತು ಆಧಾರ್ ದಾಖಲಾತಿಗಳೊಂದಿಗೆ ಸಂಬಂಧಪಟ್ಟ ಗ್ರಾಮ ಅಧಿಕಾರಿಗಳನ್ನು ಸಂಪರ್ಕಿಸಬಹುದು. ಅಧಿಕಾರಿಗಳು ಪಹಣಿಯನ್ನು ಆಧಾರ್ ಜೊತೆಗೆ ಜೋಡಿಸಲು ಸಹಾಯ ಮಾಡುತ್ತಾರೆ.

Spread positive news

Leave a Reply

Your email address will not be published. Required fields are marked *