ರೈತರಿಗೆ ಒಂದು ಗುಡ್ ನ್ಯೂಸ್! ಕೃಷಿಯಲ್ಲಿ ಹಲವಾರು ಸುಧಾರಣೆಗಳನ್ನು ತಂದಿದ್ದು ಕೃಷಿ ವಿಶ್ವವಿದ್ಯಾಲಯ ಹಾಗೂ ರಾಜ್ಯ ಕೃಷಿ ಇಲಾಖೆ ರೈತರು ಸುಲಭವಾಗಿ ಕೃಷಿ ಚಟುವಟಿಕೆಗಳಿಗೆ ಸುಲಭವಾಗಿ ಪರಿಹಾರ ಕಂಡುಕೊಳ್ಳಲು ಬಹಳಷ್ಟು ಪ್ರಯತ್ನಿಸಿ ಹೊಸ ಹೊಸ ತಂತ್ರಜ್ಞಾನ ಹುಡುಕಿದ್ದಾರೆ.
ಅದೇ ರೀತಿ ಈಗ ಕೃಷಿ ವಿಶ್ವವಿದ್ಯಾಲಯದ ಪ್ರಯೋಗ ಯಶಸ್ವಿ ಆಗಿದೆ. ಅದು ಏನೆಂದರೆ ಬೆಳೆಗಳಿಗೆ ಎಷ್ಟು ರಸಗೊಬ್ಬರ ಹಾಕಬೇಕು? ಒಂದು ಎಕರೆಗೆ ನಾಟಿ ಮಾಡಲು ಯಾವ ಸಸಿಗಳು ಎಷ್ಟು ಪ್ರಮಾಣದಲ್ಲಿ ಬೇಕಾಗುತ್ತವೆ ಎಂಬುದನ್ನು ಒಳಗೊಂಡ ಬಹುಭಾಷಾ ‘ಫಾರ್ಮ್ ಕ್ಯಾಲ್ಕುಲೇಟರ್’ ಆ್ಯಪ್ ಅನ್ನು ಮೂರು ಲಕ್ಷಕ್ಕೂ ಅಧಿಕ ರೈತರು ಬಳಸುತ್ತಿದ್ದಾರೆ. ಹಾಗಾದರೆ ಈ ಆ್ಯಪ್ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.
ಹೌದು ರೈತರಿಗೆ ಕೃಷಿಯಲ್ಲಿ ತಂತ್ರಜ್ಞಾನ ಹಾಗೂ ಹೊಸ ಹೊಸ ಪ್ರಯೋಗಗಳನ್ನು ಮಾಡುವ ಮೂಲಕ ರೈತರ ಏಳಿಗೆಗೆ ಶ್ರಮಿಸುತ್ತಿರುವ ವಿಶ್ವವಿದ್ಯಾಲಯಗಳು ಒಂದು ಹೊಸ ಪ್ರಯೋಗ ಮಾಡಿ ಯಶಸ್ವಿ ಆಗಿದ್ದಾರೆ. ತಜ್ಞರು ಶಿಫಾರಸು ಮಾಡಿದಂತೆ ಯಾವ ಬೆಳೆಗೆ ಯಾವ ಸಮಯದಲ್ಲಿ ಎಷ್ಟು ರಸಗೊಬ್ಬರ ಹಾಕಬೇಕು. ಸಾರಜನಕ, ರಂಜಕ, ಪೊಟ್ಯಾಶಿಯಂ ಸಂಯೋಜನೆ ಒಳಗೊಂಡ ಗೊಬ್ಬರ ಯಾವುದು ಎಂಬುದರ ಬಗ್ಗೆ ಆ್ಯಪ್ ನಲ್ಲಿ ಸ್ಪಷ್ಟ ಮಾಹಿತಿ ಸಿಗಲಿದೆ. ಆದರೆ, ಸಾಕಷ್ಟು ರೈತರು ಯಾವ ಗೊಬ್ಬರದಲ್ಲಿ ಆ ಅಂಶಗಳಿವೆ ಎಂಬುದನ್ನು ಅರಿಯುವುದು ಕಷ್ಟ. ಅದಕ್ಕೆ ವಿಜ್ಞಾನಿಗಳು ಹಾಗೂ ತಂತ್ರಜ್ಞಾನ ತಂಡದಿಂದ ಇದರ ಬೆಳವಣಿಗೆಗೆ ಸಹಾಯ ಆಗಿದೆ.
ಅಷ್ಟೇ ಅಲ್ಲದೆ, ಈಗಾಗಲೇ ಬಹಳಷ್ಟು ರೈತರು ಹೊಸ ಹೊಸ ಪ್ರಯೋಗಗಳನ್ನು ಕೈಗೊಳ್ಳುತ್ತಿದ್ದು ಈ ತಂತ್ರಜ್ಞಾನ ರೈತರಿಗೆ ಬಹಳ ಉಪಯುಕ್ತ ಮಾಹಿತಿ ಒದಗಿಸುತ್ತಿದೆ. ಮಾವು, ತೆಂಗು, ಸಪೋಟ, ನಿಂಬೆಯಂತಹ ಯಾವುದೇ ಮರದ ಜಾತಿಯ ಸಸಿಗಳನ್ನು ಎಷ್ಟು ಅಡಿ ಅಂತರದಲ್ಲಿ ಹಾಕಬೇಕು ಮತ್ತು ಎಕರೆಗೆ ಎಷ್ಟು ಸಸಿ ಬೇಕಾಗುತ್ತವೆ ಎಂಬುದರ ಕುರಿತು ಈ ಆ್ಯಪ್‌ನಲ್ಲಿ ರೈತರಿಗೆ ನಿಖರವಾದ ಮಾಹಿತಿ ದೊರೆಯಲಿದೆ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ರಾಷ್ಟ್ರೀಯ ಬೀಜ ಪ್ರಾಯೋಜನೆ ವಿಭಾಗದ ಬೀಜ ಸಂಶೋಧನಾ ಅಧಿಕಾರಿ ಡಾ. ವಿಶ್ವನಾಥ್ ಕೋಟಿ ಅವರು ‘ಫಾರ್ಮ್ ಕ್ಯಾಲ್ಕುಲೇಟರ್ ಆ್ಯಪ್ ಅಭಿವೃದ್ಧಿಪಡಿಸಿದ್ದಾರೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಹಾಗೂ ಇದು ಉಪಯುಕ್ತ ಮಾಹಿತಿ ಒದಗಿಸುತ್ತದೆ
ಈ ‘ಫಾರ್ಮ್ ಕ್ಯಾಲ್ಕುಲೇಟರ್ ಆ್ಯಪ್ ಡೌನ್ಲೋಡ್ ಮಾಡುವುದು ಹೇಗೆ?
https://play.google.com/store/apps/details?id=com.easy.fertilizer.calculator ಇಲ್ಲಿ ನೀಡಲಾದ ಲಿಂಕ್ ಅನ್ನು ಕ್ಲಿಕ್ ಮಾಡಿ. ಡೌನ್ಲೋಡ್ ಮಾಡಿ.
• ನಂತರ ಅಲ್ಲಿ ನಿಮಗೆ ಗೊಬ್ಬರ ಲೆಕ್ಕ ಬೇಕಾದರೆ ಗೊಬ್ಬರ ಮಾಹಿತಿ ಒದಗಿಸುತ್ತದೆ.
• ಬೀಜ ಪ್ರಮಾಣದ ಮಾಹಿತಿ ಬೇಕಾದರೆ ಬೀಜದ ಮಾಹಿತಿ ಒದಗಿಸುತ್ತದೆ.
• ಕೀಟನಾಶಕದ ಪ್ರಮಾಣದ ಲೆಕ್ಕ ಸಹ ಒದಗಿಸುತ್ತದೆ. ಒಂದು ಎಕರೆಗೆ ಎಷ್ಟು ಮೀಲಿ ಬಳಸಬೇಕು ಎಂದು ತಿಳಿಸುತ್ತದೆ.
• ಒಂದು ಎಕರೆಗೆ ಎಷ್ಟು ಸಸಿಗಳು ಬೆಳೆಯಬಹುದು ಎಂದು ಸಹ ತಿಳಿಸುತ್ತದೆ.
ಒಂದು ಬಾರಿ ಡೌನ್ ಲೋಡ್ ಮಾಡಿ ಕೊಂಡರೆ ನಂತರದ ಬಳಕೆಗೆ ಇಂಟರ್ನೆಟ್ ಅಗತ್ಯವಿಲ್ಲ. ಹೀಗಾಗಿ, ರೈತರು, ಡೀಲರ್ಸ್, ಗೊಬ್ಬರ ತಯಾರಕರು ಇದನ್ನು ಸುಲಭವಾಗಿ ಬಳಸಬಹುದು. ಗುಣಮಟ್ಟದ ಗೊಬ್ಬರ ಬಳಕೆಗೆ ಪೊಟ್ಯಾಶಿಯಂ ಸಹಾಯಕ ಬೆರೆಸುವ ಪ್ರಮಾಣದಲ್ಲಿ ಒಂದಿಷ್ಟು ವ್ಯತ್ಯಾಸವಾದರೂ ಅದು ಬೆಳೆ ಮೇಲೆ ಪರಿಣಾಮ ಬೀರುತ್ತದೆ. ಮಾರುಕಟ್ಟೆಯಲ್ಲಿ ಸಾರಜನಕ, ರಂಜಕ, ಪೊಟ್ಯಾಶಿಯಂ ಸಂಯೋಜಿತ 14 ಗೊಬ್ಬರಗಳು ಸಿದ್ಧ ರೂಪದಲ್ಲಿ ಸಿಗುತ್ತವೆ. ಅದನ್ನು ಹೊರತುಪಡಿಸಿ ಕೆಲವು ಸಮಯಗಳಲ್ಲಿ ಹೊಸ ಸಂಯೋಜನೆಗಳು ಬೇಕಾಗುತ್ತವೆ. ಆಗ ಈ ಆ್ಯಪ್ ಬಳಕೆಗೆ ಬರುತ್ತದೆ,” ಎಂದು ಆ್ಯಪ್ ಡೆವೆಲಪರ್ ಡಾ. ವಿಶ್ವನಾಥ್ ತಿಳಿಸಿದ್ದಾರೆ.