ರಾಜ್ಯ ಸರ್ಕಾರವು ಈಗಾಗಲೇ ಆದೇಶ ಹೊರಡಿಸಿದಂತೆ ಜಮೀನಿನ ಪಹಣಿ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯವಾಗಿದ್ದು ರೈತರು ಈಗ ಕೂಡಲೇ ನಿಮ್ಮ ಪಹಣಿ ಹಾಗೂ ಆಧಾರ್ ಕಾರ್ಡನ್ನು ಲಿಂಕ್ ಮಾಡಿಸತಕ್ಕದ್ದು. ಇಲ್ಲವಾದಲ್ಲಿ ಬರುವ ದಿನಗಳಲ್ಲಿ ಸರ್ಕಾರದಿಂದ ಸಿಗುತ್ತಿರುವ ಎಲ್ಲ ಸೌಲಭ್ಯಗಳನ್ನು ಹಾಗೂ ಯೋಜನೆಗಳ ಆದಾಯಗಳ ಮೂಲವನ್ನು ಸರ್ಕಾರವು ಮಾಡಲಾಗುವುದು. ಆಧಾರ್ ಕಾರ್ಡ್ ಈಗ ಎಲ್ಲಾ ಕ್ಷೇತ್ರದಲ್ಲೂ ಕಡ್ಡಾಯವಾಗಿತ್ತು ರಾಜ್ಯ ಸರ್ಕಾರದ ಯೋಜನೆಗಳಿಗೆ ಕೇಂದ್ರ ಸರ್ಕಾರದ ಯೋಜನೆಗಳಿಗೆ ಬ್ಯಾಂಕ್ ಖಾತೆ ತೆರೆಯಲು ಇನ್ನಿತರ ಯಾವುದಾದರೂ ಬೇರೆ ಬೇರೆ ಕೆಲಸಗಳನ್ನು ಮಾಡಲು ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಇದರೊಂದಿಗೆ ಈಗ ರಾಜ್ಯ ಸರ್ಕಾರವು ರೈತರು ತಮ್ಮ ಜಮೀನಿನ ಪಹಣಿಯನ್ನು ತಮ್ಮ ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡಿಸಲು ಸೂಚಿಸಿದೆ.
ಇದು ಸರ್ಕಾರದ ಎಲ್ಲ ಯೋಜನೆಗಳು ರೈತರಿಗೆ ನೇರವಾಗಿ ಹಾಗೂ ಬೇಗನೆ ಮುಟ್ಟಿಸಲು ಸಹಾಯಕಾರಿಯಂದು ಸರ್ಕಾರವು ಸ್ಪಷ್ಟಪಡಿಸಿದೆ. ರೈತರು ಸ್ವಯಂವಾಗಿ ಸರ್ಕಾರಿ ವೆಬ್ಸೈಟ್ ಗೆ ಭೇಟಿ ನೀಡಿ ತಮ್ಮ ಪಹಣಿ ಹಾಗೂ ಆಧಾರ್ ಕಾರ್ಡ್ ಲಿಂಕ್ ಅನ್ನು ಮಾಡಬಹುದು. ಅಥವಾ ತಮ್ಮ ಜಮೀನಿನ ಪಾತ್ರಗಳನ್ನು ಹಾಗೂ ಆಧಾರ್ ಕಾರ್ಡನ್ನು ತೆಗೆದುಕೊಂಡು ಹೋಗಿ ತಮ್ಮ ವ್ಯಾಪ್ತಿಯಲ್ಲಿ ಬರುವ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಲಿಂಕನ್ನು ಮಾಡಿಸಬಹುದು. ಸರ್ಕಾರಿ ಯೋಜನೆಗಳ ಸೌಲಭ್ಯ ಪಡೆಯಲು ಈ ಲಿಂಕ್ ಕಡ್ಡಾಯವಾಗಿದೆ. ಈ ಲಿಂಕ್ ಅನ್ನು ನೀವು ಗ್ರಾಮ ಒನ್ ಅಥವಾ ಬಾಪೂಜಿ ಸೇವ ಕೇಂದ್ರಗಳಿಗೆ ಭೇಟಿ ನೀಡಿ ಲಿಂಕ್ ಮಾಡಿಸಿಕೊಳ್ಳಬಹುದು. ಇಲ್ಲವೇ ರೈತರೇ ತಮ್ಮ ಸ್ವತಹ ಮೊಬೈಲ್ನಲ್ಲಿ ತಾವೇ ಮನೆಯಲ್ಲಿದ್ದುಕೊಂಡು ಲಿಂಕ್ ಮಾಡಿಕೊಳ್ಳಬಹುದು.
ನೀವು ಮನೆಯಲ್ಲಿಯೇ ನಿಮ್ಮ ಮೊಬೈಲ್ ನಲ್ಲಿ ಆಧಾರ್ ಹಾಗೂ ಪಹಣಿ ಲಿಂಕ್ ಮಾಡಲು ಈ ಕೆಳಗೆ ಕೊಟ್ಟಿರುವ ಕ್ರಮಗಳನ್ನು ಅನುಸರಿಸಿ:
1.ಪಹನಿ ಆಧಾರ್ ಕಾರ್ಡ್ ಲಿಂಕ್ ಮಾಡಿಸಲು ರಾಜ್ಯ ಸರ್ಕಾರದ ಕಂದಾಯ ಇಲಾಖೆಗೆ ಮೊದಲು ಭೇಟಿ ನೀಡಿ
ಈ ಲಿಂಕ್ ಮೇಲೆ ಕ್ಲಿಕ್ ಮಾಡುವ ಮುಖಾಂತರ ನೀವು ಕಂದಾಯ ಇಲಾಖೆಯ ವೆಬ್ ಸೈಟ್ ಗೆ ಭೇಟಿ ನೀಡಿ:
https://landrecords.karnataka.gov.in/Service84/
2.ಇಲ್ಲಿ ಕ್ಲಿಕ್ ಮಾಡಿದ ನಂತರ ಭೂಮಿ ಸಿಟಿಜನ್ ಸರ್ವಿಸ್ ಅಥವಾ ನಾಗರಿಕ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು. (ಅಥವಾ ಕೆಳಗೆ ಕೊಟ್ಟಿರುವ ಲಿಂಕ್ ಮುಖಾಂತರ ನೀವು ಡೈರೆಕ್ಟಾಗಿ ಭೂಮಿ ನಾಗರಿಕ ಸೇವಾ ಪುಟವನ್ನು ಓಪನ್ ಮಾಡಿಕೊಳ್ಳಬಹುದು)
3.ಭೂಮಿ ನಾಗರಿಕ ಸೇವಾ ಪುಟ ಲಿಂಕ್: https://landrecords.karnataka.gov.in/service4
4.ಈ ಭೇಟಿ ಮಾಡಿದ ನಂತರ ನಿಮ್ಮ ಮೊಬೈಲ್ ನಂಬರ್ ಅನ್ನು ಅಲ್ಲಿ, ನಂತರ ಕೆಳಗೆ ಕೊಟ್ಟಿರುವ ಕ್ಯಾಪ್ಚಕೋಡನ್ನು ಎಂಟರ್ ಮಾಡಬೇಕು. ಓಟಿಪಿ ಎಂಬ ಆಪ್ಷನ್ ಅನ್ನು ಕ್ಲಿಕ್ ಮಾಡಬೇಕು ಓಟಿಪಿ ಬಂದ ನಂತರ ನಿಮ್ಮ ಒಟಿಪಿ ಅನ್ನು ನಮೂದಿಸಬೇಕು.
5.ಈಗ ನಿಮಗೆ ಆಧಾರ್ ಕಾರ್ಡ್ ಹಾಗೂ ನಿಮ್ಮ ಪಹಣಿಯನ್ನು ಲಿಂಕ್ ಮಾಡಲು ಅವಕಾಶವಿರುವ ಪುಟವನ್ನು ತೆರೆದುಕೊಳ್ಳುತ್ತದೆ.
6.ಅಲ್ಲಿ ಮೊದಲು ನಿಮ್ಮ ಪಹಣಿ ಪತ್ರ ಅಥವಾ ಯಾರ ಜಮೀನಿನ ಪಹಣಿ ಪತ್ರವು ಹೆಸರಿನ ಮೇಲೆ ಇದೆ ಎಂದು ನಮೂದಿಸಬೇಕಾಗುತ್ತದೆ. [ಹೆಸರು ನಮೂದಿಸುವಾಗ ಆಧಾರ್ ಕಾರ್ಡ್ ನಲ್ಲಿ ಇರುವಂತೆ ಹೆಸರನ್ನು ನಮೂದಿಸಬೇಕು].
7.ನಂತರ ಅಲ್ಲಿ ನೀವು ಬಾಕ್ಸ್ ನಲ್ಲಿರುವ ರೈಟ್ ಕ್ಲಿಕ್ ಮಾಡುವುದರ ಮುಖಾಂತರ ವೆರಿಫೈ(verify) ಆಪ್ಷನ್ ತೋರಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡುವುದರ ಮುಖಾಂತರ ನೀವು ಈ ಪ್ರೋಸೆಸ್ ಅನ್ನು ವೇರಿಫೈ ಮಾಡಿಕೊಳ್ಳಬಹುದು.
8.ಈ ಸಂದರ್ಭದಲ್ಲಿ ನೀವು ಸಲ್ಲಿಸಿರುವ ದಾಖಲೆಗಳು ಸರಿಯಾಗಿದ್ದಲ್ಲಿ ಅದು ವೆರಿಫೈಡ್ (verified) ಎಂದು ತೋರಿಸುತ್ತದೆ.
9.ಇದಾದ ನಂತರ ಅಲ್ಲಿ ಈಕೆವೈಸಿ(E-KYC) ಓಪನ್ ಆಗುತ್ತದೆ. ಇಲ್ಲಿ ಮತ್ತೊಮ್ಮೆ ಆಧಾರ್ ಸಂಖ್ಯೆ ಕೇಳಲಾಗುತ್ತದೆ. ಜಮೀನು ಯಾರ ಹೆಸರಲ್ಲಿದೆಯೋ ಅವರ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು.
10.ನಮೂದಿಸಿದ ನಂತರ ಓಟಿಪಿ ಒಪ್ಶನ್ ಮೇಲೆ ಕ್ಲಿಕ್ ಮಾಡಿ ಬಂದಂತ ಒಟಿಪಿಯನ್ನು ಒಟಿಪಿ ಬಾಕ್ಸ್ ನಲ್ಲಿ ಹಾಕಿ ಸಬಮಿಟ್ (submit) ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು.
11.ಇಲ್ಲಿಯವರೆಗೆ ಸಲ್ಲಿಸಿದ್ದ ಹಾಗೂ ನಮೂದಿಸಿದ ಎಲ್ಲ ದಾಖಲೆಗಳು ಹಾಗೂ ಮಾಹಿತಿಗಳು ಸರಿಯಾಗಿದ್ದಲ್ಲಿ ನಿಮಗೆ ನಿಮ್ಮ ಪ್ರೊಫೈಲ್ ಓಪನ್ ಆಗುತ್ತದೆ.
12.ಈ ಹೊಸ ಪ್ರೊಫೈಲ್ ನಲ್ಲಿ ಮೂಲೆಗಡೇ 3 ಡಾಟಗಳಿರುವ ಚಿಹ್ನೆಯ ಮೇಲೆ ಕ್ಲಿಕ್ ಮಾಡಬೇಕು ಕ್ಲಿಕ್ ಮಾಡಿದ ನಂತರ ಆಧಾರ್ ಲಿಂಕ್ ಎಂಬ ಆಪ್ಷನ್ ಅನ್ನು ಆಯ್ಕೆ ಮಾಡಬೇಕು.
13.ಮುಂದಿನ ಫೋಟೋ ತೆರೆದ ನಂತರ ನಿಮ್ಮ ಆರ್ ಟಿ ಸಿ ಅಥವಾ ಪಹಣಿಯ ಕುರಿತು ಜಮೀನಿನ ಬಗ್ಗೆ ಮಾಹಿತಿ ಕೇಳಲಾಗುತ್ತದೆ ಆ ಎಲ್ಲ ಮಾಹಿತಿಗಳನ್ನು ಪಹಣಿಯಲ್ಲಿರುವಂತೆ ನಮೂದಿಸಬೇಕು.
14.ಎಲ್ಲ ಮಾಹಿತಿಗಳನ್ನು ಸರಿಯಾಗಿ ಭರ್ತಿ ಮಾಡಿದ್ದಲ್ಲಿ ನಿಮ್ಮ ಆಧಾರ್ ಹಾಗೂ ಪಹಣಿ ಲಿಂಕು ಯಶಸ್ವಿಯಾಗುತ್ತದೆ. ಇದು ಯುವರ್ ಅಪ್ಲಿಕೇಶನ್ ಡನ್( your application is done) ಎಂದು ತೋರಿಸುತ್ತದೆ.
ವಿವಿಧ ಭೂಮಿ ಮತ್ತು ಸಮೀಕ್ಷೆ ಸಂಬಂಧಿತ ಸೇವೆಗಳನ್ನು ಪಡೆಯಲು ಲಾಗಿನ್ ಮಾಡಿ
1. ನಿಮ್ಮ ಪಹಣಿಗೆ ನಿಮ್ಮ ಆಧಾರ್ ಲಿಂಕ್ ಮಾಡಿ
Link your Aadhaar to your RTC
2. ಸಂಬಂಧಿತ ಫಲಾನುಭವಿ ಯೋಜನೆಗಳ ಅಡಿಯಲ್ಲಿ ಸೌಲಭ್ಯಗಳನ್ನು ಪಡೆಯಲು
ನೀವು ಸ್ವಯಂಪ್ರೇರಣೆಯಿಂದ ನಿಮ್ಮ RTC ಅನ್ನು ನಿಮ್ಮ ಆಧಾರ್‌ನೊಂದಿಗೆ ಲಿಂಕ್ ಮಾಡಬಹುದು.