ಪ್ರೀಯ ರೈತರೇ ನಾವು ಇವತ್ತು ಗೃಹ ಜ್ಯೋತಿ ಯೋಜನೆ ಅಡಿಯಲ್ಲಿ ಉಚಿತ ವಿದ್ಯುತ್ ಪಡೆಯುವ ಯೋಜನೆ ಬಗ್ಗೆ ಮಾಹಿತಿ ತಿಳಿಯೋಣ. ಅದೇ ರೀತಿ ಈ ಯೋಜನೆಯ ಅಡಿಯಲ್ಲಿ ಮೊದಲಿನ ನಿಯಮಗಳು ಹಾಗೂ ಈಗಿನ ನಿಯಮಗಳಿಗೆ ಏನು ಬದಲಾವಣೆ ಇದೆ ಎಂದು ಕೂಡಲೇ ತಿಳಿಯೋಣ. ಬನ್ನಿ ರೈತರೇ ದಿನಾಂಕ:02.06.2023 ರಂದು ನಡೆದ ಸಚಿವ ಸಂಪುಟದ ಸಭೆಯಲ್ಲಿ ಗೃಹ ಜ್ಯೋತಿ” ಯೋಜನೆಯನ್ನು ಅನುಷ್ಠಾನಗೊಳಿಸುವ ಬಗ್ಗೆ ವಿಷಯ ಮಂಡನೆಯಾಗಿರುತ್ತದೆ.. ‘ಗೃಹ ಜ್ಯೋತಿ” ಯೋಜನೆಯಡಿ ರಾಜ್ಯದಲ್ಲಿನ ಪ್ರತಿ ಮನೆಗೆ ಪ್ರತಿ ತಿಂಗಳಿಗೆ ಗರಿಷ್ಠ 200 ಯೂನಿಟ್‌ಗಳವರೆಗಿನ ಬಳಕೆಯ ಮಿತಿಯಲ್ಲಿ ಪ್ರತಿ ಗ್ರಾಹಕರ ಮಾಸಿಕ ಸರಾಸರಿ ಬಳಕೆಯ (ಆರ್ಥಿಕ ವರ್ಷ 2022-23ರ ಬಳಕೆಯ ಆಧಾರದನ್ವಯ) ಯೂನಿಟ್‌ಗಳ ಮೇಲೆ ಶೇಕಡ 10 ರಷ್ಟು ಹೆಚ್ಚಿನ ವಿದ್ಯುತ್ ಬಳಕೆಯ ಮಿತಿಯನ್ನು ಅನುಮತಿಸಿ, ಅದಕ್ಕನುಗುಣವಾಗಿ ವಿದ್ಯುತ್ ಬಿಲ್ಲಿನ ಮೊತ್ತವನ್ನು ಉಚಿತವಾಗಿ ಒದಗಿಸಲು ಹಾಗೂ 200 ಯೂನಿಟ್‌ಗಳ ಬಳಕೆಯನ್ನು ಮೀರಿದ ಗ್ರಾಹಕರು ಪೂರ್ಣ ವಿದ್ಯುತ್ ಬಿಲ್ಲನ್ನು ಪಾವತಿಸಲು ಸಂಪುಟ ಸಭೆಯು ಅನುಮೋದಿಸಿದೆ.
ಉಚಿತ ವಿದ್ಯುತ್ ಯೋಜನೆ ಅಡಿಯಲ್ಲಿ ಬದಲಾವಣೆ ಏನು?
ಮಾಸಿಕ 48 ಯೂನಿಟ್‌ಗಿಂತ ಕಡಿಮೆ ವಿದ್ಯುತ್ ಬಳಸುವವರಿಗೆ ‘ಗೃಹಜ್ಯೋತಿ’ ಯೋಜನೆಯಡಿ ಶೇ.10ರಷ್ಟು ಹೆಚ್ಚುವರಿ ಬದಲಿಗೆ 10 ಯೂನಿಟ್ ಹೆಚ್ಚುವರಿ ವಿದ್ಯುತ್ ಉಚಿತವಾಗಿ ನೀಡಲು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದೆ. ಗೃಹಜ್ಯೋತಿಯಡಿ ಮಾಸಿಕ 48 ಯೂನಿಟ್ ಗಿಂತ ಕಡಿಮೆ ವಿದ್ಯುತ್ ಬಳಸುವ ಎಲ್- 2 ಗ್ರಾಹಕರಿಗೆ ಸರಾಸರಿ ಬಳಕೆಯ ಶೇ.10ರಷ್ಟು ಹೆಚ್ಚುವರಿ ವಿದ್ಯುತ್ ಉಚಿತವಾಗಿ ಒದಗಿಸಲಾಗುತ್ತಿದೆ. ಇನ್ನು ಮುಂದೆ ಈ ಗ್ರಾಹಕರಿಗೆ ಮಾಸಿಕ ಹೆಚ್ಚುವರಿ 10 ಯೂನಿಟ್ ಒದಗಿಸಲು ಸಂಪುಟ ಸಭೆ ಸಮ್ಮತಿ ನೀಡಿದೆ. ಈ ಸಂಬಂಧ ಕಳೆದ ಜೂ. 5ರಂದು ಹೊರಡಿಸಿದ್ದ ಆದೇಶ ಮಾರ್ಪಡಿಸಲು ತೀರ್ಮಾನಿಸಿದೆ. ಸಂಪುಟದ ತೀರ್ಮಾನದಿಂದ, 48 ಯೂನಿಟ್ ಬಳಸುವವರಿಗೆ ಈ ಹಿಂದೆ ಸಿಗುತ್ತಿದ್ದ ಶೇ.10ರ ಹೆಚ್ಚುವರಿ ಯೂನಿಟ್ ಸೇರಿ 53 ಯೂನಿಟ್ ಉಚಿತವಾಗಿತ್ತು. ಇನ್ನುಮುಂದೆ 58 ಯೂನಿಟ್ ಉಚಿತವಾಗಲಿದೆ.
ಬೆಸ್ಕಾಂ ವ್ಯಾಪ್ತಿಯಲ್ಲಿ 69.73 ಲಕ್ಷ ಕುಟುಂಬಗಳು 48 ಯೂನಿಟ್ಗಿಂತ ಕಡಿಮೆ ವಿದ್ಯುತ್ ಬಳಸುತ್ತಿವೆ. ಹೆಚ್ಚುವರಿ 10 ಯೂನಿಟ್ ಒದಗಿಸುವ ನಿರ್ಧಾರದಿಂದ 33 ಕೋಟಿ ರೂ. ವೆಚ್ಚವಾಗುವ ಅಂದಾಜಿದೆ. ರಾಜ್ಯದಲ್ಲಿ ಗೃಹ ಬಳಕೆ ಗ್ರಾಹಕರ ಸರಾಸರಿ ಬಳಕೆ 53 ಯೂನಿಟ್‌ನಪ್ಪಿದ್ದು, ಸರಾಸರಿ ಶೇ. 10ರಷ್ಟು ಉಚಿತ ವಿದ್ಯುತ್ ಸೇರಿದಂತೆ ಒಟ್ಟು 58 ಯೂನಿಟ್‌ವರೆಗೆ ಉಚಿತವಾಗಿ ಬಳಸಲು ಅವಕಾಶವಿದೆ.
ಭಾಗ್ಯಜ್ಯೋತಿ ಮತ್ತು ಕುಟೀರಜ್ಯೋತಿ ಯೋಜನೆಯಡಿ ಈಗಾಗಲೇ 40 ಯೂನಿಟ್‌ಗಳ ಉಚಿತ ವಿದ್ಯುತ್ ನ್ನು ನೀಡಲಾಗುತ್ತಿದ್ದು, ಈ ಗ್ರಾಹಕರಿಗೆ ಗೃಹಜ್ಯೋತಿ ಯೋಜನೆಯಡಿ ಪ್ರತಿ ತಿಂಗಳಿಗೆ ರಾಜ್ಯದ ಸರಾಸರಿಯಾದ 53 ಯೂನಿಟ್‌ಗಳವರೆಗೆ + ಹೆಚ್ಚುವರಿಯಾಗಿ 10% ರಷ್ಟು ಉಚಿತವಾಗಿ ನೀಡುವುದು. ಅಮೃತಜ್ಯೋತಿ ಯೋಜನೆಯಡಿ 75 ಯೂನಿಟ್ ವಿದ್ಯುತ್‌ನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಕುಟುಂಬಗಳಿಗೆ DBT ಆಡಿ ಖಾತೆಗೆ ವರ್ಗಾವಣೆ ಮೂಲಕ ಈಗಾಗಲೇ ಉಚಿತವಾಗಿ ನೀಡುತ್ತಿದ್ದು, ಈ ಗ್ರಾಹಕರಿಗೆ/ಫಲಾನುಭವಿಗಳಿಗೆ ಗೃಹಜ್ಯೋತಿ ಯೋಜನೆಯಲ್ಲಿ ಮಾಸಿಕ 25 ಯೂನಿಟ್‌ಗಳವರೆಗೆ ಹೆಚ್ಚುವರಿಯಾಗಿ 10% ರಷ್ಟು ಉಚಿತವಾಗಿ ನೀಡುವುದು.