ಪಿಎಂ ಕಿಸಾನ್ ಹಣ 15 ನೇ ನವೆಂಬರ್ ತಿಂಗಳಲ್ಲಿ ಬಿಡುಗಡೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಪಿಎಂ ಕಿಸಾನ್ ಹಣ ರೈತರ ಅಕೌಂಟಿಗೆ ಜಮೆ ಮಾಡಿದ್ದಾರೆ. ಹಾಗೂ ಕೆಲವರಿಗೆ ಬಂದಿದೆ. ಆದರೆ ಯಾವ ಕಾರಣಗಳಿಂದ ಬಂದಿಲ್ಲ ಎಂದು ತಿಳಿಯುವುದು ಮುಖ್ಯ ವಿಷಯವಾಗಿದೆ.
ಭಾರತದ ರೈತರನ್ನು ಆರ್ಥಿಕವಾಗಿ ಸಮೃದ್ಧರನ್ನಾಗಿ ಮಾಡಲು ಮತ್ತು ಅವರನ್ನು ಸಾಲದಿಂದ ಮುಕ್ತಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಮಹತ್ವಾಕಾಂಕ್ಷೆಯ ಯೋಜನೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಪ್ರಾರಂಭಿಸಿದ್ದಾರೆ. ಈ ಯೋಜನೆಯಡಿ, ದೇಶದ ರೈತರು ತಲಾ 2,000 ರೂ.ಗಳ ಕಂತುಗಳಲ್ಲಿ ತಲಾ 6,000 ರೂ.ಗಳ ಸಹಾಯವನ್ನು ಪಡೆಯುತ್ತಾರೆ.
ಆದರೆ ಇನ್ನೂ ಕೆಲವರಿಗೆ ಯಾವುದೇ ಕಂತು ಹಣ ಬಂದಿಲ್ಲ ಏಕೆ ?
ಹಲವಾರು ಕಾರಣಗಳಿಂದ ಸರ್ಕಾರವು ರೈತರಿಗೆ ಹಣ ನೀಡಿಲ್ಲ. ಕೆಲವು ರೈತರು ಕೆವೈಸಿ, ಕೆಲವು ರೈತರ ಹಣ ಸ್ಥಿತಿ ಚೆಕ್ ಮಾಡಲು ಹೋದಾಗ ಅಪ್ಲಿಕೇಶನ್ ಪರಿಶೀಲನೆಯಲ್ಲಿದೆ ಎಂದು ತೋರಿಸುತ್ತದೆ. ಅದೇ ರೀತಿ ಕೆಲವು ರೈತರ ಬೇನಿಫಿಶರಿ ಸ್ಟೇಟಸ್ ಚೆಕ್ ಮಾಡಿದಾಗ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಈಗ ಜೋಡನೆ ಆಗಿದ್ದಲ್ಲಿ 15 ದಿನಗಳ ವರೆಗೆ ಕಾಯಿರಿ ಎಂದು ತೋರಿಸುತ್ತದೆ. ಹೀಗಾಗಿ ಕೆಲವು ರೈತರ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಇಲ್ಲದೆ ಇರುವುದು, ಹಾಗೂ ಆಧಾರ್ ತಿದ್ದುಪಡಿ ಮಾಡಿ ಲಿಂಕ್ ಮಾಡಿರುವುದು ಹಣ ಬರದೆ ಇರುವುದಕ್ಕೆ ಕಾರಣ ಆಗಿದೆ.
ಇ-ಕೆವೈಸಿ ಅಗತ್ಯ –
ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಮುಂದಿನ ಕಂತುಗಳ ಲಾಭವನ್ನು ಪಡೆಯಲು ನೀವು ಬಯಸಿದರೆ, ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಅವಶ್ಯಕ. ನೀವು ಇನ್ನೂ ಕೆವೈಸಿ ಮಾಡದವರಲ್ಲಿ ಒಬ್ಬರಾಗಿದ್ದರೆ, ನೀವು ಈ ಪ್ರಕ್ರಿಯೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು.
ಕೆವೈಸಿ ಮಾಡಲು, ನಿಮ್ಮ ಹತ್ತಿರದ ಸಿಎಸ್ಸಿ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಅಥವಾ ಪಿಎಂ ಕಿಸಾನ್ ಪೋರ್ಟಲ್ pmkisan.gov.in ನಲ್ಲಿ ನೀವು ಇ-ಕೆವೈಸಿ ಮಾಡಬಹುದು. ನೀವು ಇದನ್ನು ಮಾಡದಿದ್ದರೆ, ಮುಂದಿನ ಕಂತುಗಳು ನಿಮ್ಮ ಖಾತೆಗೆ ಬರದಿರಬಹುದು.
ಇ- ಕೆವೈಸಿ ಹೇಗೆ ಮಾಡಿಸಬೇಕು?
ಈಗ ಈ ಕೆವೈಸಿಯನ್ನು 3 ವಿಧಾನಗಳಲ್ಲಿ ಮಾಡಬಹುದು. ಮುಖ್ಯವಾಗಿ ಹೇಳಬೇಕೆಂದರೆ ಆಧಾರ್ ಕಾರ್ಡ್ ಲಿಂಕ್ ಇರದಿದ್ದರೆ ನಿಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರ ನಿಮ್ಮ ಬೆರಳಿನ ಗುರುತಿನ ಮುಖಾಂತರ ಹಾಗೂ ಇನ್ನೊಂದು ನಿಮ್ಮ ಮೋಬೈಲ್ ಮೂಲಕ ಮಾಡಬಹುದು.
ಮೋಬೈಲ್ ಮೂಲಕ ಇ-ಕೆವೈಸಿ ಮಾಡುವ ವಿಧಾನ –
ಈ ಲಿಂಕ್ ಉಪಯೋಗಿಸಿ https://exlink.pmkisan.gov.in/aadharekyc.aspx ಅಥವಾ
• ಗೂಗಲ್ ನಲ್ಲಿ ಪಿಎಂ ಕಿಸಾನ್ ಇ- ಕೆವೈಸಿ ಎಂದು ಹುಡುಕಬೇಕು.
• ನಂತರ ಅಲ್ಲಿ ಆಧಾರ್ ಕಾರ್ಡ್ ನಂಬರ್ ಹಾಕಬೇಕು.
• ನಂತರ ಅಲ್ಲಿ ಆಧಾರ್ ಕಾರ್ಡ್ ಲಿಂಕ್ ಇರುವ ಮೊಬೈಲ್ ನಂಬರ್ ಹಾಕಬೇಕು.
• ಓಟಿಪಿ ಬರುತ್ತದೆ. ನಂತರ ಅಲ್ಲಿ ಸಬ್ಮಿಟ್ ಕೊಡಬೇಕು ಆವಾಗ ಆಧಾರ್ ಕಾರ್ಡ್ ಆಧಾರಿತ ಓಟಿಪಿ ಬರುತ್ತದೆ. ಅಲ್ಲಿ 6 ಸಂಖ್ಯೆ ಓಟಿಪಿ ಹಾಕಿದಾಗ ಇ- ಕೆವೈಸಿ ಸಂಪೂರ್ಣ ಆಗುತ್ತದೆ.
ಪ್ರಧಾನಿ ನರೇಂದ್ರ ಮೋದಿ ಅವರು ದೇಶದಾದ್ಯಂತ 8 ಕೋಟಿಗೂ ಹೆಚ್ಚು ರೈತರಿಗೆ ಪಿಎಂ-ಕಿಸಾನ್ ಯೋಜನೆಯ 15ನೇ ಕಂತಾಗಿ 18,000 ಕೋಟಿ ರೂ.ಗಳನ್ನು ಬುಧವಾರ ಬಿಡುಗಡೆ ಮಾಡಿದ್ದಾರೆ. ಜಾರ್ಖಂಡ್‌ನ ಖುಂಟಿ ಜಿಲ್ಲೆಯಲ್ಲಿ ಜನಜಾತಿಯ ಗೌರವ್ ದಿವಸ್ ಆಚರಣೆ ಕಾರ್ಯಕ್ರಮದಲ್ಲಿ ಪ್ರಧಾನಿಯವರು ಬಟನ್ ಕ್ಲಿಕ್ ಮಾಡುವ ಮೂಲಕ ರೈತರ ಬ್ಯಾಂಕ್ ಖಾತೆಗಳಿಗೆ ಹಣವನ್ನು ಡಿಜಿಟಲ್ ರೂಪದಲ್ಲಿ ವರ್ಗಾಯಿಸಿದರು. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯು ರೈತರಿಗೆ ಅವರ ಕೃಷಿ ಮತ್ತು ಇತರ ಸಾಂದರ್ಭಿಕ ಅಗತ್ಯಗಳನ್ನು ಪೂರೈಸುವಲ್ಲಿ ಬೆಂಬಲ ನೀಡುವ ಗುರಿ ಹೊಂದಿದೆ. ಈ ಯೋಜನೆಯಡಿ ಪ್ರತಿ ವರ್ಷಕ್ಕೆ 6,000 ರೂಪಾಯಿಗಳ ಆರ್ಥಿಕ ಸಹಾಯವನ್ನು ಮೂರು ಸಮಾನ ಕಂತುಗಳಲ್ಲಿ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ. ಈ ಮೊದಲು 2.62 ಲಕ್ಷ ಕೋಟಿ ರೂ.ಗೂ ಹೆಚ್ಚು ಹಣ ವರ್ಗಾವಣೆ ಮಾಡಲಾಗಿದೆ.
ಬೆನಿಫೀಶರಿ ಸ್ಟೇಟಸ್ ಚೆಕ್ ಲಿಂಕ್:
https://pmkisan.gov.in/Rpt_BeneficiaryStatus_puh.aspx.
• ಈ ಲಿಂಕ್ ಅನ್ನು ಕ್ಲಿಕ್ ಮಾಡಿ ನಂತರ ಅಲ್ಲಿ ನಿಮ್ಮ ರೆಜಿಸ್ಟರ್ ನಂಬರ್ ಹಾಕಿ.
• ನಂತರ ಅಲ್ಲಿ ಕ್ಯಾಪ್ಚ್ಯಾ ಮೇಲೆ ಕ್ಲಿಕ್ ಮಾಡಿ ಅದನ್ನು ಬರೆಯಿರಿ.
• ನಂತರ ಅಲ್ಲಿ ನಿಮಗೆ ನಿಮ್ಮ ಬ್ಯಾಂಕಿನ ಡೀಟೇಲ್ಸ್ ತೋರಿಸುತ್ತದೆ.
• ನಂತರ ಅಲ್ಲಿ ನಿಮಗೆ ಬೇಕಾದ 15 ನೇ ಕಂತಿನ ವಿವರಗಳನ್ನು ತೋರಿಸುತ್ತದೆ.