ರೈತರೇ ಮನೆಯಲ್ಲೇ ಕೀಟನಾಶಕ ತಯಾರಿಸಿ. ತಯಾರಿಸುವುದು ಹೇಗೆ ಎಂದು ನೋಡಿ.

ಪ್ರಿಯ ರೈತರೇ ಕೃಷಿಯಲ್ಲಿ ಹೆಚ್ಚಿನ ಆದಾಯ ಪಡೆಯಲು ಹಲವಾರು ಸಲಹೆ ಸೂಚನೆಗಳನ್ನು ಅನುಸರಿಸಬೇಕು. ಅದೇ ರೀತಿ ಹೆಚ್ಚಿನ ರಾಸಾಯನಿಕ ಬಳಸದೆ ನೈಸರ್ಗಿಕ ಕೃಷಿ ಪದ್ಧತಿ ಅಳವಡಿಸಿಕೊಂಡು ಉತ್ತಮ ಬೆಳವಣಿಗೆ ಹೊಂದಲು ಸಹಾಯ ಮಾಡುತ್ತದೆ. ಅದೇ ರೀತಿ ವಾತಾವರಣ ಏರುಪೇರು ಆಗುವುದರಿಂದ ಕೀಟದ ಹಾಗೂ ರೋಗದ ಬಾಧೆ ಹೆಚ್ಚಾಗುತ್ತದೆ. ಅದಕ್ಕಾಗಿ ಕೀಟಗಳ ಹತೋಟಿಗೆ ರಾಸಾಯನಿಕ ಬಳಸದೆ ಸಾವಯವ ಕೀಟನಾಶಕ ಉತ್ಪಾದನೆ ಹೆಚ್ಚಿಸಬೇಕಿದೆ. ಅದೇ ರೀತಿ ಹೇಗೆ ಸಾವಯವ ಕೀಟನಾಶಕ ತಯಾರಿಸಬಹುದು ಎಂದು ತಿಳಿಯೋಣ.

 

ಏನಿದು ಬೇವು ಕೀಟನಾಶಕ?

ಇದು ಒಂದು ಸಾವಯವ ರೂಪದಲ್ಲಿ ಹೇರಳವಾಗಿ ಸಿಗುವ ವಸ್ತು. ಹಾಗೂ ಬೇವು ವ್ಯಾಪಕವಾಗಿ ಬಳಸಲ್ಪಡುತ್ತದೆ ಮತ್ತು ಅದರ ಉರಿಯೂತದ, ಆಂಟಿಫಂಗಲ್, ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿ-ಕಾರ್ಸಿನೋಜೆನಿಕ್ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಹಾಗೂ ಇದು ಸಸ್ಯದಲ್ಲಿ ಕೀಟಗಳ ಹತೋಟಿಗೆ ಬಳಸಲಾಗುತ್ತದೆ. ಹಾಗೂ ಈ ಎಲ್ಲದರ ಜೊತೆಗೆ, ಇದು ಕೀಟಗಳ ಹಾವಳಿಯನ್ನು ಕಡಿಮೆ ಮಾಡಲು ಸಹಾಯ ಮಾಡುವ ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಒಂದು ಆಂಟಿಬಯೋಟಿಕ್ ಆಗಿ ಕೂಡಾ ಕೆಲಸ ಮಾಡುತ್ತದೆ. ಸಾವಯವ ಪದಾರ್ಥಗಳಿಂದ ತಯಾರಿಸಿದ ಬೇವಿನ ಎಣ್ಣೆಯ ಸಾರವು ಅದರ ಬಲವಾದ ಕಹಿ ಸುವಾಸನೆ ಮತ್ತು ಬಲವಾದ ವಾಸನೆಯಿಂದಾಗಿ ಹಾನಿಕಾರಕ ಕೀಟಗಳನ್ನು ಹಿಮ್ಮೆಟ್ಟಿಸುತ್ತದೆ ಮತ್ತು ಸಾಕುಪ್ರಾಣಿ ಸ್ನೇಹಿಯಾಗಿ ಇದು ಸಂಪೂರ್ಣವಾಗಿ ಸುರಕ್ಷಿತವಾಗಿದೆ.

 

ಹೇಗೆ ಇದರ ಕಾರ್ಯ?

ಇದು ಒಂದು ಸಾವಯವ ರೂಪದಲ್ಲಿ ತಯಾರಿಸುವ ಕೀಟನಾಶಕ ಆಗಿದ್ದು ಬೇವಿನ ಎಣ್ಣೆಯ ಸಾರವು ಅದರ ಬಲವಾದ ಕಹಿ ಸುವಾಸನೆ ಮತ್ತು ಬಲವಾದ ವಾಸನೆಯಿಂದಾಗಿ ಹಾನಿಕಾರಕ ಕೀಟಗಳನ್ನು ಹಿಮ್ಮೆಟ್ಟಿಸುತ್ತದೆ ಮತ್ತು ಇದು ಅಜಾರ್ಡಿಕ್ಟಿನ್ ಎಂಬ ಅಂಶವನ್ನು ಹೊಂದಿದೆ. ಹಾಗೂ ಇದು ಕೀಟಗಳಿಗೆ ಆಕರ್ಷಕ ವಾಸನೆ ಆಗಿ ಕೆಲಸ ಮಾಡಿ ನಂತರ ಕೀಟಗಳು ಅದಕ್ಕೆ ತುತ್ತಾಗುತ್ತವೆ. ಮನೆಯಲ್ಲಿ ಸಾವಯವ ಕೀಟನಾಶಕವನ್ನು ತಯಾರಿಸಿ ಕೀಟಗಳನ್ನು ನಿಯಂತ್ರಿಸಲು ಇದೊಂದು ಬಹಳ ಪ್ರಾಮುಖ್ಯತೆ ಪಡೆದಿದೆ.

 

ಬೇವಿನ ಕೀಟನಾಶಕ ತಯಾರಿಸುವ ವಿಧಾನ –

ಮೊದಲು ಬೇವಿನ ಎಣ್ಣೆಯನ್ನು ತಯಾರಿಸಬೇಕು. ಹಾಗೂ ಅದನ್ನು 10 ರಿಂದ 15 ಮಿಲಿಗಳಷ್ಟು ಪ್ರಮಾಣದಲ್ಲಿ ದ್ರವ ಸೋಪ್ ಮತ್ತು ಬೆಚ್ಚಗಿನ ನೀರಿನಲ್ಲಿ ಕೆಲವು ಹನಿಗಳನ್ನು ಸೇರಿಸಬೇಕು. ನಂತರ ಅದನ್ನು ಸಸ್ಯಗಳಿಗೆ ಸಿಂಪಡಿಸಬಹುದು. ಇದರಿಂದ ಸಸ್ಯದ ಗುಣಮಟ್ಟ ಕಾಯ್ದುಕೊಳ್ಳಲು ಹಾಗೂ ಎಲ್ಲಾ ಕೀಟಗಳ ಹತೋಟಿಗೆ ಬಳಸಲಾಗುತ್ತದೆ.

ಮನೆಯಲ್ಲಿ ಬೇವು ಆಧಾರಿತ ಕೀಟನಾಶಕವನ್ನು ತಯಾರಿಸಲು ಬೇಕಾಗುವ ವಸ್ತು

• ಸ್ಪ್ರೇಯರ್

• ಬೇವಿನ ಎಣ್ಣೆ

• ಬೆಚ್ಚಗಿನ ನೀರು

• ಬೆಳ್ಳುಳ್ಳಿ ಲವಂಗ

• ಹಸಿರು ಮೆಣಸಿನಕಾಯಿ ಹೀಗೆ ಇವುಗಳನ್ನು ಬಳಸಿ ತಯಾರಿಸಬಹುದು.

Spread positive news

Leave a Reply

Your email address will not be published. Required fields are marked *