ಪಿಎಂ ಕಿಸಾನ್ ಹಣ 15 ನೇ ನವೆಂಬರ್ ತಿಂಗಳಲ್ಲಿ ಬಿಡುಗಡೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಪಿಎಂ ಕಿಸಾನ್ ಹಣ ರೈತರ ಅಕೌಂಟಿಗೆ ಜಮೆ ಮಾಡಿದ್ದಾರೆ. ಹಾಗೂ ಕೆಲವರಿಗೆ ಬಂದಿದೆ. ಆದರೆ ಯಾವ ಕಾರಣಗಳಿಂದ ಬಂದಿಲ್ಲ ಎಂದು ತಿಳಿಯುವುದು ಮುಖ್ಯ ವಿಷಯವಾಗಿದೆ.
ಭಾರತದ ರೈತರನ್ನು ಆರ್ಥಿಕವಾಗಿ ಸಮೃದ್ಧರನ್ನಾಗಿ ಮಾಡಲು ಮತ್ತು ಅವರನ್ನು ಸಾಲದಿಂದ ಮುಕ್ತಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಮಹತ್ವಾಕಾಂಕ್ಷೆಯ ಯೋಜನೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಪ್ರಾರಂಭಿಸಿದ್ದಾರೆ. ಈ ಯೋಜನೆಯಡಿ, ದೇಶದ ರೈತರು ತಲಾ 2,000 ರೂ.ಗಳ ಕಂತುಗಳಲ್ಲಿ ತಲಾ 6,000 ರೂ.ಗಳ ಸಹಾಯವನ್ನು ಪಡೆಯುತ್ತಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ದೇಶದಾದ್ಯಂತ 8 ಕೋಟಿಗೂ ಹೆಚ್ಚು ರೈತರಿಗೆ ಪಿಎಂ-ಕಿಸಾನ್ ಯೋಜನೆಯ 15ನೇ ಕಂತಾಗಿ 18,000 ಕೋಟಿ ರೂ.ಗಳನ್ನು ಬುಧವಾರ ಬಿಡುಗಡೆ ಮಾಡಿದ್ದಾರೆ. ಜಾರ್ಖಂಡ್ನ ಖುಂಟಿ ಜಿಲ್ಲೆಯಲ್ಲಿ ಜನಜಾತಿಯ ಗೌರವ್ ದಿವಸ್ ಆಚರಣೆ ಕಾರ್ಯಕ್ರಮದಲ್ಲಿ ಪ್ರಧಾನಿಯವರು ಬಟನ್ ಕ್ಲಿಕ್ ಮಾಡುವ ಮೂಲಕ ರೈತರ ಬ್ಯಾಂಕ್ ಖಾತೆಗಳಿಗೆ ಹಣವನ್ನು ಡಿಜಿಟಲ್ ರೂಪದಲ್ಲಿ ವರ್ಗಾಯಿಸಿದರು. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯು ರೈತರಿಗೆ ಅವರ ಕೃಷಿ ಮತ್ತು ಇತರ ಸಾಂದರ್ಭಿಕ ಅಗತ್ಯಗಳನ್ನು ಪೂರೈಸುವಲ್ಲಿ ಬೆಂಬಲ ನೀಡುವ ಗುರಿ ಹೊಂದಿದೆ. ಈ ಯೋಜನೆಯಡಿ ಪ್ರತಿ ವರ್ಷಕ್ಕೆ 6,000 ರೂಪಾಯಿಗಳ ಆರ್ಥಿಕ ಸಹಾಯವನ್ನು ಮೂರು ಸಮಾನ ಕಂತುಗಳಲ್ಲಿ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ. ಈ ಮೊದಲು 2.62 ಲಕ್ಷ ಕೋಟಿ ರೂ.ಗೂ ಹೆಚ್ಚು ಹಣ ವರ್ಗಾವಣೆ ಮಾಡಲಾಗಿದೆ.
ನಿಮ್ಮ ಊರಿನ ಪಿಎಂ ಕಿನಾನ್ ಲಿಸ್ಟ್ ನೋಡುವುದು ಹೇಗೆ?
ಪಿಎಂ ಕಿಸಾನ್ ಜಾಲತಾಣದಲ್ಲಿ ಅದಕ್ಕಾಗಿ ಪ್ರತ್ಯೇಕ ಅಪ್ಪನ್ ನೀಡಲಾಗಿದ್ದು ವಿಲೇಜ್ ಡ್ಯಾಶ್ ಬೋರ್ಡ್ ಬಿಡುಗಡೆ ಮಾಡಲಾಗಿದೆ ಇಲ್ಲಿ ನೀಡಿರುವ ಲಿಂಕಿನ ಮೇಲೆ ಕ್ಲಿಕ್ ಮಾಡುವ ಮೂಲಕ ನೇರವಾಗಿ ನಿಮ್ಮ ಊರಿನ ಯಾರೆಲ್ಲರಿಗೆ ಪಿಎಂ ಕಿಸಾನ್ 15ನೇ ಕಂತಿನ ಹಣ ಬರಲಿದೆ ಎಂದು ನೋಡಿಕೊಳ್ಳಬಹುದು.
ಬೆನಿಫೀಶರಿ ಸ್ಟೇಟಸ್ ಚೆಕ್ ಲಿಂಕ್:https://pmkisan.gov.in/Rpt_BeneficiaryStatus_puh.aspx.
ನವೆಂಬರ್ 15ನೇ ತಾರೀಕು 11:30 ಗಂಟೆಗೆ ರೈತರೊಂದಿಗೆ ಮಾತನಾಡುವ ಮೂಲಕ ಹಣವನ್ನು ವರ್ಗಾವಣೆ ಮಾಡಲಾಗಿದ್ದಾರೆ. ಈಗ ನೀವು ಹಣವನ್ನು ನಿಮ್ಮಗೆ ಜಮಾ ಆಗಿರುವುದು ಸ್ಟೇಟಸ್ ಚೆಕ್ ಮಾಡುವುದು ಹೇಗೆ?? ಅದಕ್ಕಾಗಿ ಇನ್ನೊಂದು ಇಲ್ಲಿ ಕೆಳಗಡೆ ನೀಡಿರುವ ಲಿಂಕ್ ನ ಮೂಲಕ ನೀವು ನೇರವಾಗಿ 12 ಗಂಟೆಯ ನಂತರ ಏಕೆಂದರೆ ಜಗತ್ತಿನ ಅದ್ಯಂತ ಹಣವನ್ನು ವರ್ಗಾವಣೆ ಮಾಡುತ್ತಿರುವ ಕಾರಣ ಸರ್ವರ್ ಬಿಜಿಯಾಗಿರುತ್ತದೆ ನೀವು 12 ಗಂಟೆಯಿಂದ ಸಾಯಂಕಾಲ 5:0 ವರೆಗೆ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಲು ಅವಕಾಶ ಸಿಗಬಹುದು.
ಫಲಾನುಭವಿ ಸ್ಥಿತಿ ಲಿಂಕ್:
https://pmkisan.gov.in/BeneficiaryStatus New.aspx ಶ್ರೀ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರೈತರೊಂದಿಗೆ ಮಾತನಾಡುವುದನ್ನು ನೋಡಲು ಇಲ್ಲಿ ಕಿಳಗಡೆ ನೀಡಿರುವ ಆ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ನೀವು ನೇರವಾಗಿ ಅವರು ಮಾತನಾಡುವುದನ್ನು ನೋಡಬಹುದು.